Kidnap Case: ಕಾಲ್​ ಗರ್ಲ್ ಬುಕ್ ಮಾಡಿ ಲಾಕ್ ಆದ ಹುಡುಗರು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅಪಹರಣದ ವಿಷಯ ತಿಳಿಯುತ್ತಿದ್ದಂತೆ ಅಲರ್ಟ್​ ಆದ ಪೊಲೀಸರು ಮಾಹಿತಿ ಅಧರಿಸಿ ತನಿಖೆಗೆ ಇಳಿದಿದ್ದರು. ಅಪಹರಣಕ್ಕೊಳಗಾಗಿದ್ದ ರಜನೀಕಾಂತ್ ಎಂಬವರನ್ನು ರಕ್ಷಣೆ ಮಾಡಲಾಗಿದೆ.

  • News18 Kannada
  • 3-MIN READ
  • Last Updated :
  • Karnal, India
  • Share this:

ಬೆಂಗಳೂರು: ಯುವತಿ ಸೇರಿದಂತೆ ಮೂವರನ್ನು ಅಪಹರಣ ಮಾಡಿದ (Bengaluru Kidnap Case) ಪ್ರಕರಣವನ್ನು ಬೇಗೂರು ಪೊಲೀಸರು (Beguru Police) ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸೇರಿದಂತೆ ಒಟ್ಟು ಎಳು ಜನರನ್ನು ಬಂಧಿಸಲಾಗಿದೆ. ಫೆಬ್ರವರಿ 17ರ ರಾತ್ರಿ ಸುಮಾರು 1.30ಕ್ಕೆ ಬನ್ನೇರುಘಟ್ಟ ರಸ್ತೆಯ (Bannerughatta Road) ದೇವರಚಿಕ್ಕನಹಳ್ಳಿ ಬಳಿ ಯುವತಿ ಜೊತೆ ಮಂಜುನಾಥ್ ಮತ್ತು ರಜನೀಕಾಂತ್ ನಿಂತಿದ್ದರು. ಈ ವೇಳೆ ಅಲ್ಲಿಗೆ ನಾಲ್ಕು ಬೈಕ್​​ನಲ್ಲಿ ಬಂದ ಗ್ಯಾಂಗ್ (Kidnap Gang)​ ನಮ್ಮ ಕಾರ್​ಗೆ ಡಿಕ್ಕಿ (Car Collided) ಹೊಡೆದಿದ್ದೀರಿ ಎಂದು ಮಂಜುನಾಥ್ ಮತ್ತು ರಜನೀಕಾಂತ್ ಜೊತೆ ಜಗಳ ಮಾಡಿದ್ದಾರೆ. ನಂತರ ಕೆಲವೇ ಸಮಯದಲ್ಲಿ ಬಂದಿದ್ದ ಗ್ಯಾಂಗ್​ ಮೂವರನ್ನು ತಮ್ಮ ಕಾರ್​ನಲ್ಲಿಯೇ ಅಪಹರಿಸಿತ್ತು. ಕೋಳಿಫಾರಂ ಗೇಟ್ ಬಳಿ ಮಂಜುನಾಥ್ ಅಪಹರಣಕಾರರಿಂದ ತಪ್ಪಿಸಿಕೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದರು.


ಅಪಹರಣದ ವಿಷಯ ತಿಳಿಯುತ್ತಿದ್ದಂತೆ ಅಲರ್ಟ್​ ಆದ ಪೊಲೀಸರು ಮಾಹಿತಿ ಅಧರಿಸಿ ತನಿಖೆಗೆ ಇಳಿದಿದ್ದರು. ಅಪಹರಣಕ್ಕೊಳಗಾಗಿದ್ದ ರಜನೀಕಾಂತ್ ಎಂಬವರನ್ನು ರಕ್ಷಣೆ ಮಾಡಲಾಗಿದೆ.


ಪ್ರಮುಖ ಆರೋಪಿ ತಿರುಮಲೇಶ್ ಸೇರಿ ಏಳು ಜನರ ಬಂಧನವಾಗಿದೆ. ತಿರುಮಲೇಶ್, ನವೀನ್, ಕೆಂಪರಾಜು, ಮುಖೇಶ್, ಮಂಜುನಾಥ್, ಧಲ್ಪೀರ್ ಸಾವುದ್ ಹಾಗೂ ಯುವತಿಯ ಬಂಧನವಾಗಿದೆ.


ಅಪಹರಣಕಾರರಿಗೆ ಸಾಥ್ ನೀಡಿದ್ದ ಯುವತಿ


ಯುವತಿ ಓರ್ವ ಕಾಲ್​ ಗರ್ಲ್ ಎಂಬ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಂಜುನಾಥ್ ಮತ್ತು ರಜನೀಕಾಂತ್ ಇಬ್ಬರು ಈ ಯುವತಿಯನ್ನು ಬುಕ್ ಮಾಡಿದ್ದರು. ತಡರಾತ್ರಿ ಮನೆಗೆ ಹಿಂದಿರುಗುವ ವೇಳೆ ಈ ಅಪಹರಣ ನಡೆದಿದೆ.


ಯುವತಿ ಮೊದಲೇ ತಾವು ಇರೋ ಸ್ಥಳದ ಮಾಹಿತಿಯನ್ನು ಅಪಹರಣಕಾರರಿಗೆ ನೀಡಿದ್ದಳು. ಮೂವರ ನಿರ್ಜನ ಪ್ರದೇಶದಲ್ಲಿದ್ದಾಗ ಬಂದ ಗ್ಯಾಂಗ್, ಜಗಳ ತೆಗೆದು ಇಬ್ಬರನ್ನು ಅಪಹರಣ ಮಾಡಿತ್ತು. ಮಂಜುನಾಥ್ ಮತ್ತು ರಜನೀಕಾಂತ್ ಮುಂದೆ ತಾನೂ ಸಹ ಅಪಹರಣಕ್ಕೆ ಒಳಗಾದಂತೆ ನಟಿಸಿದ್ದಳು.




ಕಿಡ್ನಾಪ್ ಪ್ಲಾನ್ ಫೇಲ್


ಎಲ್ಲವೂ ಅಂದುಕೊಂಡಂತೆ ಯುವತಿ ಮತ್ತು ಆಕೆಯ ಗ್ಯಾಂಗ್ ಇಬ್ಬರನ್ನು ಅಪಹರಿಸಿತ್ತು. ಆದರೆ ಕಾರ್ ಕೋಳಿ ಫಾರಂ ಗೇಟ್ ಬಳಿ ಬರುತ್ತಿದ್ದಂತೆ ಮಂಜುನಾಥ್ ತಪ್ಪಿಸಿಕೊಂಡಿದ್ದರು. ತಪ್ಪಿಸಿಕೊಂಡ ಬಳಿಕ ಮಂಜುನಾಥ್ ಕಂಟ್ರೋಲ್​ ರೂಮ್​ಗೆ ಕರೆ ಮಾಡಿ ಅಪಹರಣದ ವಿಷಯ ತಿಳಿಸಿದ್ದರು.


ಕಿಡ್ನಾಪ್ ಮಾಡಿ ಮಂಡ್ಯ, ಮೈಸೂರು ಮೂಲಕ ನಂಜನಗೂಡಿಗೆ ಆರೋಪಿಗಳು ತೆರಳಿದ್ದರು. ರಜನೀಕಾಂತ್ ಬಿಡುಗಡೆಗೆ ಐದು ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದರು. ಇದೀಗ ಎಲ್ಲಾ ಆರೋಪಿಗಳನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಬೇಗೂರು ಠಾಣೆ ಪೊಲೀಸರು ಬಂಧಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.


ಸರ್ಕಾರಿ ಬಸ್ ಕದ್ದ ಕಳ್ಳರು


ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸರ್ಕಾರಿ ಬಸ್​ನ್ನೇ ಕದಿಯಲಾಗಿದೆ. ಬೀದರ್ ಬಸ್ ಡಿಪೋದ KA38-F971 ಸಂಖ್ಯೆಯ ಬಸ್ ಕಳುವಾಗಿದೆ. ಬೆಳಗ್ಗೆ 3:30 ಸುಮಾರಿಗೆ ಬಸ್ ಕದಿಯಲಾಗಿದೆ. ಖದೀಮರು, ಮಿರಿಯಾಣ ಮಾರ್ಗವಾಗಿ ತಾಂಡೂರು ಮೂಲಕ ಬಸ್​ನ್ನು ತೆಲಂಗಾಣದ ಕಡೆ ತೆಗೆದುಕೊಂಡು ಹೋಗಿದ್ದಾರೆ.


ಇದನ್ನೂ ಓದಿ: Paresh Mesta Case: ಪರೇಶ್ ಮೇಸ್ತಾ ಹತ್ಯೆ ಕೇಸ್; 122 ಜನರ ವಿರುದ್ಧ ದಾಖಲಾಗಿದ್ದ ಕೇಸ್ ಹಿಂಪಡೆದ ಸರ್ಕಾರ


RTO ವಾಹನ ಪಲ್ಟಿ, ತಪ್ಪಿದ ಅನಾಹುತ


RTO ವಾಹನ ಪಲ್ಟಿಯಾಗಿದ್ದು RTO ಅಧಿಕಾರಿ ಪ್ರಮುತೇಶ್​ ಪ್ರಾಣಪಾಯದಿಂದ ಪಾರಾಗಿರುವ ಘಟನೆ ಚಿತ್ರದುರ್ಗ ನಗರದ ಉಪಾಧ್ಯ ಹೋಟೆಲ್ ಬಳಿ ನಡೆದಿದೆ. ರಸ್ತೆಯಲ್ಲಿ ಏಕಾಏಕಿ ಅಡ್ಡ ಬಂದ ಎಮ್ಮೆ ತಪ್ಪಿಸಲು ಹೋಗಿ ವಾಹನ ಪಲ್ಟಿಯಾಗಿದೆ. ಅಪಘಾತದಲ್ಲಿ ಪ್ರಮುತೇಶ್, ಚಾಲಕ ನತಾವುಲ್ಲಾಗೆ ಗಾಯವಾಗಿದ್ದು, ನಗರದ ಬಸವೇಶ್ವರ ಆಸ್ಪತ್ರೆದಲ್ಲಿ ಚಿಕಿತ್ಸೆ ನೀಡಲಾಯ್ತು

Published by:Mahmadrafik K
First published: