ಕೆಪಿಸಿಸಿ ಅಧ್ಯಕ್ಷ ಮತ್ತು ವಿಪಕ್ಷ ನಾಯಕ ಸ್ಥಾನಕ್ಕಾಗಿ ಹಿರಿಯ ಕಾಂಗ್ರೆಸ್ಸಿಗರ ಸರ್ಕಸ್​​: ಇಂದು ಸೋನಿಯಾ ಭೇಟಿ ಸಾಧ್ಯತೆ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆಶಿಗೆ ನೀಡಿದರೆ, ಲಿಂಗಾಯತ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಭೀತಿಯೂ ಕಾಂಗ್ರೆಸ್​​ಗೆ ಎದುರಾಗಿದೆ. ಹಾಗೆಯೇ ಒಂದು ವೇಳೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಎಂಬಿ ಪಾಟೀಲ್​​ರನ್ನು ಆಯ್ಕೆ ಮಾಡಿದರೆ, ಒಕ್ಕಲಿಗ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಭಯವೂ ಕಾಂಗ್ರೆಸ್ಸಿಗಿದೆ.

news18-kannada
Updated:December 16, 2019, 7:18 AM IST
ಕೆಪಿಸಿಸಿ ಅಧ್ಯಕ್ಷ ಮತ್ತು ವಿಪಕ್ಷ ನಾಯಕ ಸ್ಥಾನಕ್ಕಾಗಿ ಹಿರಿಯ ಕಾಂಗ್ರೆಸ್ಸಿಗರ ಸರ್ಕಸ್​​: ಇಂದು ಸೋನಿಯಾ ಭೇಟಿ ಸಾಧ್ಯತೆ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆಶಿಗೆ ನೀಡಿದರೆ, ಲಿಂಗಾಯತ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಭೀತಿಯೂ ಕಾಂಗ್ರೆಸ್​​ಗೆ ಎದುರಾಗಿದೆ. ಹಾಗೆಯೇ ಒಂದು ವೇಳೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಎಂಬಿ ಪಾಟೀಲ್​​ರನ್ನು ಆಯ್ಕೆ ಮಾಡಿದರೆ, ಒಕ್ಕಲಿಗ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಭಯವೂ ಕಾಂಗ್ರೆಸ್ಸಿಗಿದೆ.
  • Share this:

ಬೆಂಗಳೂರು(ಡಿ.16): ಕರ್ನಾಟಕ ಉಪಚುನಾವಣೆಯಲ್ಲಿ ಕಾಂಗ್ರೆಸ್​​ ಹೀನಾಯ ಸೋಲಿನ ಹೊಣೆ ಹೊತ್ತು ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​​ ಶಾಸಕಾಂಗ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಂತೆಯೇ ದಿನೇಶ್​ ಗುಂಡೂರಾವ್​​ ಕೂಡ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇಬ್ಬರ ರಾಜೀನಾಮೆ ಅಂಗೀಕಾರ ಆಗುವ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ವಿಪಕ್ಷ ಸ್ಥಾನಕ್ಕೆ ಹೈಕಮಾಂಡ್​​ ಬಳಿ ಕಾಂಗ್ರೆಸ್​​ ನಾಯಕರು ಲಾಬಿಗೆ ಮುಂದಾಗಿದ್ದಾರೆ. ಮಾಜಿ ಸಚಿವ ಡಿ.ಕೆ ಶಿವಕುಮಾರ್​​, ಎಚ್​​. ಕೆ ಪಾಟೀಲ್​​, ಕೆ. ಎಚ್ ಮುನಿಯಪ್ಪ​​ ಕೆಪಿಸಿ ಅಧ್ಯಕ್ಷ ಸ್ಥಾನ ಮತ್ತು ವಿಪಕ್ಷ ಸ್ಥಾನದ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ದೆಹಲಿಯಲ್ಲೇ ಠಿಕಾಣಿ ಹೂಡಿದ್ಧಾರೆ. ಕೆ. ಎಚ್​​ ಮುನಿಯಪ್ಪ ಬೆಂಬಲಕ್ಕೆ ಬಿ.ಕೆ ಹರಿಪ್ರಸಾದ್​​ ನಿಂತಿದ್ದು, ಎಚ್​.ಕೆ ಪಾಟೀಲ್​​ ಬೆನ್ನಿಗೆ ಹಿರಿಯ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ್​​ ಖರ್ಗೆ ನಿಂತಿದ್ಧಾರೆ. ಈಗಾಗಲೇ ರಾಹುಲ್​​ ಭೇಟಿಗೆ ಯತ್ನಿಸಿ ವಿಫಲವಾದ ಬಳಿಕ ಈ ನಾಯಕರು ಇಂದು ಸೋನಿಯಾ ಗಾಂಧಿ ಭೇಟಿಯಾಗಬೇಕೆಂದು ದೆಹಲಿಯಲ್ಲೇ ಉಳಿದುಕೊಂಡಿದ್ಧಾರೆ. ಕಾಂಗ್ರೆಸ್​ ಹೈಕಮಾಂಡ್​ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಲಿದ್ದಾರೆ. 


ಹೌದು, ಸಿದ್ದರಾಮಯ್ಯ ಮತ್ತು ದಿನೇಶ್​​ ಗುಂಡೂರಾವ್​​ ರಾಜೀನಾಮೆಯಿಂದ ತೆರವಾದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರಾದರೂ ಪ್ರಬಲ ನಾಯಕರನ್ನು ತಂದು ಕೂರಿಸಬೇಕಾದ ಜವಾಬ್ದಾರಿ ಸೋನಿಯಾ ಗಾಂಧಿ ಮೇಲಿದೆ. ಈ ಸಂಬಂಧ ಕಾಂಗ್ರೆಸ್​ ಹೈಕಮಾಂಡ್​​ ಸೋನಿಯಾ ಗಾಂಧಿ ರಾಜ್ಯ ನಾಯಕರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ಗಾದಿ ಮತ್ತು ಶಾಸಕಾಂಗ ಪಕ್ಷದ ಸ್ಥಾನಕ್ಕೆ ಯಾರನ್ನು ಕೂರಿಸಬಹುದು ಎಂದು ಹೈಕಮಾಂಡ್​​ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮತ್ತು ಕೆ.ಸಿ ವೇಣುಗೋಪಲ್​​ಗೆ ಖುದ್ದು ಫೋನ್​ ಮಾಡಿ ಕೇಳಿದ್ದಾರೆ​.

ಮಾಜಿ ಸಚಿವ ಡಿ.ಕೆ ಶಿವಕುಮಾರ್​​​, ಎಂಬಿ ಪಾಟೀಲ್​​​​, ಕೃಷ್ಣ ಬೈರೇಗೌಡ, ಕೆ.ಎಚ್​​ ಮುನಿಯಪ್ಪ ಸೇರಿದಂತೆ ಎಚ್​​.ಕೆ ಪಾಟೀಲ್​​​​ ಕೆಪಿಸಿಸಿ ಅಧ್ಯಕ್ಷ ಮತ್ತು ಕಾಂಗ್ರೆಸ್​ ಶಾಸಕಾಂಗ ನಾಯಕನ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಪೈಕಿ ಕೆಪಿಸಿಸಿ ಅಧ್ಯಕ್ಷ ಹುದ್ದೆಗಾಗಿ ಡಿ.ಕೆ ಶಿವಕುಮಾರ್​​ ಮತ್ತು ಎಂಬಿ ಪಾಟೀಲ್​​ ನಡುವೇ ನೇರ ಪೈಪೋಟಿ ಇದೆ ಎಂಬ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಮತ್ತು ವಿಪಕ್ಷ ನಾಯಕ ಸ್ಥಾನದ ಮೇಲೆ ಕಾಂಗ್ರೆಸ್​ ನಾಯಕರ ಕಣ್ಣು; ಹೈಕಮಾಂಡ್​​ ಬಳಿ ಭಾರೀ ಲಾಬಿ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆಶಿಗೆ ನೀಡಿದರೆ, ಲಿಂಗಾಯತ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಭೀತಿಯೂ ಕಾಂಗ್ರೆಸ್​​ಗೆ ಎದುರಾಗಿದೆ. ಹಾಗೆಯೇ ಒಂದು ವೇಳೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಎಂಬಿ ಪಾಟೀಲ್​​ರನ್ನು ಆಯ್ಕೆ ಮಾಡಿದರೆ, ಒಕ್ಕಲಿಗ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಭಯವೂ ಕಾಂಗ್ರೆಸ್ಸಿಗಿದೆ.

ಇನ್ನು ಕಾಂಗ್ರೆಸ್​ನ ನಿಷ್ಠಾವಂತ ಕಾರ್ಯಕರ್ತರಾದ ಕೃಷ್ಣ ಬೈರೇಗೌಡರು ಕೆಪಿಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ದಲಿತ ನಾಯಕರಾಗಿರುವ ಮಾಜಿ ಸಂಸದ ಕೆ.ಎಚ್​ ಮುನಿಯಪ್ಪ​ ಕೂಡ ಕೆಪಿಸಿಸಿ ಜವಾಬ್ದಾರಿ ಹೊರುವ ಕನಸ್ಸು ಹೊತ್ತಿದ್ದಾರೆ. ಈ ನಡುವೆ ಸಂಸದ ಪ್ರಕಾಶ ಹುಕ್ಕೇರಿಯೂ ತಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಇಷ್ಟರ ಮಧ್ಯೆ ಕಾಂಗ್ರೆಸ್​ನೊಳಗೆ ಈ ಬಾರಿ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದಲಿತ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಬದಲಿಗೆ ಕುರುಬರೊಬ್ಬರಿಗೆ ನೀಡಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.
First published: December 16, 2019, 7:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading