ಬೆಳಗಾವಿಯ ಇಟಗಿ ಬಳಿ ಭೀಕರ ರಸ್ತೆ ಅಪಘಾತ; 7 ರೈತರು ಸಾವು

ಮೃತರು ಬೋಗೂರು ಗ್ರಾಮ ನಿವಾಸಿಗಳು ಎನ್ನಲಾಗಿದ್ದು, ಇಟಗಿಗೆ ಕಬ್ಬು ಕಟಾವಿಗೆ ತೆರಳುತ್ತಿದ್ದರು. ಈ ಸಂಬಂಧ ನಂದಗಡ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬೆಳಗಾವಿ(ಫೆ.08): ಸೇತುವೆ ಮೇಲಿಂದ ಟ್ರ್ಯಾಕ್ಟರ್​ ಮಗುಚಿ ಬಿದ್ದ ಪರಿಣಾಮ 7 ಮಂದಿ ರೈತರು ಸಾವನ್ನಪ್ಪಿರುವ ದುರಂತ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

  ಖಾನಾಪುರ ತಾಲೂಕಿನ ಇಟಗಿ-ಬೋಗೂರು ಸೇತುವೆ ಮೇಲೆ ಚಲಿಸುತ್ತಿದ್ದ ಟ್ರ್ಯಾಕ್ಟರ್​​ ಆಯತಪ್ಪಿ ಮಗುಚಿ ಬಿದ್ದಿದೆ. ಪರಿಣಾಮ ಟ್ರ್ಯಾಕ್ಟರ್​ನಲ್ಲಿದ್ದ ನಾಲ್ವರು ರೈತರು  ಸ್ಥಳದಲ್ಲೇ ಮೃತಪಟ್ಟಿದ್ಧಾರೆ. ಶೇಖಪ್ಪ ಕೆದಾರಿ(38), ಗುಲಾಬಿ ಹುಣಸಿಕಟ್ಟಿ(35), ಶಾಂತವ್ವ ಅಳಗೋಡಿ(65), ಶಾಂತವ್ವ(63) ಮೃತರು.

  ಬಿಎಸ್​ವೈಗೆ ತಲೆನೋವು ಮುಂದುವರಿಸಿದ ಜಾರಕಿಹೊಳಿ; ಖಾತೆ ಕಿತ್ತಾಟದ ಮಧ್ಯೆ ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ ಅನುಮಾನ

  ಇನ್ನು ಮೂವರು ರೈತರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಬೋಗೂರು ಗ್ರಾಮ ನಿವಾಸಿಗಳು ಎನ್ನಲಾಗಿದ್ದು, ಇಟಗಿಗೆ ಕಬ್ಬು ಕಟಾವಿಗೆ ತೆರಳುತ್ತಿದ್ದರು. ಈ ಸಂಬಂಧ ನಂದಗಡ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


  First published: