ನಿರುದ್ಯೋಗಿಗಳು ವಡಾಪಾವ್, ಮಿರ್ಚಿ ಮಾಡಿ ಮಾರುವಂತೆ ಸಲಹೆ ಕೊಟ್ಟ BJP ವಕ್ತಾರೆ

ನಮ್ಮ ದೇಶದಲ್ಲಿ ನಿರುದ್ಯೋಗ ಇರೋದು ಸತ್ಯ. ವಡಾ ಪಾವ್ ಮಿರ್ಚಿ ಮಾರೋದು ತಪ್ಪೇನಲ್ಲ. ವಡಾ, ಪಾವ್, ಮಿರ್ಚಿ ಮಾಡಿ ಬದುಕು ಸಾಗಿಸಿ ಅಂತ ನಿರುದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ.

ಬಿಜೆಪಿ ವಕ್ತಾರೆ ಅಶ್ವಿನಿ ಗೌಡ

ಬಿಜೆಪಿ ವಕ್ತಾರೆ ಅಶ್ವಿನಿ ಗೌಡ

  • Share this:
ಹುಬ್ಬಳ್ಳಿ(ಜೂ.30): ನಿರುದ್ಯೋಗಿಗಳು (Unemployed) ವಡಾ ಪಾವ್ (Vadapav) ಮಿರ್ಚಿ ಮಾಡಿ ಮಾರಿದ್ರೆ ತಪ್ಪೇನು ಎಂದು ಬಿಜೆಪಿ (BJ) ರಾಜ್ಯ ವಕ್ತಾರೆ (Spokesperson) ತೇಜಸ್ವಿನಿಗೌಡ (Tejaswini Gowda) ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಸಮಸ್ಯೆ  (Unemployment Problem) ತಾಂಡವಾಡುತ್ತಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನಮ್ಮ ದೇಶದಲ್ಲಿ ನಿರುದ್ಯೋಗ ಇರೋದು ಸತ್ಯ. ವಡಾ ಪಾವ್ ಮಿರ್ಚಿ ಮಾರೋದು ತಪ್ಪೇನಲ್ಲ. ವಡಾ, ಪಾವ್, ಮಿರ್ಚಿ ಮಾಡಿ ಬದುಕು ಸಾಗಿಸಿ ಅಂತ ನಿರುದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ.

ಮೋದಿ ಟೀ ಮಾರಿ ಪ್ರಧಾನಿ ಆಗಿಲ್ವೇ?

ಯಾರೋ ಮಾಡಿದ್ದ ಮಿರ್ಚಿ ತಿನ್ನುತ್ತೀರಿ, ಹಾಗಿರಬೇಕಾದ್ರೆ ಮಿರ್ಚಿ ಮಾಡಿದ್ರೆ ತಪ್ಪೇನಿಲ್ಲ. ನರೇಂದ್ರ ಮೋದಿ (Narendra Modi) ಅವ್ರು ಟೀ ಮಾರಾಟ ಮಾಡಿ ದೇಶದ ಪ್ರಧಾನಿ (Prime Minister) ಆಗಲಿಲ್ವೇ. ಯುವಕರು ಯಾವುದಾದರೂ ಕೆಲಸ ಮಾಡಲಿ . ಎಲ್ಲದಕ್ಕೂ ಸರ್ಕಾರಿ ಉದ್ಯೋಗವನ್ನೇ ನೆಚ್ಚಿಕೊಳ್ಳೋದು ಸರಿಯಲ್ಲ. ಕಾಯಕವೇ ಕೈಲಾಸ ಅಂತ ಶರಣರು ಹೇಳಿದ್ದಾರೆ.

ನಿರುದ್ಯೋಗಿಗಳಿಗೆ ಹಲವು ಸಲಹೆ

ಏನಾದರಾಗ್ಲಿ ದುಡಿದು ತಿನ್ನಿ ಎಂದು ತೇಜಸ್ವಿನಿಗೌಡ ನಿರುದ್ಯೋಗಿಗಳಿಗೆ ಹಲವು ಸಲಹೆಗಳನ್ನು ನೀಡಿದರು. ಕೊರೋನಾ ಇತ್ಯಾದಿಗಳ ಕಾರಣದಿಂದ (Covid 19) ದೇಶ ಆರ್ಥಿಕ ಸಂಕಷ್ಟಗಳ್ನು (Economic Crisis) ಎದುರಿಸಿದೆ. ಆದರೂ ಆರ್ಥಿಕ ದಿವಾಳಿಯಾಗೋದನ್ನು ಪ್ರಧಾನಿ ಮೋದಿ ತಪ್ಪಿಸಿದ್ದಾರೆ. ದೇಶದ ಸದೃಢತೆಗೆ ಮೋದಿ ಶ್ರಮಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ: Kodagu: ಪದೇ ಪದೇ ಭೂಕಂಪ ಹಿನ್ನೆಲೆ ಕೊಡಗಿಗೆ ಹಿರಿಯ ಭೂವಿಜ್ಞಾನಿಗಳ ತಂಡ ಭೇಟಿ

ಅಗ್ನಿಪಥ್ ಯೋಜನೆ ಸಮರ್ಥಿಸಿಕೊಂಡ ತೇಜಸ್ವಿನಿ, ಅಗ್ನಿಪಥ್ ಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಅರ್ಜಿ ಹಾಕೋ ಮೂಲಕ ಪ್ರತಿಪಕ್ಷಗಳಿಗೆ ಅಭ್ಯರ್ಥಿಗಳು ಉತ್ತರ ಕೊಟ್ಟಿದ್ದಾರೆ. ಪ್ರತಿಪಕ್ಷಗಳು ವಿನಾಕಾರಣ ಎಲ್ಲದರಲ್ಲಿಯೂ ರಾಜಕಾರಣ ಮಾಡ್ತಿದಾರೆ. ಇದೇ ರೀತಿ ಮುಂದುವರೆದರೆ ಕಾಂಗ್ರೆಸ್ ಪಕ್ಷ ಜನರಿಂದ ಸಂಪೂರ್ಣ ದೂರವಾಗುತ್ತೆ ಎಂದರು.

ಉದಯಪುರದಲ್ಲಿ ಶಿರಚ್ಛೇದನ ಪ್ರಕರಣಕ್ಕೆ ಖಂಡನೆ

ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯ ಲಾಲ್ ಕೊಲೆ ಪ್ರಕರಣವನ್ನು ಬಿಜೆಪಿ ರಾಜ್ಯ ವಕ್ತಾರೆ ತೇಜಸ್ವಿನಿ ಗೌಡ ಖಂಡಿಸಿದ್ದಾರೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕನ್ಹಯ್ಯ ಶಿರಚ್ಛೇದನ ಪ್ರಕರಣ ಅಮಾನವೀಯ. ಹಾಡಹಗಲೇ ಈ ರೀತಿ ಭೀಕರ ಕಗ್ಗೊಲೆ ಮಾಡಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Evening Digest: ಕೆಜಿಎಫ್‌ ನಟನಿಗೆ ಆಕ್ಸಿಡೆಂಟ್‌, ಕನ್ಹಯ್ಯ ಲಾಲ್ ಅಂತ್ಯಕ್ರಿಯೆ; ಇತ್ತ ಮಾವನನ್ನೇ ಕೊಂದ ಅಳಿಯ -ಈ ಸಂಜೆಯ ಟಾಪ್ ನ್ಯೂಸ್ ಇಲ್ಲಿವೆ

ಇದೊಂದು ಅಮಾನವೀಯ ಘಟನೆ. ನೂಪುರ ಶರ್ಮಾರನ್ನು ಬೆಂಬಲಿಸಿ ಸಂದೇಶ ಹಾಕಿದ್ದಕ್ಕೆ ಈ ರೀತಿಯ ಕೃತ್ಯ ನಡೆದಿದೆ. ಕಾಂಗ್ರೆಸ್ ಅಧಿಕಾರದಲ್ಲಿರೋ ರಾಜಾಸ್ತಾನದಲ್ಲಿ ಈ ಘಟನೆ ನಡೆದಿದೆ. ಆದ್ರೆ ಕೇಂದ್ರದಲ್ಲಿರೊ ಬಿಜೆಪಿ ಸರ್ಕಾರ ಇದನ್ನು ಸಹಿಸೋದಿಲ್ಲ. ಕೇಂದ್ರ ಸರ್ಕಾರ ಇದರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದೆ. ಈ ರೀತಿ ಕಾನೂನು ಕೈಗೆತ್ತಿಕೊಂಡು ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಖಚಿತ ಎಂದರು.

ಪ್ರತ್ಯೇಕ ರಾಜ್ಯದ ಕೂಗಿಗೆ ನಮ್ಮ ಸಮ್ಮತವಿಲ್ಲ

ಪ್ರತ್ಯೇಕ ರಾಜ್ಯದ ಕೂಗು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತ್ಯೇಕ ರಾಜ್ಯದ ಕೂಗಿಗೆ ನಮ್ಮ ಬೆಂಬಲವಿಲ್ಲ. ನಾವು ರಾಜ್ಯವನ್ನ ಒಡೆಯುವವರಲ್ಲ ಒಂದು ಮಾಡುವವರು. ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಗೊಂದಲ ವಿಚಾರಕ್ಕೆ ಸದ್ಯ ತೆರೆ ಬಿದ್ದಿದೆ. ಬಿಜೆಪಿ ಸರ್ಕಾರ ಎಂದೂ ಸಹ ಇದನ್ನ ಸಮರ್ಥಿಸಿಕೊಂಡಿಲ್ಲ. ಲೋಪದೋಷ ಕಂಡುಬಂದ ಬಗ್ಗೆ ಸರಿಪಡಿಸುವ ಕೆಲಸ ನಡೆದಿದೆ ಎಂದರು.
Published by:Divya D
First published: