Halal vs Jhatka: ಹಲಾಲ್ ವರ್ಸಸ್ ಜಟ್ಕಾ:  ಒಂದೇ ದಿನ ಹಿಂದೂ ಜಟ್ಕಾ ಮಾಂಸದಂಗಡಿಯಲ್ಲಿ ಬಂದ ಆದಾಯ ಎಷ್ಟು?

ಒಂದು ಗುಂಪಿನಿ ಜನರು ಮಾತ್ರ ಜಟ್ಕಾ ಮಾಂಸವನ್ನೇ ಖರೀದಿಸಿದ್ದಾರೆ. ಬೆಂಗಳೂರಿನಲ್ಲಿ ಜಟ್ಕಾ ಕಟ್ ಮಾಂಸವನ್ನು ಡೋರ್ ಡೆಲಿವಿರಿ ಸೇವೆಯನ್ನು ನೀಡಲಾಗಿತ್ತು. ಈ ವಿವಾದದ ನಡುವೆ ಮಂಡ್ಯ, ರಾಮನಗರ ಭಾಗದಲ್ಲಿ ಗುಡ್ಡೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿತ್ತು.

ಹಿಂದವೀ ಮಾರ್ಟ್

ಹಿಂದವೀ ಮಾರ್ಟ್

  • Share this:
ಯುಗಾದಿಗೂ 15 ದಿನಗಳ ಮೊದಲೇ ರಾಜ್ಯದಲ್ಲಿ ಹಲಾಲ್ ಕಟ್ ಮಾಂಸ (Halal Meat) ಬಳಕೆ ಮಾಡದಂತೆ ಹಿಂದೂ ಕಾರ್ಯಕರ್ತರು (Hindu Activist) ಕರೆ ಕೊಟ್ಟಿದ್ರು. ಈ ಸಂಬಂಧ ಸಾಮಾಜಿಕ ಮಾಧ್ಯಮ (Social Media), ವಿದ್ಯುನ್ಮಾನ ವಾಹಿನಿಗಳಲ್ಲಿ (News Channel) ಚರ್ಚೆಗಳು ನಡೆದಿದ್ದವು. ವಿಶ್ವ ಹಿಂದೂ ಪರಿಷತ್ (Vishwa Hindu Parishat), ಭಜರಂಗದಳ (Bhajarangadala) ಸೇರಿದಂತೆ ಕೆಲ ಬಿಜೆಪಿ ಶಾಸಕರು, ಸಚಿವರು (BJP MLAs And Minister) ಜಟ್ಕಾ ಕಟ್ (Jhatka Meat) ಪರ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಸಂಬಂಧ ವಿಧಾನಸಭೆ ಅಧಿವೇಶನ(Assembly Session)ದಲ್ಲಿಯೂ ಚರ್ಚೆಗಳು ನಡೆದಿದ್ದವು. ಇನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಹಿಂದೂ ಸಂಘಟನೆಗಳ ನಡೆಯನ್ನು ಅತ್ಯಂತ ಕಟು ಪದಗಳಲ್ಲಿಯೇ ಟೀಕಿಸಿದ್ದರು.

ಭಾನುವಾರ ಹೊಸ ತೊಡಕು ಹಿನ್ನೆಲೆ ಮಾಂಸದ ಮಾರುಕಟ್ಟೆಗಳಲ್ಲಿ ಭರ್ಜರಿ ವ್ಯಾಪಾರ ನಡೆದಿದೆ. ಬಹುತೇಕ ಜನರು ತಮ್ಮ ರೆಗ್ಯೂಲರ್ ಅಂಗಡಿಗಲ್ಲಿ ಮಾಂಸ ಖರೀದಿ ಮಾಡುವ ಮೂಲಕ ವಿವಾದಕಕ್ಕೆ ಡೋಂಟ್ ಕೇರ್ ಅಂತ ಹೇಳಿದ್ದರು.

ಆದರೂ ಒಂದು ಗುಂಪಿನಿ ಜನರು ಮಾತ್ರ ಜಟ್ಕಾ ಮಾಂಸವನ್ನೇ ಖರೀದಿಸಿದ್ದಾರೆ. ಬೆಂಗಳೂರಿನಲ್ಲಿ ಜಟ್ಕಾ ಕಟ್ ಮಾಂಸವನ್ನು ಡೋರ್ ಡೆಲಿವಿರಿ ಸೇವೆಯನ್ನು ನೀಡಲಾಗಿತ್ತು. ಈ ವಿವಾದದ ನಡುವೆ ಮಂಡ್ಯ, ರಾಮನಗರ ಭಾಗದಲ್ಲಿ ಗುಡ್ಡೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿತ್ತು.

ಇದನ್ನೂ ಓದಿ:  Halal And Jhatka ಕಟ್ ಗೆ ತಲೆ ಕೆಡಿಸಿಕೊಳ್ಳದ ಜನರು; ಬೆಳಗಿನ ಜಾವ 2 ಗಂಟೆಯಿಂದಲೇ ಅಂಗಡಿಗಳ ಮುಂದೆ ಕ್ಯೂ!

ಜಟ್ಕಾ ಮಾಂಸದಂಗಡಿಯಲ್ಲಿ 7 ಕೋಟಿಗೂ ಅಧಿಕ ಆದಾಯ

ಒಂದಿಷ್ಟು ಜನರು ಮೊದಲೇ ಜಟ್ಕಾ ಮಾಂಸಕ್ಕಾಗಿ ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದರು. ನಿನ್ನೆ ಒಂದೇ ದಿನ ಹಿಂದೂ ಜಟ್ಕಾ ಮಾಂಸದ ಅಂಗಡಿಗಳಲ್ಲಿ 7 ಕೋಟಿ ಮತ್ತು  ಹಿಂದವೀ ‌ಮಾರ್ಟ್ ನಿಂದ ಬರೋಬ್ಬರಿ 43 ಲಕ್ಷ ರೂಪಾಯಿ ಆದಾಯ ಬಂದಿದೆ ಎಂದು ನ್ಯೂಸ್ 18 ಕನ್ನಡಕ್ಕೆ ಹಿಂದವಿ ಮಾರ್ಟ್ ಮಾಲೀಕ ಮುನೇಗೌಡ ಹೇಳಿದ್ದಾರೆ. ಎಲ್ಲಿ ಎಷ್ಟು ಮಾಂಸ ಮಾರಾಟವಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

>> ಉಳ್ಳಾಲ ಮತ್ತು ಜ್ಞಾನಭಾರತಿ ಹಿಂದವೀ ಮೀಟ್ ಮಾರ್ಟ್

3900 ಕೆಜಿ- ಮಟನ್

950 ಕೆಜಿ- ಚಿಕನ್

ಅಂದಾಜು 21 ಲಕ್ಷದ 71 ಸಾವಿರ ರೂಪಾಯಿ ವ್ಯಾಪಾರ ಆಗಿದೆ. 180 ರಿಂದ 200 ರೂ.ವರೆಗೆ ಚಿಕನ್ ಮತ್ತು 700 ರಿಂದ 750 ರೂಪಾಯಿಯಂತೆ ಮಟನ್ ಮಾರಾಟ ಮಾಡಲಾಗಿದೆ.

>> ಕಮ್ಮನಹಳ್ಳಿ ಹಿಂದವೀ ಮೀಟ್ ಮಾರ್ಟ್

750 ಕೆಜಿ- ಮಟನ್

600 ಕೆಜಿ - ಚಿಕನ್

ಇದರ ಅಂದಾಜು ಮೊತ್ತ- 6 ಲಕ್ಷದ 33 ಸಾವಿರ ರೂಪಾಯಿ

>> ಇಂದಿರಾನಗರದ ಹಿಂದವೀ ಮೀಟ್ ಮಾರ್ಟ್

400 ಕೆಜಿ - ಮಟನ್

500 ಕೆಜಿ - ಚಿಕನ್

ಇದರ ಅಂದಾಜು ಮೊತ್ತ- 3 ಲಕ್ಷದ 70 ಸಾವಿರ ರೂಪಾಯಿ

>> ಹೊರಮಾವು

300 ಕೆಜಿ- ಮಟನ್

400 ಕೆಜಿ - ಚಿಕನ್

ಇದರ ಅಂದಾಜು ಮೊತ್ತ- 2 ಲಕ್ಷದ 82 ಸಾವಿರ ರೂಪಾಯಿ

>> ನಾಗವಾರ

400 ಕೆಜಿ- ಮಟನ್

ಅಂದಾಜು ಮೊತ್ತ-2 ಲಕ್ಷದ 80 ಸಾವಿರ ರೂಪಾಯಿ

>> ಬನ್ನೇರುಘಟ್ಟ

300 ಕೆಜಿ- ಮಟನ್

ಇದರ ಅಂದಾಜು ಮೊತ್ತ-2 ಲಕ್ಷದ ಹತ್ತು ಸಾವಿರ ರೂಪಾಯಿ

>> ನೆಲಗದರನಗಳ್ಳಿ

300 ಕೆಜಿ- ಮಟನ್

360 ಕೆಜಿ- ಚಿಕನ್

ಅಂದಾಜು ಮೊತ್ತ- 2 ಲಕ್ಷದ 74 ಸಾವಿರ ರೂಪಾಯಿ

ಇದನ್ನೂ ಓದಿ:  Mandya: Halal Cut - Jatka Cut ನಡುವೆ ಗುಡ್ಡೆ ಕಟ್, ಮಂಡ್ಯದಲ್ಲಿ ಗುಡ್ಡೆ ಕಟ್ದೆ ಹವಾ

ಮನೆ ಮನೆಗೆ ಜಟ್ಕಾ ಮಾಂಸ 

ಸಿದ್ದಾಪುರ, ಆಡುಗೋಡಿ, ಗುಟ್ಟೆಪಾಳ್ಯ, ಸೋಮೇಶ್ವರ ನಗರ, ವೆಂಕಟಾಪುರ, ಕೋರಮಂಗಲ. ಬಿಟಿಎಂ ಲೇಔಟ್ ಬಳಿ ಭಜರಂಗದಳದ ಕಾರ್ಯಕರ್ತರು 100ಕ್ಕೂ ಹೆಚ್ಚು ಮನೆಗಳಿಗೆ ಜಟ್ಕಾ ಕಟ್ ಮಾಂಸ ಹಂಚಿದ್ದರು. ಮಧ್ಯರಾತ್ರಿ 1 ಗಂಟೆಯಿಂದ ಭಜರಂಗದಳ ಕಾರ್ಯಕರ್ತರು 800 ರೂ. ಕೆಜಿ ಅಂತೆ ಗುಡ್ಡೆ ಮಾಂಸ ವಿತರಣೆ ಮಾಡಿದ್ದರು. ಮಾಂಸ ಹಂಚಿಕೆಗಾಗಿ ಕಾರ್ಯಕರ್ತರು 40 ಮರಿಗಳನ್ನು ತಂದಿದ್ದರು. ಕೆಲವರು ಮೊದಲೇ ಜಟ್ಕಾ ಮಾಂಸಕ್ಕಾಗಿ ಬೇಡಿಕೆ ಇಟ್ಟಿದ್ದರು.
Published by:Mahmadrafik K
First published: