ಅನೇಕರ ಬಾಳಲ್ಲಿ ಕತ್ತಲೆ ತಂದ ಬೆಳಕಿನ ಹಬ್ಬ ದೀಪಾವಳಿ

ನಿನ್ನೆ ಒಂದೇ ದಿನ ಪಟಾಕಿ ಸಿಡಿದು ಗಾಯಗೊಂಡವರ ಪೈಕಿ ಮಿಂಟೊ‌ ಕಣ್ಣಿನ ಆಸ್ಪತ್ರೆಯಲ್ಲಿ ೭ ಹಾಗೂ ನಾರಾಯಣ ನೇತ್ರಾಲಯದಲ್ಲಿ ಮೂವರು ಚಿಕಿತ್ಸೆ ಪಡೆದಿದ್ದಾರೆ.

Rajesh Duggumane | news18
Updated:November 7, 2018, 4:07 PM IST
ಅನೇಕರ ಬಾಳಲ್ಲಿ ಕತ್ತಲೆ ತಂದ ಬೆಳಕಿನ ಹಬ್ಬ ದೀಪಾವಳಿ
ನಿನ್ನೆ ಒಂದೇ ದಿನ ಪಟಾಕಿ ಸಿಡಿದು ಗಾಯಗೊಂಡವರ ಪೈಕಿ ಮಿಂಟೊ‌ ಕಣ್ಣಿನ ಆಸ್ಪತ್ರೆಯಲ್ಲಿ ೭ ಹಾಗೂ ನಾರಾಯಣ ನೇತ್ರಾಲಯದಲ್ಲಿ ಮೂವರು ಚಿಕಿತ್ಸೆ ಪಡೆದಿದ್ದಾರೆ.
Rajesh Duggumane | news18
Updated: November 7, 2018, 4:07 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ನ.7): ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಹಬ್ಬ ದೀಪಾವಳಿ. ಆದರೆ ಈ ಬೆಳಕಿನ ಹಬ್ಬ ಮೊದಲನೇ ದಿನವೇ ನಗರದಲ್ಲಿ ಇಬ್ಬರು ಮಕ್ಕಳ ಪಾಲಿಗೆ ಶಾಶ್ವತ ಅಂಧಕಾರವನ್ನ ತಂದೊಡ್ಡಿದೆ.

ದೀಪಾವಳಿ ಹಬ್ಬದ ಖಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ೧೦ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ‌ ಡಿ.ಜೆ. ಹಳ್ಳಿಯ ೧೩ ವರ್ಷದ ಸಹೀದಾ ಬಾನು ಎಂಬ ಎಳೆನೇ  ತರಗತಿ ವಿದ್ಯಾರ್ಥಿನಿಗೆ ಪಟಾಕಿಯ ಕಿಡಿತಾಗಿ ಒಂದು ಕಣ್ಣಿಗೆ ತೀವ್ರ ಹಾನಿ ಉಂಟಾಗಿದೆ. ಬೊಮ್ಮನಹಳ್ಳಿಯಲ್ಲಿ ಮನೆಯ ಮುಂದೆ ಪಟಾಕಿ ಸಿಡಿಸುವುದನ್ನು ನೋಡುತ್ತ ನಿಂತಿದ್ದ ಆರು ವರ್ಷದ ಬಾಲಕಿ ದಿವ್ಯಾಗೆ ಪಟಾಕಿ ಸಿಡಿದು ಎಡಕಣ್ಣಿನ ರೆಟಿನಾಗೆ  ತೀವ್ರ ಪೆಟ್ಟಾಗಿದೆ. ಇಬ್ಬರು‌ ಬಾಲಕಿಯರನ್ನು ಮಿಂಟೊ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ವೈದ್ಯರು ಗಾಯಗೊಂಡ ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಇದನ್ನೂ ಓದಿ:  ಬಿಜೆಪಿಯ ಭದ್ರಕೋಟೆಯಾಗಿದ್ದ ಬಳ್ಳಾರಿ ಮೈತ್ರಿಕೂಟದ ಪಾಲಾಗಿದ್ದು ಹೇಗೆ ಗೊತ್ತಾ?

ಇನ್ನು ನಿನ್ನೆ ಒಂದೇ ದಿನ ಪಟಾಕಿ ಸಿಡಿದು ಗಾಯಗೊಂಡವರ ಪೈಕಿ ಮಿಂಟೊ‌ ಕಣ್ಣಿನ ಆಸ್ಪತ್ರೆಯಲ್ಲಿ ೭ ಹಾಗೂ ನಾರಾಯಣ ನೇತ್ರಾಲಯದಲ್ಲಿ ಮೂವರು ಚಿಕಿತ್ಸೆ ಪಡೆದಿದ್ದಾರೆ.ಸುರಕ್ಷಿತವಾಗಿ ಹಬ್ಬ ಆಚರಿಸುವಂತೆ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಕರ್ನಾಟಕದ ಜನತೆಯಲ್ಲಿ ಕೋರಿದ್ದಾರೆ. 'ದೀಪಾವಳಿ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿಸಲು ಹೋಗಿ ಕಣ್ಣಿಗೆಹಾನಿ ಮಾಡಿಕೊಂಡ ಪ್ರಕರಣಗಳು ನನ್ನಲ್ಲಿ ಆತಂಕವನ್ನೂ, ತೀವ್ರ ನೋವನ್ನೂ ಉಂಟುಮಾಡಿದೆ. ದಯವಿಟ್ಟು ಪರಿಸರಸ್ನೇಹಿ ದೀಪಾವಳಿ ಆಚರಿಸಿ. ಪಟಾಕಿ ಸಿಡಿಸುವ ವೇಳೆ ಅತಿ ಎಚ್ಚರಿಕೆ ಇರಲಿ. ಸಾಧ್ಯವಾದಷ್ಟೂ ಹಣತೆ ಹಚ್ಚಿ ಬೆಳಕು ಹರಡುವ ದೀಪಾವಳಿ ಆಚರಿಸಿ.ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಲಿಸಿ' ಎಂದಿದ್ದಾರೆ ಅವರು.
First published:November 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...