ನಾಳೆ ನೀಲಮಣಿ ರಾಜು ನಿವೃತ್ತಿ; ಎ.ಎಂ.ಪ್ರಸಾದ್ ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕ?

ಹಾಲಿ ಡಿಜಿ, ಐಜಿಪಿ ನೀಲಮಣಿ ಎನ್.ರಾಜು ಅವರ ಜೊತೆಗೆ ಎಂ.ಎನ್.ರೆಡ್ಡಿ, ರಾಘವೇಂದ್ರ ಔರಾದ್ಕರ್ ಹಾಗೂ ರಾಜೇಂದ್ರ ಪ್ರಸಾದ್ ಕೂಡ ನಿವೃತ್ತಿಯಾಗಲಿದ್ದಾರೆ. 

ಎ.ಎಂ.ಪ್ರಸಾದ್.

ಎ.ಎಂ.ಪ್ರಸಾದ್.

 • Share this:
  ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್. ರಾಜು ಅವರು ನಾಳೆ ನಿವೃತ್ತಿಯಾಗಲಿದ್ದು, ಅವರ ಸ್ಥಾನಕ್ಕೆ ಎ.ಎಂ.ಪ್ರಸಾದ್ ನೇಮಕವಾಗುವ ಸಾಧ್ಯತೆ ಇದೆ. ಡಿಜಿ, ಐಜಿಪಿ ಸ್ಪರ್ಧೆಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್​ ಕೂಡ ಮುಂಚೂಣಿಯಲ್ಲಿದ್ದಾರೆ. ಆದರೆ, ಸರ್ಕಾರ ಎ.ಎಂ.ಪ್ರಸಾದ್ ನೇಮಕಕ್ಕೆ ಒಲವು ಹೊಂದಿದೆ ಎನ್ನಲಾಗಿದೆ. 

  ಬಿಹಾರ ಮೂಲದ ಎ.ಎಂ.ಪ್ರಸಾದ್ ಅವರು 1985ರ ಬ್ಯಾಚ್​ನ ಐಪಿಎಸ್ ಅಧಿಕಾರಿ. ಪ್ರಸ್ತುತ ಆಂತರಿಕ ಭದ್ರತಾ ವಿಭಾಗದ ಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೇವಾ ಹಿರಿತನದ ಮೇಲೆ ಪ್ರಸಾದ್ ಅವರನ್ನೇ ಪರಿಗಣಿಸಲು ಸರ್ಕಾರ ಮುಂದಾಗಿದೆ. ಈ ಕುರಿತು ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಎಂದು  ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.

  ಹಾಲಿ ಡಿಜಿ, ಐಜಿಪಿ ನೀಲಮಣಿ ಎನ್.ರಾಜು ಅವರ ಜೊತೆಗೆ ಎಂ.ಎನ್.ರೆಡ್ಡಿ, ರಾಘವೇಂದ್ರ ಔರಾದ್ಕರ್ ಹಾಗೂ ರಾಜೇಂದ್ರ ಪ್ರಸಾದ್ ಕೂಡ ನಿವೃತ್ತಿಯಾಗಲಿದ್ದಾರೆ.

  ಸಿಎಂ ದೆಹಲಿ ಪ್ರವಾಸದ ಕಾರಣ ಸಭೆ ರದ್ದು

  ಪೊಲೀಸ್ ಮಹಾನಿರ್ದೇಶಕರ ನೇಮಕ ಕುರಿತ ಚರ್ಚೆಗೆ ಇಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮುಂದಾಗಿದ್ದರು. ಇಂದು ಬೆಳಿಗ್ಗೆ ಸಿಎಂ ಬಿಎಸ್​ವೈ ಭೇಟಿಯಾಗಿ ಚರ್ಚೆಗೆ ಮುಂದಾಗಿದ್ದರು. ಆದರೆ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಬಿಎಸ್​ವೈ ದೆಹಲಿಗೆ ತೆರಳುತ್ತಿದ್ದ ಕಾರಣ ಇಂದು ಚರ್ಚೆ ನಡೆಸಲಿಲ್ಲ. ದೆಹಲಿಯಿಂದ ಸಿಎಂ ವಾಪಸ್ಸು ಬಂದ ನಂತರ ಚರ್ಚೆ ಮಾಡಲು ಬೊಮ್ಮಾಯಿ ನಿರ್ಧರಿಸಿದ್ದಾರೆ.

  ಇದನ್ನು ಓದಿ: ಗ್ರಾಹಕರಿಗೆ ಶಾಕ್​: ಫೆ.1ರಿಂದ ಹಾಲಿನ ದರ ಏರಿಕೆ; ಲೀಟರ್​ಗೆ 2 ರೂ. ಹೆಚ್ಚಳ
  First published: