Kodagu: ಪದೇ ಪದೇ ಭೂಕಂಪ ಹಿನ್ನೆಲೆ ಕೊಡಗಿಗೆ ಹಿರಿಯ ಭೂವಿಜ್ಞಾನಿಗಳ ತಂಡ ಭೇಟಿ

ಪದೇ ಪದೇ ಭೂಕಂಪವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಹಿರಿಯ ಭೂ ವಿಜ್ಞಾನಿಳಾದ (Geologists) ಡಾ. ಜಗದೀಶ್ ಮತ್ತು ಡಾ. ರಮೇಶ್ ದಿಕ್ಪಾಲ್ ಅವರ ನೇತೃತ್ವದ ತಂಡವನ್ನು ಕೊಡಗು ಜಿಲ್ಲೆಗೆ ಕಳುಹಿಸಿದೆ.

ಕೊಡಗು

ಕೊಡಗು

  • Share this:
ಕೊಡಗು(ಜೂ.30): ಕಳೆದ ಐದು ದಿನಗಳ ಅವಧಿಯಲ್ಲಿ ಕೊಡಗಿನಲ್ಲಿ ಮೂರು ಬಾರಿ ಭೂಕಂಪ (Earthquake) ಆಗುತ್ತಿದ್ದಂತೆ ಜಿಲ್ಲೆಗೆ ಬೆಂಗಳೂರಿನಿಂದ ಹಿರಿಯ ಭೂ ವಿಜ್ಞಾನಿಗಳ ತಂಡ ಆಗಮಿಸಿದ್ದು, ಅಧ್ಯಯನ ಆರಂಭಿಸಿದೆ. ಮಡಿಕೇರಿ (Madikeri) ತಾಲ್ಲೂಕಿನ ಕರಿಕೆ, ಚೆಂಬು ಗ್ರಾಮ ಪಂಚಾಯಿತಿಗಳ (Grama Panchayat) ವ್ಯಾಪ್ತಿಯಲ್ಲಿ ಜೂನ್ 25 ಮತ್ತು 29 ರಂದು ಎರಡು ದಿನಗಳಲ್ಲಿ ಮೂರು ಬಾರಿ ಭೂಕಂಪವಾಗಿತ್ತು. ಮಂಗಳವಾರ ನಡೆದಿದ್ದ ಭೂಕಂಪಕ್ಕೆ ಜಿಲ್ಲೆಯ ಹಲವೆಡೆ ಚಿಕ್ಕಪುಟ್ಟ ಸಮಸ್ಯೆಗಳು ಎದುರಾಗಿದ್ದವು. ಮಂಗಳವಾರ ಬೆಳಿಗ್ಗೆ 7.45 ಕ್ಕೆ ಚೆಂಬು ಗ್ರಾಮದಲ್ಲಿ 3.0 ರಿಕ್ಟರ್ ಪ್ರಮಾಣದ ಭೂಕಂಪವಾಗಿತ್ತು. ಸಂಜೆ ಮತ್ತೆ ಅದೇ ಸ್ಥಳದಲ್ಲಿ 1.7 ತೀವ್ರತೆಯ ಭೂಕಂಪವಾಗಿತ್ತು.

ಹೀಗೆ ಪದೇ ಪದೇ ಭೂಕಂಪವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಹಿರಿಯ ಭೂ ವಿಜ್ಞಾನಿಳಾದ (Geologists) ಡಾ. ಜಗದೀಶ್ ಮತ್ತು ಡಾ. ರಮೇಶ್ ದಿಕ್ಪಾಲ್ ಅವರ ನೇತೃತ್ವದ ತಂಡವನ್ನು ಕೊಡಗು ಜಿಲ್ಲೆಗೆ ಕಳುಹಿಸಿದೆ.

ಚೆಂಬು ಗ್ರಾಮಕ್ಕೆ ಭೇಟಿ

ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಅಧಿಕಾರಿ ಅನನ್ಯವಾಸುದೇವ್ ಅವರು ಸೇರಿದಂತೆ ತಂಡವು, ಭೂಕಂಪವಾಗಿದ್ದ ಚೆಂಬು ಗ್ರಾಮಕ್ಕೆ ಬುಧವಾರ ಭೇಟಿ ನೀಡಿದೆ. ಜನರ ಓಡಾಟ ಕಡಿಮೆ ಇರುವ ಸ್ಥಳದಲ್ಲಿ ಸೆಸ್ಮೋಗ್ರಫಿ ಅಬ್ಸರ್ವರ್ ತಂತ್ರಜ್ಞಾನವನ್ನು ಅಳವಡಿಸಿ ಅಧ್ಯಯನ ಆರಂಭಿಸಿದೆ. ಜೊತೆಗೆ ಕರಿಕೆಯಲ್ಲಿ ಜೂನ್ 25 ರಂದು ಭೂಕಂಪವಾಗಿದ್ದ ಪ್ರದೇಶಕ್ಕೂ ತಂಡ ಭೇಟಿ ನೀಡಲಿದ್ದು, ಅಲ್ಲಿನ ಭೂಮಿಯಾಳದ ಬೆಳವಣಿಗೆ ಬಗ್ಗೆಯು ಅಧ್ಯಯನ ನಡೆಸಲಿದೆ.

ಜಿಲ್ಲೆಯಲ್ಲಿ ಮೂರು ಬಾರಿ ಭೂಕಂಪ

ಜೊತೆಗೆ ಎರಡು ಭಾಗಗಳಲ್ಲೂ ಜನರಿಂದ ತಂಡವು ಮಾಹಿತಿ ಸಂಗ್ರಹಿಸುತ್ತಿದೆ. ಭೂಕಂಪದ ಬಳಿಕ ಕರಿಕೆ ಮತ್ತು ಚಂಬು ಗ್ರಾಮಗಳ ಸುತ್ತಮುತ್ತ ಸೇರಿದಂತೆ ಎಲ್ಲಾದರೂ ಭೂಮಿ ಬಿರುಕು ಬಿಟ್ಟಿದೆಯೇ ಎಂಬ ಮಾಹಿತಿಯನ್ನು ತಂಡವು ಕಲೆಹಾಕುತ್ತಿದೆ. ಮಳೆಗಾಲವೂ ಆರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಮೂರು ಬಾರಿ ಭೂಕಂಪವಾಗಿರುವುದು ಜನರನ್ನು ಆತಂಕಕ್ಕೆ ದೂಡಿದೆ.

ಹೀಗಾಗಿ ಒಂದೆಡೆ ವಿಜ್ಞಾನಿಗಳ ತಂಡ ಕೊಡಗಿಗೆ ಬಂದು ಭೂಕಂಪದ ಸ್ಥಳಗಳಲ್ಲಿ ಅಧ್ಯಯನ ಆರಂಭಿಸಿದ್ದರೆ, ಮತ್ತೊಂದೆಡೆ ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಅವರು ಜಿಲ್ಲಾಡಳಿತ ಮತ್ತು ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ್ದಾರೆ. ಪ್ರವಾಹ, ಭೂಕುಸಿತದ ಪರಿಸ್ಥಿತಿ ಎದುರಾದರೆ ಅದನ್ನು ನಿಭಾಯಿಸುವ ಕುರಿತು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ:Veerappa Moily: ಅಯೋಧ್ಯ ರಥಯಾತ್ರೆ ನಡೆಯೋವರೆಗೂ ದೇಶದೊಳಗೆ ಉಗ್ರಗಾಮಿಗಳು ಇರಲಿಲ್ಲ; ಮೊಯ್ಲಿ ವಿವಾದಾತ್ಮಕ ಹೇಳಿಕೆ

ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಂಪೂರ್ಣ ತಯಾರಿ ಮಾಡಿಕೊಂಡಿದ್ದು, ಅಗತ್ಯ ಮುನ್ನೆಚ್ಚರ ವಹಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ. ಯಾರೂ ಸಹ ಆತಂಕ ಪಡಬೇಕಿಲ್ಲ. ಕುಶಾಲನಗರ ಭಾಗದಲ್ಲಿ ಪ್ರವಾಹ ಎದುರಾಗದಂತೆ ಹಾರಂಗಿ ಜಲಾಶಯ ತುಂಬುವುದಕ್ಕೆ ಇನ್ನೂ ಐದು ಅಡಿ ಬಾಕಿ ಇರುವಾಗಲೇ ಮಳೆಯ ಪರಿಸ್ಥಿತಿಯನ್ನು ನೋಡಿ ನದಿಗೆ ನೀರು ಹರಿಸಲಾಗುವುದು.

ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ

ಇದರ ಜವಾಬ್ದಾರಿಯನ್ನು ಸ್ವತಃ ಜಿಲ್ಲಾಧಿಕಾರಿಯವರೇ ನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯ 32 ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಚ್ಚಿನ ಗಮನಹರಿಸಲು ಸೂಚಿಸಲಾಗಿದೆ. ಸಣ್ಣ ಪ್ರಮಾಣದಲ್ಲಿ ಭೂಕಂಪವಾಗಿರುವುದಿರಂದ ಏನೂ ತೊಂದರೆ ಆಗಿಲ್ಲ.

ಇದನ್ನೂ ಓದಿ: ಯುವತಿಯ ಕಿಡ್ನ್ಯಾಪ್​​ ಕೇಸ್​ಗೆ ಟ್ವಿಸ್ಟ್; ಪಾಲಿಕೆ ಸದಸ್ಯ ಚೇತನ್ ಸೇರಿ ಐವರಿಗೆ ಕೋರ್ಟ್ ವಾರೆಂಟ್​​

ಈಗಾಗಲೇ ವಿಜ್ಞಾನಿಗಳ ತಂಡ ಬಂದಿದ್ದು, ಕೂಡಲೇ ಅಧ್ಯಯನದ ವರದಿ ನೀಡಲಿದೆ ಎಂದು ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಹೇಳಿದ್ದಾರೆ. ಆದರೆ ನಿರಂತರ ಭೂಕಂಪದಿಂದ ಭಯದಲ್ಲಿ ಬದುಕುತ್ತಿರುವ ಕೊಡಗಿನ ಜನರು ಮಾತ್ರ ಅಧಿಕಾರಿಗಳು ಸುಮ್ಮನೆ ಏನೂ ಆಗಿಲ್ಲ, ಆತಂಕಬೇಡ ಎಂದು ಹೇಳಿ ಜನರನ್ನು ದಿಕ್ಕು ತಪ್ಪಿಸುವುದು ಬೇಡ. ಕೊಡಗಿನ ಈ ಬೆಟ್ಟಗುಡ್ಡಗಳ ನಡುವೆ ಎಲ್ಲಿ ಭೂಮಿ ಬಿರುಕು ಬಿಟ್ಟಿದೆ ಎಂಬುದು ಗೊತ್ತಾಗುವುದಿಲ್ಲ. ಆದ್ದರಿಂದ ವಿಜ್ಞಾನಿಗಳ ತಂಡ ಆದಷ್ಟು ಬೇಗ ಭೂಕಂಪದ ಬಗ್ಗೆ ಅಧ್ಯಯನದ ವರದಿ ನೀಡಿ ಜನರಿಗೆ ಸತ್ಯಾಂಶವನ್ನು ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.
Published by:Divya D
First published: