Bengaluru Potholes; ಸಿಎಂ ತಾತಾ, ಪ್ಲೀಸ್ ರಸ್ತೆಗುಂಡಿಗಳನ್ನು ಮುಚ್ಚಿ,ನನ್ನ ಚಾಕ್ಲೆಟ್ ಹಣ ಕೊಡ್ತೀನಿ: 7 ವರ್ಷದ ಬಾಲಕಿ ಮನವಿ
ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಲು ಬೇಕಾದ್ರೆ ಪೋಷಕರು ಚಾಕ್ಲೆಟ್ ತೆಗೆದುಕೊಳ್ಳಲು ನೀಡಿದ ಹಣ ಸಹ ನೀಡುತ್ತೇನೆ ಎಂದು ಬಾಲಕಿ (Girl Video) ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದಾಳೆ. ಸದ್ಯ ಬಾಲಕಿಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಸಹ ರಸ್ತೆಗುಂಡಿ ಮುಚ್ಚುವಂತೆ ಆಗ್ರಹಿಸುತ್ತಿದ್ದಾರೆ.
ಬೆಂಗಳೂರು: ರಾಜಧಾನಿಯಲ್ಲಿ ಮೃತ್ಯಕೂಪದಂತೆ ಬಾಯ್ದೆರೆದು ಕುಳಿತಿರುವ ರಸ್ತೆ ಗುಂಡಿಗಳನ್ನು (Bengaluru Potholes) ಮುಚ್ಚುವಂತೆ ಏಳು ವರ್ಷದ ಬಾಲಕಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರಿಗೆ ಮನವಿ ಮಾಡಿಕೊಂಡಿದ್ದಾಳೆ. ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಲು ಬೇಕಾದ್ರೆ ಪೋಷಕರು ಚಾಕ್ಲೆಟ್ ತೆಗೆದುಕೊಳ್ಳಲು ನೀಡಿದ ಹಣ ಸಹ ನೀಡುತ್ತೇನೆ ಎಂದು ಬಾಲಕಿ (Girl Video) ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದಾಳೆ. ಸದ್ಯ ಬಾಲಕಿಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಸಹ ರಸ್ತೆಗುಂಡಿ ಮುಚ್ಚುವಂತೆ ಆಗ್ರಹಿಸುತ್ತಿದ್ದಾರೆ. ಜೊತೆಗೆ ಬಾಲಕಿಯ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡುವ ಮೂಲಕ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆಯಲ್ಲಿ (Bengaluru City Roads) ಗುಂಡಿಗಳು ಹೆಚ್ಚಾಗಿದ್ದು, ಸವಾರರು ಮುಕ್ಕೋಟಿ ದೇವರ ಸ್ಮರಣೆ ಮಾಡುತ್ತಾ ರಸ್ತೆಯಲ್ಲಿ ಸಂಚರಿಸುವಂತಾಗಿದೆ.
ವಿಡಿಯೋದಲ್ಲಿರುವ ಬಾಲಕಿ ಯಾರು?
ಎರಡನೇ ಕ್ಲಾಸ್ ಓದುತ್ತಿರುವ ಧವನಿ ಗುಂಡಿಗಳನ್ನು ಮುಚ್ಚಿಸುವಂತೆ ಮನವಿ ಮಾಡಿಕೊಂಡ ವಿದ್ಯಾರ್ಥಿನಿ. ಧವನಿ ಬೆಂಗಳೂರಿನ ಹೆಗ್ಗನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾಳೆ. ನಗರದ ರಸ್ತೆಗುಂಡಿಗಳನ್ನು ಕಂಡು, ಮನೆಯಲ್ಲಿ ಪೋಷಕರಿಗೆ ಆಗುವ ಆತಂಕವನ್ನು ಸಹ ಧವನಿ ವಿವರಿಸಿದ್ದಾರೆ. ಮುಖ್ಯಮಂತ್ರಿಗಳನ್ನು ತಾತಾ ಅಂತ ಕರೆಯುತ್ತಲೇ ಗುಂಡಿಗಳಿಂದಾಗುವ ತೊಂದರೆಯನ್ನು ವಿವರಿಸಿದ್ದಾಳೆ.
ಸಿಎಂ ತಾತಾ ನಮ್ಮ ಬೆಂಗಳೂರಿನಲ್ಲಿ ರಸ್ತೆಗಳೇ ಸರಿ ಇಲ್ಲ. ಎಲ್ಲೆಂದರಲ್ಲಿ ತಗ್ಗು ಗುಂಡಿಗಳೇ ಬಿದ್ದಿವೆ. ಇದೇ ಕಾರಣದಿಂದ ಸುಮಾರು ಜನ ಸಾವನ್ನಪ್ಪುತ್ತಿದ್ದಾರೆ. ರಸ್ತೆಗುಂಡಿಯಿಂದ ಸವಾರರು ಸಾವನ್ನಪ್ಪಿದ್ರೆ, ಅವರ ಕುಟುಂಬಸ್ಥರು ಜೀವನ ಹೇಗೆ ಮಾಡಬೇಕು ಎಂದು ಧವನಿ ಪ್ರಶ್ನೆ ಮಾಡಿದ್ದಾಳೆ. ಆದಷ್ಟು ಬೇಗ ಗುಂಡಿಗಳನ್ನು ಮುಚ್ಚಿ, ಸವಾರರ ಜೀವನವನ್ನು ಉಳಿಸಿ.
ಕೆಲಸಕ್ಕೆ ಅಂತ ಹೊರಗೆ ಹೋದವರು ಮನೆಗೆ ಹೇಗೆ ಬರ್ತಾರೆ, ಎಲ್ಲಿ ಇರ್ತಾರೆ ಅಂತ ಆತಂಕದಲ್ಲಿರುತ್ತಾರೆ. ನನ್ನ ತರಹದ ಮಕ್ಕಳು ಅವರ ಅಪ್ಪ ಬರ್ತಾರೆ ಎಂದು ಕಾಯುತ್ತಿರುತ್ತಾರೆ ಅಲ್ವಾ? ನಾನು ಸಹ ನಮ್ಮ ತಂದೆ ಹೇಗೆ, ಎಲ್ಲಿ ಮತ್ತು ಎಷ್ಟೊತ್ತಿಗೆ ಬರುತ್ತಾರೆ ಎಂದು ಕಾಯುತ್ತಿರುತ್ತೇನೆ. ನಾನು ಮನೆಯಲ್ಲಿ ಭಯಪಟ್ಟುಕೊಂಡು ಅಪ್ಪ ಬರೋದನ್ನು ನೋಡುತ್ತಿರುತ್ತೇನೆ. ಪ್ಲೀಸ್ ಅವರೆಲ್ಲ ಜೀವಗಳನ್ನು ಉಳಿಸಲು ರಸ್ತೆಗುಂಡಿಗಳನ್ನು ಮುಚ್ಚಿ ಎಂದು ಹೇಳಿದ್ದಾಳೆ. ನಮ್ಮ ಅಪ್ಪ-ಅಮ್ಮ ನನಗೆ ಚಾಕ್ಲೆಟ್ ತಿನ್ನಲು ಕೊಟ್ಟಿರುವ ಹಣವನ್ನೆಲ್ಲ ನಿಮಗೆ ಕೊಡುತ್ತೇನೆ. ಪ್ಲೀಸ್ ರಸ್ತೆಗುಂಡಿಗಳನ್ನು ಮುಚ್ಚಿ ಎಂದು ಎರಡು ಕೈಗಳನ್ನು ಜೋಡಿಸಿ ಮನವಿ ಮಾಡಿಕೊಂಡಿದ್ದಾಳೆ.
ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ರಸ್ತೆಗಳ (Bengaluru City Roads) ಗುಣಮಟ್ಟ, ಪದೇ ಪದೇ ಟಾರ್ ಹಾಕುವ ಬಗ್ಗೆ ಹಾಗೂ ರಸ್ತೆ ಗುಂಡಿ ಬಗ್ಗೆ ಜನರು ಆಗಾಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಮಾಧ್ಯಮಗಳ ವರದಿಗಳಲ್ಲೂ ಸರ್ಕಾರದ ವಿರುದ್ಧ ಜನ ಟೀಕೆ ಮಾಡುತ್ತಿರುತ್ತಾರೆ. ಈಗ ರಾಜ್ಯ ಸರ್ಕಾರವೇ (State Government) ಬೆಂಗಳೂರು ನಗರದ ರಸ್ತೆಗಳ ಗುಣಮಟ್ಟದ ಬಗ್ಗೆ ಒಪ್ಪಿಕೊಂಡಂತಾಗಿದೆ. ನಗರದಲ್ಲಿ ರಸ್ತೆಗಳ ಗುಣಮಟ್ಟ ಮತ್ತು ಪದೇ ಪದೇ ಟಾರ್ ಹಾಕುವುದು, ಗುಂಡಿ ಮುಚ್ಚುವುದು ಸೇರಿ ರಾಜ್ಯ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ಬೆಂಗಳೂರು ರಸ್ತೆಗಳಿಗಾಗಿ 20,060 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಹೇಳಿದೆ. ಅಲ್ಲದೆ, ಒಂದು ಕಿಲೋಮೀಟರ್ ರಸ್ತೆಯೂ ತೊಂದರೆಯಿಂದ ಮುಕ್ತವಾಗಿಲ್ಲ ಎಂದು ಸರ್ಕಾರವೇ ಹೇಳಿದೆ. ಹಾಗೂ, ನಗರದ 11,283.05 ಕಿಮೀ ರಸ್ತೆಯ ಪೈಕಿ ಕೇವಲ 1,344 ಕಿಮೀಗಳಷ್ಟು ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳು ಮಾತ್ರ ವಾಹನದಲ್ಲಿ ಚಲಿಸಬಲ್ಲ ರಸ್ತೆಗಳು ಎಂದು ಒಪ್ಪಿಕೊಂಡಿದೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ