ಕಲಬುರಗಿ: ಬಿಎಸ್‌ವೈ ಹೆಲಿಕ್ಯಾಪ್ಟರ್ (Helicopter) ಲ್ಯಾಂಡಿಗ್ ವೇಳೆ ಭದ್ರತಾ ಲೋಪ ಕಂಡು ಬಂದಿದೆ. ಜೇವರ್ಗಿ ಪಟ್ಟಣ ಹೊರವಲಯದಲ್ಲಿ ನಿರ್ಮಿಸಲಾಗಿರೋ ಹೆಲಿಪ್ಯಾಡ್ (Helipad) ವ್ಯವಸ್ಥೆಯಲ್ಲಿ ಲೋಪ ಕಂಡುಬಂದಿದೆ. ಆದರೆ ಯಾವುದೇ ಅಪಾಯವಿಲ್ಲದೆ ಹೆಲಿಕ್ಯಾಪ್ಟರ್ ಲ್ಯಾಂಡ್ (Land) ಆಗಿದೆ ಎಂದು ತಿಳಿದುಬಂದಿದೆ. ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದಲ್ಲಿ ಈ ಘಟನೆ ಜರುಗಿದೆ. ಬಿಎಸ್‌ವೈ (BS Yediyurappa) ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ಆಗುವ ವೇಳೆ ಅದೇ ಜಮೀನಿನಲ್ಲಿದ್ದ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದಿದೆ.
ಬಿಎಸ್‌ವೈ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ವೇಳೆ ಹಾರಿಬಂದ ಪ್ಲಾಸ್ಟಿಕ್ ಚೀಲಗಳನ್ನು ಕಂಡು ಮುಂಜಾಗೃತೆ ವಹಿಸಲಾಗಿದೆ. ಇದರಿಂದಾಗಿ ಉಂಟಾಗುತ್ತಿದ್ದ ಅಪಾಯ ತಪ್ಪಿದೆ. ಹೆಲಿಪ್ಯಾಡ್ ಸುತ್ತ ಜಮೀನಿನನಲ್ಲಿ ಹಾಕಲಾಗಿರೋ ಪ್ಲಾಸ್ಟಿಕ್ ಚೀಲಗಳು ಅದರ ಗಾಳಿಗೆ ಹಾರಾಡಲು ಪ್ರಾರಂಭವಾಗುತ್ತದೆ ಇದರಿಂದಾಗಿ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ಮಾಡಲು ತೊಂದರೆ ಉಂಟಾಗುತ್ತದೆ. ಲ್ಯಾಂಡಿಂಗ್ ವೇಳೆ ಹೆಲಿಕ್ಯಾಪ್ಟರ್ ಮೇಲೆ ಹಾರಿ ಬಂದ ಪ್ಲಾಸ್ಟಿಕ್ ಚೀಲಗಳನ್ನು ಕಂಡು ಪೈಲೆಟ್ ತಕ್ಷಣ ಎಚ್ಚೇತ್ತು ಬೇರೆಡೆ ತೆಗೆದುಕೊಂಡು ಹೋಗುತ್ತಾರೆ. ಇದನ್ನು ನೀವು ವಿಡಿಯೋದಲ್ಲಿ ನೋಡಬಹುದು. ವಿಡಿಯೋವನ್ನು ಕೆಳಗೆ ನೀಡಲಾಗಿದೆ ಗಮನಿಸಿ.
ಲ್ಯಾಂಡಿಂಗ್ ವೇಳೆ ಹೆಲಿಕ್ಯಾಪ್ಟರ್ ಮೇಲೆ ಹಾರಿ ಬಂದ ಪ್ಲಾಸ್ಟಿಕ್ ಚೀಲಗಳನ್ನು ಕಂಡು ಪೈಲೆಟ್ ತಕ್ಷಣ ಎಚ್ಚೇತ್ತು ಬೇರೆಡೆ ತೆಗೆದುಕೊಂಡು ಹೋಗುತ್ತಾರೆ. ನಂತರ ಅಲ್ಲಿರುವ ಪ್ಲಾಸ್ಟಿಕ್ ಚೀಲಗಳನ್ನು ಪೊಲೀಸರು ತೆರವುಗೊಳಿಸುತ್ತಾರೆ. ಇದನ್ನೂ ನೀವು ವಿಡಿಯೋ ಮೂಲಕ ನೋಡಬಹುದು ಇಲ್ಲಿ ಗಮನಿಸಿ.
ಇನ್ನೇನು ಲ್ಯಾಂಡ್ ಮಾಡಬೇಕು ಎನ್ನುವಾಗ ಭೂಮಿಗೆ ತೀರಾ ಹತ್ತಿರ ಬಂದಿದ್ದ ಹೆಲಿಕ್ಯಾಪ್ಟರ್ ಪಂಕದ ಗಾಳಿಗೆ ಜಮೀನಲ್ಲಿರುವ ಎಲ್ಲಾ ಪ್ಲಾಸ್ಟಿಕ್ ಚೀಲಗಳು ಹಾರಾಡಲು ಆರಂಭಿಸಿರುವನ್ನು ನೀವೂ ಗಮನಿಸಬಹುದು. ನಂತರ ತಕ್ಷಣ ಸಮಯ ಪ್ರಜ್ಷೆಯಿಂದ ಬೇರೆಡೆ ಲ್ಯಾಂಡ್ ಮಾಡಲಾಗಿದೆ. ನಂತರ ಒಂದೆರಡು ಸುತ್ತು ಹಾರಾಟ ನಡೆಸಿ ಹೆಲಿಕ್ಯಾಪ್ಟರ್ ಲ್ಯಾಂಡ್ ಮಾಡಿದ ಪೈಲೆಟ್ ಚಾಕಚಕ್ಯತೆ ಮೆರೆದಿದ್ದಾರೆ. ಹೆಲಿಕ್ಯಾಪ್ಟರ್ ಮೇಲೆ ಪ್ಲಾಸ್ಟಿಕ್ ಚೀಲಗಳು ತೂರಿಬಂದಿದ್ದರಿಂದ ಅಧಿಕಾರಿಗಳು ಮತ್ತು ಪೊಲೀಸರು ಆತಂಕಕ್ಕೊಳಗಾಗಿದ್ದರು.
ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದೇ ಇರೋದ್ರಿಂದ ಭದ್ರತಾ ಲೋಪ ಉಂಟಾಗಿದೆ. ಜೇವರ್ಗಿ ಪಟ್ಟಣ ಹೊರವಲಯದಲ್ಲಿ ನಿರ್ಮಿಸಲಾಗಿರೋ ಹೆಲಿಪ್ಯಾಡ್ ವ್ಯವಸ್ಥೆಯೇ ಸರಿಯಾಗಿರಲಿಲ್ಲ.
ಹುಟ್ಟುಹಬ್ಬದ ದಿನವೇ ಶಿವಮೊಗ್ಗಕ್ಕೆ ಬರ್ತಿನಿ ಅಂತ ಮೋದಿ ಸಹ ಹೇಳಿದ್ದಾರೆ
ಈ ತಿಂಗಳು 27ಕ್ಕೆ ನನಗೆ 80 ವರ್ಷ ತುಂಬುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬರುತ್ತಿದ್ದಾರೆ. ಅಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಆಗಲಿದೆ. ನಿಮ್ಮ ಹುಟ್ಟುಹಬ್ಬದ ದಿನವೇ ಬರ್ತಿನಿ ಅಂತ ಮೋದಿ ಸಹ ಹೇಳಿದ್ದಾರೆ. ಸಾಮಾನ್ಯ ಪುರಸಭೆ ಸದಸ್ಯನಾಗಿ ಆಯ್ಕೆಯಾಗಿ ಬಂದ ನಾನು ಮುಖ್ಯಮಂತ್ರಿಯೂ ಆಗಿದ್ದೇನೆ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ್ದರು.
ಅಂದು ನಾನು ಸದನಕ್ಕೆ ಆಯ್ಕೆಯಾಗಿ ಬಂದಾಗ ಇಬ್ಬರೇ ಇದ್ದೆವು. ಎಂದು ನಾನು ಹಿಂದಿರುಗಿ ನೋಡುವ ಕೆಲಸ ಮಾಡಿಲ್ಲ. ಬಗರ್ ಹುಕುಂ ಜಾಮೀನನ್ನು ಸಾಗುವಳಿ ಮಾಡಿದ ರೈತರಿಗೆ ನ್ಯಾಯ ಕೊಡಿಸಲು ಸದನದಲ್ಲೇ ಧರಣಿ ಮಾಡಿದ್ದೇನೆ. ಅಂದು ಸಿಎಂ ಆಗಿದ್ದ ಕೃಷ್ಣ ಅವರು ಇದಕ್ಕೆ ಪರಿಹಾರ ಕೊಡುವ ಕೆಲಸ ಮಾಡಿದರು ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ್ದರು.
ಇಷ್ಟು ಎತ್ತರಕ್ಕೆ ಬೆಳೆಯಲು ಆರ್ಎಸ್ಎಸ್ ಕಾರಣ
ನಾನು ಇವತ್ತು ಈ ಎತ್ತಕ್ಕೆ ಬೆಳಯಲು ಆರ್ಎಸ್ಎಸ್ ಕಾರಣ. ಅಲ್ಲಿನ ತರಬೇತಿ, ಅವಕಾಶ ನನಗೆ ಈ ಸ್ಥಾನಮಾನ ಸಿಗಲು ಕಾರಣವಾಯ್ತು. ಜೀವನದಲ್ಲಿ ಇದನ್ನು ನಾನು ಮರೆಯಲು ಸಾಧ್ಯವಿಲ್ಲ. ಇವತ್ತು ನಮಗೆ ಎಲ್ಲರಿಗೂ ಆದರ್ಶ ದೇವೇಗೌಡರು, ಇದು ಸಣ್ಣ ವಿಚಾರ ಅಲ್ಲ. ಏಕೆಂದರೆ ಈ ವಯಸ್ಸಿನಲ್ಲೂ ಕೂಡ ಅವರು ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಇಷ್ಟು ವರ್ಷ ನಾನು ಸದನದಲ್ಲಿ ಇರಲು ಕಾರಣ ನನ್ನ ಕ್ಷೇತ್ರದ ಜನತೆ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಬಿ ಎಸ್ ಯಡಿಯೂರಪ್ಪ ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ