ಬೆಂಗಳೂರು (ಡಿ.11): ಬೆಂಗಳೂರಿನಲ್ಲಿ ಕೆಲವು ಪೊಲೀಸರ ವರ್ತನೆ (Bengaluru Policce) ಮಿತಿ ಮೀರಿದ್ದು, ಅಮಾಯಕರ ಮೇಲೆ ಇಲ್ಲ-ಸಲ್ಲದ ಕೇಸ್ ಹಾಕೋದು. ರಸ್ತೆಯಲ್ಲಿ ಸುಖಾಸುಮ್ಮನೆ ವಾಹನ ತಡೆದು ಫೈನ್ (Fine) ಹಾಕೋದನ್ನೆ ಕೆಲವರು ತಮ್ಮ ಕಾಯಕ ಮಾಡಿಕೊಂಡಿದ್ದಾರೆ. ಇಂತವರು ಇಡೀ ಪೊಲೀಸ್ ಇಲಾಖೆಗೆ (Police Department) ಕಪ್ಪು ಚುಕ್ಕೆಯಾಗಿದೆ. ರಾಜರಾಜೇಶ್ವರಿ ನಗರ ಠಾಣೆ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ನಂದೀಶ್ ಕಾಡೋಗು ಎಂಬುವರು ಪೊಲೀಸ್ ವಿರುದ್ಧ ಆರೋಪ ಮಾಡ್ತಿದ್ದಾರೆ.
ನನ್ನ ಸಾವಿಗೆ ಆರ್ಆರ್ ನಗರ ಠಾಣಾ ಸಿಬ್ಬಂದಿ ನವೀನ್ ಕಾರಣ!
ನಂದೀಶ್ ಕಾಡೋಗು ಎಂಬುವರು ಪೊಲೀಸ್ ಸಿಬ್ಬಂದಿಯೊಬ್ಬರ ಕಿರುಕುಳಕ್ಕೆ ಬೇಸತ್ತು ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾರೆ. ನನ್ನ ಸಾವಿಗೆ ಆರ್ ಆರ್ ನಗರ ಠಾಣಾ ಸಿಬ್ಬಂದಿ ನವೀನ್ ಕಾರಣ ಎಂದು ಫೇಸ್ಬುಕ್ನಲ್ಲಿ ಫೋಸ್ಟ್ ಹಾಕಿದ್ದಾರೆ.
ನನ್ನ ಮೇಲೆ ಸುಳ್ಳು ಕೇಸ್ ಹಾಕಿ ದಂಡಿಸಿದ್ರು
ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಪೋಸ್ಟ್ ಮಾಡಿರುವ ನಂದೀಶ್ ಕಾಡೋಗು, ಇವರು ನನ್ನ ಸಾಯಿಸ್ತಾರೆ ನನಗೆ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಹಿಂದೆ ನನ್ನ ಮೇಲೆ ಸುಳ್ಳು ಕೇಸ್ ಹಾಕಿ ಅಮಾನುಷವಾಗಿ ದಂಡಿಸಿದ್ರು. ಈಗ ನನ್ನ ಮೊಬೈಲ್ನನ್ನು ಅಕ್ರಮವಾಗಿ ಇಟ್ಟುಕೊಂಡಿದ್ದಾರೆ ಎಂದು ನಂದೀಶ್ ಆರೋಪಿಸಿದ್ದಾರೆ.
ನನ್ನ ಸಾವಿಗೆ ನವೀನ್ ಕಾರಣ
ಆರ್ ಆರ್ ನಗರ ಠಾಣಾ ಸಿಬ್ಬಂದಿ ನವೀನ್ ವರ್ತನೆಯಿಂದ ಬೇಸತ್ತ ನಂದೀಶ್ ಅವರು ನನ್ನ ಸಾವಿಗೆ ನವೀನ್ ಕಾರಣ ಎಂದು ಪೋಸ್ಟ್ ಮಾಡಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಇವರ ಪೋಸ್ಟ್ ವೈರಲ್ ಆಗಿದೆ.
ದಂಪತಿ ಬಳಿ ಹಣ ವಸೂಲಿ
ಬೆಂಗಳೂರು (ಡಿ.11): ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಊಟ ಬರ್ತಡೇ ಪಾರ್ಟಿ (Birthday Party) ಎಂದು ಓಡಾಡುತ್ತಲೇ ಇರ್ತಾರೆ. ಹೀಗೆ ತಮ್ಮ ಮನೆಯ ಬಳಿ ಬರ್ತಿದ್ದ ವೇಳೆ ದಂಪತಿಗೆ (Couple) ಪೊಲೀಸರೇ ಕಿರುಕುಳ ನೀಡಿರುವ ಘಟನೆ ನಡೆದಿದೆ. ಇಲ್ಲ ಸಲ್ಲದ ರೂಲ್ಸ್ ಹೇಳಿ ದಂಪತಿ ಬಳಿ 1000 ರೂಪಾಯಿ ಹಣ ಪೀಕಿದ್ದಾರೆ. ಕಿರುಕುಳದ (Harassing) ಬಗ್ಗೆ ಆರೋಪಿಸಿರುವ ವ್ಯಕ್ತಿಯು, ತನ್ನ ಪತ್ನಿಯೊಂದಿಗೆ ಬರ್ತಡೇ ಪಾರ್ಟಿ ಮುಗಿಸಿ ಮನೆಗೆ ಬರುವಾಗ ಪೊಲೀಸರು ಕಿರುಕುಳ ನೀಡಿದ್ದಾರೆನ್ನುವ ವಿಡಿಯೋವನ್ನು ಟ್ವಿಟರ್ನಲ್ಲಿ (Twitter) ಶೇರ್ ಮಾಡಿದ್ದಾರೆ.
ಇಬ್ಬರು ಕಾನ್ಸ್ಟೇಬಲ್ಗಳನ್ನು ಅಮಾನತು
11ರ ಬಳಿಕ ಸುತ್ತಾಡುವಂತಿಲ್ಲ ಎಂದ್ರು ಪೊಲೀಸರು
ರಾತ್ರಿ 11 ರ ನಂತರ ರಸ್ತೆಯಲ್ಲಿ ಸುತ್ತಾಡದಂತೆ ಓರ್ವ ಪೊಲೀಸ್ ಈ ಸಂದರ್ಭದಲ್ಲಿ ಸೂಚಿಸಿದ್ದಾರೆ. ಇಂಥ ಒಂದು ನಿಯಮ ಇದೆ ಎಂಬುದನ್ನು ನಂಬಲು ಕಷ್ಟವಾಗಿತ್ತು. ಸುಮ್ಮನೆ ರಾತ್ರಿ ಏಕೆ ಗಲಾಟೆ ಎಂದು ಸುಮ್ಮನಾಗಿದ್ದೆವು. ಅದರಲ್ಲೂ ಫೋನ್ಗಳನ್ನು ಬೇರೆ ಸೀಜ್ ಮಾಡಿದ್ದರಿಂದ ನಾವು ಸುಮ್ಮನಾದೆವು ಎಂದು ಕಾರ್ತಿಕ್ ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ