ಯಡಿಯೂರಪ್ಪ ಚಮಚ ಅಲ್ಲ, ಅವರಿದ್ದರೆ ಕರ್ನಾಟಕದಲ್ಲಿ ಬಿಜೆಪಿಗೆ ಭವಿಷ್ಯ; ಸುಬ್ರಮಣಿಯನ್ ಸ್ವಾಮಿ

ಯಡಿಯೂರಪ್ಪ ಅವರು ಸ್ವಾಮೀಜಿಗಳ ಬಳಿ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ’’ನಾನು ಈ ಸಂದರ್ಭದಲ್ಲಿ ಹೆಚ್ಚು ಮಾತನಾಡುವುದಿಲ್ಲ. ಹೈಕಮಾಂಡ್ ಹೇಳಿದಂತೆ ನಾನು ನಡೆದುಕೊಳ್ಳುತ್ತೇನೆ. ನಾನು ಪಕ್ಷದ ಶಿಸ್ತಿನ ಸಿಪಾಯಿ’’ ಎಂದಿದ್ದಾರೆ.

ಸುಬ್ರಮಣಿಯನ್ ಸ್ವಾಮಿ

ಸುಬ್ರಮಣಿಯನ್ ಸ್ವಾಮಿ

 • Share this:
  ದೆಹಲಿ ಯಾತ್ರೆಯ ನಂತರ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ಪದಚ್ಯುತಿ ನೂರಕ್ಕೆ ನೂರರಷ್ಟು ಸನ್ನಿಹಿತ ಎಂದು ಭಾವಿಸಲಾಗಿತ್ತು. ಜುಲೈ 26ರ ನಂತರ ತಮ್ಮ ಸ್ಥಾನಕ್ಕೆ ಸ್ವತಃ ಅವರೇ ರಾಜಿನಾಮೆ ನೀಡಲಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿತ್ತು. ಆದರೆ ದಿನದಿಂದ ದಿನಕ್ಕೆ ಬಿಎಸ್​ವೈ ಅವರ ಶಕ್ತಿ ಹೆಚ್ಚಾಗುತಿದೆಯೇ? ಅವರ ಪದಚ್ಯುತಿಯ ವಿಷಯ ಬಂದ ತಕ್ಷಣ ಇಡೀ ರಾಜ್ಯದಲ್ಲಿ ಒಂದು ರಾಜಕೀಯ ಪಲ್ಲಟ ಎದ್ದು ಕಾಣುತ್ತಿದೆ.

  ವಿವಿಧ ಪಕ್ಷಗಳ ನಾಯಕರು, ಮಠಾಧೀಶರು ಸೇರಿದಂತೆ ಲಿಂಗಾಯತ ಸಮುದಾಯ ಯಡಿಯೂರಪ್ಪ ಅವರ ಬೆನ್ನಿಗಿದೆ ಎಂದು ಬಹಿರಂಗವಾಗಿ ಬೆಂಬಲ ನೀಡಿದ್ದಾರೆ. ಈಗ ಯಡಿಯೂರಪ್ಪ ಅವರಿಗೆ ಆನೆ ಬಲ ಬಂದಿದ್ದು ಹಿರಿಯ ಬಿಜೆಪಿ ಮುಂಖಂಡ ಸುಬ್ರಮಣಿಯನ್​ ಸ್ವಾಮಿ ಟ್ವೀಟ್​ ಮಾಡಿ ಸಿಎಂ ಯಡಿಯೂರಪ್ಪ ಅವರನ್ನ ಏಕೆ ಕುರ್ಚಿಯಿಂದ ಇಳಿಸಬೇಕು ಎಂದು ಪ್ರಶ್ನಿಸಿದ್ದಾರೆ.

  ಕರ್ನಾಟಕದಲ್ಲಿ ಬಿಜೆಪಿಯನ್ನು ಮೊದಲು ಅಧಿಕಾರಕ್ಕೆ ತಂದವರು ಯಡಿಯೂರಪ್ಪ, ಅವರು ಇತರೇ ನಾಯಕರುಗಳಿಗೆ ಚಮಚ ಆಗದೇ ಕೆಲಸ ಮಾಡುತ್ತಿರುವುದರಿಂದ ಅವರನ್ನು ತೆಗೆದು ಹಾಕಲು ಸಂಚು ನಡೆಯುತ್ತಿದೆ. ಅವರನ್ನು ಕಂಡರೆ ಆಗದವರೇ ಈ ಕೆಲಸ ಮಾಡಿಸುತ್ತಿರುವುದು.  ಯಡಿಯೂರಪ್ಪ ಅವರಿಲ್ಲದೇ ಹೋದರೆ ಬಿಜೆಪಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಹಿಂದಿರುಗಲು ಸಾಧ್ಯವೇ ಇಲ್ಲ. ಅವರು ಮತ್ತೆ ಬಿಜೆಪಿಗೆ ಮರಳಿದ ನಂತರವೇ ಕರ್ನಾಟಕದಲ್ಲಿ ಪಕ್ಷ ಗೆಲ್ಲಲು ಸಾಧ್ಯವಾಯಿತು. ಈಗ ಅದೇ ತಪ್ಪನ್ನು ಏಕೆ ಪುನರಾವರ್ತಿಸಬೇಕು? ಎಂದು ಟ್ವೀಟ್​ ಮೂಲಕ ಹೈಕಮಾಂಡ್​ ನಾಯಕರಿಗೆ ಮಾತಿನ ಚಾಟಿ ಬೀಸಿದ್ದಾರೆ.

  https://twitter.com/Swamy39/status/1417794806999224320

  ಇದೆಲ್ಲದರ ನಡುವೆ ಸಿಎಂ ಅವರ ಭೇಟಿಗೆ ಹಾಗೂ ಬೆಂಬಲಕ್ಕೆ ವಿವಿಧ ಲಿಂಗಾಯತ ಮಠಾಧೀಶರುಗಳ ನಿಯೋಗ ಕಳೆದ ಎರಡು ದಿನಗಳಿಂದ ಬಿಎಸ್​ವೈ ಮನೆಗೆ ಎಡತಾಕುತ್ತಲೇ ಇದ್ದಾರೆ. ಮಂಗಳವಾರದಂದು ಉತ್ತರ ಕರ್ನಾಟಕದ ಮಠಾಧೀಶರುಗಳು ಬಿಎಸ್​ವೈ ಬೆನ್ನಿಗೆ ನಿಂತಿದ್ದರು. ಬುಧವಾರ ಸಿದ್ದಗಂಗಾ ಮಠದ ಸ್ವಾಮೀಜಿಯ ನೇತೃತ್ವದಲ್ಲಿ ವಿವಿಧ ಮಠಾಧೀಶರುಗಳು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

  ಆದರೆ ಯಡಿಯೂರಪ್ಪ ಅವರು ಸ್ವಾಮೀಜಿಗಳ ಬಳಿ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ’’ನಾನು ಈ ಸಂದರ್ಭದಲ್ಲಿ ಹೆಚ್ಚು ಮಾತನಾಡುವುದಿಲ್ಲ. ಹೈಕಮಾಂಡ್ ಹೇಳಿದಂತೆ ನಾನು ನಡೆದುಕೊಳ್ಳುತ್ತೇನೆ. ನಾನು ಪಕ್ಷದ ಶಿಸ್ತಿನ ಸಿಪಾಯಿ’’ ಎಂದಿದ್ದಾರೆ.

  ಇದಲ್ಲದೇ ಕಾಂಗ್ರೆಸ್​ ಮುಖಂಡರಾದ ಎಂಬಿ ಪಾಟೀಲ್​ ’’ಬಿಎಸ್​ವೈ ಅವರನ್ನು ಮುಟ್ಟಿದರೆ ಲಿಂಗಾಯತರು ಬಿಜೆಪಿಯಿಂದ ದೂರವಾಗುತ್ತಾರೆ’’ ಎಂದು ಹೇಳಿದ್ದರು. ಅಲ್ಲದೆ ಬಿಎಸ್​ವೈ ಅವರನ್ನೇ ನೇರವಾಗಿ ಭೇಟಿ ಮಾಡಿದ್ದ ಹಿರಿಯ ಕಾಂಗ್ರೆಸ್​ ಮುಖಂಡ ಶಾಮನೂರು ಶಿವಶಂಕರಪ್ಪ ಕೂಡ ಬೆಂಬಲ ಸೂಚಿಸಿದ್ದರು.

  ಚಿತ್ರದುರ್ಗದ ಮುರುಘಾ ಶರಣರು ಕೂಡ ಬೆಂಬಲ ವ್ಯಕ್ತಪಡಿಸಿ’’ಎಲ್ಲಾ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ನಾಯಕ ಎಂದರೆ ಯಡಿಯೂರಪ್ಪ ಅವರು’’ ಎಂದು ಹೇಳಿದ್ದರು.

  ಹೀಗೆ ದಿನದಿಂದ ದಿನಕ್ಕೆ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿರುವ ಯಡಿಯೂರಪ್ಪ ಅವರು ಮಾತ್ರ ’’ನಾನು ಹೈಕಮಾಂಡ್​ ಹೇಳಿದಂತೆ ಕೇಳುತ್ತೇನೆ, ಇದು ನನ್ನ ತಾಯಿ ಪಕ್ಷ, ತಾಯಿಗೆ ಮೋಸ ಮಾಡಲಾರೆ’’, ಎಂದು ಹೇಳಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

  ಇದನ್ನೂ ಓದಿ: ಸಿಎಂ ಬದಲಾವಣೆ ವಿಚಾರ: ಸ್ವಾಮೀಜಿಗಳ ಬಳಿ ಮನದ ಮಾತು ಹೇಳಿಕೊಂಡ ಬಿ.ಎಸ್.ಯಡಿಯೂರಪ್ಪ

  ಯಡಿಯೂರಪ್ಪ ಅವರೇ ಸ್ವತಃ ರಾಜೀನಾಮೆ ನೀಡುತ್ತಾರಾ ಅಥವಾ ಹೈಮಾಂಡೇ ಅವರನ್ನು ಇಳಿಸುತ್ತದ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: