ಸುಪ್ರೀಂನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ವಕೀಲರಾಗಿ ಒಡಿಶಾ ಮೂಲದ ಶುಭ್ರಂಶು ಪಢಿ ನೇಮಕ; ರಾಜ್ಯ ಸರ್ಕಾರದ ನಡೆಗೆ ಕನ್ನಡಿಗರು ಕಿಡಿ

ಜೋಸೆಫ್ ಅರಿಸ್ಟಾಟಲ್ ಸ್ಥಾನಕ್ಕೆ ಮಾತ್ರ ಮತ್ತೋರ್ವ ಕನ್ನಡಿಗರಿಗೆ ಅವಕಾಶ ಕಲ್ಪಿಸುವ ಬದಲು ರಾಜ್ಯ ಸರ್ಕಾರ ಒಡಿಶಾ ಮೂಲದ ಶುಭ್ರಂಶು ಫಡಿ ಅವರನ್ನು ನೇಮಕ ಮಾಡಿದೆ.

MAshok Kumar | news18-kannada
Updated:September 19, 2019, 6:10 PM IST
ಸುಪ್ರೀಂನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ವಕೀಲರಾಗಿ ಒಡಿಶಾ ಮೂಲದ ಶುಭ್ರಂಶು ಪಢಿ ನೇಮಕ; ರಾಜ್ಯ ಸರ್ಕಾರದ ನಡೆಗೆ ಕನ್ನಡಿಗರು ಕಿಡಿ
ಸುಪ್ರೀಂ ಕೋರ್ಟ್​ ಮತ್ತು ಸರ್ಕಾರದ ಸುತ್ತೋಲೆ.
  • Share this:
ಬೆಂಗಳೂರು (ಸೆಪ್ಟೆಂಬರ್.19)ಸುಪ್ರೀಂ ಕೋರ್ಟ್​ನಲ್ಲಿ ರಾಜ್ಯ ಸರ್ಕಾರದ ಆನ್ ರೆಕಾರ್ಡ್ ವಕೀಲರಾಗಿ (ರಾಜ್ಯವನ್ನು ಪ್ರತಿನಿಧಿಸುವ) ಒಡಿಶಾ ಮೂಲದ ವಕೀಲ ಶುಭ್ರಂಶು ಫಡಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆನ್ ರೆಕಾರ್ಡ್ ವಕೀಲರಾಗಿ ಕನ್ನಡಿಗ ಜೋಸೆಫ್ ಅರಿಸ್ಟಾಟಲ್ ಅವರನ್ನು ನೇಮಿಸಲಾಗಿತ್ತು. ಅವರ ಜೊತೆಗೆ ರಘುಪತಿ ಭಟ್ ಮತ್ತು ಅನಿತಾ ಶೆಣೈ ಎಂಬರವನ್ನೂ ಸರ್ಕಾರದ ಪ್ರತಿನಿಧಿ ವಕೀಲರಾಗಿ ನೇಮಕ ಮಾಡಲಾಗಿತ್ತು. ಆದರೆ, ಜೋಸೆಫ್ ಅರಿಸ್ಟಾಟಲ್ ಅವಧಿ ಮುಕ್ತಾಯವಾಗಿದ್ದರೆ, ಅನಿತಾ ಶೆಣೈ ಸುಪ್ರೀಂ ಕೋರ್ಟ್​ನ ಹಿರಿಯ ವಕೀಲರಾಗಿ ಬಡ್ತಿ ಹೊಂದಿದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅನಿತಾ ಶೆಣೈ ಸ್ಥಾನಕ್ಕೆ ಈ ವರೆಗೆ ಯಾರನ್ನೂ ಭರ್ತಿ ಮಾಡಿಲ್ಲ.

ಜೋಸೆಫ್ ಅರಿಸ್ಟಾಟಲ್ ಸ್ಥಾನಕ್ಕೆ ಮಾತ್ರ ಮತ್ತೋರ್ವ ಕನ್ನಡಿಗರಿಗೆ ಅವಕಾಶ ಕಲ್ಪಿಸುವ ಬದಲು ರಾಜ್ಯ ಸರ್ಕಾರ ಒಡಿಶಾ ಮೂಲದ ಶುಭ್ರಂಶು ಫಡಿ ಅವರನ್ನು ನೇಮಕ ಮಾಡಿದೆ. ಆದರೆ ಸುಪ್ರೀಂ ಕೋರ್ಟ್​ನಲ್ಲಿ ಸಾಕಷ್ಟು ಸಂಖ್ಯೆಯ ಪ್ರತಿಭಾನ್ವಿತ ಕನ್ನಡಿಗ ವಕೀಲರಿದ್ದರೂ, ಈ ಸ್ಥಾನಕ್ಕೆ ಅವರನ್ನು ಪರಿಗಣಿಸದೆ ಉತ್ತರ ಭಾರತದ ಮೂಲದ ವಕೀಲರಿಗೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ ಕನ್ನಡಿಗ ವಕೀಲರ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ.

ಇದನ್ನೂ ಓದಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಮಮತಾ ಬ್ಯಾನರ್ಜಿ; ಪಶ್ಚಿಮಬಂಗಾಳಕ್ಕೆ ಎನ್​ಆರ್​ಸಿ ಅಗತ್ಯವಿಲ್ಲ ಎಂದ ಟಿಎಂಸಿ ಮುಖ್ಯಸ್ಥೆ

First published:September 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading