ಬೇರೆ ಪಕ್ಷದಲ್ಲಿ ಸ್ವಾರ್ಥದ ರಾಜಕಾರಣ, BJPಯಲ್ಲಿ ಜನ ಸೇವೆಯಷ್ಟೇ: JDSಗೆ ಸಿಎಂ ಪರೋಕ್ಷ ತಿರುಗೇಟು

ನಾನು‌ ಬಿಜೆಪಿಗೆ ಬರೋಕು ಮುನ್ನ ಬೇರೆ ಪಕ್ಷದಲ್ಲಿ ಇದ್ದೆ. ಅವಾಗ ಅಲ್ಲಿ ನನಗೆ ಕಾಣಿಸಿದ್ದು ಬರೀ ಸ್ವಾರ್ಥ ರಾಜಕಾರಣ ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್​ಗೆ ಸಿಎಂ ತಿರುಗೇಟು ನೀಡಿದರು.

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

 • Share this:
  ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿ ಇಂದು ಅಧಿಕೃತ ಪಟ್ಟಿ ಹೊರಡಿಸಿದ್ದಾರೆ. ಹೊಸಬರಿಗೆ ದೊಡ್ಡ ಖಾತೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬದಲಾವಣೆ ತರಬೇಕಲ್ವಾ ಅದಕ್ಕೆ ಅವರಿಗೆ ದೊಡ್ಡ ಖಾತೆ ಕೊಟ್ಟಿದ್ದೇವೆ ಎಂದರು. ಇನ್ನು ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದ್ದು, ಆನಂದ ಸಿಂಗ್ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರೀತಮ್ ಗೌಡ, ಅರವಿಂದ ಬೆಲ್ಲದ ಸಹ ಮಂತ್ರಿಗಿರಿ ಸಿಗದಿದ್ದಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಅವರೆಲ್ಲಾ ನನ್ನ ಆತ್ಮೀಯರು. ಹೀಗಾಗಿ ಅವರನ್ನು ಕರೆದು ಮಾತಾಡ್ತೇನೆ. ಎಲ್ಲ ಮಂತ್ರಿಗಳಿಗೂ ಖಾತೆ ಹಂಚಲಾಗಿದೆ, ಮುಂದೆ ಅವರವರ ಖಾತೆಗಳನ್ನು ಉತ್ತಮವಾಗಿ ನಿಭಾಯಿಸ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  ಬೇರೆ ಪಕ್ಷಗಳಲ್ಲಿ ಬರೀ ಸ್ವಾರ್ಥದ ರಾಜಕಾರಣ ಇರುತ್ತದೆ. ಆದರೆ ಬಿಜೆಪಿಯಲ್ಲಿ ಜನರ ಸೇವೆ ಅಷ್ಟೇ. ನಾನು‌ ಬಿಜೆಪಿಗೆ ಬರೋಕು ಮುನ್ನ ಬೇರೆ ಪಕ್ಷದಲ್ಲಿ ಇದ್ದೆ. ಅವಾಗ ಅಲ್ಲಿ ನನಗೆ ಕಾಣಿಸಿದ್ದು ಬರೀ ಸ್ವಾರ್ಥ ರಾಜಕಾರಣ ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್​ಗೆ ಸಿಎಂ ತಿರುಗೇಟು ನೀಡಿದರು.

  ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ಈಗಿನಿಂದಲೇ ಕಠಿಣ ನಿರ್ಧಾರ ಮಾಡಿದ್ದೇವೆ. ಜನರು ಸಹಕಾರ ಕೊಡಬೇಕು. ಗಡಿ ಪ್ರದೇಶಗಳಲ್ಲಿ ಮಾತ್ರ ಕಠಿಣ ನಿರ್ಬಂಧ ಮಾಡಿದ್ದೇವೆ. ಹಿಂದೆ ಕೊರೋನಾ ಜಾಸ್ತಿಯಾದಾಗ ಲಾಕ್ ಡೌನ್ ಮಾಡಿದ್ವಿ. ಮತ್ತೆ ಆ ರೀತಿ ಆಗಬಾರದು ಅನ್ನೋ ಕಾರಣಕ್ಕೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ. ಈ ಕ್ರಮಗಳಿಂದ ಜನರಿಗೆ ಏನು ತೊಂದರೆ ಆಗುವುದಿಲ್ಲ. ಹೀಗಾಗಿ ಜನರು ಇದಕ್ಕೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿಕೊಂಡರು.

  ಇದನ್ನೂ ಓದಿ: ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಫೋಟ : ಬಯಸಿದ ಖಾತೆ ಸಿಗದಿದ್ದರೆ ರಾಜೀನಾಮೆ- ಆನಂದ್​​ಸಿಂಗ್​

  ಕೊರೋನಾ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ, ಎಂಥ ಸವಾಲಿಗೂ ನಾವು ಸಿದ್ಧವಾಗಿದ್ದೇವೆ. 24 ಸಾವಿರ ಬೆಡ್ ಸಿದ್ಧ ಮಾಡಿದ್ದೇವೆ. 6 ಸಾವಿರ ಆಕ್ಸಿಜನ್ ಬೆಡ್ ಸಿದ್ಧವಿದೆ, ವಾರ್ ಫೂಟ್ ನಲ್ಲಿ ಕೆಲಸ ಮಾಡಿದ್ದೇವೆ. ಪ್ರಧಾನಿ ಮೋದಿಯವರು ಇರದಿದ್ದಿದ್ರೆ ಕೋವಿಡ್ ನಿಂದ ಬಹಳಷ್ಟು ಹಾನಿ ಆಗ್ತಿತ್ತು. ಕೋವಿಡ್ ಬಂದಾಗ ದೇಶದಲ್ಲಿ ಆರೋಗ್ಯ ಮೂಲಸೌಕರ್ಯ ಇರಲಿಲ್ಲ. ಅದು ದೇಶಕ್ಕೆ ಕಾಂಗ್ರೆಸ್ ಕೊಟ್ಟಿದ್ದ ಕಾಣಿಕೆ. ಮೋದಿಯವರ ಶ್ರಮದ ಫಲವಾಗಿ ಈಗ ಇಡೀ‌ ಜಗತ್ತಿಗೆ ಭಾತರ ಲಸಿಕೆ ಕೊಡುತ್ತಿದೆ ಎಂದು ಕೇಂದ್ರ ಸರ್ಕಾರದ ಕ್ರಮಗಳನ್ನು ಸಿಎಂ ಪ್ರಶಂಸಿಸಿದರು.

  ಇನ್ನು ಇಂದು ಸಿಎಂ ಸಚಿವರುಗಳಿಗೆ ಅಧಿಕೃತವಾಗಿ ನೀಡಿರುವ ಖಾತೆಗಳ ಪಟ್ಟಿ ಹೀಗಿದೆ.

  1) ಗೋವಿಂದ ಕಾರಜೋಳ: ಜಲಸಂಪನ್ಮೂಲ ಖಾತೆ

  2) ಕೆಎಸ್ ಈಶ್ವರಪ್ಪ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ3) ಆರ್ ಅಶೋಕ್: ಕಂದಾಯ (ಮುಜರಾಯಿ ಇಲ್ಲ)

  4) ಬಿ ಶ್ರೀರಾಮುಲು: ಸಾರಿಗೆ ಮತ್ತು ಎಸ್​ಟಿ ಕಲ್ಯಾಣ

  5) ವಿ ಸೋಮಣ್ಣ: ವಸತಿ, ಮೂಲಸೌಕರ್ಯ ಅಭಿವೃದ್ಧಿ

  6) ಉಮೇಶ್ ಕತ್ತಿ: ಅರಣ್ಯ, ಆಹಾರ ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರ

  7) ಎಸ್ ಅಂಗಾರ: ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ

  8) ಜೆ ಸಿ ಮಾಧು ಸ್ವಾಮಿ: ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ

  9) ಅರಗ ಜ್ಞಾನೇಂದ್ರ: ಗೃಹ ಖಾತೆ

  10) ಡಾ. ಅಶ್ವಥ ನಾರಾಯಣ: ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ

  11) ಸಿಸಿ ಪಾಟೀಲ್: ಲೋಕೋಪಯೋಗಿ

  12) ಆನಂದ್ ಸಿಂಗ್: ಭೂವಿಜ್ಞಾನ ಮತ್ತು ಪರಿಸರ, ಪ್ರವಾಸೋದ್ಯಮ

  13) ಕೋಟ ಶ್ರೀನಿವಾಸ ಪೂಜಾರಿ: ಸಾಮಾಜಿಕ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ

  14) ಪ್ರಭು ಚೌಹಾಣ್: ಪಶು ಸಂಗೋಪನೆ

  15) ಮುರುಗೇಶ್ ನಿರಾಣಿ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ

  16) ಶಿವರಾಮ್ ಹೆಬ್ಬಾರ್: ಕಾರ್ಮಿಕ ಸಚಿವ

  17) ಎಸ್ ಟಿ ಸೋಮಶೇಖರ್: ಸಹಕಾರ

  18) ಬಿ ಸಿ ಪಾಟೀಲ್: ಕೃಷಿ

  19) ಬೈರತಿ ಬಸವರಾಜು: ನಗರ ಅಭಿವೃದ್ಧಿ

  20) ಡಾ. ಕೆ ಸುಧಾಕರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ

  21) ಕೆ ಗೋಪಾಲಯ್ಯ: ಅಬಕಾರಿ ಖಾತೆ

  22) ಶಶಿಕಲಾ ಜೊಲ್ಲೆ: ಮುಜರಾಯಿ ಮತ್ತು ಹಜ್ ವಕ್ಫ್

  23) ಎಂಟಿಬಿ ನಾಗರಾಜು: ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಕೈಗಾರಿಕೆ

  24) ನಾರಾಯಣಗೌಡ: ರೇಷ್ಮೆ ಖಾತೆ, ಯುವಜನ ಕ್ರೀಡೆ

  25) ಬಿ. ಸಿ. ನಾಗೇಶ್: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಖಾತೆ

  26) ವಿ ಸುನೀಲ್ ಕುಮಾರ್: ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ

  27) ಹಾಲಪ್ಪ ಆಚಾರ್: ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕ ಸಬಲೀಕರಣ

  28) ಶಂಕರ್ ಪಾಟೀಲ್ ಮುನೇನಕೊಪ್ಪ: ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಖಾತೆ

  29) ಮುನಿರತ್ನ: ತೋಟಗಾರಿಕೆ ಮತ್ತು ಯೋಜನಾ ಖಾತೆ, ಸಾಂಖ್ಯಿಕ ಇಲಾಖೆ
  Published by:Kavya V
  First published: