HOME » NEWS » State » SEVEN DIED IN BIG ACCIDENT MET IN KALBURGI TODAY GNR

ಕಲಬುರ್ಗಿಯಲ್ಲಿ ಲಾರಿಗೆ ಕಾರು ಡಿಕ್ಕಿ, ಭೀಕರ ಅಪಘಾತ - ಗರ್ಭದಲ್ಲಿದ್ದ ಕೂಸು ರಕ್ಷಿಸಲೋಗಿ ಏಳು ಜನ ದುರ್ಮರಣ

ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಗೆ ಬಿಪಿ ಏರು ಪೇರಾಗುತ್ತಿದ್ದರಿಂದ ಕಾರಿನಲ್ಲಿ ಕರೆತರಲಾಗ್ತಿತ್ತು. ಆಸ್ಪತ್ರೆಗೆ ಹೋಗುವ ತವಕದಲ್ಲಿ ವೇಗವಾಗಿ ಬಂದಿದ್ದರಿಂದ ದುರ್ಘಟನೆ ಸಂಭವಿಸಿದೆ ಎಂದು ಡಿಸಿಪಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ.

news18-kannada
Updated:September 27, 2020, 3:08 PM IST
ಕಲಬುರ್ಗಿಯಲ್ಲಿ ಲಾರಿಗೆ ಕಾರು ಡಿಕ್ಕಿ, ಭೀಕರ ಅಪಘಾತ - ಗರ್ಭದಲ್ಲಿದ್ದ ಕೂಸು ರಕ್ಷಿಸಲೋಗಿ ಏಳು ಜನ ದುರ್ಮರಣ
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ(ಸೆ.27): ಕಲಬುರ್ಗಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಏಳು ಜನ ಮೃತರಾಗಿದ್ದಾರೆ. ಕಲಬುರ್ಗಿ ತಾಲೂಕಿನ ಸಾವಳಗಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ. ಮೃತರು ಆಳಂದ ಪಟ್ಟಣಕ್ಕೆ ಸೇರಿದವರಾಗಿದ್ದಾರೆ. ಕಾರು ಗುದ್ದಿದ ರಭಸಕ್ಕೆ ದೊಡ್ಡ ಗಾತ್ರದ ಲಾರಿ ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದಿದೆ. ಇದೀಗ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗರ್ಭದಲ್ಲಿದ್ದ ಕೂಸನ್ನು ರಕ್ಷಿಸಲು ಹೋಗಿ ಏಳು ಜನ ಮಸಣ ಸೇರಿದ ಘಟನೆ ಕಲಬುರ್ಗಿ ತಾಲೂಕಿನ ಸಾವಳಗಿ ಕ್ರಾಸ್ ಬಳಿ ನಡೆದಿದೆ. ಓರ್ವ ಗರ್ಭಿಣಿ ಸೇರಿ ನಾಲ್ವರು ಮಹಿಳೆಯರು, ಮೂರು ಜನ ಪುರಷರ ಸಾವನ್ನಪ್ಪಿದ್ದಾರೆ. ಗರ್ಭಿಣಿ ಮಹಿಳೆಯನ್ನು ಡೆಲಿವರಿ ಸಲುವಾಗಿ ಕಲಬುರ್ಗಿಗೆ ಕರೆದುಕೊಂಡು ಬರುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಮೃತರು ಕಲಬುರ್ಗಿ ಜಿಲ್ಲೆಯ ಆಳಂದ ಪಟ್ಟಣದ ನಿವಾಸಿಗಳು ಎನ್ನಲಾಗಿದೆ. 

ಕಾರು ಡಿಕ್ಕಿಯಾದ ರಭಸಕ್ಕೆ ಲಾರಿಯೂ ರಸ್ತೆ ಪಕ್ಕದಲ್ಲಿ ಪಲ್ಟಿ ಹೊಡೆದಿದೆ. ಮೃತರನ್ನು 25 ವರ್ಷದ ಗರ್ಭಿಣಿ ಇರ್ಫಾನಾ ಬೇಗಂ, ರುಬಿಯಾ ಬೇಗಂ(50), ಅಬೇದಾಬಿ ಬೇಗಂ(50), ಮುನೀರ್​​(28), ಮಹಮ್ಮದ್ ಅಲಿ (38), ಶೌಕತ್ ಅಲಿ (29) ಹಾಗೂ ಜಯಚುನಬಿ(60) ಎಂದು ಗುರುತಿಸಲಾಗಿದೆ.

ಇನ್ನು, ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸ್ ಕಮೀಷನರ್ ಸತೀಶ್ ಕುಮಾರ್, ಡಿಸಿಪಿ ಕಿಶೋರ್ ಬಾಬು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡಸಿದರು. ಕಾರು ಅತಿಯಾದ ವೇಗದಿಂದ ಬಂದು ಡಿಕ್ಕಿ ಹೊಡೆದಿದ್ದರಿಂದ ಈ ಭೀಕರ ಅಪಘಾತ ಸಂಭವಿಸಿದೆ.

ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಗೆ ಬಿಪಿ ಏರು ಪೇರಾಗುತ್ತಿದ್ದರಿಂದ ಕಾರಿನಲ್ಲಿ ಕರೆತರಲಾಗ್ತಿತ್ತು. ಆಸ್ಪತ್ರೆಗೆ ಹೋಗುವ ತವಕದಲ್ಲಿ ವೇಗವಾಗಿ ಬಂದಿದ್ದರಿಂದ ದುರ್ಘಟನೆ ಸಂಭವಿಸಿದೆ ಎಂದು ಡಿಸಿಪಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ.

ಇರ್ಫಾನಾ ಬೇಗಂಗೆ ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಿಪಿಯಲ್ಲಿ ಏರುಪೇರಾಗಿದ್ದರಿಂದ ಆಳಂದದಿಂದ ಕಲಬುರ್ಗಿಗೆ ಕಾರಿನಲ್ಲಿ ಕರೆತರಲು ಯತ್ನಿಸಿದ್ದಾರೆ. ಮಾರ್ಗ ಮಧ್ಯದಲ್ಲಿಯೇ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: ಡ್ರಗ್ ಚಾಟ್ ವಾಟ್ಸಾಪ್ ಗ್ರೂಪ್​ಗೆ ದೀಪಿಕಾನೇ ಅಡ್ಮಿನ್?; ಮಾದಕ ನಟಿಯರ ಮೊಬೈಲ್ ವಶಕ್ಕೆ! ಕಾರಿನಲ್ಲಿ ಒಂಬತ್ತು ಜನ ಪ್ರಯಾಣಿಸುತ್ತಿದ್ದರು. ಈ ಪೈಕಿ ಏಳು ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಬ್ಬರಿಗೆ ಗಾಯಗಳಾಗಿವೆ. ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
Published by: Ganesh Nachikethu
First published: September 27, 2020, 3:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories