Puneeth Rajkumarಗೆ ಇದೆಂಥಾ ಅಪಮಾನ! ಇಲ್ಲಿ ಅಪ್ಪು ಫೋಟೋ, ಕನ್ನಡ ಧ್ವಜಕ್ಕೆ ನೋ ಎಂಟ್ರಿ!

ನಿಮ್ಮ ಕಾರಿನಲ್ಲಿ ಪುನೀತ್ ರಾಜ್‌ಕುಮಾರ್ ಫೋಟೋ ಹಾಕಿಕೊಂಡು, ಕನ್ನಡ ಧ್ವಜ ಹಿಡಿದುಕೊಂಡು ಹೋದ್ರೆ ತಿರುಪತಿಯಲ್ಲಿ ನಿಮ್ಮ ವಾಹನ ತಡೆಯುತ್ತಾರೆ. ಏನೀ ಅವಮಾನ? ಪವರ್ ಸ್ಟಾರ್‌ ಸ್ಟಿಕ್ಕರ್‌ಗೆ ತಿರುಪತಿಯಲ್ಲಿ ಯಾಕಿಲ್ಲ ಪ್ರವೇಶ? ಕನ್ನಡತನ ಸಾರುವ ಕನ್ನಡ ಧ್ವಜ ವಾಹನಕ್ಕೆ ಇದ್ದರೆ ತಿರುಪತಿಯಲ್ಲೇನು ಸಮಸ್ಯೆ? ಈ ಕುರಿತು ಒಂದು ವರದಿ ಇಲ್ಲಿದೆ ಓದಿ…

ಪುನೀತ್‌ ರಾಜ್‌ಕುಮಾರ್ 
ಸ್ಟಿಕ್ಕರ್ ಹಾಗೂ ಕನ್ನಡ ಧ್ವಜ ತೆಗೆಸುತ್ತಿರುವ ಅಧಿಕಾರಿಗಳು

ಪುನೀತ್‌ ರಾಜ್‌ಕುಮಾರ್ ಸ್ಟಿಕ್ಕರ್ ಹಾಗೂ ಕನ್ನಡ ಧ್ವಜ ತೆಗೆಸುತ್ತಿರುವ ಅಧಿಕಾರಿಗಳು

  • Share this:
ಬೆಂಗಳೂರು: ಈ ಸ್ಟೋರಿಯನ್ನು ಪ್ರತಿಯೊಬ್ಬ ಕನ್ನಡಿಗನೂ (Kannadiga) ಓದಲೇಬೇಕು. ಈ ಫೋಟೋಗಳನ್ನು (Photos) ನೋಡ್ತಿದ್ದರೆ ಕನ್ನಡಿಗನಿಗೆ ಅದರಲ್ಲೂ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿಮಾನಿಗಳ (Fans) ರಕ್ತ ಕುದಿಯುತ್ತೆ. ನಮ್ಮ ನಾಡಿಗೆ ಬರುವವರಿಗೆ ಆದಾರಾತಿಥ್ಯ ಮಾಡುವ ಕನ್ನಡಿಗರಿಗೆ ನೆರೆಯ ಆಂಧ್ರ ಪ್ರದೇಶದಲ್ಲಿ (Andhra Pradesh) ಎಂಥ ಪರಿಸ್ಥಿತಿ ಇದೆ ಗೊತ್ತಾ? ತಿರುಪತಿಯಲ್ಲಿ (Tirupati) ನಮ್ಮ ಕಾರಿಗೆ ಪುನೀತ್ ರಾಜ್‌ಕುಮಾರ್ ಫೋಟೋ ಅಂಟಿಸಬಾರದಂತೆ, ಕನ್ನಡ ಧ್ವಜ (Kannada Flag) ತೆಗೆದುಕೊಂಡು ಹೋಗುವಂತಿಲ್ಲವಂತೆ. ಏನೀ ಅವಮಾನ? ಪವರ್ ಸ್ಟಾರ್‌ ಸ್ಟಿಕ್ಕರ್‌ಗೆ ತಿರುಪತಿಯಲ್ಲಿ ಯಾಕಿಲ್ಲ ಪ್ರವೇಶ? ಕನ್ನಡತನ ಸಾರುವ ಕನ್ನಡ ಧ್ವಜ ವಾಹನಕ್ಕೆ ಇದ್ದರೆ ತಿರುಪತಿಯಲ್ಲೇನು ಸಮಸ್ಯೆ? ಈ ಕುರಿತು ಒಂದು ವರದಿ ಇಲ್ಲಿದೆ ಓದಿ…

 ತಿರುಪತಿಯಲ್ಲಿ ಪುನೀತ್ ಫೋಟೋಗಿಲ್ಲ ಪ್ರವೇಶ!

ತಿರುಪತಿಗೆ ಹೋಗುವ ಕರುನಾಡ ಭಕ್ತರೆ ಇತ್ತ ಗಮನಿಸಿ.‌ ಪ್ರತಿಯೊಬ್ಬ ಕನ್ನಡಿಗ ಓದಲೇ ಬೇಕಾದ ಸ್ಟೋರಿಯಿದು. ಅಪ್ಪು ಇನ್ನಿಲ್ಲವಾದ್ರೂ ಅವರ ಮೇಲಿನ ಅಭಿಮಾನ ಮಾತ್ರ ಒಂದಿಷ್ಟೂ ಕಡಿಮೆಯಾಗಿಲ್ಲ. ಜಾತ್ರೆ, ಸಮಾರಂಭ ಪ್ರತಿಯೊಂದರಲ್ಲೂ ಪುನೀತ್ ಫೋಟೋ ಇಟ್ಟು ಪೂಜಿಸುತ್ತೇವೆ. ಆದ್ರೂ ನೆರೆಯ ಆಂಧ್ರದ ತಿರುಪತಿಯಲ್ಲಿ ಕನ್ನಡಿಗರಿಗೆ, ಅಪ್ಪು ಭಾವಚಿತ್ರಕ್ಕೆ ಇದೆಂಥ ಅವಮಾನ ಮಾಡುತ್ತಿದ್ದಾರೆ.

ನಿಮ್ಮ ಕಾರಿನಲ್ಲಿ ಪುನೀತ್ ಫೋಟೋ ಹಾಕಿಕೊಂಡು, ಕನ್ನಡ ಧ್ವಜ ಹಿಡಿದುಕೊಂಡು ಹೋದ್ರೆ ಅಲ್ಲಿಯೇ ನಿಮ್ಮ ವಾಹನ ತಡೆಯುತ್ತಾರೆ. ಇಂಥದ್ದೊಂದು ಘಟನೆ ನಿನ್ನೆ ತಿರುಪತಿ ಬೆಟ್ಟದ ಕೆಳಭಾಗದ ತಿರುಮಲ ಗೇಟ್ ಬಳಿ ನಡೆದಿದೆ.

ಪುನೀತ್‌ ಸ್ಟಿಕ್ಕರ್ ಕಿತ್ತುಹಾಕುವಂತೆ ಹೇಳಿದ ಸೆಕ್ಯುರಿಟಿ

ನಿನ್ನೆ ಸಂಜೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಿದ್ದ ಕನ್ನಡಿಗರಿಗೆ ಶಾಕ್ ಕಾದಿತ್ತು‌. ತಿರುಮಲ ಗೇಟ್ ಬಳಿ ಕಾರು ತಡೆದ ರಕ್ಷಣಾ ಸಿಬ್ಬಂದಿ, ಕಾರಿನ ಹಿಂಬದಿ ಇದ್ದ ಅಪ್ಪು ಫೋಟೋ ಕಿತ್ತು ಹಾಕುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: Puneeth Rajkumar: ಅಪ್ಪು ಹೆಸರನ್ನು ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡ ನಮ್ರತಾ ಗೌಡ

ರಕ್ಷಣಾ ಸಿಬ್ಬಂದಿಯಿಂದ ದೌರ್ಜನ್ಯ

ಬೆಂಗಳೂರಿನಿಂದ ಕುಟುಂಬ ಸಮೇತ ಆಗಮಿಸಿದ್ದ ಅಪ್ಪು ಅಭಿಮಾನಿ ತುಂಬ ನೋವಿನಿಂದ ಅಪ್ಪು ಭಾವಚಿತ್ರದ ಸ್ಟಿಕರ್ ತೆಗೆಯುತ್ತಿದ್ದ ದೃಶ್ಯವನ್ನು ಕರವೇ ಗಜಸೇವೆ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರ ವೀಡಿಯೋ ರೆಕಾರ್ಡ್ ಮಾಡಿ ಇಲ್ಲಾಗುತ್ತಿರುವ ಘಟನೆಯನ್ನು ವಿವರಿಸಿದ್ದಾರೆ. ಇದನ್ನು ಗಮನಿಸಿದ ರಕ್ಷಣಾ ಸಿಬ್ಬಂದಿ ರಾಘವೇಂದ್ರ ಕಾರಿನಲ್ಲಿದ್ದ ಕನ್ನಡ ಬಾವುಟ ಶಲ್ಯವನ್ನು ತೆಗೆದುಕೊಂಡಿದ್ದಾರೆ. ಬೆಟ್ಟದಿಂದ ವಾಪಾಸ್ ಬರುವಾಗ ತೆಗೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಅದೆಷ್ಟೇ ವಿವರಿಸಿ ಹೇಳಿದ್ರೂ ಅಪ್ಪು ಫೋಟೋ ಇರಿಸಲಿಲ್ಲ,.

ತಿರುಪತಿಯಲ್ಲಿ ವಾಹನಕ್ಕೆ ಹಾಕಬಾರದಂತೆ ಕನ್ನಡ ಧ್ವಜ!

ತಿರುಪತಿಯಲ್ಲಿ ಕನ್ನಡ ಧ್ವಜ ಹಾಕುವಂತಿಲ್ಲ. ನಮ್ಮ ಆರಾಧ್ಯ ನಟ ಪುನೀತ್  ಫೋಟೋ ಸ್ಟಿಕ್ಕರ್ ಹಾಕುವಂತಿಲ್ಲ. ತಿರುಪತಿಗೆ ಹೋಗುವ ನಿಮ್ಮ ಕಾರಿನಲ್ಲಿ ಇಂಥ ಸ್ಟಿಕ್ಕರ್ ಇದ್ರೆ ಕಿತ್ತು ಹಾಕ್ತಾರೆ. ತಿರುಮಲ‌ ಗೇಟ್ ನಲ್ಲಿ ಅತ್ಯಂತ ಕೆಟ್ಟ ಅನುಭವ ಎದುರಿಸಿದ ಕನ್ನಡಿಗರು, ಕರವೇ ಗಜಸೇನೆ ಸಂಘಟನೆ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರ ಕಾರಿನಲ್ಲಿದ್ದ ಸ್ಟಿಕ್ಕರ್ ಕಿತ್ತು ಹಾಕಿದ್ರು.

ಕನ್ನಡಿಗರಿಗೆ ಮಾತ್ರವೇ ಈ ನಿರ್ಬಂಧ?

ಕರ್ನಾಟಕದಿಂದ ಬರುವ ಪ್ರತಿಯೊಂದು ವಾಹನ ತಪಾಸಣೆ ಮಾಡುತ್ತಾರೆ. ಆದರೆ ಬೇರೆ ರಾಜ್ಯದ ವಾಹನ ತಪಾಸಣೆ ಮಾಡೋದಿಲ್ಲ. ಕನ್ನಡ ಧ್ವಜಕ್ಕೂ ಅವಮಾನ ಮಾಡಿದ ಟಿಟಿಡಿ ಕ್ಷಮೆ ಕೋರಬೇಕು, ಕೂಡಲೇ ಆಂಧ್ರ ಸರ್ಕಾರದ ಗಮನಕ್ಕೆ ರಾಜ್ಯ ಸರ್ಕಾರ ತರಬೇಕು ಎಂದು ತಾಯ್ನಾಡು ರಾಘವೇಂದ್ರ ಆಗ್ರಹಿಸುತ್ತಾರೆ.

ಇದನ್ನೂ ಓದಿ: Puneeth Rajkumar: `ದ್ವಿತ್ವ’ ಸಿನಿಮಾದಲ್ಲಿ ಅಪ್ಪು ಲುಕ್​ ಹೇಗಿರ್ತಿತ್ತು ಗೊತ್ತಾ? ವೈರಲ್ ಆಯ್ತು ಮೀಸೆ ಬಿಟ್ಟ ಪುನೀತ್​ ಫೋಟೋ!

ತೆಲುಗು ಚಿತ್ರಗಳ ಷೋಗಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಗಂಟೆಗಟ್ಟಲೇ ಕಾಲ ಕಳೆಯುತ್ತಾರೆ. ಆದರೆ ಆಂಧ್ರದಲ್ಲಿ ಕರ್ನಾಟಕ ಧ್ವಜ, ಅಪ್ಪು ಫೋಟೋ ನಮ್ಮ ಕಾರಿಲ್ಲಿದ್ದರೂ ಕಿತ್ತು ಹಾಕ್ತಾರೆ. ಕೂಡಲೇ ಆಂಧ್ರ ಸರ್ಕಾರದ ಜೊತೆ ಕರ್ನಾಟಕ ಸರ್ಕಾರ ಈ ಅನ್ಯಾಯ ಸರಿಪಡಿಸಬೇಕಿದೆ ಅಂತ ಆಗ್ರಹಿಸಿದ್ದಾರೆ.
Published by:Annappa Achari
First published: