ಮಂಡ್ಯ/ಮೈಸೂರು/ಬಾಗಲಕೋಟೆ: ಇಂದು ಬೆಳಗ್ಗೆ ಮಂಡ್ಯ (Mandya), ಮೈಸೂರು (Mysuru) ಮತ್ತು ಬಾಗಲಕೋಟೆಯಲ್ಲಿ (Bagalkot) ನಡೆದ ಪ್ರತ್ಯೇಕ ಅಪಘಾತದಲ್ಲಿ ಓರ್ವ ಕಾಲೇಜ್ ವಿದ್ಯಾರ್ಥಿ (College Students) ಸಾವನ್ನಪ್ಪಿದ್ದಾನೆ. ಮಂಡ್ಯ ಜಿಲ್ಲೆ ಕೆಆರ್ ಪೇಟೆ (KR Pete, Mandya) ತಾಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿದ KSRTC ಬಸ್ (Bus) ಗದ್ದೆಗೆ ಉರುಳಿದೆ. ಕೆಎ 09 ಎಫ್ 5282 ಸಂಖ್ಯೆಯ KSRTC ಬಸ್ ಅಪಘಾತಕ್ಕೆ ಒಳಗಾಗಿದ್ದು, ಮೈಸೂರಿಗೆ ಹೋಗುವ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ. ಬಸ್ನಲ್ಲಿ ಒಟ್ಟು 30 ಪ್ರಯಾಣಿಕರು (Passengers) ಪ್ರಯಾಣಿಸುತ್ತಿದ್ದರು. ಎಲ್ಲಾ ಪ್ರಯಾಣಿಕರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕೆಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.
ತಪ್ಪಿದ ಭಾರೀ ಅನಾಹುತ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ (Chamundi Hill) ಬೆಳ್ಳಂ ಬೆಳಗ್ಗೆ ಭಾರೀ ಅನಾಹುತ ತಪ್ಪಿದೆ. ಡೀಸೆಲ್ ಸೋರಿಕೆಯಿಂದ (Diesel Leakage) 50ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಖಾಸಗಿ ಬಸ್ನಲ್ಲಿ (Private Bus) ಬೆಂಕಿ ಕಾಣಿಸಿಕೊಂಡಿತ್ತು. ಚಾಲಕನ ಸಮಯ ಪ್ರಜ್ಞೆಯಿಂದ ಪ್ರವಾಸಿಗರ ಪ್ರಾಣ ಉಳಿದಿದೆ. ಪ್ರವಾಸಿಗರೆಲ್ಲರೂ (Tourist Bus) ಗುಜರಾತ್ ಮೂಲದವರು ಎಂದು ತಿಳಿದು ಬಂದಿದೆ.
ಚಾಮುಂಡಿ ಬೆಟ್ಟ ಬಸ್ ನಿಲ್ದಾಣದ ಸಮೀಪ ಬರುತ್ತಿದ್ದಂತೆ ಬಸ್ನ ಸೈಲೆನ್ಸರ್ ಪೈಪ್ನಿಂದ ಇದ್ದಕ್ಕಿದ್ದ ಹಾಗೆ ಹೊಗೆ ಕಾಣಿಸಿಕೊಂಡಿದೆ. ಬಳಿಕ ಪೈಪ್ನಿಂದ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕೆಳಗಿಳಿದ ಚಾಲಕ ಬೆಂಕಿಯ ಸಂಪರ್ಕದ ವಯರ್ಗಳನ್ನು ಕಟ್ ಮಾಡಿ, ಪ್ರವಾಸಿಗರನ್ನು ಬಸ್ನಿಂದ ಕೆಳಗೆ ಇಳಿಸಿದ್ದಾರೆ.
ಬೆಂಕಿ ಸಂಪರ್ಕದ ವಯರ್ ಕಟ್ ಮಾಡಿದ್ದರಿಂದ ದೊಡ್ಡ ಅವಘಢವೊಂದು ತಪ್ಪಿದೆ. ಪ್ರವಾಸಿಗರೆಲ್ಲರೂ ಬೆಳಗ್ಗೆ ಚಾಮುಂಡಿ ತಾಯಿಯ ದರ್ಶನ ಪಡೆಯಲು ಬಂದಿದ್ದರು.
ಕ್ಯಾಂಟರ್, ಬಸ್ ಡಿಕ್ಕಿ; ವಿದ್ಯಾರ್ಥಿ ಸಾವು
ಕ್ಯಾಂಟರ್ ಮತ್ತು ಸಾರಿಗೆ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾಲೇಜ್ ವಿದ್ಯಾರ್ಥಿ (College Student) ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಬಾಗಲಕೋಟೆ ತಾಲೂಕಿನ ಗದ್ದನಕೇರಿ (Gaddanakeri, Bagalkot) ಸಮೀಪವಿರುವ ಇಟಗಿ ಭೀಮಮ್ಮ ದೇವಸ್ಥಾನದ ಬಳಿ ಅಪಘಾತ ಸಂಭವಿಸಿದೆ. ರಾಹುಲ್ ಪಾಟೀಲ್ ಸಾವನ್ನಪ್ಪಿರುವ ವಿದ್ಯಾರ್ಥಿ. ಮೃತ ರಾಹುಲ್ ಪಾಟೀಲ್ ಬೀಳಗಿ (Bilage) ತಾಲೂಕಿನ ಅರಕೇರಿ ಗ್ರಾಮದ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದೆ.
ತುಂಡು ತುಂಡಾಗಿ ಬಿದ್ದ ಮೃತದೇಹ
ಮೃತ ರಾಹುಲ್ ಪಿಯುಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಬಸ್ ಅಮಲಜರಿಯಿಂದ ಬಾಗಲಕೋಟೆಗೆ ಬರುತ್ತಿತ್ತು. ಕ್ಯಾಂಟರ್ ಬಾಗಲಕೋಟೆಯಿಂದ ಬೆಳಗಾವಿ ಕಡೆಗೆ ಹೊರಟಿತ್ತು.
ಕ್ಯಾಂಟರ್ ಚಾಲಕನ ಅಚಾತುರ್ಯದಿಂದ ಅಪಘಾತ ನಡೆದಿದೆ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ವೇಗವಾಗಿ ಬಂದ ಕ್ಯಾಂಟರ್ ಬಸ್ಗೆ ಡಿಕ್ಕಿ ಹೊಡೆದ ರಭಸಕ್ಕೆ ರಾಹುಲ್ ಮೃತದೇಹ ರಸ್ತೆಯಲ್ಲಿ ತುಂಡು ತುಂಡಾಗಿ ಬಿದ್ದಿದೆ.
ಇದನ್ನೂ ಓದಿ: KS Eshwarappa: ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್; ಸಂಪುಟ ಸೇರೋ ಈಶ್ವರಪ್ಪ ಕನಸು ಭಗ್ನವಾಗುತ್ತಾ?
ಕಂದಕಕ್ಕೆ ಇಳಿದ ಬಸ್
ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಕಂದಕಕ್ಕೆ ಇಳಿದಿದೆ. ಬೆಳಗ್ಗೆ ಬಸ್ ಆಗಿದ್ದರಿಂದ ಬಹುತೇಕ ಕಾಲೇಜು ವಿದ್ಯಾರ್ಥಿಗಳೇ ಪ್ರಯಾಣ ಮಾಡುತ್ತಿದ್ದರು. ಬಸ್ ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆ ಮುಂಭಾಗ ವಿದ್ಯಾರ್ಥಿಗಳ ಪೋಷಕರು ಆಗಮಿಸಿ ಮಕ್ಕಳ ಆರೋಗ್ಯ ವಿಚಾರಿಸುತ್ತಿದ್ದಾರೆ. ಇನ್ನು ಮೃತ ರಾಹುಲ್ ಪಾಟೀಲ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ