‘ಕಾಂಗ್ರೆಸ್​​ನ ಯಾವ ಶಾಸಕರು ಬಿಜೆಪಿಗೆ ಹೋಗುವುದಿಲ್ಲ’: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಮೈತ್ರಿ ಸರ್ಕಾರ ಉರುಳಿಸುವ ಉಪಾಯವನ್ನು ಬಿಜೆಪಿಗೆ ಈ ಶಾಸಕರೇ ನೀಡಿದ್ದಾರೆ. ಕಾಂಗ್ರೆಸ್ ಶಾಸಕನ ಹೇಳಿಕೆ ಬೆನ್ನತ್ತಿದ ಬಿಜೆಪಿ ಕೈ ಶಾಸಕರಿಗೆ ಗಾಳಾ ಹಾಕಲು ಸಜ್ಜಾಗಿದೆ. ಹಾಗಾದರೆ ಬಿಜೆಪಿಗೆ ಅಂತಹ ಸುಳಿವು ನೀಡಿದ ಕಾಂಗ್ರೆಸ್ ಹಿರಿಯ ಶಾಸಕ ಯಾರು? ಈ ಹಿರಿಯ ಕೈ ಶಾಸಕ ಆಪರೇಶನ್ ಕಮಲಕ್ಕೆ ಪ್ರೇರಣೆ ಹೇಗೆ? ಎಂಬ ಇಂಚಿಂಚೂ ಬೆಳವಣಿಗೆ ನ್ಯೂಸ್​​-18 ಮಾತ್ರ ಲಭ್ಯವಾಗಿದೆ.

Ganesh Nachikethu
Updated:December 5, 2018, 10:25 PM IST
‘ಕಾಂಗ್ರೆಸ್​​ನ ಯಾವ ಶಾಸಕರು ಬಿಜೆಪಿಗೆ ಹೋಗುವುದಿಲ್ಲ’: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಸಿದ್ದರಾಮಯ್ಯ
  • Share this:
ಶ್ರೀನಿವಾಸ್​ ಹಳಕಟ್ಟಿ

ಬೆಂಗಳೂರು(05.): ರಾಜ್ಯದಲ್ಲಿ ಕಾಂಗ್ರೆಸ್​​-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು, ಇಂದಿಗೆ ಎಂಟು ತಿಂಗಳು ಕಳೆದಿವೆ. ಒಂದಲ್ಲ ಒಂದು ರೀತಿಯ ಸಮಸ್ಯೆ ಸಿಎಂ ಎಚ್​ಡಿ ಕುಮಾರಸ್ವಾಮಿಯವರ ಸರ್ಕಾರ ಎದುರಿಸುತ್ತಲೇ ಬಂದಿದೆ. ಮೈತ್ರಿ ಸರ್ಕಾರ ರಚೆನಯಾದ ಆರಂಭದಿಂದಲೂ ಇಲ್ಲಿಯವರೆಗೂ ರಾಜ್ಯದಲ್ಲಿ ಆಗಾಗ ಸದ್ದು ಮಾಡುತ್ತಿರುವ ವಿಚಾರ ಆಪರೇಷನ್​​ ಕಮಲ. ಒಂದೆಡೆ ಬಿಜೆಪಿ ನಾಯಕರು ಕಾಂಗ್ರೆಸ್​​ ನಾಯಕರಿಗೆ ಗಾಳ ಹಾಕುತ್ತಿದ್ದರೆ, ಇನ್ನೊಂದೆಡೆ ಸ್ವಪಕ್ಷದ ನಾಯಕರಿಂದಲೇ ಮೈತ್ರಿ ಸರ್ಕಾರಕ್ಕೆ ಕುತ್ತು ಬಂದಿದೆ ಎನ್ನುತ್ತಿವೆ ಮೂಲಗಳು.

ಆಪರೇಷನ್​ ಕಮಲಕ್ಕೆ ಕಾಂಗ್ರೆಸ್​ ನಾಯಕರೇ ಸುಳಿವು ನೀಡಿದ್ದಾರೆ ಎನ್ನಲಾಗಿದೆ. ​ಬೆಳಗಾವಿ ಅಧಿವೇಶನದಲ್ಲೇ ಆಪರೇಶನ್ ಕಮಲ ಮಾಡಬಹುದು ಎಂದು ಕೈ ಪಾಳೆಯದ ಹಿರಿಯ ಶಾಸಕರೊಬ್ಬರು ಹೇಳಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಅಲ್ಲದೇ ಬಿಜೆಪಿಗೆ ಖುದ್ದು ಆಪರೇಷನ್​​ ಕಮಲದ ಸುಳಿವು ನೀಡಿದ್ದೇ, ಈ ಶಾಸಕರ ಮಾತುಗಳಂತೆ. ಹೀಗಾಗಿ ಕೇಂದ್ರ ಸಚಿವ ಡಿವಿ ಸಂದಾನಂದ ಗೌಡ, ಬಿಜೆಪಿ ನಾಯಕ ಕೋಟಾ ಶ್ರೀನಿವಾಸ ಪೂಜಾರಿಯವರ ಆಪರೇಷನ್​​ ಕಮಲದ ಹೇಳಿಕೆಗಳಿಗೆ ಈ ಕಾಂಗ್ರೆಸ್​ ಶಾಸಕರ ಮಾತೇ ಪ್ರೇರಣೆಯಾಗಿದೆ? ಎಂಬ ಸಂಶಯ ಹುಟ್ಟಿಕೊಂಡಿದೆ.

ಮೈತ್ರಿ ಸರ್ಕಾರ ಉರುಳಿಸುವ ಉಪಾಯವನ್ನು ಬಿಜೆಪಿಗೆ ಈ ಶಾಸಕರೇ ನೀಡಿದ್ದಾರೆ. ಕಾಂಗ್ರೆಸ್ ಶಾಸಕನ ಹೇಳಿಕೆ ಬೆನ್ನತ್ತಿದ ಬಿಜೆಪಿ ಕೈ ಶಾಸಕರಿಗೆ ಗಾಳಾ ಹಾಕಲು ಸಜ್ಜಾಗಿದೆ. ಹಾಗಾದರೆ ಬಿಜೆಪಿಗೆ ಅಂತಹ ಸುಳಿವು ನೀಡಿದ ಕಾಂಗ್ರೆಸ್ ಹಿರಿಯ ಶಾಸಕ ಯಾರು? ಈ ಹಿರಿಯ ಕೈ ಶಾಸಕ ಆಪರೇಶನ್ ಕಮಲಕ್ಕೆ ಪ್ರೇರಣೆ ಹೇಗೆ? ಎಂಬ ಇಂಚಿಂಚೂ ಬೆಳವಣಿಗೆ ನ್ಯೂಸ್​​-18 ಮಾತ್ರ ಲಭ್ಯವಾಗಿದೆ. ಹಾಗೆಯೇ ಆದಲ್ಲಿ, ಕಾಂಗ್ರೆಸ್ ಹಿರಿಯ ಶಾಸಕ ಹೀಗೆ ಹೇಳಿದ್ದೇಕೆ? ಕಾಂಗ್ರೆಸ್ ಹಿರಿಯ ಶಾಸಕನ ಹೇಳಿಕೆಯಿಂದ ಕಂಗಾಲಾಗಿದ್ದಾರೆ ದೋಸ್ತಿಗಳು. ದೋಸ್ತಿ ಸರ್ಕಾರವನ್ನೇ ಚಿಂತೆಗೀಡು ಮಾಡಿದ ಆ ಕಾಂಗ್ರೆಸ್ ಶಾಸಕ ಯಾರು? ಅವರು ನೀಡಿದ ಹೇಳಿಕೆ ಯಾವುದು? ಎಂಬುದನ್ನು ಮುಂದೆ ನಿವೇ ಓದಿ.

ಇದನ್ನೂ ಓದಿ: 'ದೇವರಾಣೆ ನಾವು ಆಪರೇಷನ್​ ಕಮಲ ಮಾಡ್ತಿಲ್ಲ, ತಾಕತ್ತಿದ್ದರೆ ನಿಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಿ'; ಶ್ರೀರಾಮುಲು ಸವಾಲು

ಹೌದು, ಅವರೇ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ
ಸತೀಶ ಜಾರಕಿಹೊಳಿ. ಬೆಳಗಾವಿ ಅಧಿವೇಶನದ ವೇಳೆ ಆರೇಳು ಶಾಸಕರು ಬಿಜೆಪಿ ಹೋಗಬಹುದು ಅಂತಾ ಸತೀಶ ಜಾರಕಿಹೊಳಿ ಹೇಳಿದ್ಯಾಕೆ? ಹಾಗಾದರೆ ಆ ಶಾಸಕರು ಯಾರು? ಎಂಬುದು ಭಾರೀ ಕುತೂಹಲ ಹುಟ್ಟುಹಾಕಿದೆ. ಅವರು ಯಾರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ? ಸತೀಶ ಜಾರಕಿಹೊಳಿ ಹೇಳಿಕೆ ಸಚಿವ ರಮೇಶ ಜಾರಕಿಹೊಳಿ ನಡೆಗೆ ಕಾರಣವಾಗಿದೆ? ಎಂಬ ಶಂಕೆಯೂ ವ್ಯಕ್ತವಾಗಿದೆ.ರಮೇಶ ಜಾರಕಿಹೊಳಿ ಜೊತೆಯಲ್ಲಿ ಆರೇಳು ಶಾಸಕರಿದ್ದಾರೆ. ದೋಸ್ತಿ ಸರ್ಕಾರದ ವಿರುದ್ಧವೇ ಬಂಡಾಯವೆದ್ದಿದ್ದ ಕಾಂಗ್ರೆಸ್​​ನ ಆರೇಳು ಶಾಸಕರು ರಮೇಶ ಜಾರಕಿಹೊಳಿ ಅವರ ಹಿಂದಿದ್ದಾರೆ ಎನ್ನಲಾಗಿದೆ. ಅವರೇ ಬಿ ನಾಗೇಂದ್ರ, ಶ್ರೀಮಂತ ಪಾಟೀಲ್, ಮಹಾಂತೇಶ‌ ಕಮಟಳ್ಳಿ, ನಾರಾಯಣರಾವ್, ಭೀಮಾ ನಾಯ್ಕ್, ಪ್ರತಾಪಗೌಡ್ ಪಾಟೀಲ್, ಡಿ ಎಸ್ ಹೂಲಗೇರಿ, ಬಸನಗೌಡ ದದ್ದಲ್, ಡಾ. ಸುಧಾಕರ್, ಎಂಟಿಬಿ ನಾಗರಾಜ್ ಎನ್ನುತ್ತಿವೆ ಉನ್ನತ ಮೂಲಗಳು.

ಇದನ್ನೂ ಓದಿ: 'ಎಲ್ಲದಕ್ಕೂ ಕಾಲ ಕೂಡಿಬಂದಿದೆ, ಬೆಳಗಾವಿ ಅಧಿವೇಶನದ ನಂತರ ಸರ್ಕಾರ ಬಿದ್ದೇ ಬೀಳುತ್ತೆ'; ಸದಾನಂದ ಗೌಡ ವಿಶ್ವಾಸ

ಹೀಗಾಗಿ ರಮೇಶ ಜಾರಕಿಹೊಳಿ ಬಣದಲ್ಲಿದ್ದ ಶಾಸಕರ ಸಂಖ್ಯೆಯನ್ನು ಪರಿಗಣಿಸಿ ಸತೀಶ ಜಾರಕಿಹೊಳಿ ಈ ಹೇಳಿಕೆ ನೀಡಿದ್ಧಾರೆ. ಸಚಿವ ರಮೇಶ ಜಾರಕಿಹೊಳಿಯ ಪ್ರತಿ ಹೆಜ್ಜೆಯ ಇಂಚಿಂಚೂ ಮಾಹಿತಿ ಸತೀಶ ಜಾರಕಿಹೊಳಿಯವರ ಬಳಿಯಿದೆ. ಹಾಗಾಗಿಯೇ ಸತೀಶ ಜಾರಕಿಹೊಳಿ ಆರೇಳು ಶಾಸಕರು ಬಿಜೆಪಿಗೆ ಹೋಗಬಹುದು ಅಂತಾ ಹೇಳಿದ್ದಾರೆ. ಕಾಂಗ್ರೆಸ್​ ಹಿರಿಯ ಶಾಸಕನ ಈ ಹೇಳಿಕೆಯೇ ಕೇಂದ್ರ ಸಚಿವ ಡಿವಿ ಸದಾನಂದಗೌಡ ಹಾಗೂ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆಗೆ ಪ್ರೇರಣೆಯಾಗಿದೆ ಎಂಬಿತ್ಯಾದಿ ಚರ್ಚೆಗಳು ನಡೆಯುತ್ತಿವೆ.

ಸಿದ್ದರಾಮಯ್ಯ ಸ್ಪಷ್ಟನೆ: ಇನ್ನು ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಟ್ವೀಟ್​​ನಲ್ಲಿ ಪ್ರತಿಕ್ರಿಯಿಸಿದ್ಧಾರೆ. ಮಾಜಿ‌ ಸಚಿವ ಸತೀಶ್ ಜಾರಕಿಹೋಳಿಯವರು ಸೇರಿದಂತೆ ಯಾವೊಬ್ಬ ಕಾಂಗ್ರೆಸ್ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ. ನಾನು ಅವರೊಂದಿಗೆ ಸಂಪರ್ಕದಲ್ಲಿದ್ದೇನೆ, ಅವರಿಗೆ ನಮ್ಮಲ್ಲಿ ಪಕ್ಷ ತೊರೆಯುವಂತಹ ಯಾವ ಸಮಸ್ಯೆಗಳು ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ಧಾರೆ.------------------
ರಾಜ್ಯ ರಾಜಕೀಯದ ಪ್ರಸ್ತುತ ಪರಿಸ್ಥಿತಿಯ ಕುರಿತು ಹೇಳಿಕೆ ನೀಡಿದ ಡಿಕೆಶಿವಕುಮಾರ್​ ಹೇಳಿಕೆ
First published:December 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading