ಕಾಂಗ್ರೆಸ್​-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ; ನಗರದಲ್ಲಿ 48ಗಂಟೆಗಳ ಕಾಲ ನಿಷೇಧಾಜ್ಞೆ

ಸರ್ಕಾರ ಯಾವುದೇ ಕ್ಷಣದಲ್ಲಿ ಬೀಳಬಹುದು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಸೆಕ್ಷನ್​ 144ನ್ನು ಜಾರಿಗೊಳಿಸಲಾಗಿದೆ.

Seema.R | news18
Updated:July 23, 2019, 6:57 PM IST
ಕಾಂಗ್ರೆಸ್​-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ; ನಗರದಲ್ಲಿ 48ಗಂಟೆಗಳ ಕಾಲ ನಿಷೇಧಾಜ್ಞೆ
ಬಿಜೆಪಿ ಕಾಂಗ್ರೆಸ್​ ಕಾರ್ಯಕರ್ತರ ನಡುವಿನ ಗಲಾಟೆ
  • News18
  • Last Updated: July 23, 2019, 6:57 PM IST
  • Share this:
ಬೆಂಗಳೂರು (ಜು.23) :ಪಕ್ಷೇತರ ಶಾಸಕರನ್ನು ಬಿಜೆಪಿ ನಾಯಕರು ಹಿಡಿದಿಟ್ಟು ಕೊಂಡಿದ್ದಾರೆ. ಅವರನ್ನು ಕರೆದೊಯ್ಯತ್ತೇವೆ ಎಂದು ಮುಂದಾದ  ಕಾಂಗ್ರೆಸ್​ ಹಾಗೂ ಬಿಜೆಪಿ ಶಾಸಕರ ನಡುವೆ ಘರ್ಷಣೆ ನಡೆದಿದ್ದು, ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದರು.

ಆರ್​ ಅಶೋಕ್​​ ರೆಸ್​ ಕೋರ್ಸ್​  ರಸ್ತೆಯ ಬಳಿ ಅಪಾರ್ಟ್​ಮೆಂಟ್​ನಲ್ಲಿ ಪಕ್ಷೇತರ ಶಾಸಕರನ್ನು ಕರೆತಂದು ಇರಿಸಿದ್ದಾರೆ. ಅವರನ್ನು ಕರೆದುಕೊಂಡು ಹೋಗುತ್ತೇವೆ ಎಂದು ಐವನ್​ ಡಿಸೋಜಾ ಮುಂದಾದರು. ಈ ವೇಳೆ ಬಿಜೆಪಿ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ತಲಾಟೆ ನಡೆಯಿತು. ಪರಿಸ್ಥಿತಿ  ಉದ್ವಿಘ್ನಗೊಂಡ  ಹಿನ್ನೆಲೆ ಪೊಲೀಸರು ನಗರದಾದ್ಯಂತ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ಸಿಎಂ ಕುಮಾರಸ್ವಾಮಿ ವಿದಾಯದ ಭಾಷಣ ಮಾಡುತ್ತಿದ್ದು ಸರ್ಕಾರ ಯಾವುದೇ ಕ್ಷಣದಲ್ಲಿ ಬೀಳಬಹುದು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಸೆಕ್ಷನ್​ 144ನ್ನು ಜಾರಿಗೊಳಿಸಲಾಗಿದೆ.

ಇದನ್ನು ಓದಿ: ಮದುವೆಯಾಗುವಾಗ ರಾಜಕೀಯಕ್ಕೆ ಬರಬಾರದು ಎಂದು ಅನಿತಾ ಷರತ್ತು ವಿಧಿಸಿದ್ದರು; ಸಿಎಂ ಕುಮಾರಸ್ವಾಮಿ

ಇಂದು ಸಂಜೆ ಆರುಗಂಟೆಯಿಂದ ಈ ನಿಷೇಧಾಜ್ಞೆ ಜಾರಿಯಾಗಿದ್ದು, ಜು.25ರ ಸಂಜೆವರೆಗೆ ಇರಲಿದೆ, ನಿಷೇಧಾಜ್ಞೆ ಜಾರಿ ಇರುವ ಹಿನ್ನೆಲೆ ಐದು ಜನಕ್ಕಿಂತ ಹೆಚ್ಚಿನ ಜನರು ಗುಂಪು ಸೇರುವಂತಿಲ್ಲ. ಜೊತೆಗೆ  ಎರಡು ದಿನಗಳ ಕಾಲ ಎಲ್ಲಾ ಬಾರ್​, ಪಬ್​, ವೈನ್​ ಶಾಪ್​ಗಳನ್ನು ಬಂದ್​ ಮಾಡುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿದರೆ ಅವರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಬೆಂಗಳೂರು ಪೊಲೀಸ್​ ಕಮಿಷನರ್​ ಅಲೋಕ್​ ಕುಮಾರ್​ ತಿಳಿಸಿದ್ದಾರೆ.

First published:July 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ