Hubballi Accident: ಸಾವಿನ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ; ಏಳು ಸಾವು, 25 ಗಾಯ

ಸಾವಿನ ಹೆದ್ದಾರಿ ಎಂದೇ ಅಪಖ್ಯಾತಕ್ಕೆ ಗುರಿಯಾಗಿರೊ ಹುಬ್ಬಳ್ಳಿ - ಧಾರವಾಡ ಬೈಪಾಸ್ ನಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಏಳು ಜನ ಸಾವನ್ನಪ್ಪಿ, 25 ಜನ ಗಾಯಗೊಂಡಿದ್ದಾರೆ.

ಲಾರಿ

ಲಾರಿ

  • Share this:
ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಬೈಪಾಸ್ (Hubballi-Dharwad Bypass) ರಸ್ತೆ ಸಾವಿನ ಹೆದ್ದಾರಿ ಎಂದು ಬಿಂಬಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯೂ (National Highway) ಆಗಿರೋ ಇಲ್ಲಿ, ಆಗಾಗ ಅಪಘಾತಗಳು (Accident) ಸಂಭವಿಸುತ್ತಲೇ ಇರುತ್ತೆ. ಈ ಹಿನ್ನೆಲೆಯಲ್ಲಿ ಇದನ್ನು ದಶ ಪಥ ರಸ್ತೆಯನ್ನಾಗಿಸೋಕೆ (Ten Lane) ಶಿಲನ್ಯಾಸ ನೆರವೇರಿಸಲಾಗಿತ್ತು. ಇದರ ಬೆನ್ನ ಹಿಂದೆಯೇ ಇದೇ ರಸ್ತೆಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಹಾಗೂ ಲಾರಿಗಳ (Private Bus And Lorry) ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಏಳು ಜನ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ (Hubballi) ಹೊರವಲಯದಲ್ಲಿ ನಡೆದಿದೆ. ಖಾಸಗಿ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಸ್ಥಳದಲ್ಲಿಯೇ ಆರು ಜನರ ಸಾವನ್ನಪ್ಪಿದ್ದರೆ, ಓರ್ವ ಕಿಮ್ಸ್ ಆಸ್ಪತ್ರೆಯಲ್ಲಿ (KIMS  Hospital) ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ. ಘಟನೆಯಲ್ಲಿ 25 ಜನರಿಗೆ ಗಾಯಗಳಾಗಿವೆ. ಕೆಲವರ ಸ್ಥಿತಿ ಗಂಭೀರವಾಗಿದೆ.

ಓವರ್ ಟೇಕ್ ವೇಳೆ ಅಪಘಾತ

ಸಾವಿನ ಹೆದ್ದಾರಿ ಎಂದೇ ಬಿಂಬಿತಗೊಂಡಿರೋ ಹುಬ್ಬಳ್ಳಿ ಹೊರವಲಯದ ತಾರಿಹಾಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ದುರ್ಘಟನೆ ಸಂಭವಿಸಿದೆ. ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಂಗಳೂರಿಗೆ ಹೊರಟಿದ್ದ ನ್ಯಾಷನಲ್ ಟ್ರಾವೆಲ್ಸ್ ಬಸ್ ಗೆ ಧಾರವಾಡ ದ ಕಡೆ ಹೊರಟಿದ್ದ ಲಾರಿ ಮುಖಾಮುಖಿ ಡಿಕ್ಕಿಯಾಗಿದೆ. ಓವರ್ ಟೇಕ್ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ:  Crime News: ಎಟಿಎಂ ಅದಲು ಬದಲು ಮಾಡಿ ವಂಚನೆ! ಮನೆ ಬಾಡಿಗೆ ಹೆಸರಲ್ಲೂ ದೋಖಾ!

ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೇಟಿ

ಮೃತರೆಲ್ಲರೂ ಮಹಾರಾಷ್ಟ್ರಕ್ಕೆ ಸೇರಿದವರಾಗಿದ್ದಾರೆ. ಮೃತರ ಪೈಕಿ ಓರ್ವನ ಗುರುತು ಪತ್ತೆಯಾಗಿದ್ದು, ಇಚಲಕರಂಜಿಯ ಬಾಬಾಸಾ ಅಣ್ಣಾಸಾ ಚೌಗಲೆ ಎಂದು ಗುರುತಿಸಲಾಗಿದೆ. ಗಾಯಾಳುಗಳು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಲಾಭೂ ರಾಮ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಕಿಮ್ಸ್  ಆಸ್ಪತ್ರೆಗೂ ಭೇಟಿ ನೀಡಿದ ಲಾಭೂ ರಾಮ್, ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಘಟನಾ ಸ್ಥಳದಲ್ಲಿಯೇ ಆರು ಜನ ಸಾವನ್ನಪ್ಪಿದ್ದಾರೆ. ಕೊಲ್ಹಾಪುರದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ಗೆ ಅಪಘಾತವಾಗಿದೆ. ಅಪಘಾತ ಹೇಗಾಯಿತು ಎಂದು ಪರಿಶೀಲಿಸಲಾಗುತ್ತಿದೆ. ಗಾಯಾಳುಗಳಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಲಾಭೂ ರಾಮ್ ಮಾಹಿತಿ ನೀಡಿದ್ದಾರೆ.

ಗಾಯಾಳುಗಳು ಹೇಳಿದ್ದೇನು?

ಕೊಲ್ಹಾಪುರದಿಂದ ಬೆಂಗಳೂರಿಗೆ ಹೊರಟಿದ್ದೆವು. ಗಾಢ ನಿದ್ದೆಯಲ್ಲಿದ್ದಾಗ ಅಪಘಾತವಾಗಿದೆ. ಏನಾಯಿತು, ಯಾವ ರೀತಿ ಆಯಿತು ಎನ್ನೋದು ಒಂದೂ ಗೊತ್ತಿಲ್ಲ ಅಂತಾರೆ ಗಾಯಾಳುಗಳು. ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗಾಯಾಳುಗಳಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

seven died in private bus and lorry accident at hubballi saklb mrq
ಅಕ್ಕಿ ಮೂಟೆ


ರಸ್ತೆಯಲ್ಲಿ ಅಕ್ಕಿ ಮೂಟೆ ಚೆಲ್ಲಾಪಿಲ್ಲಿ

ಲಾರಿಯಲ್ಲಿ ಅಕ್ಕಿ ಮೂಟೆ ಸಾಗಿಸಲಾಗುತ್ತಿತ್ತು. ಅಪಘಾತದ ಹಿನ್ನೆಲೆಯಲ್ಲಿ ರಸ್ತೆಯ ಬದಿ ಅಕ್ಕಿ ಮೂಟೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ತಕ್ಷಣ ಮೂಟೆಗಳನ್ನು ರಸ್ತೆ ಬದಿಗೆ ಪೊಲೀಸರು ಸ್ಥಳಾಂತರಿಸಿದ್ದಾರೆ. ಲಾರಿ ಹಾಗೂ ಬಸ್ ಗಳನ್ನು ಬೇರೆಡೆಗೆ ಶಿಫ್ಟ್ ಮಾಡಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ.

ಇದನ್ನೂ ಓದಿ:  Bengaluru Schoolಗಳಿಗೆ ಹುಸಿ ಬಾಂಬ್ ಮೇಲ್ ಪ್ರಕರಣದ ಹಿಂದೆ 17 ವರ್ಷದ ಬಾಲಕ: ಹೇಗೆ? ಎಲ್ಲಿಂದ ಬಂದಿದ್ದು ಆ ಮೇಲ್?

ಮೊನ್ನೆಯಷ್ಟೇ ಒಂಬತ್ತು ಸಾವಾಗಿತ್ತು

ಧಾರವಾಡ ಸಮೀಪ ಮೊನ್ನೆಯಷ್ಟೇ ಭೀಕರ ರಸ್ತೆ ಅಪಘಾತ ಸಂಭವಿಸಿ ಒಂಬತ್ತು ಜನ ಸಾವನ್ನಪ್ಪಿದ್ದರು. ಕ್ರೂಷರ್ ಅಪಘಾತದಲ್ಲಿ ಒಂಬತ್ತು ಜನ ಸಾವಿಗೀಡಾಗಿ, ಹತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದವು. ಮದುವೆಯ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿತ್ತು. ಇದರ ಬೆನ್ನ ಹಿಂದೆಯೇ ಹುಬ್ಬಳ್ಳಿ ಬಳಿ ಅಪಘಾತ ಸಂಭವಿಸಿ ಏಳು ಜನ ಸಾವಿಗೀಡಾಗಿದ್ದಾರೆ.
Published by:Mahmadrafik K
First published: