Dakshina Kannada: ಸಂಪರ್ಕವಿಲ್ಲದ ಕುಗ್ರಾಮಕ್ಕೆ ಒಂದೇ ದಿನದಲ್ಲಿ ಸೇತುವೆ ನಿರ್ಮಿಸಿದ ಸೇವಾ ಭಾರತಿ ಸಮಿತಿ

ಶಾಶ್ವತ ಸೇತುವೆ ಇಲ್ಲದ ಕಾರಣ ಈ ಭಾಗದ ಜನ ಅಡಿಕೆ ಮರವನ್ನು ಹೊಳೆಗೆ ಹಾಸಿ ಅಡಿಕೆ ಮರದ ಸೇತುವೆಯನ್ನು ನಿರ್ಮಿಸಿ ತಮ್ಮ ಅವಶ್ಯಕತೆಗಳನ್ನು ಈ ಕಾಲು ಸೇತುವೆಯ ಮೂಲಕವೇ ತೀರಿಸಿಕೊಳ್ಳುತ್ತಿದ್ದರು.

ಸೇತುವೆ ನಿರ್ಮಾಣ

ಸೇತುವೆ ನಿರ್ಮಾಣ

  • Share this:
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆ (Heavy Rainfall) ಜನರ ಜೀವನವನ್ನೇ ದುಸ್ತರ ಮಾಡಿದೆ. ರಾತ್ರಿ ಮನೆಯಲ್ಲಿ ಮಲಗಿದ್ದ ಕುಟುಂಬ  ಬೆಳಗಾಗುವ ವೇಳೆಗೆ ಮನೆ-ಮಠ ತೊರೆದು ಬೀದಿಗೆ ಬೀಳುವಂತಹ ಸ್ಥಿತಿಯನ್ನು ಮಹಾ ಮಳೆ ತಂದೊಡ್ಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಈ ಬಾರಿಯ ಮಳೆ (Rain Effect) ಹಲವು ರೀತಿಯ ಅವಾಂತರಗಳನ್ನು ಸೃಷ್ಟಿಸಿದೆ. ಕಳೆದ ಒಂದು ವಾರದಿಂದ ಸುರಿದ ರಣಭೀಕರ ಮಳೆಗೆ ಜಿಲ್ಲೆಯಲ್ಲಿ ಈಗಾಗಲೇ 600 ಕ್ಕೂ ಮಿಕ್ಕಿದ ಮನೆಗಳು ಭಾಗಶಃ ಹಾನಿಯಾಗಿದೆ. 65 ಹೆಚ್ಚು ಮನೆಗಳು (Houses) ಸಂಪೂರ್ಣ ನಾಶವಾಗಿದೆ. 100 ಕ್ಕೂ ಮಿಕ್ಕಿದ ಕಿರು ಹಾಗು ಮಧ್ಯಮ ಗಾತ್ರದ ಸೇತುವೆಗಳು ಕೊಚ್ಚಿ ಹೋಗಿವೆ. 

ದಕ್ಷಿಣಕನ್ನಡ ಜಿಲ್ಲೆಗೆ ಸಂಬಂಧಪಟ್ಟಂತೆ ಸುಳ್ಯ ತಾಲೂಕಿನಲ್ಲಿ ಮಳೆಯಿಂದಾಗಿ ಅತೀ ಹೆಚ್ಚು ಹಾನಿ ಸಂಭವಿಸಿದ್ದು, 50 ಕ್ಕೂ ಮಿಕ್ಕಿದ ಕುಟುಂಬಗಳು ಮನೆ-ಮಠಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ನೂರಾರು ಕುಟುಂಬಗಳು ಸಂಪರ್ಕವನ್ನೇ ಕಡಿದುಕೊಂಡಿದೆ.

ಸಂಪರ್ಕ ಕಳೆದುಕೊಂಡಿದ್ದ ಗ್ರಾಮ

ಇದೇ ರೀತಿಯಲ್ಲಿ ಕಳೆದ ಒಂದು ವಾರದಿಂದೀಚೆಗೆ ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿದ್ದ ಕುಗ್ರಾಮವೊಂದಕ್ಕೆ ಸುಳ್ಯದ ಸೇವಾ ಭಾರತಿ ಸಮಿತಿ ಒಂದೇ ದಿನದಲ್ಲಿ ಸಂಪರ್ಕದ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಸುದ್ಧಿಯಲ್ಲಿದೆ.

ಇದನ್ನೂ ಓದಿ:  Kodagu Rains: ವರುಣಾರ್ಭಟ; ಕಾವೇರಿಯ ರುದ್ರ ಪ್ರತಾಪ, ಸಂಪರ್ಕ ಕಡಿತ, ಮನೆ ಕುಸಿತ , ಜನಜೀವನ ಅಸ್ತವ್ಯಸ್ತ

ಸುಳ್ಯ ತಾಲೂಕಿನ ಉಪ್ಪುಕಳ ಎನ್ನುವ ಗ್ರಾಮದ ಜನ ತಮ್ಮ ಇತರ ಅವಶ್ಯಕತೆಗಳಿಗಾಗಿ ಬೇರೆ ಊರುಗಳನ್ನು ಸಂಪರ್ಕಿಸಬೇಕಾದರೆ, ಈ ಗ್ರಾಮದಲ್ಲಿ ಹರಿಯುವ ಹೊಳೆಯೊಂದನ್ನು ದಾಟಲೇ ಬೇಕು. ಶಾಶ್ವತ ಸೇತುವೆ ಇಲ್ಲದ ಕಾರಣ ಈ ಭಾಗದ ಜನ ಅಡಿಕೆ ಮರವನ್ನು ಹೊಳೆಗೆ ಹಾಸಿ ಅಡಿಕೆ ಮರದ ಸೇತುವೆಯನ್ನು ನಿರ್ಮಿಸಿ ತಮ್ಮ ಅವಶ್ಯಕತೆಗಳನ್ನು ಈ ಕಾಲು ಸೇತುವೆಯ ಮೂಲಕವೇ ತೀರಿಸಿಕೊಳ್ಳುತ್ತಿದ್ದರು.

Seva Bharati samiti built temporary bridge in one day dakshaina Kannada akp mrq
ಸೇತುವೆ ನಿರ್ಮಾಣ


ತಾತ್ಕಾಲಿಕ ಸೇತುವೆ ನಿರ್ಮಾಣ

ಆದರೆ ಈ ಬಾರಿಯ ಭಾರೀ ಮಳೆ ಹಾಗೂ ಪ್ರವಾಹ ಈ ಕಾಲು ಸೇತುವೆಯನ್ನೂ ಕೊಚ್ಚಿ ಹೋದ ಪರಿಣಾಮ ಉಪ್ಪುಕಳದಲ್ಲಿರುವ 12 ಕುಟುಂಬಗಳು ಸಂಪರ್ಕವನ್ನೇ ಕಳೆದುಕೊಂಡಿತ್ತು. ಭಾರೀ ಮಳೆಯ ಕಾರಣ ತಾತ್ಕಾಲಿಕ ಸೇತುವೆ ನಿರ್ಮಾಣವೂ ಸಾಧ್ಯವಿಲ್ಲದ ಪರಿಸ್ಥಿತಿಯೂ ಆ ಭಾಗದಲ್ಲಿತ್ತು.

ಇದೀಗ ಈ ಗ್ರಾಮದ ಜನರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸುಳ್ಯದ‌ ಸೇವಾ ಭಾರತಿ ಸಮಿತಿಯ 30 ಸದಸ್ಯರ ತಂಡ ಭಾರೀ ಮಳೆಯ ನಡುವೆಯೇ ಉಪ್ಪುಕಳದ ನಿವಾಸಿಗಳಿಗಾಗಿ ತಾತ್ಕಾಲಿಕ ಮರದ ಸೇತುವೆಯನ್ನು ಒಂದೇ ದಿನದಲ್ಲಿ ನಿರ್ಮಿಸುವ ಮೂಲಕ ಕುಗ್ರಾಮದ ಕುಟುಂಬಗಳಿಗೆ ಸಂಪರ್ಕ ಸೇತುವಾಗಿದ್ದಾರೆ.

ಒಂದೇ ದಿನದಲ್ಲಿ ಸೇತುವೆ ನಿರ್ಮಾಣ

ಕಾಡಿನಿಂದ ಬಿದಿರಿನ ಬೆತ್ತಗಳನ್ನು ಸಂಗ್ರಹಿಸಿ, ಗೋಲಾಕಾರದಲ್ಲಿ ಅವುಗಳನ್ನು ಜೋಡಿಸಿ ಅವುಗಳ ಮಧ್ಯೆ ಹೊಳೆಯಲ್ಲೇ ಇರುವ ಕಲ್ಲುಗಳನ್ನು ತುಂಬಿ ಸೇತುವೆಗೆ ಬೇಕಾದ ಪಿಲ್ಲರ್ ಗಳನ್ನು‌ ನಿರ್ಮಿಸಿದ್ದಾರೆ. ಉಪ್ಪುಕಳದ ಅಯ್ಯಪ್ಪ ಮಂದಿರದ ಪಕ್ಕದಲ್ಲೇ ಈ ಹೊಳೆ ಹರಿಯುತ್ತಿದ್ದು,ಸುಮಾರು 50 ಅಡಿ ಅಗಲವಿರುವ ಈ ಹೊಳೆಗೆ ಎರಡೂ ಬದಿಗೆ ಪಿಲ್ಲರ್ ಗಳ ಜೊತೆಗೆ‌ ಹೊಳೆಯ ಮಧ್ಯಭಾಗದಲ್ಲೂ ಪಿಲ್ಲರ್ ಗಳನ್ನು ನಿರ್ಮಿಸಲಾಗಿದೆ.

ನಿರಂತರ ಮಳೆಯಲ್ಲಿ ಈ ತಂಡ ಒಂದೇ ದಿನದಲ್ಲಿ ಈ ಸೇತುವೆಯನ್ನು ನಿರ್ಮಿಸಿದ್ದು, ಕುಗ್ರಾಮದ ಜನರಿಗೆ ಸಂಪರ್ಕ ಸೇತುವಾಗಿ ಮೂಡಿ ಬಂದಿದೆ. ಉಪ್ಪುಕಳ, ಹರಿಹರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಇಲ್ಲಿ ಶಾಶ್ವತ ಸೇತುವೆಯನ್ನು ನಿರ್ಮಿಸಿಕೊಡುವಂತೆ ಈ ಭಾಗದ ಜನ ಈ ಭಾಗದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮಾಡಿದ ಮನವಿಗೆ ಲೆಕ್ಕವೇ ಇಲ್ಲದಂತಾಗಿದೆ.

ಇದನ್ನೂ ಓದಿ:  Puppy Rescue: ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ನಾಯಿಮರಿಗಳು ಮತ್ತೆ ಮಾಲೀಕರ ಮಡಿಲು ಸೇರಿತು!

Seva Bharati samiti built temporary bridge in one day dakshaina Kannada akp mrq
ಸೇತುವೆ ನಿರ್ಮಾಣ


ಸೇವಾ ಭಾರತಿ ಕಾರ್ಯಕ್ಕೆ ಮೆಚ್ಚುಗೆ

ಕಳೆದ ಒಂದು ವಾರದಿಂದ ಈ‌ ಭಾಗದ ಜನ ಸಂಪರ್ಕಕ್ಕಾಗಿ ಪರದಾಡುತ್ತಿದ್ದರೂ, ಜಿಲ್ಲಾಡಳಿತದಿಂದ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿದ್ದರೂ, ಸೇವಾ ಭಾರತಿ ಈ ರೀತಿಯ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವುದಕ್ಕೆ ಭಾರೀ ಪ್ರಶಂಸೆಯೂ ವ್ಯಕ್ತವಾಗಿದೆ.
Published by:Mahmadrafik K
First published: