ದಕ್ಷಿಣ ಕನ್ನಡ: ಮಂಗಳೂರಿನಲ್ಲಿ (Mangaluru) ಚೂರಿ ಇರಿದು ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಕಾಟಿಪಳ್ಳದ ನಾಲ್ಕನೇ ಬ್ಲಾಕ್ನಲ್ಲಿ 40 ವರ್ಷದ ಜಲೀಲ್ ಎಂಬ ವ್ಯಕ್ತಿಗೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿದ್ದರು. ಗಾಯಾಳು ಜಲೀಲ್ನನ್ನು ಮುಕ್ಕ ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಜಲೀಲ್ ಸಾವನ್ನಪ್ಪಿದ್ದಾರೆ. ಜಲೀಲ್ ಕೊಲೆ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ 144 (Section 144) ಹಾಕಲಾಗಿದೆ. ಜಲೀಲ್ ಎದೆಯ ಭಾಗಕ್ಕೆ ಚೂರಿಯಿಂದ ಇರಿಯಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಪೊಲೀಸ್ ಪ್ರಕಟಣೆ
ಡಿಸೆಂಬರ್ 24ರಂದು ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಾದ ಸುರತ್ಕಲ್, ಬಜಪೆ, ಕಾವೂರು ಹಾಗೂ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕ್ಷುಬ್ಧ ವಾತಾವಾರಣ ಉಂಟಾಗಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿವೆ.
ಈ ಹಿನ್ನೆಲೆ ದಿನಾಂಕ 25-12-2022ರ ಬೆಳಗ್ಗೆ 6 ಗಂಟೆಯಿಂದ ದಿನಾಂಕ 27-12-2022ರ ಬೆಳಗ್ಗೆ 6 ಗಂಟೆವರೆಗೆ ಸೆಕ್ಷನ್ 144ರ ವಿಧಿಸಲಾಗುತ್ತಿದೆ.
ಹಂತಕರಿಗಾಗಿ ಪೊಲೀಸರಿಂದ ಶೋಧ
ಇನ್ನು ಸುರತ್ಕಲ್ ಬಳಿ ವ್ಯಕ್ತಿಯೊಬ್ಬನ ಮೇಲೆ ಚಾಕು ಇರಿತವಾಗಿದೆ ಎಂಬ ಸುದ್ದಿ ತಿಳಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲಿಸಿದ್ದರು. ಇದೀಗ ಚಾಕು ಇರಿತಕ್ಕೆ ಒಳಗಾಗಿದ್ದ ಜಲೀಲ್ ಸಾವನ್ನಪ್ಪಿದ್ದು, ಸುರತ್ಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
9 ಮಂದಿ ಕಾರ್ಮಿಕರು ಬಚಾವ್
ಚಿಕ್ಕಬಳ್ಳಾಪುರ ಜಿಲ್ಲೆ ಆರೂರು ಬಳಿ ನಿರ್ಮಾಣವಾಗುತ್ತಿರೋ ಹೊಸದಾಗಿ ನಿರ್ಮಾಣವಾಗುತ್ತಿರುವ ಮೆಡಿಕಲ್ ಕಾಲೇಜ್ ಗೋಡೆ ಕುಸಿದಿದೆ. 9 ಮಂದಿ ಕಾರ್ಮಿಕರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಕೆಲಸ ಮಾಡುತ್ತಿದ್ದ 9 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: Mangaluru: ಕಿಸ್ ಆಂಡ್ ಹಗ್ನಲ್ಲಿ ಭಾಗಿಯಾದ ಜೋಡಿ ಕಾಲೇಜಿನಿಂದ ಡಿಬಾರ್; ಮುಸ್ಲಿಂ ಯುವಕನಿಂದ ಹಿಂದೂ ಯುವತಿಗೆ ಮುತ್ತು!
ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಭೇಟಿ ಪರಿಲೀಲನೆ ನಡೆಸಿದರು.
ಗಂಟಲು ಸೀಳಿ ಮಹಿಳೆಯ ಕೊಲೆ
ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ನಡೆದಿತ್ತು. 28 ವರ್ಷದ ಸಂತ್ರಸ್ತೆ ಚಾಂದ್ ಸುಲ್ತಾನ ಎಂಬಾಕೆ ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ಲೆಕ್ಕ ಪರಿಶೋಧಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಆರೋಪಿ ಸಾದತ್ ಹರಿಹರ ಮೂಲದವನಾಗಿದ್ದು, ಮೃತ ಮಹಿಳೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಹೋಮ ಮಾಡ್ತಿರುವಾಗಲೇ ಕೈಚಳಕ ತೋರಿದ ಕಳ್ಳ
ಗೃಹಪ್ರವೇಶದ (House Warming Function) ಸಂತಸದಲ್ಲಿದ್ದ ಮನೆಯವರಿಗೆ ಚಾಲಕಿ ಕಳ್ಳನೋರ್ವ (Thieve) ತನ್ನ ಕೈಚಳಕ ತೋರಿಸಿದ್ದಾನೆ. ಮನೆಯಲ್ಲಿ ಎಲ್ಲರೂ ಇದ್ದಾಗಲೇ, ಒಳನುಗ್ಗಿ ಸೈಲೆಂಟ್ ಆಗಿ ಮನೆಯಲ್ಲಿದ್ದ ವಸ್ತುಗಳನ್ನು ಕದ್ದು (Theft in Home) ಎಸ್ಕೇಪ್ ಆಗಿದ್ದಾನೆ. ಈ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮಂಗಳೂರು (Mangaluru) ಹೊರವಲಯದ ಕೋಟೆಕಾರಿನ ಅಡ್ಕಬೈಲು ಎಂಬಲ್ಲಿ ನಡೆದಿದೆ.
ಕನಸಿನ ಮನೆ ನಿರ್ಮಾಣ ಮಾಡಿದ್ದ ಸ್ಮಿತಾ-ದಾಮೋದರ್ ದಂಪತಿ ನೂತನವಾಗಿ ಕಟ್ಟಿಸಿದ್ದ ಮನೆಯ ಗೃಹ ಪ್ರವೇಶ ಕಾರ್ಯವನ್ನು ಮಾಡಿಸುತ್ತಿದ್ದರು. ಇದರ ಭಾಗವಾಗಿ ವಾಸ್ತು ಹೋಮವನ್ನು ಮಾಡಿಸಿದ್ದರು. ಮನೆಯಲ್ಲಿ ಹೋಮ ನಡೆಯುತ್ತಿದ್ದ ಕಾರಣ ಇಡೀ ಮನೆಯಲ್ಲಿ ಹೋಮದ ಹೊಗೆ ತುಂಬಿಕೊಂಡಿತ್ತು. ಈ ಸಂದರ್ಭನ್ನೇ ಬಳಸಿಕೊಂಡ ಕಳ್ಳನೋರ್ವ ಎಲ್ಲರೂ ಮನೆಯಲ್ಲಿ ಇರುವಾಗಲೇ ಒಳ ಬಂದಿದ್ದಾನೆ.
ಮನೆಯವರ ಎದುರೇ ಎಸ್ಕೇಪ್
ಮನೆಗೆ ಎಂಟ್ರಿ ಕೊಟ್ಟಿದ್ದ ಕಳ್ಳ ನೇರ ಮನೆಯ ಕೊಠಡಿಗೆ ತೆರಳಿ ಕೊಠಡಿಯಲ್ಲಿದ್ದ 15 ಸಾವಿರ ರೂಪಾಯಿ ನಗದು, ಮೊಬೈಲ್ ಚಾರ್ಜರ್, ಬೆಳೆಬಾಳುವ ಕಾಸ್ಮೋಟಿಕ್ಸ್ ವಸ್ತುಗಳನ್ನು ಕದ್ದು ಮನೆಯವರ ಎದುರೇ ಎಸ್ಕೇಪ್ ಆಗಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ