Bank Employee Murder: ಕಳ್ಳ ಎಂದು ಭಾವಿಸಿ ಬ್ಯಾಂಕ್ ನೌಕರನಿಗೆ ಹೊಡೆದ ಸೆಕ್ಯೂರಿಟಿ ಗಾರ್ಡ್, ಸತ್ತೇ ಹೋದ ಅಮಾಯಕ!

ಬೆಂಗಳೂರಿನಲ್ಲಿ ಮಧ್ಯರಾತ್ರಿ ಕಾಂಪೌಂಡ್ ಹಾರಿದ ಬ್ಯಾಂಕ್ (Bank) ನೌಕರನ್ನು ಸೆಕ್ಯೂರಿಟಿ ಗಾರ್ಡ್ ಕಳ್ಳ ಎಂದುಕೊಂಡು ರಾಡ್‍ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಹೊಡೆದ ಹೊಡೆತಕ್ಕೆ ಬ್ಯಾಂಕ್ ಉದ್ಯೋಗಿ ಸಾವನ್ನಪ್ಪಿದ್ದಾನೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಳ್ಳತನ  ಆಗೋದು ಸಾಮನ್ಯವಾಗಿ ಹೋಗಿದೆ. ಅದ್ರಲ್ಲೂ ಕೆಲ ಗ್ಯಾಂಗ್‍ಗಳು (Gangs) ಅಪಾರ್ಟ್‍ಮೆಂಟ್‍ಗಳನ್ನು (Apartment) ಟಾರ್ಗೆಟ್ (Target) ಮಾಡಿಕೊಂಡು ಕಳ್ಳತನ ಮಾಡೋದನ್ನು ನೋಡಿದ್ದೇವೆ. ಸೆಕ್ಯೂರಿಟಿ ಗಾರ್ಡ್‍ಗಳು (security guard) ಎಷ್ಟೇ ಎಚ್ಚರಿಕೆಯಿಂದ ಇದ್ರೂ ಅವರನ್ನು ಯಮಾರಿಸಿ ಹೇಗೂ ನುಗ್ಗಿ ಕಳ್ಳತನ ಮಾಡಿಯೇ ಬಿಡುತ್ತಾರೆ. ಅದಕ್ಕೆ ನೈಟ್ ಡ್ಯೂಟಿ ಸೆಕ್ಯೂರಿಟಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡುತ್ತಾ ಇರುತ್ತಾರೆ. ಆದ್ರೂ ಇಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಹೌದು ಬೆಂಗಳೂರಿನಲ್ಲಿ ಮಧ್ಯರಾತ್ರಿ ಕಾಂಪೌಂಡ್ ಹಾರಿದ ಬ್ಯಾಂಕ್ (Bank) ನೌಕರನ್ನು ಸೆಕ್ಯೂರಿಟಿ ಗಾರ್ಡ್ ಕಳ್ಳ ಎಂದುಕೊಂಡು ರಾಡ್‍ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಹೊಡೆದ ಹೊಡೆತಕ್ಕೆ ಬ್ಯಾಂಕ್ ಉದ್ಯೋಗಿ ಸಾವನ್ನಪ್ಪಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಒಬ್ಬ ಅಮಾಯಕನನ್ನು ಮರ್ಡರ್ ಮಾಡಿದಂತಾಗಿದೆ.

ಅಂದು ರಾತ್ರಿ ನಿಜಕ್ಕೂ ಆಗಿದ್ದೇನು..?
ಜೂನ್ 5ರಂದು ಮಾರತ್ತಹಳ್ಳಿ ಸಮೀಪದ ವನ್ಶಿ ಸಿಟಡೆಲ್ ಅಪಾರ್ಟ್‍ಮೆಂಟ್ ಅಲ್ಲೇ ವಾಸ ಮಾಡುತ್ತಿದ್ದ ಅಭಿಷೇಕ್ ಎಂಬ ಬ್ಯಾಂಕ್ ನೌಕರ ಅಪಾರ್ಟ್‍ಮೆಂಟ್‍ನ ಕಾಂಪೌಂಡ್ ಹಾರಿದ್ದಾನೆ. ಅದಕ್ಕೆ ಗಾಬರಿಕೊಂಡು ಸೆಕ್ಯೂರಿಟಿ ಗಾರ್ಡ್ ಶ್ಯಾಮನಾತ್ ನೀನು ಯಾರೆಂದು ಪ್ರಶ್ನಿದ್ದಾನೆ. ಅದಕ್ಕೆ ಅಭಿಷೇಕ್ ಏನೂ ಉತ್ತರ ಕೊಟ್ಟಿಲ್ಲ. ಎಷ್ಟೇ ಕೇಳಿದ್ರೂ ಕಳ್ಳರ ರೀತಿಯಲ್ಲೇ ಮುಂದೆ ಮುಂದೆ ಹೋಗಿದ್ದಾನೆ. ಆಗ ಸೆಕ್ಯೂರಿಟಿ ಗಾರ್ಡ್ ಈತ ಕಳ್ಳ ಇರಬಹುದು. ಇನ್ನೇನಾದರೀ ಕಳ್ಳತನ ಮಾಡಿ ಬಿಟ್ರೆ ನನ್ನ ಕೆಲಸ ಹೋಗುತ್ತದೆ ಎಂದು, ಅಪಾರ್ಟ್‍ಮೆಂಟ್ ಜಿಮ್‍ನಲ್ಲಿದ್ದ ರಾಡ್ ತೆಗೆದುಕೊಂಡು ಅಭಿಷೇಕ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಅಭಿಷೇಕ್ ಮೃತಪಟ್ಟಿದ್ದಾನೆ. ಅಭಿಷೇಕ್ ನಿಜ ಹೇಳದ ಕಾರಣ ಸೆಕ್ಯೂರಿಟಿ ಗಾರ್ಡ್ ಕೊಲೆಗಾರನಾಗಿ ಜೈಲಿನಲ್ಲಿದ್ದಾನೆ.

ಆ ಬ್ಯಾಂಕ್ ನೌಕರ ಯಾರು? ನಿಜ ಹೇಳಲಿಲ್ಲ ಏಕೆ?
ಹೀಗೆ ಸುಮ್ಮನೆ ಕೊಲೆಯಾದ ಬ್ಯಾಂಕ್ ನೌಕರನ ಹೆಸರು ಅಭಿಷೇಕ್ ಅಂತ. ಛತ್ತೀಸ್‍ಗಢ ಮೂಲದವನು. ತರಬೇತಿ ಸಲುವಾಗಿ ಬೆಂಗಳೂರಿಗೆ ಬಂದು ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸವಾಗಿದ್ದ. ಅಂತ ಕೊಲೆಯಾದ ದಿನ ಮಧ್ಯರಾತ್ರಿ ತನಕ ಪಾರ್ಟಿ ಮಾಡಿ ಅಪಾರ್ಟ್‍ಮೆಂಟ್‍ಗೆ ಬಂದಿದ್ದ. ಹಾಗೆ ಬಂದವನು ಮೇನ್ ಗೇಟ್‍ನಿಂದ ಒಳಗೆ ಹೋಗದೇ ಅಪಾರ್ಟ್‍ಮೆಂಟ್‍ನ ಕಾಂಪೌಂಡ್ ಹಾರಿದ್ದಾನೆ. ಆಗ ಸೆಕ್ಯೂರಿಟಿ ಎಷ್ಟೇ ಕೇಳಿದ್ರೂ ತಾನು ಯಾರೆಂದು ಹೇಳದೇ ರಾಡ್‍ನಿಂದ ಹೊಡೆತ ತಿಂದು ಸಾವನ್ನಪ್ಪಿದ್ದಾನೆ. ಪಾರ್ಟಿ ಮಾಡಿದ್ದ ಗೊತ್ತಾದ್ರೆ, ಅಪಾರ್ಟ್‍ಮೆಂಟ್‍ನಲ್ಲ ಮರ್ಯಾದೆ ಹೋಗುತ್ತದೆ ಎಂದು ಅಭಿಷೇಕ್ ನಿಜ ಹೇಳಿಲ್ಲ ಎಂದು ತಿಳಿದು ಬಂದಿದೆ. ನಿನ ಹೇಳಿದ್ರೆ ಬದುಕುತ್ತಿದ್ದ. ಏನೂ ಮಾತನಾಡದೇ ಮರ್ಡರ್ ಆಗಿ ಹೋಗಿದ್ದಾನೆ.

ಇದನ್ನೂ ಓದಿ : Guruji Murder Case: ಚಂದ್ರಶೇಖರ್ ಗುರೂಜಿ ಹಂತಕರಿಗೆ ಫುಲ್ ಡ್ರಿಲ್; ಆರೋಪಿಗಳು ಬಾಯ್ಬಿಟ್ರು ಭಯಾನಕ ಸತ್ಯ

ಪೊಲೀಸರ ವಿಚಾರಣೆ ವೇಳೆ ಸೆಕ್ಯೂರಿಟಿ ಹೇಳಿದ್ದೇನು?
ಅಪಾರ್ಟ್‍ಮೆಂಟ್ ನಿವಾಸಿ ಯಾರೆಂದು ತಿಳಿಯದೇ ರಾಡ್‍ನಿಂದ ಬಲವಾಗಿ ಹೊಡೆದು ಅಮಾಯಕನ ಪ್ರಾಣ ತೆಗೆದ ಆರೋಪಿ ಸೆಕ್ಯೂರಿಟಿ ಗಾರ್ಡ್‍ನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆಗ ಶ್ಯಾಮನಾಥ್, ನಾನು ಎಷ್ಟು ಕೇಳಿದ್ರೂ ಅವರು ಏನೂ ಉತ್ತರಿಸಲಿಲ್ಲ ಅದಕ್ಕೆ ಗಾಬರಿಕೊಂಡು ಕಳ್ಳ ಎಂದು ಕೊಂಡೆ. ಅದಲ್ಲದೇ ಮಧ್ಯರಾತ್ರಿ 2 ಗಂಟೆಯಲ್ಲಿ ಕಾಂಪೌಂಡ್ ಹಾರಿ ಬಂದ್ರೆ ಏನೂ ತಾನೇ ಮಾಡೋದು. ಆತ ಕಳ್ಳತನ ಮಾಡಿ ಬಿಟ್ರೆ ನನ್ನ ಕೆಲಸ ಹೋಗುತ್ತದೆ ಎಂದು ರಾಡ್‍ನಿಂದ ಹೊಡೆದೆ. ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಪೊಲೀಸರ ಬಳಿ ಹೇಳಿದ್ದಾನೆ.

ಇದನ್ನೂ ಓದಿ : Chandrashekhar Guruji ಕೊಲೆ ಸುತ್ತ ಹೆಣ್ಣು-ಹೊನ್ನು-ಮಣ್ಣು ಗುಮಾನಿ; ಆರೋಪಿಯ ಪತ್ನಿ ವನಜಾಕ್ಷಿ ಸ್ಫೋಟಕ ಹೇಳಿಕೆ

ಇಲ್ಲಿ ನೋಡಿದ್ರೆ ಸೆಕ್ಯೂರಿಟಿ ಗಾರ್ಡ್ ತನ್ನ ಕೆಲಸ ಹೋಗುತ್ತದೆ ಎಂಬ ಭಯದಲ್ಲಿ ಈ ರೀತಿ ಮಾಡಿರುವುದ ತಿಳಿಯುತ್ತದೆ. ತಮ್ಮ ಅಪಾರ್ಟ್‍ಮೆಂಟ್ ರಕ್ಷಣೆಗಾಗಿ ಏನೂ ಯೋಚನೆ ಮಾಡದೇ ರಾಡ್‍ನಿಂದ ಹೊಡೆದು ಬಿಟ್ಟಿದ್ದಾನೆ. ಬ್ಯಾಂಕ್ ನೌಕರ ಅಭಿಷೇಕ್ ಆದ್ರೂ ನಿಜ ಹೇಳಬೇಕಿತ್ತು. ನಿಜ ಹೇಳಿದ್ರೆ ಪ್ರಾಣನಾದ್ರೂ ಉಳಿಯುತ್ತಿತ್ತು. ಪಾರ್ಟಿ ಮಾಡಿದ್ದ ಮುಚ್ಚಿಡಲು ಹೋಗಿ ಸಾವನ್ನಪ್ಪಿದ್ದಾನೆ.
Published by:Savitha Savitha
First published: