Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18-kannada
Updated:September 13, 2019, 6:05 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1. ಐಎನ್ಎಕ್ಸ್ ಮೀಡಿಯಾ ಪ್ರಕರಣ: ಪಿ. ಚಿದಂಬರಂ ಅರ್ಜಿ ವಜಾ; ಸೆ. 19ರವರೆಗೂ ತಿಹಾರ್ ಜೈಲುವಾಸ ಮುಂದುವರಿಕೆ

ಐಎನ್ಎಕ್ಸ್ ಮೀಡಿಯಾ ಅವ್ಯವಹಾರ ಹಗರಣದಲ್ಲಿ ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ಮುಖಂಡ ಪಿ. ಚಿದಂಬರಮ್ ಅವರ ಅರ್ಜಿ ವಜಾಗೊಂಡಿದೆ. ಜಾರಿ ನಿರ್ದೇಶನಾಲಯಕ್ಕೆ ಶರಣಾಗುವುದಾಗಿ ಸಿಬಿಐ ವಿಶೇಷ ಕೋರ್ಟ್ಗೆ ಚಿದಂಬರಮ್ ಮಾಡಿಕೊಂಡ ಮನವಿಯನ್ನು ಸಿಬಿಐ ವಿಶೇಷ ಕೋರ್ಟ್ ತಿರಸ್ಕರಿಸಿದೆ. ಮಾಜಿ ಕೇಂದ್ರ ಸಚಿವರಾದ ಅವರು ಸೆ. 19ರವರೆಗೂ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಮುಂದುವರಿಯಲಿದ್ಧಾರೆ.

2.ಡಿಕೆಶಿಗೆ ಮತ್ತೆ ಸಂಕಷ್ಟ; ಸೆ.17ರವರೆಗೆ ಇ.ಡಿ. ವಶಕ್ಕೆ ಒಪ್ಪಿಸಿದ ನ್ಯಾಯಾಲಯ

ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಪ್ರಮುಖ ಆರೋಪಿಯಾಗಿರುವ ದೆಹಲಿಯ ನಿವಾಸದಲ್ಲಿ ಹಣ ಪತ್ತೆ ಪ್ರಕರಣ ಸಂಬಂಧ ದೆಹಲಿಯ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಿತು. ಇ.ಡಿ. ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಡಿಕೆಶಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ಡಿ.ಕೆ.ಶಿವಕುಮಾರ್ ಅವರನ್ನು ಸೆ.17ರವರೆಗೆ ಇ.ಡಿ. ವಶಕ್ಕೆ ಒಪ್ಪಿಸಿದರು.

3. ಪಿಎನ್ಬಿ ಹಗರಣ: ನೀರವ್ ಮೋದಿ ಸಹೋದರ ನೇಹಾಲ್ಗೆ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್

ಪಿಎನ್​​ಬಿ ಬ್ಯಾಂಕ್​​​​​ಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಕಳಂಕಿತ ವಜ್ರ ವ್ಯಾಪಾರಿ ನೀರವ್ ಮೋದಿ ಸಹೋದರ ನೇಹಾಲ್ಗೆ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಜಾರಿ ನಿರ್ದೇಶನಾಲಯ ಮನವಿ ಮೇರೆಗೆ ರೆಡ್ ಕಾರ್ನರ್ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ. ಇತ್ತೀಚೆಗೆ ಪಿಎನ್ಬಿ ಹಗರಣದಲ್ಲಿ ನೀರವ್ ಮೋದಿ ಸಹೋದರ ನಿಶಾಲ್ ಪಾತ್ರ ಇರಬಹುದು ಎಂದು ಲಂಡನ್ ನ್ಯಾಯಲಯ ಶಂಕೆ ವ್ಯಕ್ತಪಡಿಸಿತ್ತು. ಈ ಬೆನ್ನಲ್ಲೇ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ನೀಡಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.

4. ಸಿಎಂ ಬಗ್ಗೆ ಅಸಮಾಧಾನಗೊಂಡಿರುವ ಅನರ್ಹ ಶಾಸಕರಿಂದ ಸಭೆಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ಕೆಡವಿದ್ದ ಅನರ್ಹ ಶಾಸಕರು ಇದೀಗ ಬಿಎಸ್ವೈ ಸರ್ಕಾರದ ಬಗ್ಗೆಯೂ ಅಸಮಾಧಾನಗೊಂಡಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ತಮ್ಮ ಪ್ರಕರನ ಇತ್ಯರ್ಥವಾಗುತ್ತಿಲ್ಲವೆಂಬ ಹತಾಶೆ ಒಂದೆಡೆಯಾದರೆ, ತಮ್ಮ ಮಾತುಗಳನ್ನ ಹಾಲಿ ಸರ್ಕಾರದಲ್ಲಿ ಕೇಳುವವರಿಲ್ಲ ಎಂಬ ಆಕ್ರೋಶ ಇನ್ನೊಂದೆಡೆ ಇದೆ. ಸಿಎಂ ಆಗುವ ಮುನ್ನ ಯಡಿಯೂರಪ್ಪ ಅವರಲ್ಲಿ ಇದ್ದ ವರ್ತನೆಗೂ ಈಗಿನ ವರ್ತನೆಗೂ ವ್ಯತ್ಯಾಸವಾಗಿದೆ ಎಂದು ಅನರ್ಹ ಶಾಸಕರು ಒಳಗೊಳಗೆ ಮುಲುಗುತ್ತಿದ್ದಾರೆ. ಇವತ್ತು ಸಭೆ ನಡೆಸಿರುವ ಈ ಅನರ್ಹ ಶಾಸಕರು ತಮ್ಮ ಮುಂದಿನ ಕಾರ್ಯಯೋಜನೆಯನ್ನು ಚರ್ಚಿಸುತ್ತಿದ್ದಾರೆನ್ನಲಾಗಿದೆ.

5. ಕಾಳು ಮೆಣಸು ಆಮದಿನಲ್ಲಿ ನಡೆಯುತ್ತಿರುವ ಹವಾಲ ದಂಧೆ ಬಗ್ಗೆ ಕಣ್ಮುಚ್ಚಿದ್ದೀರಿ: ಇ.ಡಿ.ಗೆ ಬ್ರಿಜೇಶ್ ಕಾಳಪ್ಪ ಪ್ರಶ್ನೆ

ಜನರ ಹಿತಕ್ಕಾಗಿ ಇರಬೇಕಾದ ಜಾರಿ ನಿರ್ದೇಶನಾಲಯ ಸಂಸ್ಥೆಯು ಸರ್ಕಾರದ ಕೈಗೊಂಬೆಯಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದರು. ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಡಿಕೆಶಿ ಅವರನ್ನು 8 ಕೋಟಿ ಲೆಕ್ಕದ ವಿಚಾರದಲ್ಲಿ ಬಂಧಿಸಿ ಒಳಗೆ ಹಾಕಿದ್ದಾರೆ. ಆದರೆ, ಅನೇಕ ಕಡೆ ದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆಯುತ್ತಿದ್ದರೂ ಇ.ಡಿ. ಸಂಸ್ಥೆ ಕಣ್ಮುಚ್ಚಿ ಕುಳಿತಿದೆ ಎಂದು ಆಪಾದಿಸಿದರು. ಇದಕ್ಕೆ ಅವರು ವಿಯೆಟ್ನಾಮ್ ದೇಶದಿಂದ ಆಮದಾಗುತ್ತಿರುವ ಕಾಳು ಮೆಣಸಿನ ವ್ಯವಹಾರದ ಹವಾಲ ದಂಧೆಯನ್ನ ಪ್ರಸ್ತಾಪಿಸಿದರು.

6. ಸಿಎಂ ವಿರುದ್ಧ ತಿರುಗಿಬಿದ್ದ ಮಂಡ್ಯ ಬಿಜಪಿ ಮುಖಂಡರು

ಬಿಜೆಪಿಯಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ ಎಂಬ ಕೆಲ ಆರೋಪಗಳಿಗೆ ಪುಷ್ಟಿ ನೀಡುವಂತೆ ಮಂಡ್ಯದ ಸ್ಥಳೀಯ ಬಿಜೆಪಿ ಮುಖಂಡರು ಹಾಲು ಒಕ್ಕೂಟದ ವಿಚಾರದಲ್ಲಿ ಮುಖ್ಯಮಂತ್ರಿ ವಿರುದ್ಧ ಅಸಮಾಧಾನಗೊಂಡಿದ್ದಾರೆ.  ಮನ್​ಮುಲ್​​ಗೆ ಸಿಎಂ ನಾಮ ನಿರ್ದೇಶನ ಮಾಡಿರುವ ಹೆಸರನ್ನು ತಡೆ ಹಿಡಿಯುವಂತೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷರು ಪತ್ರವನ್ನು ಬರೆದಿದ್ದಾರೆ.ಮಂಡ್ಯದ ಮನಮುಲ್ಗೆ ಮಾಜಿ ಸಿಎಂ ಹಾಗೂ ಬಿಜೆಪಿ ಮುಖಂಡ ಎಸ್.ಎಂ. ಕೃಷ್ಣ ಅವರು ತಮ್ಮ ಬೆಂಬಲಿಗ ಪ್ರಸನ್ನ ಎಂಬುವರಿಗೆ ನಾಮ ನಿರ್ದೇಶನ ಮಾಡುವಂತೆ ಸಿಎಂ ಬಿಎಸ್ವೈ ಗೆ ಮನವಿ ಮಾಡಿದ್ದರು. ಸಿಎಂ ಬಿಎಸ್ವೈ ಅವರು ಸೆಪ್ಟೆಂಬರ್ 11 (ಬುಧವಾರ) ಪ್ರಸನ್ನ ಅವರ ಹೆಸರನ್ನು ಅನುಮೋದನೆ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಮಂಡ್ಯ ಬಿಜೆಪಿಯಲ್ಲಿ ಅಸಮದಾನದ ಹೊಗೆ ಭುಗಿಲೆದ್ದಿದೆ ಎನ್ನಲಾಗಿದೆ.

7. ಹಿಂದಿ ದಿವಸ್ ವಿರುದ್ಧ ಸೆ.14ಕ್ಕೆ ಕರಾಳ ದಿನಾಚರಣೆ; ಕನ್ನಡಿಗರ ಬೃಹತ್ ಹಕ್ಕೊತ್ತಾಯ ಮೆರವಣಿಗೆ

ದೇಶಾದ್ಯಂತ ಪ್ರತಿ ವರ್ಷದಂತೆಯೇ ನಾಳೆ(ಸೆ.14) ಕೂಡ ಹಿಂದಿ ದಿವಸ್ ಆಚರಿಸಲಾಗುತ್ತದೆ. ಈ ಹಿಂದಿ ದಿವಸ್ ರದ್ದಿಗೆ ಆಗ್ರಹಿಸಿ ಕನ್ನಡಿಗರು ಕರಾಳ ದಿನಾಚರಣೆಗೆ ಮುಂದಾಗಿದ್ದಾರೆ. ಹೀಗಾಗಿಯೇ ನಾಳೆ ನಗರದ ಪುರಭವನದಿಂದ ಫ್ರೀಡಂ ಪಾರ್ಕ್ವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾರೆ. ಹಿಂದಿ ಬದಲಿಗೆ ಕನ್ನಡ ಭಾಷೆಯನ್ನು ಭಾರತ ಸರ್ಕಾರದ ಆಡಳಿತ ಭಾಷೆಯಾಗಿ ಮಾಡಬೇಕೆಂದು ಆಗ್ರಹಿಸಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸಲಿದ್ದಾರೆ

8. ನಮ್ಮ ಪಕ್ಷದಲ್ಲೇ ಚೂರಿಗಳ ಸದ್ದು ಕೇಳಿಸುತ್ತಿದೆ, ಮಾಜಿ ಸಚಿವ ಸಾ.ರಾ.ಮಹೇಶ್

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಇನ್ನಷ್ಟು ಚೂರಿಗಳು ಬರುವುದು ಬಾಕಿ ಇದೆ. ಅಲ್ಲಲ್ಲಿ ಚೂರಿಗಳ ಮಾತುಗಳು ಕೇಳುತ್ತಿವೆ. ಅವೆಲ್ಲವೂ ಶೀಘ್ರದಲ್ಲೇ ಹೊರ ಬರಲಿದೆ. ನಮ್ಮ ಪಕ್ಷದಲ್ಲೇ ಚೂರಿಗಳ ಸದ್ದು ಕೇಳಿಸುತ್ತಿದೆ. ಎಲ್ಲಾ ಚೂರಿಗಳನ್ನು ಅರಗಿಸಿಕೊಳ್ಳುವ ಶಕ್ತಿ ಕುಮಾರಸ್ವಾಮಿ ಅವರಿಗೆ ಇದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ. ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷದ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ , ಒಂದುವೇಳೆ ಹೆಚ್.ಡಿ. ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಮಾಡಿದ್ದರೆ ಅವರನ್ನು ಅರೆಸ್ಟ್ ಮಾಡಲಿ. ಮಾಡಬಾರದ್ದನ್ನು ಮಾಡಿ ದುಡ್ಡು ಸಂಪಾದಿಸಿದ್ದರೆ ಬಂಧಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದ್ದರು.

9. ಸುದ್ದಿಗೋಷ್ಠಿಯಲ್ಲಿ ರಾನು ಹೇಳಿದ ಒಂದೇ ಒಂದು ಮಾತಿಗೆ ಕಣ್ಣೀರಿಟ್ಟ ಹಿಮೇಶ್..!

ಹಿಮೇಶ್ ಹಾಗೂ ರಾನು ಮಂಡಲ್ ಅವರ ಕಾಂಬಿನೇಶನ್ನಲ್ಲಿ 'ಹ್ಯಾಪಿ ಹಾರ್ಡಿ ಆ್ಯಂಡ್ ಹೀರ್' ಸಿನಿಮಾದ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿನ್ನೆ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದರಲ್ಲಿ ಹಿಮೇಶ್ ಕಣ್ಣೀರಿಟ್ಟಿದ್ದಾರೆ. 'ತೇರಿ ಮೇರಿ ಕಹಾನಿ' ಹಾಡಿನ ಬಿಡುಗಡೆಗಾಗಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ರಾನು ಮಾತನಾಡುತ್ತಾ, ಈ ಕಾರ್ಯಕ್ರಮಕ್ಕೆ ಬಂದು ತುಂಬಾ ಖುಷಿಯಾಗಿದೆ. ಇದಕ್ಕೆ ಕಾರಣ ಹಿಮೇಶ್ ಎಂದಿದ್ದಾರೆ. ಈ ಮಾತು ಕೇಳಿದ ಕೂಡಲೇ ಹಿಮೇಶ್ ಅವರ ಕಣ್ಣುಗಳಲ್ಲಿ ನೀರು ಬಂದಿತ್ತು.

10. ಫಿರೋಜ್ ಶಾ ಕೋಟ್ಲಾ ಇನ್ಮುಂದೆ ಅರುಣ್ ಜೇಟ್ಲಿ ಕ್ರೀಡಾಂಗಣ; ನೂತನ ಪೆವಿಲಿಯನ್ಗೆ ಕೊಹ್ಲಿ ಹೆಸರು

ವಿಶ್ವ ಪ್ರಸಿದ್ಧ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಮರುನಾಮಕರಣ ಮಾಡಲಾಗಿದೆ. ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ನಾಯಕ ಮಾಜಿ ಸಚಿವ ದಿ. ಅರುಣ್ ಜೇಟ್ಲಿ ಹೆಸರನ್ನು ಮರು ನಾಮಕರಣ ಮಾಡಲಾಗಿದೆ. ಅರುಣ್ ಜೇಟ್ಲಿ ಅವರು ದೆಹಲಿ ಕ್ರಿಕೆಟ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಫಿರೋಷ್ ಷಾ ಕೋಟ್ಲಾ ಮೈದಾನ ಆಧುನಿಕ ಸೌಲಭ್ಯವನ್ನು ನವೀಕರಿಸಿದ ಕೀರ್ತಿಗೆ ಪಾತ್ರರಾಗಿದ್ದರು. ವಿಶ್ವ ದರ್ಜೆಯ ಡ್ರೆಸ್ಸಿಂಗ್ ಕೊಠಡಿಗಳು ನಿರ್ಮಿಸುವುದರ ಜತೆ ಈ ಕ್ರೀಡಾಂಗಣ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ಜು ಹೆಚ್ಚಿಸಿದ್ದರು. ಇನ್ನು ಕ್ರೀಡಾಂಗಣದ ಒಂದು ಸ್ಟ್ಯಾಂಡ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರಿಟ್ಟು ಗೌರವಿಸಲಾಯಿತು.
First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading