• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Narendra Modi: ಮೋದಿ ರೋಡ್‌ ಶೋ ವೇಳೆ ಭದ್ರತಾ ಲೋಪ, ಪ್ರಧಾನಿ ಕಾರಿನ ಬಳಿ ಓಡಿ ಬಂದ ಯುವಕ!

Narendra Modi: ಮೋದಿ ರೋಡ್‌ ಶೋ ವೇಳೆ ಭದ್ರತಾ ಲೋಪ, ಪ್ರಧಾನಿ ಕಾರಿನ ಬಳಿ ಓಡಿ ಬಂದ ಯುವಕ!

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ದಾವಣಗೆರೆಯಲ್ಲಿ ನಡೆದ ರೋಡ್​ ಶೋ ಸಂದರ್ಭದಲ್ಲಿ ಪ್ರಧಾನಿಗಳ ಭದ್ರತೆಯಲ್ಲಿ ಲೋಪ ಉಂಟಾಗಿದೆ. ವ್ಯಕ್ತಿಯೊಬ್ಬ ಬ್ಯಾರಿಕೇಡ್​ ದಾಟಿ ಮೋದಿ ವಾಹನದ ಬಳಿ ನೂಗ್ಗಿ ಬರಲು ಓಡಿ ಬಂದಿದ್ದಾನೆ. ಆದರೆ ಈ ವೇಳೆಗೆ ಪೊಲೀಸರು ಆತನನ್ನು ತಡೆದಿದ್ದಾರೆ.

  • News18 Kannada
  • 3-MIN READ
  • Last Updated :
  • Davanagere (Davangere), India
  • Share this:

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಕರ್ನಾಟಕದಲ್ಲಿ (Karnataka) ಇಂದು ಮಿಂಚಿನ ಸಂಚಾರ ಮಾಡಿದ್ದರು. ದಾವಣಗೆರೆಯಲ್ಲಿ (Davanagere) ಕಾಂಗ್ರೆಸ್​ (Congress) ಹಾಗೂ ಜೆಡಿಎಸ್​ (JDS) ವಿರುದ್ಧ ಗುಡುಗಿದ್ದರು. ಆದರೆ ಸಮಾರಂಭ ಸ್ಥಳಕ್ಕೆ ಆಗಮಿಸುವ ಮುನ್ನ ವೇದಿಕೆ ಬಳಿಗೆ ಪ್ರಧಾನಿಗಳು ರೋಡ್​ ಶೋ (Road Show) ಮೂಲಕ ಆಗಮಿಸಿದ್ದರು. ಆದರೆ ಈ ವೇಳೆ ಪ್ರಧಾನಿಗಳ ಭದ್ರತೆಯಲ್ಲಿ ಲೋಪ (Security Breach) ಉಂಟಾಗಿದೆ. ವ್ಯಕ್ತಿಯೊಬ್ಬ ಬ್ಯಾರಿಕೇಡ್ ದಾಟಿ ಮೋದಿ ವಾಹನದ ಬಳಿ ನುಗ್ಗಿ ಬರಲು ಓಡಿ ಬಂದಿದ್ದಾನೆ. ಆದರೆ ಈ ವೇಳೆಗೆ ಪೊಲೀಸರು ಆತನನ್ನು ತಡೆದಿದ್ದಾರೆ.


ಕರ್ನಾಟಕದಲ್ಲಿ ಎರಡನೇ ಬಾರಿಗೆ ಭದ್ರತಾ ಲೋಪ


2023ರ ಚುನಾವಣೆಯ ಪ್ರಚಾರ ನಿಮಿತ್ತ ಕರ್ನಾಟಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ಸಂದರ್ಭದಲ್ಲಿ ಎರಡನೇ ಬಾರಿಗೆ ಭದ್ರತಾ ಲೋಪ ಎದುರಾಗಿದೆ. ದಾವಣಗೆರೆ ಘಟನೆಗೂ ಮುನ್ನ ಕಳೆದ ಬಾರಿಗೆ ಬೆಳಗಾವಿಗೆ ಆಗಮಿಸಿದ್ದ ಸಂದರ್ಭದಲ್ಲಿ ಬಾಲಕನೋರ್ವ ಪ್ರಧಾನಿಗಳ ಸಮೀಪಕ್ಕೆ ಬರಲು ಯತ್ನಿಸಿದ್ದ.


ರಾಷ್ಟ್ರೀಯ ಯುವಜನೋತ್ಸವದ 26ನೇ ಆವೃತ್ತಿಗೆ ಚಾಲನೆ ನೀಡಲು ಪ್ರಧಾನಿ ಮೋದಿ ಹುಬ್ಬಳ್ಳಿ-ಧಾರವಾಡ ರೈಲ್ವೆ ಕ್ರೀಡಾ ಸಂಕೀರ್ಣಕ್ಕೆ ತೆರಳುತ್ತಿದ್ದಾಗ ಮೊದಲ ಬಾರಿಗೆ ಭದ್ರತಾ ಲೋಪ ಎದುರಾಗಿತ್ತು.




ಯುವಕನನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು


ಇಂದು ಮೋದಿ ವಾಹನದ ಬಳಿಗೆ ಆಗಮಿಸಲು ಯತ್ನಿಸಿದ ಯುವಕನನ್ನು ಕೊಪ್ಪಳ ಮೂಲದವರು ಎಂದು ಗುರುತಿಸಲಾಗಿದೆ. ಸದ್ಯ ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.


ಇನ್ನು, ಬ್ಯಾರಿಕೇಡ್​​ ದಾಟಲು ಯತ್ನಿಸಿದ ವ್ಯಕ್ತಿಯನ್ನು ಗಮನಿಸಿ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರೇ ಓಡಿ ಬಂದಿದ್ದರು. ಕ್ಷಣ ಮಾತ್ರದಲ್ಲಿ ಆತನಿಗೆ ಅಡ್ಡಲಾಗಿ ಓಡಿ ಬಂದು ಆತನನ್ನು ಹಿಡಿದುಕೊಂಡು. ಆ ಬಳಿಕ ವಿಶೇಷ ರಕ್ಷಣಾ ಪಡೆಯ ಕಮಾಂಡೋ ಕೂಡ ಆಗಮಿಸಿ ವ್ಯಕ್ತಿಯನ್ನು ತಡೆದರು.




ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯಗೆ ಮೋದಿ ಟಾಂಗ್


ಇನ್ನು, ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಯುತ್ತಿದೆ. ಆದರೆ ಎಐಸಿಸಿ ಅಧ್ಯಕ್ಷರ ತವರು ಜಿಲ್ಲೆ ಕಲಬುರಗಿ ಪಾಲಿಕೆ ಬಿಜೆಪಿಯ ಪಾಲಾಗಿದೆ. ಇದು 2023ಕ್ಕೆ ಬಿಜೆಪಿಗೆ ಸಿಕ್ಕಿರುವ ಶುಭ ಸಂಕೇತ ಎಂದು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಹೇಳದೆ ಟಾಂಗ್​ ಕೊಟ್ಟರು.

top videos


    ಅಲ್ಲದೆ ಮಾಜಿ ಮುಖ್ಯಮಂತ್ರಿ ಕಾರ್ಯಕರ್ತನ ಕಪಾಳಕ್ಕೆ ಹೊಡೆದ ವಿಡಿಯೋ ನೋಡಿದೆ. ಕಾರ್ಯಕರ್ತನಿಗೆ ಹೊಡೆದು ಆನಂದಪಟ್ಟರು. ಕಾರ್ಯಕರ್ತರನ್ನ ಗೌರವಿಸಿದವರು ಜನರನ್ನು ಹೇಗೆ ಗೌರವಿಸುತ್ತಾರೆ. ಬಿಜೆಪಿಯಲ್ಲಿ ಹಾಗಿಲ್ಲ ಎಲ್ಲರೂ ಒಂದೇ ಎಂದು ನಂಬಿದ್ದೀವಿ ಎಂದು ಸಿದ್ದರಾಮಯ್ಯ ಅವರ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

    First published: