ಬೆಂಗಳೂರು: ಹಿರಿಯ ಕಾಂಗ್ರೆಸ್ ಶಾಸಕರಿಗೆ (Congress Senior Leader) ತಮ್ಮ ಹೇಳಿಕೆಯೇ ಮುಳುವಾಗಿದೆ. ಇದು ನಮ್ಮ ಕೊನೆ ಚುನಾವಣೆ (Election) ಎಂದು ಹೇಳಿ ಸ್ಪೀಕರ್ (Speaker) ಸ್ಥಾನ ಬೇಡ ಅಂತ ಹೇಳಿದ್ದ ಹಿರಿಯರಿಗೆ ಹೈಕಮಾಂಡ್ (Congress High Command) ಶಾಕ್ ಕೊಡಲು ಮುಂದಾಗುತ್ತಿದೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ಗೆ ಬಹುಮತ ಸಿಗುತ್ತಿದ್ದಂತೆ ಮೊದಲು ಸಿಎಂ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿತ್ತು. ನಂತರ ಸ್ಪೀಕರ್ (Speaker) ಆಯ್ಕೆ ಕೈ ನಾಯಕರಿಗೆ ಕಗ್ಗಂಟು ಆಗಿತ್ತು. ಕೊನೆಗೆ ಹೈಕಮಾಂಡ್ ಸೂಚನೆ ಮೇರೆಗೆ ಯುಟಿ ಖಾದರ್ (Speaker UT Khader) ಸ್ಪೀಕರ್ ಸ್ಥಾನಕ್ಕೆ ಒಪ್ಪಿಕೊಂಡು, ಸಭಾಪತಿಗಳಾಗಿದ್ದಾರೆ.
ಆರಂಭದಲ್ಲಿ ಪಕ್ಷದ ಹಿರಿಯ ಶಾಸಕರನ್ನೇ ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡಲು ಕಾಂಗ್ರೆಸ್ ಮುಂದಾಗಿತ್ತು. ಆದರೆ ಬಹುತೇಕರು ತಮ್ಮದೇ ಕೆಲವು ಕಾರಣಗಳನ್ನು ನೀಡಿ ಹಿಂದೇಟು ಹಾಕಿದ್ದರು. ಇದೀಗ ಅದೇ ಕಾರಣಗಳೇ ಪಕ್ಷದ ಮುಖಂಡರಿಗೆ ಕಂಟಕವಾಗಿದೆ ಎನ್ನಲಾಗಿದೆ.
ಹೊಸಬರಿಗೆ ಆದ್ಯತೆ ನೀಡುವ ಸಾಧ್ಯತೆ
ಈ ಬಾರಿ ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಂದಿನ ವರ್ಷವೇ ಲೋಕಸಭಾ ಚುನಾವಣೆ ಹಿನ್ನೆಲೆ ಹಿರಿಯ ಶಾಸಕರನ್ನು ಪಕ್ಷ ಸಂಘಟನೆಯಲ್ಲಿ ಬಳಸಿಕೊಳ್ಳಲು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ.
ಸೋನಿಯಾ ಗಾಂಧಿ ಅವರನ್ನ ಭೇಟಿ ಮಾಡಲಿರುವ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಇಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನ ಭೇಟಿ ಆಗಲಿದ್ದಾರೆ. ಸಿಎಂ ಆದ ಬಳಿಕ ಸಿದ್ದರಾಮಯ್ಯ, ಮೊದಲ ಬಾರಿಗೆ ಸೋನಿಯಾರನ್ನ ಭೇಟಿ ಮಾಡ್ತಿದ್ದಾರೆ.
ಇದನ್ನು ಓದಿ: Indian Railway: ಭದ್ರಾವತಿಯಲ್ಲಿ ಇಂಜಿನ್ ಕಳಚಿ ಬೇರ್ಪಟ್ಟ ಬೋಗಿಗಳು; ತಪ್ಪಿದ ಭಾರೀ ಅನಾಹುತ
ಸದ್ಯ ಸಿದ್ದರಾಮಯ್ಯ ದೆಹಲಿಯಲ್ಲೇ ಉಳಿದಿದ್ದು, ಇಂದು ಸೋನಿಯಾರನ್ನ ಭೇಟಿ ಮಾಡಿ, ಸಂಜೆಯೊಳಗೆ ವಾಪಸ್ ಬರುವ ಸಾಧ್ಯತೆ ಇದೆ. ನಾಳೆ ನೂತನ ಸಚಿವರ ಪದಗ್ರಹಣ ಹಿನ್ನೆಲೆ ಇಂದೇ ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆ ಇದೆ. ಈಗಾಗಲೇ ಡಿಕೆ ಶಿವಕುಮಾರ್ ಬೆಂಗಳೂರಿಗೆ ಬಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ