B K Hariprasad: 'ಚರಂಡಿಯಲ್ಲಿ ಇರಬೇಕಾದವನನ್ನ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ'

ನಾನು ಪ್ರೊಫೆಸರ್ ಅಲ್ಲ ಎಂದು ಅವನೇ ಹೇಳಿಕೆ ನೀಡಿದ್ದಾನೆ. ಶಿಕ್ಷಣ ಸಚಿವರು ಸಿಇಟಿ ಪ್ರೊಫೆಸರ್ ಅಂತಾ ಹೇಳ್ತಿದಾರೆ. ಏನೂ ಅರ್ಹತೆ ಇಲ್ಲದವರನ್ನ ಕರೆ ತಂದು ನಾಗಪುರದ ಹಿಡನ್​ ಕಾರ್ಯಸೂಚಿಗಳನ್ನ ಜಾರಿಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ.

 ಬಿ.ಕೆ ಹರಿಪ್ರಸಾದ್

ಬಿ.ಕೆ ಹರಿಪ್ರಸಾದ್

  • Share this:
ಮಂಗಳೂರು (ಜೂ 6): ಪಠ್ಯ ಪುಸ್ತಕ ಪರಿಷ್ಕರಣೆ (Text Book Row) ಮಾಡಲು ಈ ರಾಜ್ಯದಲ್ಲಿ ಸಾಹಿತಿಗಳಿದ್ದಾರೆ. ಪ್ರಾಧ್ಯಾಪಕರು, ಶಿಕ್ಷಣ ತಜ್ಞರಿದ್ದಾರೆ (Education Expert). ಅವರೆಲ್ಲರನ್ನು ಬಿಟ್ಟು ಶಿಕ್ಷಣ ಸಚಿವರು ಅವನು ಯಾವಾನೋ ಚರಂಡಿಯಲ್ಲಿ  ಇರಬೇಕಾದವನನ್ನ ಸಮಿತಿಯ (Committee) ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವನು ಪ್ರೊಫೆಸರ್​ ಸರ್ ಅಂತಾ ಹೇಳಿ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ (B.K Hariprasad) ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಾನು ಪ್ರೋಫೆಸರ್ ಅಲ್ಲ ಎಂದು ಅವ್ನೇ ಹೇಳಿದ್ದಾನೆ’

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತ್ನಾಡಿದ ಅವ್ರು ನಾನು ಪ್ರೊಫೆಸರ್ ಅಲ್ಲ ಎಂದು ಅವನೇ ಹೇಳಿಕೆ ನೀಡಿದ್ದಾನೆ. ಶಿಕ್ಷಣ ಸಚಿವರು ಸಿಇಟಿ ಪ್ರೊಫೆಸರ್ ಅಂತಾ ಹೇಳ್ತಿದಾರೆ. ಏನೂ ಅರ್ಹತೆ ಇಲ್ಲದವರನ್ನ ಕರೆ ತಂದು ನಾಗಪುರದ ಹಿಡನ್​ ಕಾರ್ಯಸೂಚಿಗಳನ್ನ ಜಾರಿಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ. ನಾವು ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಹನೀಯರ ವಿಚಾರಧಾರೆಯನ್ನ ಕೈ ಬಿಡಲಾಗಿದೆ

ಒಂದೇ ಮತ, ಒಂದೇ ಜಾತಿ, ಒಂದೇ ದೇವರು ಎಂದು ದೇಶದ ಏಕತೆಯ ಸಂದೇಶ ಸಾರಿದ ಮಹನೀಯರ ವಿಚಾರಧಾರೆಗಳನ್ನ ಪಠ್ಯದಿಂದ ಕೈ ಬಿಡಲಾಗಿದೆ. ರಾಣಿ ಅಬ್ಬಕ್ಕ, ನಾರಾಯಣ ಗುರುಗಳ ಪಾಠ ಕೈ ಬಿಟ್ಟಿರುವುದರ ಬಗ್ಗೆ ಜನರಿಗೆ ಮನದಟ್ಟಾಗಿದೆ, ಸರ್ಕಾರಕ್ಕೆ ಬಿಸಿ‌ಮುಟ್ಟಿಸಲು ಸನ್ನದ್ಧರಾಗಿದ್ದಾರೆ. ಆರ್ ಎಸ್ ಎಸ್ ಕಾರ್ಯಸೂಚಿಯನ್ನ ಹಿಂಬಾಗಿಲಿನಿಂದ ಅನುಷ್ಠಾನಕ್ಕೆ ತರುವ ಪ್ರಯತ್ನಗಳ ಬಗ್ಗೆ ಮನದಟ್ಟಾಗಿದೆ. ಸ್ವಾರ್ಥಕ್ಕಾಗಿ ಯಾರನ್ನ ಬೇಕಾದರೂ ಬಲಿ ಕೊಡುತ್ತಾರೆ ಎಂಬುದು ಅರ್ಥವಾಗಿದೆ ಎಂದರು.

ಇದನ್ನೂ ಓದಿ: Nupur Sharma: ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಕೇಸ್‌ನಲ್ಲಿ ನೂಪುರ್‌ಗೆ ಸಮನ್ಸ್ , ಅತ್ತ ಬಿಜೆಪಿ ಮಾಜಿ ವಕ್ತಾರೆಯಿಂದಲೂ ದೂರು

ರೋಹಿತ್ ಚಕ್ರತೀರ್ಥನೋ, ವಕ್ರತೀರ್ಥನೋ

"ರೋಹಿತ್ ಚಕ್ರತೀರ್ಥನೋ, ವಕ್ರತೀರ್ಥನೋ ಎಂಬುದು ಗೊತ್ತಿಲ್ಲ. ನಾಗಪುರ ವಿಶ್ವವಿದ್ಯಾಲಯದಿಂದ ಬಂದ ಇವರುಗಳಿಗೆ ಜವಾಬ್ದಾರಿ ಇಲ್ಲ. ಪಠ್ಯ ಪುಸ್ತಕದಲ್ಲಿ ನಾಳೆ ಆರ್ ಎಸ್ ಎಸ್ ಸೇರಿಸುವ ಅಂಶಗಳಿಗೆ ಪುರಾವೆ ಇರುವುದಿಲ್ಲ. ಆರ್ ಎಸ್ ಎಸ್ ಗೆ ಪುರಾವೆ ಇಲ್ಲ, ಅದು ನೊಂದಾಯಿತ ಸಂಸ್ಥೆಯೇ ಅಲ್ಲ, ಅದಕ್ಕೆ ಅಸ್ಥಿತ್ವವೇ ಇಲ್ಲ. ಖಾಕಿ ಚೆಡ್ಡಿ, ಕರಿ ಟೋಪಿಯನ್ನ ಸುಡುವ ಮೂಲಕ ಅವರ ಅಸ್ತಿತ್ವ ನಾಶಪಡಿಸುವುದನ್ನೇ ಸಿದ್ದರಾಮಯ್ಯನವರು " ಚಡ್ಡಿ ಸುಡುವ ಅಭಿಯಾನ" ಎಂದು ಹೇಳಿದ್ದಾರೆ.

ಈ ದೇಶವನ್ನ ಕಾಪಾಡುತ್ತಿದ್ದಾರೆ

ಖಾಕಿ ಚೆಡ್ಡಿ, ಕರಿ ಟೋಪಿ, ದೊಣ್ಣೆ ಹಿಡಿದುಕೊಂಡವರು ಈ ದೇಶವನ್ನ ಕಾಪಾಡುತ್ತಿದ್ದಾರೆ ಎನ್ನುವ ಮೂಲಕ ಈ ದೇಶದ ಮಿಲಿಟರಿ, ಅರೆಸೇನೆ, ಪೊಲೀಸ್ ವ್ಯವಸ್ಥೆಯನ್ನ ಬಿಜೆಪಿ ಅವಮಾನಿಸುತ್ತಿದೆ. 100ವರ್ಷಗಳ ಈಚೆಗೆ ಬಂದ ಇವರು ನಾವು ಮಾತ್ರ ಹಿಂದೂ ಧರ್ಮವನ್ನ ಕಾಪಾಡುತ್ತೇವೆ ಎಂದು ಜನರ ಕಣ್ಣಿಗೆ ಮಣ್ಣರೆಚುವ ತಂತ್ರ ಮಾಡುತ್ತಿದ್ದಾರೆ. ವೇದ ಉಪನಿಷತ್ತು, ಭಗವದ್ಗೀತೆ ಸೇರಿದಂತೆ ಎಲ್ಲೂ  ಖಾಕಿ ಚೆಡ್ಡಿ, ಕರಿ ಟೋಪಿಯ ಉಲ್ಲೇಖವಿಲ್ಲ. ಪ್ರಪಂಚದಲ್ಲಿ ಇದು ಕಾಣ ಸಿಗುವುದು ಜರ್ಮನಿಯ ಹಿಟ್ಲರ್ ಸೇನೆಯಲ್ಲಿ ಮಾತ್ರ. ಸುಳ್ಳು ಹೇಳುವುದೇ ಅವರ ಕಾಯಕ, ದೇಶವನ್ನ ಧರ್ಮಾಂಧತೆಯ ಅಫೀಮಿನಿಂದ ರಕ್ಷಿಸಬೇಕಿದೆ.

ಇದನ್ನೂ ಓದಿ: Activist Arrest: ಸಿದ್ದು ಮನೆಗೆ ಚಡ್ಡಿ ತಗೊಂಡು ಹೋದವರು ಅರ್ಧ ದಾರಿಯಲ್ಲೇ ಅಂದರ್​​

ಈಗ ಖಾಕಿ ಚೆಡ್ಡಿ ಬದಲು ಪ್ಯಾಂಟ್ ಬಂದಿದೆ

" ಈಗ ಖಾಕಿ ಚೆಡ್ಡಿ ಬದಲು ಪ್ಯಾಂಟ್ ಬಂದಿದೆ. ಅವರ ಅಸ್ಮಿತೆಯನ್ನೇ ಅವ್ರು ಕಳೆದುಕೊಂಡಿರುವುದರ ಸಂಕೇತ. ಸರಳತೆ, ತ್ಯಾಗ ಎಂದು ಹೇಳುತ್ತಿದ್ದವರು ಈಗ ಯಾಕೆ ಪ್ಯಾಂಟ್ ಗೆ ಬದಲಾಯಿಸಿದ್ದಾರೆ.? ಅದಕ್ಕೆ ಕಾರಣ 40% ಕಮಿಷನ್. ಕಮಿಷನ್ ಹಣದಿಂದಲೇ ಪ್ಯಾಂಟ್ ಹಾಗೂ ಹತ್ತು ಲಕ್ಷದ ಕೋಟ್ ಬಂದಿದೆ ಎಂದು ವ್ಯಂಗ್ಯವಾಡಿದರು. ನರೇಂದ್ರ ಮೋದಿ ಬಂದ ಮೇಲೆ ಅವರ ವಿರುದ್ಧ ಮಾತಾಡುವವರು ದೇಶದ್ರೋಹಿಗಳೆಂದು ಪಟ್ಟ ಕಟ್ಟಲಾಗ್ತಿದೆ. ಎಂಟು ವರ್ಷಗಳಲ್ಲಿ ದೇಶಕ್ಕೆ ಒಂದೇ ಒಂದು ಕೆಲಸ ಮಾಡಲಿಲ್ಲ ಎಂದ್ರು.
Published by:Pavana HS
First published: