ಹುಬ್ಬಳ್ಳಿ(ಆ.03): ರಾಹುಲ್ ಗಾಂಧಿ ಹುಬ್ಬಳ್ಳಿಯ (Hubballi) ಭೇಟಿಯ ಸಂದರ್ಭದಲ್ಲಿ ಬೆಳ್ಳಂ ಬೆಳಿಗೆ ವರ್ಕ ಔಟ್ ನಲ್ಲಿ (Workout) ತೊಡಗಿಕೊಂಡಿದ್ದುದು ಕಂಡು ಬಂದಿತು. ಮುಂಜಾನೆ ಬೇಗನೇ ಎದ್ದು, ದೈಹಿಕ ಕಸರತ್ತು ನಡೆಸಿದ ನಂತರ ಸ್ನಾನ ಮುಗಿಸಿದ ರಾಹುಲ್ ಉಪಹಾರ (Breakfast) ಸೇವಿಸದೆಯೇ ಹಾಗೆಯೇ ವಾಹನದಲ್ಲಿ ತೆರಳಿದ್ದಾರೆ. ಮಾರ್ಗಮಧ್ಯದಲ್ಲಿಯೇ ತಿನ್ನಲು ಉಪಹಾರದ ಪಾರ್ಸಲ್ ಕಟ್ಟಿಕೊಡಲಾಗಿದೆ. ನಾಲ್ಕು ವರ್ಷಗಳ ನಂತರ ಹುಬ್ಬಳ್ಳಿಗೆ ಆಗಮಿಸಿದ್ದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಬೆಳ್ಳಂ ಬೆಳಿಗ್ಗೆ ಲ್ ವರ್ಕ್ ಔಟ್ ಮಾಡಿದ್ದಾರೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನ ಜೀಮ್ ನಲ್ಲಿ (Gym) ರಾಹುಲ್ ಗಾಂಧಿ (Rahul Gandhi) ವರ್ಕೌಟ್ ಮಾಡಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದ ಎದುರುಗಡೆ ಇರುವ ಖಾಸಗಿ ಹೋಟೆಲ್ ನಲ್ಲಿ ವರ್ಕ್ ಔಟ್ ಮಾಡಿದ್ದಾರೆ. ತಮ್ಮ ಬಿಸಿ ಶೆಡ್ಯೂಲ್ ನಲ್ಲಿಯೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಅವರು ಬರೋಬ್ಬರಿ ಒಂದು ಗಂಟೆಗಳ ಕಾಲ ವಾಕಿಂಗ್ ಇತ್ಯಾದಿಗಳನ್ನು ಮಾಡಿದ್ದಾರೆ. ವಾಕಿಂಗ್ ನಂತ್ರ ಜೀಮ್ ನಲ್ಲಿ ಬೆವರಿಳಿಸಿದ ರಾಹುಲ್ ಗಾಂಧಿ, ನಂತರ ಸ್ನಾನ ಮಾಡಿ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಿದರು.
ಕೆಟ್ಟು ನಿಂತ ರಾಹುಲ್ ಭದ್ರತೆಗೆ ನಿಯೋಜಿಸಿದ್ದ ವಾಹನ
ರಾಹುಲ್ ಗಾಂಧಿ ಭದ್ರತೆಗೆಂದು ನಿಯೋಜಿಸಿದ್ದ ವಾಹನ (Security Vehicle) ರಸ್ತೆ ಮಧ್ಯದಲ್ಲೇ ಕೈ ಕೊಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಬಂದೋಬಸ್ತ್ ಗೆ ನಿಯೋಜನೆಗೊಂಡಿದ್ದ ಪೊಲೀಸ ಅಧಿಕಾರಿಯ ಜೀಪ್ ರಸ್ತೆ ಮಧ್ಯೆಯೇ ಕೆಟ್ಟು ನಿಂತಿತು. ರಾಹುಲ್ ಗಾಂಧಿ ಕೆಲವೇ ಕ್ಷಣಗಳಲ್ಲಿ ಹೊರಡುತ್ತಾರೆ ಅನ್ನುವಾಗ ವಾಹನ ಕೆಟ್ಟು ನಿಂತಿದೆ. ತಾಂತ್ರಿಕ ಕಾರಣಗಳಿಂದಾಗಿ ಕೆಟ್ಟು ನಿಂತ ಜೀಪ್ ಅನ್ನು, ಪೆಟ್ರೋಲಿಂಗ್ ವಾಹನವನ್ನು ಬಳಸಿ ರಿಪೇರಿ ಕೇಂದ್ರಕ್ಕೆ ತೆಗೆದುಕೊಂಡೋ ಹೋಗಲಾಯಿತು. ಅದರ ಬದಲಿ ಪರ್ಯಾಯ ವಾಹವ ವ್ಯವಸ್ಥೆ ಮಾಡಲಾಯಿತು.
ರಾಹುಲ್ ಗೆ ಚರಕ ಕಾಣಿಕೆ
ಹುಬ್ಬಳ್ಳಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಚರಕ ಕಾಣಿಕೆಯಾಗಿ ನೀಡಲಾಗಿದೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದ ರಾಹುಲ್ ಗಾಂಧಿಯನ್ನು ಭೇಟಿಯಾದ ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡರು ಚರಕವನ್ನು ನೆನಪಿನ ಕಾಣಿಕೆಯಾಗಿ ನೀಡಿದ್ದಾರೆ.
ರಾಷ್ಟ್ರದ ಧ್ವಜ ತಯಾರಿಕೆ ಮಾಡುವ ದೇಶದ ಏಕೈಕ ಸಂಸ್ಥೆ ಹುಬ್ಬಳ್ಳಿಯ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆಯಾಗಿದ್ದು, ಅದನ್ನು ಸಂರಕ್ಷಿಸಿ, ಖಾದಿಗೆ ಮಹತ್ವ ಕೊಡುವಂತೆ ಈಗಾಗಲೇ ಕಾಂಗ್ರೆಸ್ ನಾಯಕರು ಹೋರಾಟ ಆರಂಭಿಸಿದ್ದಾರೆ.
ಇದನ್ನೂ ಓದಿ: Siddramotsava: ಮೈಸೂರು ಪಾಕ್, ಲಾಡು, ರುಚಿ ರುಚಿ ಊಟ; ಸಿದ್ದರಾಮೋತ್ಸವದಲ್ಲಿ ಭರ್ಜರಿ ಭೋಜನ
ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರಿಗೂ ಚರಕ ವನ್ನು ನೀಡೋ ಮೂಲಕ ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಭೇಟಿ ನೀಡುವಂತೆಯೂ ಮುಖಂಡರು ಮನವಿ ಮಾಡಿದ್ದಾರೆ. ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಕಾಂಗ್ರೆಸ್ ನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಅನಿಲಕುಮಾರ್ ಪಾಟೀಲ, ಶಹಜಮಾನ್ ಮುಜಾಹೀದ್ ಮತ್ತಿತರರು ಚರಕವನ್ನು ಕಾಣಿಕೆಯಾಗಿ ನೀಡಿ ಗೌರವಿಸಿದ್ದಾರೆ.
ಸೇವಾದಳ ಪ್ರತಿನಿಧಿಗಳು ಮತ್ತಿತರರಿಂದಲೂ ರಾಹುಲ್ ಗಾಂಧಿಗೆ ಸನ್ಮಾನ ನೆರವೇರಿತು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತಿತರರ ಉಪಸ್ಥಿತರಿದ್ದು, ಸ್ಥಳೀಯ ನಾಯಕರ ಪರಿಚಯ ಮಾಡಿಕೊಟ್ಟರು.
ರಸ್ತೆ ಮೂಲಕ ಚಿತ್ರದುರ್ಗಕ್ಕೆ ಪ್ರಯಾಣ
ನಿನ್ನೆ ರಾತ್ರಿ ಹುಬ್ಬಳ್ಳಿಗೆ ಆಗಮಿಸಿ ಇಲ್ಲಿಯೇ ವಾಸ್ತವ್ಯ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಿತ್ರದುರ್ಗಕ್ಕೆ ತೆರಳಿದ್ದಾರೆ. ಹುಬ್ಬಳ್ಳಿಯಿಂದ ರಸ್ತೆ ಮೂಲಕ ತೆರಳಿದ ರಾಹುಲ್ ಗಾಂಧಿ ಹಿಂದೆ ಕಾಂಗ್ರೆಸ್ ದಂಡು ಹೊರಟಿತು.
ಇದನ್ನೂ ಓದಿ: Siddaramotsava: ಸಿದ್ದರಾಮೋತ್ಸವ ಹೊರಗೆ ಸಿಹಿ ಒಳಗೆ ಕಹಿ; ಕಾಂಗ್ರೆಸ್ನಲ್ಲಿ ಬೇಗುದಿ
ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಿಂದ ತೆರಳಿದ ರಾಹುಲ್ ಗಾಂಧಿ ಜೊತೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿ ಹಲವು ನಾಯಕರು ಪ್ರಯಾಣ ಬೆಳೆಸಿದರು. ಚಿತ್ರದುರ್ಗ ಮುರುಘಾ ಮಠಕ್ಕೆ ಭೇಟಿ ನೀಡಿ ನಂತರ ದಾವಣಗೆರೆಗೆ ತೆರಳಲಿರುವ ರಾಹುಲ್ ನಂತರ ದಾವಣಗೆರೆಯಲ್ಲಿ ಆಯೋಜಿಸಿರುವ ಸಿದ್ಧರಾಮೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ