Kolar: ಚಲನ್ ಬರೆಯಲಾಗದೆ ವೃದ್ಧ, ವಿಶೇಷ ಚೇತನರ ಪರದಾಟ, ಹಣ ಪಡೆದು ಚಲನ್ ಫಿಲ್ ಮಾಡ್ತಾರೆ

ಕೋಲಾರ ಜಿಲ್ಲೆಯ ಪ್ರಧಾನ ಅಂಚೆ ಕಚೇರಿಯಲ್ಲಿ ಬಡವರ ಬಳಿ ಚಲನ್ ಬರೆದುಕೊಡಲು 20 ರಿಂ 50 ರೂಪಾಯಿ ಹಣ ವಸೂಲಿ ಮಾಡುತ್ತಿರುವುದು ಬಟಾ ಬಯಲಾಗಿದೆ, ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯವರು ಈ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿ ದೂರು ನೀಡಿದ್ದು, ಪ್ರಧಾನ ಅಂಚೆ ಕಚೇರಿಯ ಸಿಬ್ಬಂದಿಗಳೇ ಈ ವಸೂಲಿಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ

ಕೋಲಾರ

ಕೋಲಾರ

  • Share this:
ಅಂಚೆ ಕಚೇರಿಯಲ್ಲಿ (Post Office) ಪೆಂಕ್ಷನ್ ಪಡೆಯೋರು ಚಲನ್ ಬರೆಯೋಕೆ ಬಂದರೆ ಏನು ಸಮಸ್ಯೆಯಿಲ್ಲ, ಆದರೆ ಚಲನ್ ಬರೆಯೋಕೆ ಬರದೆ ಇದ್ದಲ್ಲಿ, ಚಲನ್ ಬರೆದು ಕೊಡೊರಿಗೆ 20 ರೂಪಾಯಿ ಕೊಡಲೇಬೇಕಾಗಿದೆ,  ಕೋಲಾರ (Kolar) ನಗರ ದಲ್ಲಿನ  ಹೆಡ್ ಪೋಸ್ಟ್ ಆಪೀಸ್‍ನಲ್ಲಿ ಬೇನಾಮಿ ವ್ಯಕ್ತಿಗಳು ಚಲನ್ ಬರೆದುಕೊಟ್ಟು ಹಣ ವಸೂಲಿ ಮಾಡೊದನ್ನೆ ಕಾಯಕ ಮಾಡಿಕೊಂಡಿದ್ದಾರೆ.  ಕೇಂದ್ರ ಹಾಗು ರಾಜ್ಯ ಸರ್ಕಾರದ  ಸಾಮಾಜಿಕ ಭದ್ರತೆ ಯೋಜನೆಯಡಿ  ನೀಡುವ ಪೆಂಕ್ಷನ್ (Pension) ಪಡೆಯಲು ನೂರಾರು ಜನ ಬಡ ವೃದ್ದರು ಕಚೇರಿಗೆ ಬರುತ್ತಾರೆ, ಅದರಲ್ಲಿ ಶೇಕಡಾ 90 ರಷ್ಟು ವೃದ್ದರಿಗೆ ತಮ್ಮ ಖಾತೆಯಿಂದ (Account) ಹಣ ಪಡೆದುಕೊಳ್ಳಲು ಚಲನ್ ಬರೆಯೋದು ಹೇಗಂತಲೇ ಗೊತ್ತಿಲ್ಲ, ಕೆಲವರಿಗೆ ತಿಳಿದಿದ್ದರು ದೃಷ್ಟಿದೋಷ ಅವರನ್ನ ಕಾಡಿತ್ತಿದೆ.

ಇದನ್ನೆ ಬಂಡವಾಳ ಮಾಡಿಕೊಂಡಿರೊ, ಏಜೆಂಟ್  ರಾಮಶೇಶು ಹಾಗು ಅಪರಿಚಿತ ವ್ಯಕ್ತಿ ಪುರುಶೋತ್ತಮ್ ಎನ್ನುವ ಇಬ್ಬರು ವ್ಯಕ್ತಿಗಳು, ಪ್ರಧಾನ ಕಚೇರಿಯೊಂದಿಗೆ  ಇವರಿಗು ಯಾವುದೇ ಸಂಬಂದ ಇಲ್ಲದಿದ್ದರು, ಹೆಡ್ ಪೋಸ್ಟ್ ಮಾಸ್ಟರ್ (Head Post Master) ಕೊಠಡಿ ಎದುರೇ ಚೇರ್ ಮೇಲೆ ಕುಳಿತುಕೊಂಡು, ಚಲನ್ ಬರೆದುಕೊಟ್ಟು ಪ್ರತಿಯೊಬ್ಬರ ಬಳಿ 20 ರೂಪಾಯಿ ಹಣ ತೆಗೆದುಕೊಳ್ತಿದ್ದಾರೆ, ಇದಕ್ಕೆ ಇಲ್ಲಿರೋ ಹಿರಿಯ ಅಧಿಕಾರಿಗಳಾದ ರಘುಪ್ರಸಾದ್, ನರಸಿಂಹಪ್ಪ, ಹಾಗು ಅನಿಲ್ ಕುಮಾರ್ ಬೆಂಬಲ (Support) ನೀಡಿದ್ದಾರೆಂದು ಹೇಳಲಾಗುತ್ತಿದೆ.

ಹಣ ವಸೂಲಿ ಬಯಲಿಗೆಳೆದು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ ಕರವೇ ಸಂಘಟನೆ.

ಬರೆಯಲು ಬಾರದವರಿಗೆ ಚಲನ್ ಬರೆದುಕೊಡುವ ಇವರುಗಳು,   ಪೋಸ್ಟ್ ಆಪೀಸ್ ಸಿಬ್ಬಂದಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹಣ ಪಡೆದುಕೊಳ್ಳುತ್ತಿದ್ದು, ಇದಕ್ಕೆ ಕಚೇರಿಯಲ್ಲಿನ ಮೇಲಧಿಕಾರಿಗಳ ಕುಮ್ಮಕ್ಕು ಇದೆಯೆಂದು ಹೇಳಲಾಗ್ತಿದೆ, ಕರವೇ ಸಮರ ಸೇನೆ ಸಂಘಟನೆ ಮುಖಂಡರು ಇದನ್ನ ಪ್ರಶ್ನಿಸಲು ಹೋದಾಗ ರಾಮಶೇಷು ಎನ್ನುವರು ಕಚೇರಿ ಒಳಗಿಂದ ಓಡಿಹೋಗಲು ಯತ್ನಿಸಿದರು.

ಹಣ ವಸೂಲಿಗೊಂದು ದಾರಿ ಇದು

ಮತ್ತೊಬ್ಬರು ಪುರುಷೋತ್ತಮ್ ಎನ್ನುವರು, ನಾವು ಹಣವೇ ಪಡೆದುಕೊಂಡಿಲ್ಲ, ಎಂದು ಸಂಘಟನೆಯವರ ಬಳಿ ವಾಗ್ವಾದ ನಡೆಸಿದ್ರು, ಆದರೆ ಹಣ ಪಡೆದುಕೊಳ್ಳೊದನ್ನ ಮೊಬೈಲ್‍ನಲ್ಲೆ ಚಿತ್ರೀಕರಣ ಮಾಡಿರೊ ಸಂಘಟನೆಯ ಮುಖಂಡರು, ಬಡ ವೃದ್ದರ ಬಳಿ ಚಲನ್ ಬರೆದುಕೊಡಲು 20 ರಿಂದ 50 ರೂಪಾಯಿ ವರೆಗು ಪಡೆದುಕೊಳ್ತಿರೊದು ದೃಶ್ಯಗಳಲ್ಲಿ ಸೆರೆಯಾಗಿದೆ, ಹಣ ಕೊಡೊದಾಗಿ ಪೆಂಕ್ಷನ್ ಪಡೆಯೋ ಸಾರ್ವಜನಿಕರೇ ಹೇಳಿಕೆ ನೀಡಿದ್ದು, ಬರೆಯಲು ಬರದ ಕಾರಣ ಹಣ ನೀಡುತ್ತಿದ್ದೇವೆ, ಇದಲ್ಲದೆ ಬೇರೆ ದಾರಿಯಿಲ್ಲ ಎಂದು ತಿಳಿಸಿದ್ದಾರೆ.

ಚಲನ್, ಫಾರ್ಮ್​ ತುಂಬುವ ಸಮಸ್ಯೆ ತುಂಬಾ ಕಾಮನ್

ಈ ಬಗ್ಗೆ ಸಂಘಟನೆ ಮುಖಂಡರು ಕಿಡಿಕಾರಿದ್ದು, ಸರ್ಕಾರ ನೀಡುವ ಸಾವಿರ ರೂಪಾಯಿ ಪೆಂಕ್ಷನ್ ಹಣದಲ್ಲಿ ಮದ್ಯವರ್ತಿಗಳಿಗು ಹಣ ಖರ್ಚು ಮಾಡುವುದನ್ನ ತಪ್ಪಿಸಬೇಕಿದೆ, ಈ ಬಗ್ಗೆ ಬೆಂಗಳೂರಿನ  ಚೀಪ್  ಪೋಸ್ಟ್ ಮಾಸ್ಟರ್ ಜನರಲ್, ಕರ್ನಾಟಕ ಸರ್ಕಲ್ ಇವರಿಗೆ ಸಂಘಟನೆ ಮುಖಂಡರು, ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾಗಿ ರಾಜ್ಯಾಧ್ಯಕ್ಷ್ಯ ಸೋಮಶೇಖರ್ ತಿಳಿಸಿದ್ದಾರೆ.

ಅಂಚೆ ಕಚೇರಿಯಲ್ಲಿ ಪೆನ್ಶನ್  ಪಡೆಯಲು ವೃದ್ದೆ ಹರಸಾಹಸ

ಅಂಚೆ ಕಚೇರಿಯಲ್ಲಿ ಪಿಂಚಣಿ ಹಣ ಪಡೆಯಲು ಕಡ್ಡಾಯವಾಗಿ ಚಲನ್ ಬರೆದುಕೊಡಬೇಕಿದೆ, ಆದರೆ ಕಚೇರಿಯಲ್ಲಿನ ಚಲನ್ ಇಂಗ್ಲೀಷ್ ಹಾಗು ಹಿಂದಿ ಭಾಷೆಯಲ್ಲಿ ಮಾತ್ರ ಇದ್ದು, ಭಾಷೆ ಅರ್ಥವಾಗದೆ ಜನರು ಬೇರೆಯವರ ಮೇಲ ಅವಲಂಬನೆ ಆಗುವಂತಾಗಿದೆ, ಹೀಗಾಗಿ ಚಲನ್ ಗಳಲ್ಲಿ ಕನ್ನಡ ಭಾಷೆ ಇರಬೇಕೆಂದು ನಿಯಮ ಇದ್ದರು ಇಲ್ಲಿನ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಹೀಗಾಗಿ ವೃದ್ದರು ಪರದಾಡುತ್ತಿದ್ದಾರೆ ಎಂದು ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published by:Divya D
First published: