Accident: ಬೆಂಗಳೂರಿನಲ್ಲಿ ಸರಣಿ ಅಪಘಾತ- ನೈಸ್​ ರಸ್ತೆಯಲ್ಲಿ ಲಾರಿ ಡಿಕ್ಕಿ ಹೊಡೆದು ನಾಲ್ವರ ದುರ್ಮರಣ

Series Of Accident: ಇನ್ನೊಂದೆಡೆ ಕಾರುಗಳನ್ನ ಸಾಗಿಸುತ್ತಿದ್ದ ಟ್ರಕ್ ನೈಸ್ ರಸ್ತೆಯ ಪುರವಂಕರ ಜಂಕ್ಷನ್‌ ಬಳಿ ಪಲ್ಟಿಯಾದ ಪರಿಣಾಮ ನೈಸ್ ರಸ್ತೆಯಲ್ಲಿ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾದ ಘಟನೆ ನಡೆದಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೈಸ್ ರಸ್ತೆಯಲ್ಲಿ (Nice Road) ಭೀಕರ ಅಪಘಾತಗಳು (Accident) ಸಂಭವಿಸುವುದು ಬಹಳ ಸಾಮಾನ್ಯ ಎನ್ನುವ ರೀತಿಯಾಗಿದೆ. ನಿನ್ನೆ ರಾತ್ರಿ ಸಹ ಇಂತಹದೆ ಒಂದು ದುರ್ಘಟನೆ ಸಂಭವಿಸಿದ್ದು, ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮೊಹಮ್ಮದ್ ಫಾದಿಲ್(25), ಅಭಿಲಾಷ್(25) ಮತ್ತು ಶಿಲ್ಪಾ(30) ಜೀನ ಸೇರಿ ಒಟ್ಟು ನಾಲ್ವರು ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ.

ಮೃತರು ಕೇರಳ ಮೂಲದವರು

ಫಾದ್ಜಿಲ್,ಅಭಿಲಾಶ್ ಮತ್ತು ಜೀನಾ ಸಾಫ್ಟ್ ವೇರ್ ಇಂಜಿನಿಯರ್  ಆಗಿದ್ದು, ಶಿಲ್ಪಾ ಖಾಸಗಿ ಶಾಲೆ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಎಲ್ಲರೂ 25 ರಿಂದ 30 ವರ್ಷದ ವಯಸ್ಸಿನವರಾಗಿದ್ದು,  ಸದ್ಯ ರಾತ್ರಿಯೇ ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹಗಳು ಶಿಪ್ಟ್ ಮಾಡಿದ್ದು, ಮರಣೋತ್ತರ ಪರೀಕ್ಷೆಗೆ ಸಿದ್ದತೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ‌ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬನ್ನೇರುಘಟ್ಟ ಮಾರ್ಗದಿಂದ ತುಮಕೂರು ರಸ್ತೆ ಕಡೆ ಹೊರಟಿದ್ದ ವ್ಯಾಗನರ್ ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದ ಸಮಯದಲ್ಲಿ, ಆ  ಕಾರಿಗೆ ಲಾರಿ ಬಂದು ಡಿಕ್ಕಿ ಹೊಡೆದ ಪರಿಣಾಮ ಕಾರು ನುಜ್ಜು ಗುಜ್ಜಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದೇ ವೇಳೆ ಅ ಕಾರಿನ ಮುಂದೆ ಚಲಿಸುತ್ತಿದ್ದ ಕ್ವಾಲಿಸ್ ಗಾಡಿಯಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರಿಗೂ ಗಂಭೀರ ಗಾಯಗಳಾಗಿದ್ದು ಸ್ಥಿತಿ ಚಿಂತಾಜನಕವಾಗಿದೆ. ಅವರೆಲ್ಲರನ್ನೂ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದಿಷ್ಟೇ ಅಲ್ಲದೇ ಅದರ ಮುಂದಿದ್ದ ಸ್ವಿಫ್ಟ್​ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:ದೇಶದಲ್ಲಿ ಬೆಂಗಳೂರು ಸೇಫ್: ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆ

ಅಪಘಾತ ಮಾಡಿದ ಲಾರಿ ಚಾಲಕ ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳಕ್ಕೆ ಆಗಮಿಸಿದ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣಾ ಪೊಲೀಸರು  ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಲಾರಿ ಚಾಲಕನ ಪತ್ತೆ ಆರಂಭಿಸಿದ್ದಾರೆ. ಸಧ್ಯ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಕಾರು ಚಾಲಕನ ಅಜಾಗುರೂಕತೆಯಿಂದ  ಅಪಘಾತ ಸಂಭವಿಸಿದೆ ಎಂದಿದ್ಧಾರೆ.

ಮೃತರೆಲ್ಲರು ಕೇರಳ ಮೂಲದವರಾಗಿದ್ದು,ನಾಲ್ವರು‌ ಕೂಡ ಸ್ನೇಹಿತರಾಗಿದ್ದರು. ಅದರಲ್ಲಿ ಫಾದ್ಜಿಲ್ ಕುಟುಂಬ ಮಾತ್ರ ಬೆಂಗಳೂರಲ್ಲಿ ವಾಸವಿದ್ದು, ಎರಡು ದಿನ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಬೇರೆಡೆ ತೆರಳುತ್ತಿದ್ದ  ವೇಳೆ ಮಾರ್ಗ ಮಧ್ಯೆ ಅಪಘಾತವಾಗಿ ಮೃತಪಟ್ಟಿದ್ಧಾರೆ. ಈ ಬಗ್ಗೆ ಕೆ.ಎಸ್ ಲೇಔಟ್ ಟ್ರಾಫಿಕ್ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ‌  ನೀಡಿದ್ದು, ಕೇರಳದಿಂದ ಕುಟುಂಬಸ್ಥರು ಆಗಮಿಸಿದ್ದಾರೆ.

ಮತ್ತೊಂದು ಅಪಘಾತದಲ್ಲಿ ಉರುಳಿ ಬಿದ್ದ ಟ್ರಕ್ 

ಇನ್ನೊಂದೆಡೆ ಕಾರುಗಳನ್ನ ಸಾಗಿಸುತ್ತಿದ್ದ ಟ್ರಕ್ ನೈಸ್ ರಸ್ತೆಯ ಪುರವಂಕರ ಜಂಕ್ಷನ್‌ ಬಳಿ ಪಲ್ಟಿಯಾದ ಪರಿಣಾಮ ನೈಸ್ ರಸ್ತೆಯಲ್ಲಿ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾದ ಘಟನೆ ನಡೆದಿದೆ. 10 ಹೊಸ ಹ್ಯುಂಡೈ ಕಾರುಗಳಿದ್ದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಕ್ರೇನ್ ಮೂಲಕ ಟ್ರಕ್ ಮೇಲಕ್ಕೆತ್ತುವ‌ ಪ್ರಯತ್ನ ನಡೆದಿದೆ.

ಕೆ.ಎಸ್. ಲೇಔಟ್ ಸಂಚಾರಿ ಪೊಲೀಸರಿಂದ ಸ್ಥಳದಲ್ಲಿ ಜಖಂಗೊಂಡು ನಿಂತಿದ್ದ ವಾಹನಗಳ ತೆರವು ಕಾರ್ಯ ನಡೆದಿದೆ. ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಕುಲದೀಪ್ ಕುಮಾರ್ ತಡರಾತ್ರಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಕೆ.ಎಸ್.ಲೇಔಟ್ ಸಂಚಾರಿ ಪೊಲೀಸರಿಂದ ಸ್ಥಳದಲ್ಲಿ ಜಖಂಗೊಂಡು ನಿಂತಿದ್ದ ವಾಹನಗಳ ತೆರವು ಮಾಡಲಾಗಿದೆ.

ಇನ್ನು ಮಾಧ್ಯಮಗಳ ಜೊತೆ ಮಾತನಾಡಿದ ಸಂಚಾರಿ ಡಿಸಿಪಿ ಕುಲ್ ದೀಪ್ ಕುಮಾರ್ ಜೈನ್ , ನೈಸ್ ರಸ್ತೆಯಲ್ಲಿ ಒಂದು ಸರಣಿ ಅಪಘಾತವಾಗಿದ್ದು 8-9 ವಾಹನಗಳು ಜಖಂಗೊಂಡಿವೆ. ಘಟನೆಯಲ್ಲಿ ಕೇರಳಾ ನೊಂದಣಿಯ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ‌.

ಇದನ್ನೂ ಓದಿ:ಠಾಣೆಯಲ್ಲಿ ಎಣ್ಣೆ ಪಾರ್ಟಿ ಮಾಡಿ ಎಂಜಾಯ್​ ಮೂಡ್​ನಲ್ಲಿದ್ದ ಪೊಲೀಸ್​ ಸಿಬ್ಬಂದಿಗೆ ಸಸ್ಪೆಂಡ್ ಶಾಕ್..!

ಇಬ್ಬರು ಯುವಕರು, ಇಬ್ಬರು‌ ಯುವತಿಯರು. ಮೇಲ್ನೋಟಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತವಾಗಿರುವುದು ತಿಳಿದು ಬಂದಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ ಘಟನಾ ಸ್ಥಳದಲ್ಲಿದ್ದವರಿಂದ ಮಾಹಿತಿಗಳನ್ನ ಪಡೆದಿದ್ದೇವೆ. ಕೆ.ಎಸ್.ಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಿದ್ದೇವೆ ಎಂದಿದ್ದಾರೆ.
Published by:Sandhya M
First published: