ಪತ್ರಕರ್ತರ ಕ್ರಿಕೆಟ್ ಟೂರ್ನಿಯಲ್ಲಿ ಡಿಕೆಶಿ ಭರ್ಜರಿ ಬ್ಯಾಟಿಂಗ್; ಬೌಲಿಂಗ್​ನಲ್ಲೂ ಮಿಂಚಿದ ಮಾಜಿ ಸಚಿವರು

ಬಳಿಕ ಮಾತನಾಡಿದ ಡಿಕೆಶಿ, ನಾನು ವಾಲಿಬಾಲ್, ಕಬ್ಬಡ್ಡಿ ಆಟಗಾರನಾಗಿದ್ದೆ. 20 ವರ್ಷಗಳ ಹಿಂದೆ ಪಂದ್ಯಗಳಲ್ಲಿ ಭಾಗವಹಿಸಿದ್ದೆ. ಆದರೆ, ಈಗ ಸಮಯದ ಅಭಾವದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.

HR Ramesh | news18-kannada
Updated:December 21, 2019, 4:30 PM IST
ಪತ್ರಕರ್ತರ ಕ್ರಿಕೆಟ್ ಟೂರ್ನಿಯಲ್ಲಿ ಡಿಕೆಶಿ ಭರ್ಜರಿ ಬ್ಯಾಟಿಂಗ್; ಬೌಲಿಂಗ್​ನಲ್ಲೂ ಮಿಂಚಿದ ಮಾಜಿ ಸಚಿವರು
ಬ್ಯಾಟಿಂಗ್ ಮಾಡುತ್ತಿರುವ ಡಿಕೆ ಶಿವಕುಮಾರ್.
  • Share this:
ಬೆಂಗಳೂರು: ಪ್ರೆಸ್​ ಕ್ಲಬ್ ವತಿಯಿಂದ ನಗರದ ಹೊಸಕೆರೆಹಳ್ಳಿ ಸಮೀಪದ ಪಿಇಎಸ್​ ಕಾಲೇಜು ಮೈದಾನದಲ್ಲಿ ಪತ್ರಕರ್ತರಿಗೆ ಶನಿವಾರ ಆಯೋಜಿಸಲಾಗಿದ್ದ ಕ್ರಿಕೆಟ್ ಟೂರ್ನಿಮೆಂಟ್​ನಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಭರ್ಜರಿ ಬ್ಯಾಟಿಂಗ್ ಮಾಡಿದರು.

ಪಿಇಎಸ್​ ಕಾಲೇಜು ಮೈದಾನದಲ್ಲಿ ಪತ್ರಕರ್ತರಿಗಾಗಿ ಇಂಟರ್ ಮೀಡಿಯಾ ಟಿ 10 ಕ್ರಿಕೆಟ್ ಟೂರ್ನಿ ಉದ್ಘಾಟಿಸಿದ ಡಿಕೆಶಿ ಬ್ಯಾಟ್ ಹಿಡಿದು ಭರ್ಜರಿಯಾಗಿ ಬ್ಯಾಟ್ ಬೀಸಿದರು. ಕೆಲ ಸಮಯ ಬ್ಯಾಟ್ ಬೀಸಿದ ಡಿಕೆಶಿ ಒಂದು ಬೌಂಡರಿಯನ್ನು ಸಹ ಬಾರಿಸಿದರು. ಜೊತೆಗೆ ಬೌಲಿಂಗ್​ ಸಹ ಮಾಡಿ ಕ್ರೀಡಾಳುಗಳನ್ನು ಹುರಿದುಂಬಿಸಿದರು.
ಬಳಿಕ ಮಾತನಾಡಿದ ಡಿಕೆಶಿ, ನಾನು ವಾಲಿಬಾಲ್, ಕಬ್ಬಡ್ಡಿ ಆಟಗಾರನಾಗಿದ್ದೆ. 20 ವರ್ಷಗಳ ಹಿಂದೆ ಪಂದ್ಯಗಳಲ್ಲಿ ಭಾಗವಹಿಸಿದ್ದೆ. ಆದರೆ, ಈಗ ಸಮಯದ ಅಭಾವದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.ಇದನ್ನು ಓದಿ: ಅಸಾಧಾರಣ ನೆನಪಿನ ಶಕ್ತಿಯಿಂದ ಇಂಡಿಯಾ ಬುಕ್​ ಆಫ್​ ರೆಕಾರ್ಡ್​ ದಾಖಲೆ ಸೇರಿದ 3ರ ಪೋರಿ
Published by: HR Ramesh
First published: December 21, 2019, 4:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading