ಏರಿಯಾದಲ್ಲಿ ಹವಾ ಮೇಂಟೇನ್ ಮಾಡಲು ರೌಡಿ ಮೇಲೆ ಹಲ್ಲೆ; ಯಲಹಂಕ ಪೊಲೀಸರಿಂದ 7 ಮಂದಿ ಬಂಧನ

ಹಲ್ಲೆಗೊಳಗಾದ ಲೋಕೇಶ್ ಯಲಹಂಕ ಠಾಣೆಯ ರೌಡಿಶೀಟರ್ ಆಗಿದ್ದ. ಈತನ ಮೇಲೆ ಅಟ್ಯಾಕ್ ಮಾಡಿದ್ರೆ ಏರಿಯಾದಲ್ಲಿ ತಮಗೆ ಒಳ್ಳೆ ಹೆಸರು ಬರುತ್ತೆ. ಹಾಗೂ ನಮ್ಮದೆ ಹವಾ ಮೇಂಟೇನ್ ಮಾಡಬಹುದು ಎಂದು ಇನ್ನೊಂದು ಗ್ಯಾಂಗ್​ನ ಸದಸ್ಯರು ಸ್ಕೆಚ್ ಹಾಕಿದ್ರಂತೆ.

news18-kannada
Updated:June 13, 2020, 3:07 PM IST
ಏರಿಯಾದಲ್ಲಿ ಹವಾ ಮೇಂಟೇನ್ ಮಾಡಲು ರೌಡಿ ಮೇಲೆ ಹಲ್ಲೆ; ಯಲಹಂಕ ಪೊಲೀಸರಿಂದ 7 ಮಂದಿ ಬಂಧನ
ಯಲಹಂಕ ಪೊಲೀಸರಿಂದ ಬಂಧಿತರಾದ 7 ಮಂದಿ ಆರೋಪಿಗಳು
  • Share this:
ಬೆಂಗಳೂರು(ಜೂನ್ 13): ಏರಿಯಾದಲ್ಲಿ ಹವಾ ಮೆಂಟೇನ್ ಮಾಡಬೇಕು ಅಂತ ರೌಡಿಶೀಟರ್​ವೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಏಳು ಪಡ್ಡೆ ಹುಡುಗರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಇದೇ 6 ರಂದು ಕೋಗಿಲು ಬಳಿಯ ಬೆಳ್ಳಳ್ಳಿ ಕ್ರಾಸ್‌ ಸಮೀಪ ಯಲಹಂಕ ರೌಡಿಶೀಟರ್ ಲೋಕೇಶ್ ಅಲಿಯಾಸ್ ಲೋಕಿ ಮೇಲೆ ಗುಂಪೊಂದು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಿತ್ತು. ಈ ಬಗ್ಗೆ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದ ಯಲಹಂಕ ಪೊಲೀಸರು ಏಳು ಜನ ಆರೋಪಿಗಳನ್ನ ಬಂಧಿಸಿದ್ದಾರೆ.

ಹಲ್ಲೆಗೊಳಗಾದ ಲೋಕೇಶ್ ಯಲಹಂಕ ಠಾಣೆಯ ರೌಡಿಶೀಟರ್ ಆಗಿದ್ದ. ಈತನ ಮೇಲೆ ಅಟ್ಯಾಕ್ ಮಾಡಿದ್ರೆ ಏರಿಯಾದಲ್ಲಿ ತಮಗೆ ಒಳ್ಳೆ ಹೆಸರು ಬರುತ್ತೆ. ಹಾಗೂ ನಮ್ಮದೆ ಹವಾ ಮೇಂಟೇನ್ ಮಾಡಬಹುದು ಎಂದು ಇನ್ನೊಂದು ಗ್ಯಾಂಗ್​ನ ಸದಸ್ಯರು ಸ್ಕೆಚ್ ಹಾಕಿದ್ರಂತೆ. ಅಲ್ಲದೆ, ಲೋಕೇಶ್ ಮೇಲೆ ಹಲ್ಲೆ ನಡೆಸಲು ಮತ್ತೊಬ್ಬ ರೌಡಿಶೀಟರ್ ಮಂಜ ಅಲಿಯಾಸ್ ಕ್ಯಾಟ್ ಮಂಜ ಕೂಡ ಆ ಹುಡುಗರಿಗೆ ಕುಮ್ಮಕ್ಕು ನೀಡಿದ್ದನಂತೆ. ಸದ್ಯ ಕ್ಯಾಟ್ ಮಂಜ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದು ಅಲ್ಲಿಂದಲೇ ತನ್ನ ಆಪ್ತನಾದ ಯಲಹಂಕದ ಮತ್ತೊಬ್ಬ ರೌಡಿ ರಮೇಶ್ ಅಲಿಯಾಸ್ ಟಾಟಾ ರಮೇಶ್ ಮೂಲಕ ಈ ಕೃತ್ಯಕ್ಕೆ ಸಪೋರ್ಟ್ ಮಾಡಿದ್ದ ಎನ್ನಲಾಗಿದೆ.

ಸದ್ಯ ಯಲಹಂಕ ಪೊಲೀಸರು ಟಾಟಾ ರಮೇಶ್ ಸೇರಿ ಆತನ ಜೊತೆ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸೈಯದ್ ನವಾಜ್, ಸಯ್ಯದ್ ಶೋರಿಫ್, ಸಯ್ಯದ್ ಅರೀಫ್, ತಬ್ರೇಜ್ ಬೇಗ್, ಗಣೇಶ್ ಸೇರಿ 7 ಜನರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಆರೋಪಿಗಳನ್ನ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಸಂಸದರಾದ ಬಳಿಕ ಮೊದಲ ಬಾರಿಗೆ ಹೈಕೋರ್ಟ್​ನಲ್ಲಿ ವಕೀಲಿಕೆ ಮಾಡಿದ ತೇಜಸ್ವಿ ಸೂರ್ಯಲಾಕ್ ಡೌನ್ ವೇಳೆ ಕೈಯಿ ಬಾಯಿಗೆ ಬೀಗ ಹಾಕ್ಕೊಂಡು ತೆಪ್ಪಗಿದ್ದ ರೌಡಿ ಅಸಾಮಿಗಳು ಈಗ ದಿಢೀರನೆ ತಮ್ಮ ಹವಾ ಹೆಚ್ಚಿಸಿಕೊಳ್ಳಲು ಮತ್ತೆ ಪುಂಡಾಟ ಆಡಲು ಮುಂದಾಗಿದ್ದಾರೆ. ಇನ್ನಾದರೂ ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡು ಇಂತಹ ಪಾತಕ ಕ್ರಿಮಿಗಳನ್ನ ಮಟ್ಟಹಾಕಬೇಕು ಅನ್ನೋದು ಸಾರ್ವಜನಿಕರ ಆಶಯ.

.
First published: June 13, 2020, 2:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading