Bengaluru Rain: ಇಂದು ಸುರಿದ ಭಾರೀ ಮಳೆಗೆ ಬೆಂಗಳೂರಿನಲ್ಲಿ ಉಂಟಾದ ಅನಾಹುತ ಒಂದೆರಡಲ್ಲ!

ಮಲ್ಲೇಶ್ವರಂ, ಯಲಹಂಕ, ಜಯನಗರ, ಯಶವಂತಪುರ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಬೃಹತ್ ರೆಂಬೆಗಳು ಧರೆಗುರುಳಿದೆ.ಈ ನಡುವೆ ಕೆಲವು ಕಡೆ ಕಾರ್ ಮತ್ತು ಬೈಕ್ ಗಳ ಮೇಲೆ ಮರಗಳು ಬಿದ್ದಿದ್ದು, ಎಲ್ಲವೂ ಜಖಂ ಆಗಿದೆ

ಮಳೆಗೆ ಬಿದ್ದ  ಮರ

ಮಳೆಗೆ ಬಿದ್ದ ಮರ

  • Share this:
ಬೆಂಗಳೂರು (ಮೇ 24): ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಕೇವಲ ಅರ್ಧ ಗಂಟೆ ಸುರಿದ ಬಿರುಗಾಳಿ ಸಹಿತ ಮಳೆಗೆ ರಸ್ತೆಗಳೆಲ್ಲ ಹೊಳೆಗಳಂತೆ ಮಾರ್ಪಾಡಾಗಿದ್ದವು. ಅಲ್ಲದೆ, ಸಾಕಷ್ಟು ಅನಾಹುತ ಕೂಡ ಸಂಭವಿಸಿದೆ. ಮೂರು ಗಂಟೆ ಸುಮಾರಿಗೆ ಭಾರೀ ಗಾಳಿ ಬೀಸಲು ಆರಂಭವಾಗಿತ್ತು. ಈ ವೇಳೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದೆ. ಗಾಳಿ-ಮಳೆಗೆ ಜನತೆ ನಿಜಕ್ಕೂ ಆತಂಕಗೊಂಡಿದ್ದರು.  

ಮಲ್ಲೇಶ್ವರಂ, ಯಲಹಂಕ, ಜಯನಗರ, ಯಶವಂತಪುರ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಬೃಹತ್ ರೆಂಬೆಗಳು ಧರೆಗುರುಳಿದೆ.ಈ ನಡುವೆ ಕೆಲವು ಕಡೆ ಕಾರ್ ಮತ್ತು ಬೈಕ್ ಗಳ ಮೇಲೆ ಮರಗಳು ಬಿದ್ದಿದ್ದು, ಎಲ್ಲವೂ ಜಖಂ ಆಗಿದೆ. ಇದಷ್ಟೇ ಅಲ್ಲದೆ ಜಯನಗರದ 3 ಮತ್ತು 4 ಬ್ಲಾಕ್ ನಲ್ಲಿ ರಸ್ತೆಯುದ್ದಕ್ಕೂ ಮರದ ರೆಂಬೆಗಳು ಬಿದ್ದಿದ್ದು ಇನ್ನಷ್ಟೇ ತೆರವು ಕಾರ್ಯ ಆರಂಭಗೊಳ್ಳಬೇಕಿದೆ.

ಮತ್ತೊಂದೆಡೆ ಮತ್ತಿಕೆರೆಯಲ್ಲಿ ಬಿದ್ದ ಬೃಹತ್ ತೆಂಗಿನ ಮರದಿಂದ‌ ಮನೆಯ ಕಾಂಪೌಂಡ್ ನಜ್ಜುಗುಜ್ಜಾಗಿದೆ. ಆದರೆ ಅದೃಷ್ಟವಶಾತ್ ಯಾರಿಗೂ ತೊಂದರೆ ಉಂಟಾಗಿಲ್ಲ. ಇನ್ನು ಯಲಹಂಕದಲ್ಲಿ ಬೃಹತ್ ಮರವೊಂದು ಬಿದ್ದಿದ್ದು, ಐದಾರು ಬೈಕ್‌ಗಳು ಜಖಂ ಆಗಿವೆ. ಹೀಗೆ ಸಾಕಷ್ಟು ಕಡೆ ಅನಾಹುತಗಳಾಗಿದ್ದು, ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ. ಆದರೆ ಬಿಬಿಎಂಪಿಯಲ್ಲಿ ಕಡಿಮೆ‌ ಸಿಬ್ಬಂದಿಯಿದ್ದು ತೆರವು ಕಾರ್ಯಾಚರಣೆ ಮಂದಗತಿಯಲ್ಲಿ ಸಾಗಿದೆ.
First published: