ಹುಬ್ಬಳ್ಳಿ: ಹುಬ್ಬಳ್ಳಿಯ ಸಂತೋಷ ನಗರದಲ್ಲಿ ನಡೆದ ನಾಗರಾಜ್ ಚಲವಾದಿ ಕೊಲೆ ಪ್ರಕರಣಕ್ಕೆ (Hubballi Murder Case) ಸಂಬಂಧಿಸಿದ ಇಬ್ಬರು ಅಪ್ರಾಪ್ತ ಬಾಲಕರು ಸೇರಿ ಏಳು ಜನರನ್ನು (Accused Arrest) ಪೊಲೀಸರು ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸರು (Hubballi Police) ಕಾರ್ಯಾಚರಣೆ ನಡೆಸಿ ಏಳು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಸಮೀರ್, ಶಶಿಧರ್, ನಿಖಿಲ್ ಮೇದಾರ, ಗಿರೀಶ್ ಗುಡಿ, ಪ್ರದೀಪ್@ ಪದ್ಯಾ ಎಂದು ಗುರುತಿಸಲಾಗಿದೆ. ರವಿವಾರ ನಾಗರಾಜ್ ಚಲವಾದಿಯನ್ನು ಹಾಡಹಗಲೇ ದುಷ್ಕರ್ಮಿಗಳ ಗುಂಪು ಬರ್ಬರವಾಗಿ ಕೊಲೆ ಮಾಡಿತ್ತು.
ಕಣ್ಣಿಗೆ ಖಾರದ ಪುಡಿ ಎರಚಿ ತಲ್ವಾರ್ನಿಂದ ಕೊಚ್ಚಿ ಕೊಲೆ ಮಾಡಿತ್ತು. ಹುಬ್ಬಳ್ಳಿಯ ಸಂತೋಷ ನಗರದಲ್ಲಿ ಕೊಲೆ ಮಾಡಿದ್ದ ಹಂತಕರು ಅಲ್ಲಿಂದ ಎಸ್ಕೇಪ್ ಆಗಿದ್ದರು. ಘಟನೆ ನಡೆದ 48 ಗಂಟೆಗಳಲ್ಲಿ ಪೊಲೀಸರು ಹಂತಕರನ್ನು ಬಂಧಿಸಿದ್ದಾರೆ.
ಹಳೇ ವೈಷಮ್ಯದ ಹಿನ್ನೆಲೆ ಕೊಲೆ
ಬಂಧಿತರೆಲ್ಲರೂ 25 ವರ್ಷದೊಳಗಿನ ಯುವಕರೇ ಅನ್ನೋದು ಗಮನಾರ್ಹ. ಹಳೇ ವೈಷಮ್ಯದ ಹಿನ್ನೆಲೆ ಕೊಲೆ ಮಾಡಿರೋದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
ನಾಗರಾಜ್ ಚಲವಾದಿ ಜೊತೆಗಿದ್ದ ಹುಡುಗರಿಂದಲೇ ಕೊಲೆ ನಡೆದಿತ್ತು. ಒಂದು ಕಾಲಕ್ಕೆ ಸ್ನೇಹಿತರಾಗಿದ್ದವರೇ ನಾಗರಾಜನನ್ನು ಬರ್ಬರವಾಗಿ ಹತ್ಯೆಗೈದಿದ್ದರು. ನಾಗರಾಜ್ ಚಲವಾದಿ ಸಹೋದರನ ದೂರು ಆಧರಿಸಿ ಏಳು ಜನರನ್ನು ಪೊಲೀಸರು ಬಂಧಿಸಿ ತನಿಖೆ ಆರಂಭಿಸಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಾಗರಾಜ್ಗೆ ಮಹಿಳೆ ಸಹಾಯ ಮಾಡಿದ ವಿಡಿಯೋ ವೈರಲ್
ಹುಬ್ಬಳ್ಳಿಯಲ್ಲಿ ನಡೆದ ಭೀಕರ ಕೊಲೆಯ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಕಳೆದ ರವಿವಾರ ನಾಗರಾಜ್ ಚಲವಾದಿ ಎಂಬ ಯುವಕನನ್ನು ಕೊಲೆ ಮಾಡಲಾಗಿತ್ತು. ಹುಬ್ಬಳ್ಳಿಯ ನೇಕಾರ ನಗರದಲ್ಲಿ 32 ವರ್ಷದ ನಾಗರಾಜ್ ನನ್ನು ಭೀಕರ ಕೊಲೆಯಾಗಿತ್ತು. ತಲ್ವಾರ್ನಿಂದ ಕೊಚ್ಚಿ, ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.
ಇದೀಗ ಕೊಲೆ ನಡೆದ ಸ್ಥಳದಲ್ಲಿನ ವಿಡಿಯೋ ವೈರಲ್ ಆಗಿದೆ. ನಾಗರಾಜ್ ಚಲವಾದಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದು, ಆತನ ಪಕ್ಕದಲೇ ತಲ್ವಾರ್, ಕಲ್ಲು ಬಿದ್ದಿವೆ. ಈ ವೇಳೆ ನಾಗರಾಜ ಸ್ಥಿತಿ ಕಂಡು ಮಹಿಯೊಬ್ಬರು ಸಹಾಯ ಮಾಡಲು ಮುಂದಾಗಿದ್ದಾರೆ. ಯಾರೂ ಮುಟ್ಟದಿದ್ರೂ, ಧೈರ್ಯವಾಗಿ ರಕ್ತ ಸುರಿಯೋದನ್ನು ಕಂಡು ಮಹಿಳೆ ಬಟ್ಟೆ ಕಟ್ಟಿದ್ದಾರೆ.
ನಾಗರಾಜ್ನನ್ನು ಉಳಿಸೋ ಪ್ರಯತ್ನ ಮಾಡಿದ್ದ ಮಹಿಳೆ
ತಲೆಗೆ ಬಟ್ಟೆ ಕಟ್ಟಿ ನಾಗರಾಜ್ ನನ್ನು ಮಹಿಳೆ ಉಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸುತ್ತ ನೂರಾರು ಜನ ನಿಂತಿದ್ರು, ಮುಟ್ಟೋಕೆ ಹಿಂದೇಟು ಹಾಕಿದ್ದಾರೆ. ಈ ವೇಳೆ ಮಹಿಳೆಯೊಬ್ಬರಿಂದ ನಾಗರಾಜ್ ಉಳಿಸೋ ಪ್ರಯತ್ನ ನಡೆದಿದೆ.
ರಕ್ತದ ಮಡುವಿನಲ್ಲಿ ಬಿದ್ದು ನಾಗರಾಜ್ ಒದ್ದಾಡಿದ್ದ. ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸೋ ಮಾರ್ಗ ಮಧ್ಯೆ ನಾಗರಾಜ್ ಸಾವನ್ನಪ್ಪಿದ್ದ. ಮಹಿಳೆ ಸಹಾಯಕ್ಕೆ ಮುಂದಾಗಿರೋ ವಿಡಿಯೋ ಇದೀಗ ವೈರಲ್ ಆಗಿದೆ.
ಇದನ್ನೂ ಓದಿ: CT Ravi: ಮಾಂಸ ತಿಂದು ಹನುಮ ದೇಗುಲಕ್ಕೆ ಸಿ ಟಿ ರವಿ ಭೇಟಿ? ತಿರುಗಿ ಬಿದ್ದ ಸಿದ್ದರಾಮಯ್ಯ ಬೆಂಬಲಿಗರು
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರಿಗೆ ದಂಡದ ಬಿಸಿ
ಹುಬ್ಬಳ್ಳಿ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಸಂಚಾರಿ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಅಡ್ಡಾಡುತ್ತಿದ್ದವರಿಗೆ ದಂಡದ ರುಚಿ ತೋರಿಸಿದ್ದಾರೆ. ನಂಬರ್ ಪ್ಲೇಟ್ ಇಲ್ಲದೇ ಕರ್ಕಶ ಶಬ್ದ ಬರುವ ಸೈಲೆನ್ಸರ್ ಹಾಕಿದ, ಡಿಫೆಕ್ಟಿವ್ ನಂಬರ್ ಪ್ಲೇಟ್ ಹಾಕಿದ ಬೈಕ್ ಸವಾರರಿಗೆ ದಂಡ ಹಾಕಿದ್ದಾರೆ.
ಜೊತೆಗೆ ಹಳೆಯ ಕೇಸ್ಗಳಲ್ಲಿಯೂ ಬಾಕಿ ಇದ್ದ ದಂಡ ವಸೂಲಿ ಮಾಡಿದ್ದಾರೆ. ಹುಬ್ಬಳ್ಳಿ ಉತ್ತರ, ದಕ್ಷಿಣ, ಪೂರ್ವ ಮತ್ತಿತರ ಸಂಚಾರಿ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ 53,500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ