CoronaVirus; ಬೆಂಗಳೂರಿಗೆ ವಕ್ಕರಿಸಿದ ರೂಪಾಂತರಿ ವೈರಸ್​; ಬ್ರಿಟನ್​ನಿಂದ ನಗರಕ್ಕೆ ಆಗಮಿಸಿದ್ದ 7 ಜನರಲ್ಲಿ ಸೋಂಕು ಪತ್ತೆ!

ಡಿಸೆಂಬರ್​ 19ನೇ ತಾರೀಖು ಕೊನೆಯದಾಗಿ ಭಾರತಕ್ಕೆ ಆಗಮಿಸಿದ್ದ ಬ್ರಿಟನ್​ ವಿಮಾನದಲ್ಲಿ ಮೂರವರಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ನಿನ್ನೆ ಮತ್ತೆ ನಾಲ್ವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಈವರೆಗೆ ಒಟ್ಟು ಏಳು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಬೆಂಗಳೂರು (ಡಿಸೆಂಬರ್​ 25); ಇಡೀ ವಿಶ್ವಕ್ಕೆ ಕೊರೋನಾ ವೈರಸ್​ ವಕ್ಕರಿಸಿ ಬರೋಬ್ಬರಿ ಒಂದು ವರ್ಷವಾಗಿದೆ. ಈ ಸೋಂಕನ್ನು ನಿವಾರಿಸುವುದೇ ಎಲ್ಲಾ ದೇಶಗಳಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಡುವೆ ಬ್ರಿಟನ್​ನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರ ಕೊರೋನಾ ವೈರಸ್​ ಇಡೀ ವಿಶ್ವಕ್ಕೆ ಮತ್ತಷ್ಟು ಮಾರಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಈ ವೈರಸ್​ ಕೋವಿಡ್​-19 ಗಿಂತಲೂ ವೇಗವಾಗಿ ಪಸರಿಸುತ್ತದೆ ಅಲ್ಲದೆ, ಬೇಗನೇ ಸಾವಿಗೆ ಕಾರಣವಾಗುತ್ತದೆ. ಹೀಗಾಗಿ ಈ ವೈರಸ್​ ಬಗ್ಗೆ ಎಚ್ಚರಿಕೆ ವಹಿಸಿರುವ ಎಲ್ಲಾ ದೇಶಗಳು ಬ್ರಿಟನ್​ನಿಂದ ವಿಮಾನಯಾನವನ್ನೇ ರದ್ದುಗೊಳಿಸಿದೆ. ಆದರೆ, ಮೊನ್ನೆ ಬ್ರಿಟನ್​ನಿಂದ ಭಾರತಕ್ಕೆ ಆಗಮಿಸಿದ್ದ ಏಳು ಜನರಲ್ಲಿ ಈ ರೂಪಾಂತರಿ ಕೊರೋನಾ ವೈರಸ್​ ಇರುವುದು ದೃಢಪಟ್ಟಿದ್ದು, ಇಡೀ ನಗರದ ಜನ ಇದೀಗ ಆತಂಕಕ್ಕೆ ಒಳಪಟ್ಟಿದ್ದಾರೆ. ಸೋಂಕಿತರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಡಿಸೆಂಬರ್​ 19ನೇ ತಾರೀಖು ಕೊನೆಯದಾಗಿ ಭಾರತಕ್ಕೆ ಆಗಮಿಸಿದ್ದ ಬ್ರಿಟನ್​ ವಿಮಾನದಲ್ಲಿ ಮೂರವರಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ನಿನ್ನೆ ಮತ್ತೆ ನಾಲ್ವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಈವರೆಗೆ ಒಟ್ಟು ಏಳು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

  ಡಿಸೆಂಬರ್12 ನೇ ತಾರೀಖಿನಿಂದ 21 ರವರೆಗೂ ಒಟ್ಟು 1,582 ಜನ ಬ್ರಿಟನ್​ನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಪೈಕಿ ಏಳು ಜನರಲ್ಲಿ ಸೋಂಕು ಪತ್ತೆಯಾಗಿರುವ ಕಾರಣ ಬಿಬಿಎಂಪಿ ಅಧಿಕಾರಿಗಳು ಇದೀಗ 1,582 ಜನರಿಗೂ ಆರ್​ಟಿಪಿಸಿಆರ್ ಕೊರೋನಾ ಪರೀಕ್ಷೆ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ. ಆದರೆ, ಇಷ್ಟು ಜನರನ್ನು ಪತ್ತೆ ಹಚ್ಚುವುದು ಬಿಬಿಎಂಪಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.

  ಇದನ್ನೂ ಓದಿ : Farmers Protest: ಕೃಷಿ ಕಾಯ್ದೆಗಳ ವಿರುದ್ಧ ನಾಳೆ ತಿಂಗಳು ಪೂರೈಸಲಿರುವ ಅನಿರ್ದಿಷ್ಟಾವಧಿ ರೈತರ ಹೋರಾಟ

  ಹಲವರು ಅಧಿಕಾರಿಗಳು ಸಂಪರ್ಕಿಸಲು ಯತ್ನಿಸಿದರಾದರೂ ಪ್ರಯಾಣಿಕರ ಪೈಕಿ ಹಲವರ ಪೋನ್​ ಸ್ವಿಚ್​ ಆಫ್​ ಆಗಿದೆ. ಮತ್ತೆ ಕೆಲವರು ಗೈಕೆ ಸಿಗುತ್ತಿಲ್ಲ ಎಂಬುದು ಅಧಿಕಾರಿಗಳ ಅಂಬೋಣ ಈ ನಡುವೆ 1582 ಜನರ ಪೈಕಿ ಹಲವರು ಕಳೆದ ಒಂದು ವಾರದಲ್ಲಿ ಬೆಂಗಳೂರಿನ ಮೂಲೆ ಮೂಲೆಗೂ ಸಂಚರಿಸಿದ್ದಾರೆ. ಇನ್ನೂ ಹಲವರು ಬೇರೆ ಬೇರೆ ಜಿಲ್ಲೆಗಳಿಗೂ ಸಂಚಾರ ಬೆಳೆಸಿದ್ದಾರೆ. ಹೀಗಾಗಿ ಸೋಂಕು ಎಲ್ಲಿ..? ಯಾರಿಗೆ? ಹಬ್ಬಿದೆ ಎಂಬುದನ್ನು ಪತ್ತೆಹಚ್ಚುವುದು ಮತ್ತು ಅವರಿಗೂ ಚಿಕಿತ್ಸೆ ನೀಡುವುದು ಅಧಿಕಾರಿಗಳನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ ಎನ್ನಲಾಗುತ್ತಿದೆ.
  Published by:MAshok Kumar
  First published: