ಫೈಲಟ್​ ತರಬೇತಿಗೆ ಬಂದ ವಿದ್ಯಾರ್ಥಿಗಳನ್ನು ಏರೋಪ್ಲೇನ್​ ಹತ್ತಿಸಿ ರ‍್ಯಾಗಿಂಗ್ ಮಾಡಿದ ಸೀನಿಯರ್​ಗಳು

news18
Updated:September 6, 2018, 5:41 PM IST
ಫೈಲಟ್​ ತರಬೇತಿಗೆ ಬಂದ ವಿದ್ಯಾರ್ಥಿಗಳನ್ನು ಏರೋಪ್ಲೇನ್​ ಹತ್ತಿಸಿ ರ‍್ಯಾಗಿಂಗ್ ಮಾಡಿದ ಸೀನಿಯರ್​ಗಳು
news18
Updated: September 6, 2018, 5:41 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.6):  ರ‍್ಯಾಗಿಂಗ್ ನಿಷೇಧಿಸಿ ಸರ್ಕಾರ ನಿಯಮ ಜಾರಿಗೆ ತಂದರೂ ಸರ್ಕಾರಿ ತರಬೇತಿ ಕೇಂದ್ರದಲ್ಲಿಯೇ ಈ ರ‍್ಯಾಗಿಂಗ್ ಭೂತ ಎಗ್ಗಿಲ್ಲದೇ ಸಾಗಿದೆ.

ಜಕ್ಕೂರು ವೈಮಾನಿಕ ತರಬೇತಿ ಕೇಂದ್ರಕ್ಕೆ ​ ತರಬೇತಿಗೆ ಬಂದ ಜ್ಯೂನಿಯರ್​ ಪೈಲಟ್​ಗಳಿಗೆ ಸೀನಿಯರ್​ಗಳು ರ‍್ಯಾಗಿಂಗ್ ಮಾಡಿದ್ದಾರೆ. ಈ ಕೃತ್ಯಕ್ಕೆ ಸಾಥ್​ ನೀಡಿದವರು ಮುಖ್ಯ ತರಬೇತುದಾರರೇ.

ಮುಖ್ಯ ತರಬೇತುದಾರ ಎದುರಿನಲ್ಲಿಯೇ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಯೂನಿಫಾರಂ ಬಟ್ಟೆ ಹರಿದು ಕಿರುಕುಳ ನೀಡಿದ್ದಾರೆ. ಯುವತಿಯರ ಬಟ್ಟೆ, ಮುಖದ ಮೇಲೆ ಚಿತ್ರ ಬಿಡಿಸಿ ನೀರು ಹಾಕಿ ಡ್ಯಾನ್ಸ್​ ಮಾಡುವಂತೆ ಒತ್ತಾಯ ಮಾಡಿದ್ದಾರೆ.

ಈ ಕುರಿತು ತಮ್ಮ ಮುಖ್ಯಸ್ಥರಿಗೆ ಹೇಳೋಣ ಎಂದರೂ ವಿದ್ಯಾರ್ಥಿಗಳು ಅಸಹಾಯಕರಾಗಿದ್ದಾರೆ.  ಕಾರಣ ಮುಖ್ಯ ತರಬೇತುದಾರ ಅಮರಜೀತ್ ಸಿಂಗ್ ಡಾಗೇ ಹಿರಿಯ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವಾಗ ತಾವು ಕೂಡ ನಿಂತು ಯಾವ ರೀತಿ ರ‍್ಯಾಗಿಂಗ್ ಮಾಡುತ್ತಾರೆ ಎಂದು ನಿಂತು ನೋಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ದೃಶ್ಯಾವಳಿಗಳನ್ನು ಚಿತ್ರೀಕರಣ ಕೂಡ ಮಾಡಿದ್ದಾರೆ

ರ‍್ಯಾಗಿಂಗ್ ಕಾನೂನು ಬಾಹಿರವಾಗಿದ್ದು, ಸರ್ಕಾರಿ ತರಬೇತಿ ಕೇಂದ್ರದಲ್ಲಿಯೇ ವಿದ್ಯಾರ್ಥಿಗಳಿಗೆ ಈ ರೀತಿಯ ಹಿಂಸೆಯಾಗುತ್ತಿರುವುದು ನಿಜಕ್ಕೂ ಶೋಚನೀಯ. ಇದಕ್ಕೆ ಅಲ್ಲಿನ ಮುಖ್ಯಸ್ಥರು ಕೂಡ ಪ್ರತಿರೋಧ ವ್ಯಕ್ತಪಡಿಸದಿರುವುದು ಅಲ್ಲಿನ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ