Bhaskar Rao: ಸ್ವಯಂ ನಿವೃತ್ತಿ ಪಡೆಯಲು ಮುಂದಾದ ಕರ್ನಾಟಕದ ಹಿರಿಯ IPS ಅಧಿಕಾರಿ; ರಾಜಕೀಯ ಸೇರುವ ಸಾಧ್ಯತೆ

ರಾಜ್ಯ ಆಂತರಿಕಾ ಭದ್ರತಾ ವಿಭಾಗದ ಎಡಿಜಿಪಿ, ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ರಾಜೀನಾಮೆಗೆ ನಿಖರ ತಿಳಿಯದಿದ್ದರೂ ರಾಜಕೀಯ ಸೇರುವ ಇರಾದೆಯಿಂದ ರಾಜೀನಾಮೆ ನೀಡಲು‌ ಮುಂದಾಗಿದ್ದಾರೆ ಎನ್ನಲಾಗಿದೆ‌.

ಐಪಿಎಸ್ ಅಧಿಕಾರಿ ಭಾಸ್ಕರ್​ ರಾವ್

ಐಪಿಎಸ್ ಅಧಿಕಾರಿ ಭಾಸ್ಕರ್​ ರಾವ್

  • Share this:
ಬೆಂಗಳೂರು(ಸೆ.17): ಬೆಂಗಳೂರು ಪೊಲೀಸ್ ಕಮೀಷನರ್(Police Commissioner) ಆಗಿದ್ದ ಹಿರಿಯ ಐಪಿಎಸ್ ಅಧಿಕಾರಿ(IPS Officer) ಭಾಸ್ಕರ್ ರಾವ್(Bhaskar Rao) ‌ಅವಧಿಗೂ‌ ಮುನ್ನವೇ ಸ್ವಯಂ ನಿವೃತ್ತಿ(Voluntary Retirment ) ಪಡೆಯಲು ಮುಂದಾಗಿದ್ದಾರೆ. ಡಿಜಿ ಐಜಿಪಿ ಪ್ರವೀಣ್ ಸೂದ್(DG IGP Praveen Sood) ಅವರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಭಾಸ್ಕರ್​​ ರಾವ್ ಅರ್ಜಿ ಸಲ್ಲಿಸಿದ್ದಾರೆ‌ ಎಂದು ತಿಳಿದುಬಂದಿದೆ. ವೈಯಕ್ತಿಕ ಕಾರಣಕ್ಕಾಗಿ ಸ್ವಯಂಪ್ರೇರಿತವಾಗಿ ರಾಜೀನಾಮೆ ಪಡೆಯುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಸಲ್ಲಿಸಿದ್ದಾರೆ. ನೀಡಿರುವ ಅರ್ಜಿಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

1900ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಭಾಸ್ಕರ್ ರಾವ್ ಹಾಲಿ ರೈಲ್ವೇ ಇಲಾಖೆಯ‌ ಎಡಿಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಇದಕ್ಕೂ‌ ಮುನ್ನ ರಾಜ್ಯ ಆಂತರಿಕಾ ಭದ್ರತಾ ವಿಭಾಗದ ಎಡಿಜಿಪಿ, ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ರಾಜೀನಾಮೆಗೆ ನಿಖರ ತಿಳಿಯದಿದ್ದರೂ ರಾಜಕೀಯ ಸೇರುವ ಇರಾದೆಯಿಂದ ರಾಜೀನಾಮೆ ನೀಡಲು‌ ಮುಂದಾಗಿದ್ದಾರೆ ಎನ್ನಲಾಗಿದೆ‌.

ರಾಜೀನಾಮೆ ಒಪ್ಪಿತವಾದ ಬಳಿಕ ಆಮ್ ಆದ್ಮಿ ಅಥವಾ ಕಾಂಗ್ರೆಸ್ ನಿಂದ ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಕಳೆದ ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ  ಪೋನ್ ಕದ್ದಾಲಿಕೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿದ ಬಿ ರಿಪೋರ್ಟ್ ಗೆ ಇತ್ತೀಚೆಗೆ ಭಾಸ್ಕರ್ ರಾವ್ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:PM Modi Birthday: ಟೋಪಿಯಲ್ಲೂ ಮೋದಿ ಫ್ಯಾಷನ್, ಥರಾವರಿ ಸ್ಟೈಲ್​​ನಲ್ಲಿ ಪ್ರಧಾನಿ ಮಿಂಚಿಂಗ್

ಕಳೆದ ವರ್ಷ ಎಡಿಜಿಪಿ ಸಂಜಯ್ ಸಹಾಯ್ ಹಾಗೂ ಅಣ್ಣಾಮಲೈ ಪೊಲೀಸ್ ವೃತ್ತಿಗೆ ರಾಜೀನಾಮೆ ನೀಡಿದ್ದರು. ಇನ್ನು ಮೂರು ವರ್ಷಗಳ ಕಾಲ ಭಾಸ್ಕರ್ ರಾವ್ ಗೆ ಸೇವಾ ಅವಧಿ ಇದೆ. ಕಮಿಷನರ್ ಆಗಿದ್ದ ಸಂದರ್ಭದಲ್ಲಿ ಸಾಕಷ್ಟು ಕೆಲಸಗಳನ್ನ ಮಾಡಿ ಒಳ್ಳೆಯ ಹೆಸರು ಪಡೆದಿದ್ರು. ಜೊತೆಗೆ ರೈಲ್ವೆ ಇಲಾಖೆಯಲ್ಲಿದ್ದಾಗಲೂ ಸೋನುಸೂದ್ ಜೊತೆ ಕೈ ಜೋಡಿಸಿ ಕೋವಿಡ್-19 ಸಂದರ್ಭದಲ್ಲಿ ಕಷ್ಟದ ಕುಟುಂಬಗಳಿಗೆ ಸಹಾಯ ಮಾಡಿದ್ರು.

ಈಗ ಧಿಡೀರ್ ಎಂದು ಸ್ವಯಂ ನಿವೃತ್ತಿಗೆ ಮುಂದಾಗಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ‌. ಸದ್ಯ ಸ್ನೇಹಿತರ ವರ್ಗದಲ್ಲೂ ರಾಜಕೀಯಕ್ಕೆ ಹೋಗ್ತಾರೆ ಎಂದು ಮಾತುಗಳು ಸಹ ಕೇಳಿ ಬರ್ತಿದೆ‌.

ಇನ್ನು ವಿಆರ್​​ಎಸ್ ಅರ್ಜಿಯನ್ನು ಸರ್ಕಾರ ಸ್ವೀಕರಿಸುತ್ತಾ ಇಲ್ವಾ ಅನ್ನೋದನ್ನು ಕಾದು ನೋಡಬೇಕಾಗುತ್ತೆ. ರಾಜಕೀಯ ಸೇವೆಗೆ ಇನ್ನೂ ಅವಧಿ ಹೆಚ್ಚಿದ್ದು, ಮುಖ್ಯ ಕಾರ್ಯದರ್ಶಿಗಳು ಯಾವ ತೀರ್ಮಾನ ತೆಗೆದುಕೊಳ್ತಾರೆ ಅನ್ನೋದು ಕುತೂಹಲವಿದೆ. ಇಲಾಖೆ ಹಾಗೂ ಸ್ನೇಹಿತರ ವರ್ಗದಲ್ಲಿ ಸಾಕಷ್ಟು ಒಳ್ಳೆಯ ಸೇವೆ ಮಾಡಿರೋ ಸ್ಪಂದನೆ ಇದೆ. ಸ್ವಯಂ ನಿವೃತ್ತಿ ಬಗ್ಗೆ ಇನ್ನು ಭಾಸ್ಕರ್ ರಾವ್ ಅಧಿಕೃತವಾಗಿ ಮಾತನಾಡಿಲ್ಲ. ಪತ್ರವನ್ನ ಸರ್ಕಾರ ಮನ್ನಣೆ ಮಾಡಿದ ಬಳಿಕ ಮಾತನಾಡಲಿದ್ದಾರೆ ಎನ್ನಲಾಗಿದೆ. ಭಾಸ್ಕರ್​ ರಾವ್​​ ಸಮಾಜಸೇವೆಗೆ ಮುಂದಾಗಿದ್ದು,ಇತ್ತೀಚೆಗೆ ಹೆಚ್ಚಾಗಿತ್ತು. ಇವೆಲ್ಲವನ್ನೂ ಗಮನಿಸ್ತಿದ್ರೆ ರಾಜಕೀಯದ ಒಲವು ಕಂಡಂತಿದೆ ಎನ್ನಲಾಗಿದೆ.

ಇದನ್ನೂ ಓದಿ:Online Gambling: ಜೂಜು-ಬೆಟ್ಟಿಂಗ್ ಆಡಿದ್ರೆ ಇನ್ಮೇಲೆ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ

ಒಟ್ಟಾರೆಯಾಗಿ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ಮುಂದಿನ ನಿರ್ಧಾರ ಏನು ತೆಗೆದುಕೊಳ್ತಾರೆ ಅನ್ನೋದು  ಕುತೂಹಲವಿದೆ. ಅಣ್ಣಾಮಲೈ ಸಹ ಇದೇ ರೀತಿ ದಿಢೀರ್ ಅಂತ ರಾಜಿನಾಮೆ ಕೊಟ್ಟು ಬಿಜೆಪಿಗೆ ಸೇರಿದ್ದರು. ಆ ಬಳಿಕ ಚುನಾವಣೆಗೆ ನಿಂತು ಪರಾಭವಗೊಂಡು ಈಗ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ‌‌.
Published by:Latha CG
First published: