Alanda: ಆಳಂದದಲ್ಲಿ ನಿಷೇಧಾಜ್ಞೆ ಜಾರಿ; ಧಾರ್ಮಿಕ ಸ್ವಾತಂತ್ರ್ಯದ ಹರಣ ಎಂದ Chaitra Kundapura

ಕಲುಬುರಗಿ ಜಿಲ್ಲೆಗೆ ಪ್ರವೇಶ ನಿಷೇಧಿಸಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್​, ಚೈತ್ರಾ ಕುಂದಾಪುರ, ಸಿದ್ದಲಿಂಗ ಸ್ವಾಮಿಗೆ ನೋಟಿಸ್​ ನೀಡಲಾಗಿದೆ.

ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ

  • Share this:
ಕಲಬುರಗಿ ಜಿಲ್ಲೆಯ ಆಳಂದ (Alanda Town) ಪಟ್ಟಣದ ಶಿವಲಿಂಗ ಪೂಜೆ ವೇಳೆ ಶ್ರೀರಾಮ ಸೇನೆ ಹಮ್ಮಿಕೊಂಡ ಆಳಂದ ಚಲೋ (Alanda Chalo) ಹೋರಾಟ ಖಂಡಿಸಿ ಸ್ಥಳೀಯ ಮುಸ್ಲಿಂ ಸಂಘಟನೆ ಗಳು ಕೂಡ ಹೋರಾಟ ನಡೆಸಿದವು. ಇದರಿಂದಾಗಿ ಎರಡು ಕೋಮುಗಳ ನಡುವೆ ವಿವಾದ ಉಂಟಾಗಿ ಬಿಗುವಿನ ವಾತವಾರಣ ನಿರ್ಮಾಣವಾಗಿದೆ. ಈ ಹಿನ್ನಲೆ ಸ್ಥಳದಲ್ಲಿ ಬಂದೋಬಸ್ತ್​ ಮಾಡಲಾಗಿದ್ದು, ಸೆಕ್ಷನ್​ 144 ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ.

ಇನ್ನು ಈ ಪ್ರಕರಣ ಸಂಬಂಧ  ಪ್ರತಿಕ್ರಿಯಿಸಿರುವ ಚೈತ್ರಾ ಕುಂದಾಪುರ (Chaitra Kundapura),   ಆಳಂದ ಪಟ್ಟಣದಲ್ಲಿ ಎಂದಿನಂತೆ ಶಿವರಾತ್ರಿ ಹಬ್ಬದ  ಹಿನ್ನೆಲೆ ಶಿವಲಿಂಗಕ್ಕೆ ಪೂಜೆ ಮಾಡಬೇಕೆಂದು ಕೇಳಿಕೊಂಡಿದ್ದೆವು. ಧಾರ್ಮಿಕ ಸಭೆ ಮಾಡುವ ಯೋಚನೆ ನಮಗೆ ಇರಲಿಲ್ಲ. ಹಿಂದೂಗಳು ಆಳಂದದಲ್ಲಿ ಶಿವಲಿಂಗಕ್ಕೆ ಪೂಜೆ ಮಾಡಲು ನಿರ್ಧಾರ ಮಾಡಿದ ನಂತರ ಮುಸ್ಲಿಂ ಸಮುದಾಯದವರು ದರ್ಗಾದಲ್ಲಿ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ ಎಂದರು

ಧಾರ್ಮಿಕ ಸ್ವಾತಂತ್ರ್ಯ ಹರಣ

ಅಲ್ಲದೇ ಜಿಲ್ಲಾಧಿಕಾರಿ ಅವರ ನಿರ್ಧಾರ ಧಾರ್ಮಿಕ ಸ್ವಾತಂತ್ರ್ಯ ಹರಣವಾಗಿದೆ. ಶಿವರಾತ್ರಿಗೆ ಪೂಜೆ ಮಾಡುವುದು ನಮ್ಮ ಸಂಕಲ್ಪವಾಗಿದೆ. ಪೂಜೆ ಮಾಡುವುದು ನಮ್ಮ ಮೂಲಭೂತ ಹಕ್ಕಾಗಿದೆ.  ಈ ಸಂಬಂಧ ಏನು ಮಾಡಬೇಕು ಎಂಬ ಕುರಿತು  ಹಿಂದೂ ಪರ ಸಂಘಟನೆ ಮುಖಂಡರು ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: Siddaramaiahನವರೇ ನಿಮ್ಮಪ್ಪನ ಆಣೆಗೂ ಮತ್ತೆ ನೀವು ಸಿಎಂ ಆಗಲ್ಲ: C.T.Ravi

ಹಿಜಾಬ್ ಬಗ್ಗೆ ಮುಸ್ಲಿಂ ಹೆಣ್ಣುಮಕ್ಕಳು ಜಾಗೃತರಾಗಲಿ...!

ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಹಿಜಾಬ್- ಕೇಸರಿ ಶಾಲು ಸಂಘರ್ಷ ವಿಚಾರ ಕುರಿತು  ಮಾತನಾಡಿ,  ಹಿಜಾಬ್ ವಿಚಾರದ ತೀರ್ಪು ಬರುವವರೆಗೂ ಕಾಯಬೇಕಿದೆ. ಕೋರ್ಟ್ ತೀರ್ಪು ತಡವಾದರೆ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗುತ್ತದೆ. ಇದರಿಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ  ನಷ್ಟವಾಗುತ್ತದೆ. ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣ ನಷ್ಟ ಆಗುವ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ  ಅನುಕಂಪ ಇದೆ. ಯಾಕೆಂದರೆ ಅವರು ಕೀಲಿ ಗೊಂಬೆ ತರಹ ಆಗಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸ್ವಂತ ಯೋಚನಾ ಶಕ್ತಿ ಇಲ್ಲ. ಹಿಜಾಬ್ ಬಗ್ಗೆ ಮುಸ್ಲಿಂ ಹೆಣ್ಣುಮಕ್ಕಳು ಜಾಗೃತಗೊಳ್ಳಬೇಕಿದೆ. ನಾನು ಒಬ್ಬ ಮಹಿಳೆಯಾಗಿ ಹೇಳುತ್ತೇನೆ.  ಪ್ರತಿ ಹೆಣ್ಣುಮಕ್ಕಳಿಗೆ ಶಿಕ್ಷಣ ಮುಖ್ಯವಾಗಿದೆ. ಶಿಕ್ಷಣವು ಬದುಕಿಗೆ ಬೇಕು. ನಿಮಗೆ ಧರ್ಮ ಮುಖ್ಯ ಅಂದರೆ, ನೀವು ಮದರಸಾಗಳಿಗೆ ಹೋಗಬೇಕು. ಈ ಬಗ್ಗೆ ವಿದ್ಯಾರ್ಥಿಗಳು ಧರ್ಮ ಮುಖ್ಯನೋ ಹಾಗೂ ಶಿಕ್ಷಣ ಮುಖ್ಯನೋ ನಿರ್ಧಾರ ಮಾಡಲಿ ಎಂದರು.

ಇದನ್ನೂ ಓದಿ: ಮೃತ Naveen ಕುಟುಂಬಕ್ಕೆ CM ಸಾಂತ್ವನ; ಬೆಳಗ್ಗೆ ಅಷ್ಟೇ ಮಗ ಮಾತನಾಡಿದ್ದ ಎಂದು ಕಣ್ಣೀರಿಟ್ಟ ತಂದೆ

ಉದ್ವಿಗ್ನಗೊಂಡ ಆಳಂದ

ಕಲುಬುರಗಿ ಜಿಲ್ಲೆಗೆ ಪ್ರವೇಶ ನಿಷೇಧಿಸಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್​, ಚೈತ್ರಾ ಕುಂದಾಪುರ, ಸಿದ್ದಲಿಂಗ ಸ್ವಾಮಿಗೆ ನೋಟಿಸ್​ ನೀಡಲಾಗಿದೆ. ಕೋಮು ಸಾಮರಸ್ಯ ಹದಗೆಡುವ ಆರೋಪದ ಮೇಲೆ ಅವರ ಆಗಮನಕ್ಕೆ ನಿರ್ಬಂಧ ಹೇರಲಾಗಿದೆ. ಆಳಂದ ತಾಲೂಕು ಮತ್ತು ಕಲಬುರಗಿ ನಗರದ ಅನೇಕ ಕಡೆ ನಿಷೇಧಾಜ್ಞೆ ಕೂಡಾ ವಿಧಿಸಲಾಗಿತ್ತು. ಇನ್ನು ಹತ್ತು ಜನರಿಗೆ ಲಿಂಗಕ್ಕೆ ಪೂಜೆಗೆ ಅವಕಾಶವನ್ನು ಜಿಲ್ಲಾಳಿತ ನೀಡಿತ್ತು. ಅದರಂತೆ ಇಂದು ಕೇಂದ್ರ ಸಚಿವ ಭಗವಂತ ಕೂಬಾ, ಶಾಸಕರಾದ ರಾಜಕುಮಾರ್ ಪಾಟೀಲ್, ಬಸವರಾಜ್ ಮತ್ತಿಮೂಡ್ ಸೇರಿದಂತೆ ಹತ್ತು ಜನರಿಗೆ ಅವಕಾಶ ನೀಡಲಾಗಿತ್ತು. ಆದರೆ ನೂರಾರು ಜನರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಳಂದಕ್ಕೆ ಹೊರಟಿದ್ದರಿಂದ ಪೊಲೀಸರು ನಿಷೇಧ ವಿಧಿಸಿದರು.
Published by:Seema R
First published: