Section 144: ಮಂಗಳೂರಿನಲ್ಲಿ ಆಗಸ್ಟ್ 5ರವರೆಗೆ ಸೆಕ್ಷನ್ 144 ಮುಂದುವರಿಕೆ; ಯಾವುದೆಕ್ಕೆಲ್ಲಾ ನಿರ್ಬಂಧ?

ನಿಷೇಧಿತ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ 5 ಜನರು ಮತ್ತು ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದು ಮತ್ತು ತಿರುಗಾಡೋದನ್ನು ನಿಷೇಧಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿನ )Mangalore city police commissionerate) ಸೆಕ್ಷನ್ 144 ಆಗಸ್ಟ್ 5ರ ಬೆಳಗ್ಗೆ 6 ಗಂಟೆವರೆಗೆ ವಿಸ್ತರಿಸಲಾಗಿದೆ. ಜುಲೈ 28ರಂದು ಮಂಗಳೂರಿನ ಸುರತ್ಕಲ್ (Surathkal Murder) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಹಮ್ಮದ್ ಫಾಜಿಲ್ (Fazil Murder) ಎಂಬಾತನ ಕೊಲೆ ಆಗಿತ್ತು. ಕೊಲೆಯ ಬಳಿಕ ನಗರದಲ್ಲಿ ಪ್ರಕ್ಷುಬ್ಧ ವಾತಾವಾರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿತ್ತು. ಈ ಹಿನ್ನೆಲೆ ಆಗಸ್ಟ್ 1ರವರೆಗೆ ಸೆಕ್ಷನ್ 144 (Section 144) ಹಾಕಲಾಗಿತ್ತು. ಸಂಜೆ ಆರು ಗಂಟೆ ಬಳಿಕ ಅನಾವಶ್ಯಕವಾಗಿ ಹೊರಗೆ ಬರದಂತೆ ಸೂಚನೆ ನೀಡಲಾಗಿದೆ. ಇದೀಗ ಸೆಕ್ಷನ್ 144 ನಿರ್ಬಂಧವನ್ನು ಆಗಸ್ಟ್ 5ರ ಬೆಳಗ್ಗೆ 6 ಗಂಟೆವರೆಗೆ ವಿಸ್ತರಿಸಲಾಗಿದೆ.

ಮಂಗಳೂರು ನಗರವು ಅತಿ ಸೂಕ್ಷ್ಮ ಪ್ರದೇಶವಾಗಿದ್ದು, ಪ್ರಸ್ತುತ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಇದೆ. ಸಣ್ಣ ಪುಟ್ಟ ವಿಚಾರಗಳು ಕೂಡ ಉದ್ವಗ್ನಗೊಂಡ ಯಾವುದೇ ಸಮಯದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಾಧ್ಯತೆ ಇರುತ್ತದೆ. ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೊರಡಿಸಿರುವ ನಿಷೇಧಾಜ್ಞೆ ಮುಂದುವರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಷೇಧಾಜ್ಞೆ ಸಮಯದಲ್ಲಿ ಏನು ಮಾಡಬಾರದು

1.ಸಾರ್ವಜನಿಕವಾಗಿ ಯಾವುದೇ ಕೂಗನ್ನು ಉಚ್ಚರಿಸುವಂತಿಲ್ಲ., ಚೇಷ್ಟೆ, ಸಾರ್ವಜನಿಕ ಭದ್ರತೆ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಅಪರಾಧ ಎಸಗುವ ಕ್ರಿಯೆ ಪ್ರೇರೆಪಿಸುವ ಕ್ರಮವನ್ನು ನಿಷೇಧಿಸಿದೆ.

2.ನಿಷೇಧಿತ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ 5 ಜನರು ಮತ್ತು ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದು ಮತ್ತು ತಿರುಗಾಡೋದನ್ನು ನಿಷೇಧಿಸಲಾಗಿದೆ.

3.ಶಸ್ತ್ರಗಳು, ದೊಣ್ಣೆ, ಕತ್ತಿ, ಬಂದುಕೂ ಚಾಕು ಸೇರಿದಂತೆ ಮಾರಕಾಸ್ತ್ರ್ಘಗಳ ಸಾಗಾಟ ಮಾಡುವಂತಿಲ್ಲ.

Section 144 extend managaluru till August 5 2022 mrq
ಪ್ರವೀಣ್ ನೆಟ್ಟಾರು


4.ಪಟಾಲಿ ಸಿಡಿಸೋದು ಅಥವಾ ಸ್ಪೋಟಕ ಪದಾರ್ಥಗಳನ್ನು ಸಿಡಿಸೋದು ನಿಷೇಧಿಸಲಾಗಿದೆ.

ಇದನ್ನೂ ಓದಿ:  Political Killing: 22 ವರ್ಷಗಳಲ್ಲಿ 120 ರಾಜಕೀಯ ಕೊಲೆಗಳನ್ನು ಕಂಡ ಕರ್ನಾಟಕ

5.ಶವಗಳ ಅಥವಾ ಪ್ರತಿಕೃತಿಗಳ ದಹನ ಮತ್ತು ಪ್ರದರ್ಶನ ನಿಷೇಧ

6.ಕಲ್ಲುಗಳನ್ನು ಎಸೆಯವುದು ಮತ್ತು ಸಂಗ್ರಹಿಸಬಾರದು.

7.ಸರ್ಕಾರಿ ಸಂಸ್ಥೆ, ಸಾರ್ವಜನಿಕ ಆಸ್ತಿ ಹಾನಿ ಮಾಡುವಂತಿಲ್ಲ.

8.ಪ್ರಚೋದನಕಾರಿ ಭಾಷಣ/ಅವಾಚ್ಯ ಪದಗಳ ಬಳಕೆ/ಕೋಮು ಭಾಷಣಗಳ ಪ್ರಕಟನೆ/ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡುವಂತಿಲ್ಲ ಮತ್ತು ಪ್ರಸಾರ ಮಾಡುವಂತಿಲ್ಲ.

10 ದಿನಗಳಲ್ಲಿ 3 ಕೊಲೆಗಳು

ಜುಲೈ 19 ರಿಂದ ಜುಲೈ 28 ರ ನಡುವಿನ 10 ದಿನಗಳ ಅವಧಿಯಲ್ಲಿ ನಡೆದ ಮೂರು ಹತ್ಯೆಗಳನ್ನು ಕಂಡು ಕರಾವಳಿ ಕರ್ನಾಟಕ ಬೆಚ್ಚಿ ಬಿದ್ದಿದೆ. ದಕ್ಷಿಣ ಕನ್ನಡದಲ್ಲಿ ಕೋಮುವಾದದ ಕೊಲೆಗಳು (Murder) ಸಾಮಾನ್ಯ ಎನ್ನುವಂತಾಗಿದೆ. ಕಳೆದ 10 ದಿನಗಳಲ್ಲಿ ಈ ಪ್ರದೇಶದಲ್ಲಿ ನಡೆದ 19 ವರ್ಷದ ಮಸೂದ್ ಬಿ, 32 ವರ್ಷದ ಪ್ರವೀಣ್ ನೆಟ್ಟಾರು ಹಾಗೂ ಮೊಹಮ್ಮದ್ ಫಾಜಿಲ್ ಎಂಬುವರು ಕೊನೆಯುಸಿರೆಳೆದಿದ್ದಾರೆ.

ಮಸೂದ್ ಕೊಲೆಯಾಗಿದ್ದು ಏಕೆ?

ಮಸೂದ್‌ ಹಾಗೂ ಬೆಳ್ಳಾರೆ ಸ್ಥಳೀಯ ಸುಧೀರ್‌ ನಡುವೆ ಭುಜ ಮುಟ್ಟುವ ವಿಚಾರವಾಗಿ ಸಣ್ಣ ಜಗಳ ನಡೆದಿತ್ತು. ಜುಲೈ 19 ರಂದು, ಇಬ್ಬರೂ ಜಗಳವಾಡಿದ್ದರು. ನಂತರ, ಸುಧೀರ್ ಮತ್ತು ಇತರರು ಮಸೂದ್‌ನ ಸ್ನೇಹಿತ ಇಬ್ರಾಹಿಂ ಶನಿಫ್‌ಗೆ ಮಸೂದ್‌ನನ್ನು ದೇವಸ್ಥಾನದ ಮುಂದೆ ರಾಜಿ ಸಭೆಗೆ ಕರೆತರುವಂತೆ ಕೇಳಿದ್ದರು. ಈ ವೇಳೆ ಮಸೂದ್ ಬಂದಾಗ ಎಂಟು ಮಂದಿ ಗ್ಯಾಂಗ್ ಮಸೂದ್ ಮೇಲೆ ಹಲ್ಲೆ ನಡೆಸಿ ಬಾಟಲಿಯಿಂದ ಹೊಡೆದಿದ್ದಾರೆ. ಎರಡು ದಿನಗಳ ನಂತರ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

Section 144 extend managaluru till August 5 2022 mrq
ಕೊಲೆಯಾದ ಫಾಜಿಲ್


ಇದನ್ನೂ ಓದಿ:  Bengaluru: ಕಬಾಬ್ ರುಚಿಯಾಗಿಲ್ಲ ಎಂದು ಹೆಂಡತಿಗೆ ಚಾಕುವಿನಿಂದ ಇರಿದ; ಭಯದಲ್ಲಿ ಇದೇನು ಮಾಡಿಕೊಂಡ?

ಫಾಜಿಲ್ ಹತ್ಯೆ ಪ್ರಕರಣದಲ್ಲಿ ಸ್ಫೋಟಕ ಸುಳಿವು

ಮಂಗಳೂರಿನ ಸುರತ್ಕಲ್ ನಲ್ಲಿ (Surathkal Murder) ನಡೆದ ಮೊಹಮ್ಮದ್ ಫಾಜಿಲ್ ಹತ್ಯೆಗೆ (Fazil Murder) ಸಂಬಂಧಿಸಿದಂತೆ ಪೊಲೀಸರಿಗೆ (Mangaluru Police) ಸ್ಫೋಟಕ ಸುಳಿವು ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ. ಕೃತ್ಯದಲ್ಲಿ ಭಾಗಿಯಾದ ಹಂತಕರ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಸುಹಾಸ್, ಮೋಹನ್, ಗಿರಿ, ಅಮಿತ್ ಎಂಬ ನಾಲ್ವರಿಂದ ಕೃತ್ಯ ನಡೆದಿರುವ ಮಾಹಿತಿ ಮಂಗಳೂರು ಪೊಲೀಸರಿಗೆ ಸುಳಿವು ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಎಂಬುದಾಗಿ ಹೇಳಲಾಗುತ್ತಿದೆ. ಕೃತ್ಯ ನಡೆಸುವ ಸಂದರ್ಭ ಅಮಿತ್ ಎಂಬಾತ ಕಾರು ಚಾಲಕನಾಗಿದ್ದ (Car Driver) ಎಂದು ತಿಳಿದು ಬಂದಿದೆ. ಇಂದು ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು (CCB Police) ಬಂಧಿಸುವ ಸಾಧ್ಯತೆಗಳಿವೆ.
Published by:Mahmadrafik K
First published: