Yadagiri: ಚಾಕೋಲೆಟ್​​ ರೂಪದಲ್ಲಿ ಡ್ರಗ್ಸ್​ ಮಾರಾಟ, ಯಾದಗಿರಿಯಲ್ಲಿ ಇಬ್ಬರು ಅರೆಸ್ಟ್​

ಇಲ್ಲಿಯವರಗೆ ಯಾದಗಿರಿ ಜಿಲ್ಲೆಯಲ್ಲಿ ಪೊಲೀಸರು ಗಾಂಜಾ ಮಾರಾಟ, ಅಕ್ರಮ ದಂಧೆ ಪತ್ತೆ ಹಚ್ಚಿ ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದರು. ಆದರೆ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಗಾಂಜಾ ಮಿಶ್ರಿತ ಚಾಕೋಲೆಟ್ ಮಾರಾಟ ದಂಧೆಯನ್ನು ಅಬಕಾರಿ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ

ಚಾಕೋಲೆಟ್ ರೂಪದಲ್ಲಿ ಡ್ರಗ್ಸ್​ ಮಾರಾಟ ದಂಧೆ

ಚಾಕೋಲೆಟ್ ರೂಪದಲ್ಲಿ ಡ್ರಗ್ಸ್​ ಮಾರಾಟ ದಂಧೆ

  • Share this:
ರಾಜ್ಯದಲ್ಲಿ ಮಾದಕ ವಸ್ತು ಮಟ್ಟಹಾಕೋದಕ್ಕೆ ಪೊಲೀಸರು ಒಂದಲ್ಲ ಒಂದು ರೀತಿಯಲ್ಲಿ ಕಾರ್ಯಾಚರಣೆ (Operation) ಮಾಡ್ತಾನೇ ಇರ್ತಾರೆ. ಆದರೆ ಪೊಲೀಸರು (Police) ಚಾಪೆ ಕೆಳಗೆ ನುಗ್ಗಿದರೆ ಡ್ರಗ್ಸ್​ (Drugs) ಮಾರಾಟ ಮಾಡೋರು ರಂಗೋಲಿ ಕೆಳಗೆ ನುಗ್ಗಿ ಬಚಾವ್ ಆಗ್ತಾರೆ. ಒಂದ್ಸಲ ಅರೆಸ್ಟ್​ (Arrest) ಆದ್ರೆ ಮತ್ತೊಂದು ಬಾರಿ ಖದೀಮರು ಬೇರೆ ದಾರಿ ಹುಡುಕಿಕೊಳ್ತಾರೆ. ಗಾಂಜಾ ಮಾರಾಟ (Sale) ಮಾಡಿದರೇ ಪೊಲೀಸರ ಕೈಗೆ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತೇವೆಂಬ ಲೆಕ್ಕಾಚಾರದಿಂದ ಮಾರಾಟಗಾರರು (Salesman) ಪಾನ್ ಶಾಪ್​ನಲ್ಲಿ ಎಗ್ಗಿಲ್ಲದೇ ಗಾಂಜಾ ಮಿಶ್ರಿತ ಚಾಕೋಲೆಟ್ (Chocolate) ಮಾರಾಟ ಶುರು ಮಾಡಿದ್ದಾರೆ. ಈಗ ಯಾದಗಿರಿಯಲ್ಲಿ ಗಾಂಜಾ ಮಿಶ್ರಿತ ಚಾಕೋಲೆಟ್​​ ಮಾರಾಟ ದಂಧೆಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಇಲ್ಲಿಯವರಗೆ ಯಾದಗಿರಿ ಜಿಲ್ಲೆಯಲ್ಲಿ ಪೊಲೀಸರು ಗಾಂಜಾ ಮಾರಾಟ, ಅಕ್ರಮ ದಂಧೆ ಪತ್ತೆ ಹಚ್ಚಿ ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದರು. ಆದರೆ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಗಾಂಜಾ ಮಿಶ್ರಿತ ಚಾಕೋಲೆಟ್ ಮಾರಾಟ ದಂಧೆಯನ್ನು ಅಬಕಾರಿ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ.

ಪಾನ್ ಶಾಪ್​ನಲ್ಲಿ ಗಾಂಜಾ ಮಾರಾಟ!

ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಉತ್ತರ ಪ್ರದೇಶದ ಮೂಲದ ಇಬ್ಬರು ಪಾನ್ ವ್ಯಾಪಾರಸ್ಥರು ಎರಡು ಪ್ರತ್ಯೇಕ ಪಾನ್ ಶಾಪ್ ಇಟ್ಟುಕೊಂಡಿದ್ದರು. ಪಾನ್​ ವ್ಯಾಪಾರದ ಜೊತೆ ಇವರು ಚಾಕೋಲೆಟ್ ರೂಪದ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು. ಪಾನ್ ಶಾಪ್​​ನಲ್ಲಿ ಪಾನ್ ಮಾರಾಟ ಮಾಡಿ ನೆಮ್ಮದಿಯಾಗಿ ಜೀವನ ನಡೆಸದೇ ಇಬ್ಬರೂ ಅಕ್ರಮ ದಂಧೆಗೆ ಕೈಹಾಕಿದ್ದಾರೆ.

ಇದನ್ನೂ ಓದಿ: ಸೌದಿಯಿಂದ ಆಸ್ಟ್ರೇಲಿಯಾಗೆ ಓಡಿಹೋದ ಸಹೋದರಿಯರು, ಅಪಾರ್ಟ್‌ಮೆಂಟ್‌ನಲ್ಲಿ ನಿಗೂಢ ಸ್ಥಿತಿಯಲ್ಲಿ ಶವ ಪತ್ತೆ!

ಇಬ್ಬರು ಆರೋಪಿಗಳು ಅರೆಸ್ಟ್ ..!

ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ರಾಜು ಪಾನ್ ಶಾಪ್​ನಲ್ಲಿ 930 ಗ್ರಾಂನ 145 ಗಾಂಜಾ ಮಿಶ್ರಿತ ಚಾಕೋಲೆಟ್ ಜಪ್ತಿ ಮಾಡಿ ಆರೋಪಿ ಜಿತೇಂದ್ರನನ್ನು ಬಂಧಿಸಲಾಗಿದೆ. ಅದೇ ರೀತಿ ಮಹೇಶ ಪಾನ್ ಶಾಪ್​​ನಲ್ಲಿ 946 ಗ್ರಾಂ 150 ಗಾಂಜಾ ಮಿಶ್ರಿತ ಚಾಕೋಲೆಟ್ ಜಪ್ತಿ ಮಾಡಿ ಆರೋಪಿ ಮೋಹಿತ್ ಕುಮಾರ್​​ನನ್ನು ಬಂಧಿಸಲಾಗಿದೆ.

selling drugs in the form of chocolate two accused arrested in yadagiri
ಚಾಕೋಲೆಟ್ ರೂಪದ ಡ್ರಗ್ಸ್​​


ಇದನ್ನೂ ಓದಿ: ನ್ಯೂಯಾರ್ಕ್‌ನ ಕಾರ್ಯಕ್ರಮದಲ್ಲಿ ಲೇಖಕ ಸಲ್ಮಾನ್ ರಶ್ದಿಗೆ ಚಾಕು ಇರಿತ, ಮಾರಣಾಂತಿಕ ಹಲ್ಲೆ!

ಉತ್ತರ ಪ್ರದೇಶದಿಂದ ತಂದು ಯಾದಗಿರಿಯಲ್ಲಿ ಮಾರಾಟ!

ಇಬ್ಬರು ಆರೋಪಿಗಳು ಉತ್ತರ ಪ್ರದೇಶದಿಂದ ಗಾಂಜಾ ಚಾಕೋಲೆಟ್ ಖರೀದಿ ಮಾಡಿ ಶಹಾಪುರ ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದರು. ಸದ್ಯ ಉತ್ತರ ಪ್ರದೇಶ ಮೂಲದ ಕಂಪನಿಯ ಮುನಕ್ಕಾ ಕಂಪನಿಯ ಆನಂದ ಹೆಸರಿನ ಗಾಂಜಾ ಮಿಶ್ರಿತ ಚಾಕೋಲೆಟ್​ನ್ನು ಜಪ್ತಿ ಮಾಡಲಾಗಿದೆ.

2 ರೂಪಾಯಿ ಮುದ್ರಿಸಿ 50 ರೂಪಾಯಿಗೆ ಮಾರಾಟ!

ಇಬ್ಬರು ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ಕೆಲಸ ಮಾಡುತ್ತಿದ್ದರು. ಈ ಗಾಂಜಾ ಮಿಶ್ರಿತ ಚಾಕೋಲೆಟ್​ಗೆ 2 ರೂಪಾಯಿ ಬೆಲೆ ಮುದ್ರಿಸಿ 20 ರಿಂದ 50 ರೂಪಾಯಿವರಗೆ ಮಾರಾಟ ಮಾಡುತ್ತಿದ್ದರು. ತಮ್ಮ ಪರಿಚಿತ ವ್ಯಸನಿಗಳಿಗೆ ಮಾತ್ರ ಚಾಕೋಲೆಟ್ ನೀಡುತ್ತಿದ್ದರು.

selling drugs in the form of chocolate two accused arrested in yadagiri
ಇಬ್ಬರು ಆರೋಪಿಗಳ ಬಂಧನ


ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು

ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತ ಮೋತಿಲಾಲ್ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಮಲ್ಲಿಕಾರ್ಜುನ ರೆಡ್ಡಿ, ಅಬಕಾರಿ ನಿರೀಕ್ಷಕ ಕೇದಾರನಾಥ ಎಸ್ ಟಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಬಂಧಿತ ಇಬ್ಬರಿಂದ ಗಾಂಜಾ ಮಿಶ್ರಿತ ಚಾಕೋಲೆಟ್​ನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಯಾದಗಿರಿಯ ಶಹಾಪುರ ಪಟ್ಟಣದಲ್ಲಿ ಈ ದಂಧೆ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಇಂತಹ ದಂಧೆ ಹೇಗೆ ನಡೆಯುತ್ತಿದೆ? ಯಾರು ಪೂರೈಕೆ ಮಾಡುತ್ತಿದ್ದರು ಅನ್ನೋದನ್ನು ಪೊಲೀಸರು ಪತ್ತೆಹಚ್ಚಬೇಕಿದೆ. ಯಾದಗಿರಿ ಪೊಲೀಸರು ಈ ಜಾಲವನ್ನು ಸಂಪೂರ್ಣವಾಗಿ ಪತ್ತೆ ಹಚ್ಚಿ ಈ ದಂಧೆಗೆ ಬ್ರೇಕ್ ಹಾಕಬೇಕಿದೆ.
Published by:Thara Kemmara
First published: