ಹುಬ್ಬಳ್ಳಿ - ತಂದೆ-ತಾಯಿಯನ್ನು ಕಳೆದುಕೊಂಡ ಅನಾಥರು (Orphans) ಕೆಲವೊಮ್ಮೆ ಸಮಾಜದಲ್ಲಿ ಏನಾಗ್ತಾರೋ ಗೊತ್ತಿಲ್ಲ. ಆದ್ರೆ ಯಾರದಾದರೂ ಆಸರೆ ಸಿಕ್ಕರೆ ಅವರ ಭವಿಷ್ಯವೂ (Life) ಉಜ್ವಲವಾಗುವ ಸಾಧ್ಯತೆಗಳಿರುತ್ತದೆ. ಅಂಥದ್ದೊಂದು ಘಟನೆಗೆ ಹುಬ್ಬಳ್ಳಿ ಸಾಕ್ಷಿಯಾಗಿದೆ. ಅನಾಥೆಯಾಗಿದ್ದ ಯುವತಿಗೆ ಆಸರೆಯಾಗುವ ಜೊತೆಗೆ ಅದ್ಧೂರಿಯಾಗಿ ಮದುವೆ (Marriage) ಮಾಡಿಕೊಡುವ ಮೂಲಕ ಸೇವಾ ಭಾರತಿ ಟ್ರಸ್ಟ್ (Seva Bharti Trust) ಸಾರ್ಥಕತೆ ಮೆರೆದಿದೆ. ಅನಾಥೆಯ ಬಾಳಿಗೆ ಹುಬ್ಬಳ್ಳಿಯ(Hubballi) ಸೇವಾ ಭಾರತಿ ಟ್ರಸ್ಟ್ ಬೆಳಕಾಗಿದೆ. ಅನಾಥೆಯ ವಿವಾಹವನ್ನು ಟ್ರಸ್ಟ್ ಸದಸ್ಯರು ಅದ್ಧೂರಿಯಾಗಿ ಮಾಡಿದರು. ಹುಬ್ಬಳ್ಳಿ ಕೇಶ್ವಾಪುರದ ಮಾತೃ ಛಾಯಾ ಬಾಲಕಲ್ಯಾಣ ಕೇಂದ್ರದಲ್ಲಿ ಮದುವೆ ನಡೆಯಿತು. ಸೇವಾ ಭಾರತಿ ಟ್ರಸ್ಟ್ ನ ಮಾತೃ ಛಾಯಾ ಬಾಲಕಲ್ಯಾಣ ಕೇಂದ್ರ ಸದಸ್ಯರಿಂದ ಮದುವೆ ನಡೆಯಿತು.
ಗುರುಸಿದ್ದಮ್ಮ ಎಂಬ ಅನಾಥೆಯ ಬಾಳಿಗೆ ಮದುವೆ ಹೊಸ ಅರ್ಥ ತಂದುಕೊಟ್ಟಿದೆ. ಗುರುಸಿದ್ಧಮ್ಮಳನ್ನ ಹೇಮಂತ್ ಕುಮಾರ್ ವರಿಸಿದ್ದಾನೆ. ಹೇಮಂತ್ ಕುಮಾರ್ ಬೆಂಗಳೂರಿನ ಸರಸ್ವತಿ ಹಾಗೂ ರಾಘವೇಂದ್ರ ದಂಪತಿ ಪುತ್ರನಾಗಿದ್ದಾರೆ.
ಅನಾಥೆಯಾಗಿದ್ದ ಗುರುಸಿದ್ಧಮ್ಮ ಕಳೆದ 15 ವರ್ಷಗಳಿಂದ ಸೇವಾ ಸದನದಲ್ಲಿದ್ದರು. ಚಿಕ್ಕವಯಸ್ಸಿನಲ್ಲೇ ತಂದೆ ತಾಯಿ ಕಳೆದುಕೊಂಡು ಅನಾಥೆಯಾಗಿದ್ದ ಗುರುಸಿದ್ದಮ್ಮ ತಂದೆ - ತಾಯಿ ಆಸರೆ ಇಲ್ಲದೆ ಬೆಳೆದ್ರೂ, ಮದುವೆಯಾಗಿದ್ದು ಅತ್ಯಂತ ಸಂಭ್ರಮದಿಂದ. ಗುರುಸಿದ್ದಮ್ಮಳನ್ನ ಟ್ರಸ್ಟ್ ಸದಸ್ಯರು ಸಂಭ್ರಮದಿಂದ ಧಾರೆ ಎರೆದು ಕೊಟ್ಟಿದ್ದಾರೆ. ಅನಾಥ ಯುವತಿಯನ್ನ ಮದುವೆಯಾಗಬೇಕೆಂದು ಹೇಮಂತ್ ಬಯಸಿದ್ದರು.
ನವದಂಪತಿಗೆ ಶುಭ ಹಾರೈಕೆ
ಅದರಂತೆ ಹೇಮಂತ್ ಕುಮಾರ್ ಅನಾಥೆಯ ಜೊತೆ ಮದುವೆ ಮಾಡಿಕೊಂಡಿದ್ದಾರೆ. ನವ ದಂಪತಿಗಳಿಗೆ ಶುಭ ಹಾರೈಸಿರೋ ನೆರೆದವರು, ಮುಂದಿಯೂ ನಮ್ಮ ಶ್ರೀ ರಕ್ಷೆ ಇರುತ್ತೆ ಅನ್ನೋ ಅಭಯ ನೀಡಿದ್ದಾರೆ. ಹೇಮಂತ್ ಮತ್ತು ಗುರುಸಿದ್ಧಮ್ಮ ಜೋಡಿ ಖುಷಿಯಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಹುಟ್ಟು ಹಬ್ಬದಲ್ಲಿ ಹರಿದು ಬಿದ್ದ ಬೃಹತ್ ಹಾರ
ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ಹುಟ್ಟು ಹಬ್ಬದ ಸಡಗರದಲ್ಲಿ ಅವಘಡವೊಂದು ಸಂಭವಿಸಿದೆ. ಬೃಹತ್ ಗಾತ್ರದ ಪುದೀನಾ ಹಾರ ತುಂಡಾಗಿ ಬಿದ್ದಿದೆ. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು 50 ಅಡಿ ಉದ್ದದ ಪುದೀನಾ ಹಾರ ಮಾಡಸಿದ್ದರು. ಕ್ರೇನ್ ಮೂಲಕ ಹಾಕುವಾಗ ಹಾರ ತುಂಡಾಗಿ ಬಿದ್ದಿದೆ. ನಿನ್ನೆ ನಡೆದ ಹುಟ್ಟಹಬ್ಬ ಆಚರಣೆ ವೇಳೆ ಅವಘಡ ಸಂಭವಿಸಿದೆ.
ಇದನ್ನೂ ಓದಿ: Hubballi: ಟ್ಯೂಷನ್ಗೆ ಹೋಗ್ತಿದ್ದ ವಿದ್ಯಾರ್ಥಿ ಮೇಲೆ ಪಿಟ್ಬುಲ್ ಡೆಡ್ಲಿ ಅಟ್ಯಾಕ್; ಕಿಮ್ಸ್ಗೆ ದಾಖಲು
ನೂರಾರು ಜನರ ಸೇರಿಸಿ ಕಾರವಾರ ರಸ್ತೆಯ ತಮ್ಮ ನಿವಾಸದ ಬಳಿ ಅನಿಲ್ ಕುಮಾರ್ ಪಾಟೀಲ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಅಧ್ಯಕ್ಷರ ಕೊರಳಿಗೆ ಬೃಹತ್ ಪುದೀನಾ ಮಾಲೆ ಹಾಕುವಾಗ ಮಾಲೆ ತುಂಡರಿಸಿದೆ.
ಟಿಕೆಟ್ಗಾಗಿ ಶಕ್ತಿ ಪ್ರದರ್ಶನ
ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ. ಹುಟ್ಟು ಹಬ್ಬದ ನೆಪದಲ್ಲೇ ಸೆಂಟ್ರಲ್ ಕ್ಷೇತ್ರದ ಟಿಕೆಟ್ಗಾಗಿ ಪಾಟೀಲ್ ಶಕ್ತಿ ಪ್ರದರ್ಶನ ಮಾಡುತ್ತಿದ್ದರು. ರಜತ್ ಉಳ್ಳಾಗಡ್ಡಿಮಠ ಹಾಗೂ ಅನಿಲ್ ಕುಮಾರ್ ಪಾಟೀಲ್ ನಡುವೆ ಟಿಕೆಟ್ ಫೈಟ್ ನಡೆದಿದೆ.
ಹಳೆ ಪ್ರೇಯಸಿ ಕಾಟಕ್ಕೆ ಬೇಸತ್ತು ನಾಪತ್ತೆಯಾದ ಯುವಕ!
ಹಳೆ ಪ್ರೇಯಸಿಯ ಕಾಟಕ್ಕೆ ಬೇಸತ್ತು ಯುವಕನೋರ್ವ ಮನೆ ಬಿಟ್ಟು, ನಾಪತ್ತೆಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹರವಾಳ ಗ್ರಾಮದಲ್ಲಿ ನಡೆದಿದೆ. ಈತ ಬೀದರ್ ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚಿಗಷ್ಟೇ ಮನೆಯವರು ನೋಡಿದ್ದ ಹುಡುಗಿಯೊಬ್ಬಳ ಜತೆ ನಿಶ್ಚಿತಾರ್ಥವೂ ನಡೆದಿತ್ತು
ಇದನ್ನೂ ಓದಿ: World Champion: ಗ್ಲೋಬಲ್ ಚಾಂಪ್ಸ್! ಹಳ್ಳಿ ಮಕ್ಕಳ ಮುಡಿಗೆ ಚಾಂಪಿಯನ್ ಕಿರೀಟ!
ಈ ಬಳಿಕ ಈತನ ಮನೆಯಲ್ಲಿ ಮದುವೆ ತಯಾರಿಯೂ ನಡೆಸಿದ್ದರು. ಈ ವೇಳೆ ಹಳೆ ಹುಡುಗಿಯ ಹೊಸ ಕಾಟಕ್ಕೆ ಬೇಸತ್ತು ನವೆಂಬರ್ 13ರಿಂದ ಮನೆ ಬಿಟ್ಟು ಪರಾರಿಯಾಗಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ