Kodagu: ನಿಷೇಧಾಜ್ಞೆಯಿಂದ ಕೊಡಗಿನ ಪ್ರವಾಸೋದ್ಯಮಕ್ಕೆ ಕೋಟ್ಯಂತರ ನಷ್ಟ; 4 ದಿನದಲ್ಲಿ ಸುಮಾರು 4 ಕೋಟಿ

ಮೊಟ್ಟೆ ವಿಚಾರ ಕೊಡಗಿನ ಪ್ರವಾಸೋದ್ಯಮಕ್ಕೆ ಪೆಟ್ಟು ಕೊಟ್ಟಿರೋದಂತೂ ಸತ್ಯ. ಈ ಹಿಂದೆ ವಾರಾಂತ್ಯಗಳಲ್ಲಿ ಕನಿಷ್ಠ 50 ರಿಂದ 60 ಸಾವಿರ ವ್ಯಾಪಾರ ಮಾಡುತ್ತಿದ್ದೆವು. ಆದರೆ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಪ್ರವಾಸಿಗರಲ್ಲದೇ ವ್ಯಾಪಾರವೇ ಇಲ್ಲದಂತೆ ಆಗಿದೆ.

ಪ್ರವಾಸಿ ಸ್ಥಳ

ಪ್ರವಾಸಿ ಸ್ಥಳ

  • Share this:
ಕೊಡಗು: ಕೊಡಗು (Kodagu) ಜಿಲ್ಲೆಯಲ್ಲಿ ರಾಜಕೀಯ ಜಿದ್ದಾಜಿದ್ದಿನಿಂದಾಗಿ 144 ಸೆಕ್ಷನ್ (144 Section) ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ವಾರಾಂತ್ಯದವರೆಗೂ ನಿಷೇಧಾಜ್ಞೆ ಜಾರಿಯಲ್ಲಿ ಇದ್ದಿದ್ದರಿಂದ ಪ್ರವಾಸೋದ್ಯಮಕ್ಕೆ (Kodagu Tour) ದೊಡ್ಡ ಹೊಡೆತ ಬಿದ್ದಿದೆ. ಪ್ರವಾಸಿಗರನ್ನೇ ನಂಬಿದ್ದ ಸಾವಿರಾರು ಕುಟುಂಬಗಳು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುವಂತೆ ಆಗಿದೆ. ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಲ್ಲಿ ಇದ್ದಿದ್ದರಿಂದ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಒಟ್ಟೊಟ್ಟಿಗೆ ಓಡಾಡುವಂತಿರಲಿಲ್ಲ. ಇದರ ಮಧ್ಯೆ ಅಷ್ಟು ದಿನಗಳ ಕಾಲ ಮದ್ಯ ಮಾರಾಟವನ್ನೂ (Liquor Sale) ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದ ಕೊಡಗು ಜಿಲ್ಲೆಯಲ್ಲಿ ಅದರಲ್ಲೂ ವಾರದ ಕೊನೆಯಲ್ಲಿ ಕೊಡಗಿಗೆ ಆಗಮಿಸಬೇಕಾಗಿದ್ದ ಪ್ರವಾಸಿಗರ (Tourist) ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಇದು ಪ್ರವಾಸೋದ್ಯಮವನ್ನು ಅವಲಂಬಿಸಿರುವ ಕೊಡಗಿನ ಆರ್ಥಿಕತೆಗೆ ಭಾರೀ ನಷ್ಟ ಉಂಟು ಮಾಡಿದೆ.

ಕೊಡಗಿನಲ್ಲಿ ವರುಣನ ಅಬ್ಬರ ಕೊಂಚ ತಗ್ಗಿದೆ. ಬೆಟ್ಟ ಗುಡ್ಡಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಕೊಡಗಿನ ರಮಣೀಯ ಪರಿಸರ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿವೆ. ಮಳೆ ತಗ್ಗಿದ್ದರಿಂದ ಇತ್ತೀಚೆಗೆ ಅಷ್ಟೇ ಪ್ರವಾಸಿಗರೂ ಕೊಡಗಿನತ್ತ ಮುಖ ಮಾಡಿದ್ದರು.

ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ

ಆದರೆ ಆಗಸ್ಟ್ 24 ರಿಂದ 144 ಸೆಕ್ಷನ್ ಜಾರಿಯಾಗಿದ್ದರಿಂದ ಏನು ತೆರೆದಿರುತ್ತೋ, ಏನು ಮುಚ್ಚಿರುತ್ತೋ ಎಂಬ ಅನುಮಾನದಿಂದ ಪ್ರವಾಸಿಗರು ಕೊಡಗಿನತ್ತ ಬರುವುದನ್ನು ಕಡಿಮೆ ಮಾಡಿದ್ದಾರೆ. ವಾರಾಂತ್ಯಗಳಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಪ್ರವಾಸಿ ತಾಣಗಳು ಬಿಕೋ ಎನ್ನುತಿವೆ.

ಇದನ್ನೂ ಓದಿ:  Karnataka Weather Report: ಬೆಂಗಳೂರಿಗೆ ಯೆಲ್ಲೋ ಅಲರ್ಟ್, 21 ವರ್ಷದ ಬಳಿಕ ಕೋಡಿ ಬಿದ್ದ ಕೆರೆ

40 ಕೋಟಿಗೂ ಅಧಿಕ ನಷ್ಟ

ಪರಿಣಾಮ ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಕೊಡಗಿನ ಹೊಟೇಲ್ ರೆಸಾರ್ಟ್, ಹೋಂಸ್ಟೇ, ಸ್ಪೈಸಸ್ ವ್ಯಾಪಾರಿಗಳು ಟ್ಯಾಕ್ಸಿ, ಆಟೋ, ಜೀಪ್ ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರವಾಸಿಗರು ಬರದೇ ಇರೋದ್ರಿಂದ ಹೋಂಸ್ಟೇ ರೆಸಾರ್ಟ್ ಕ್ಷೇತ್ರಕ್ಕೆ ಸುಮಾರು 4 ದಿನಗಳಲ್ಲಿ 40 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎನ್ನಲಾಗಿದೆ.

section 144 effect Kodagu tourism industry faces loss rsk mrq
ಸಾಂದರ್ಭಿಕ ಚಿತ್ರ


ಜಿಲ್ಲೆಯಲ್ಲಿ ನೋಂದಾಯಿತ 850 ಹೋಂಸ್ಟೇಗಳಿದ್ದರೆ ನೋಂದಾಯಿಸಿಲ್ಲದ ಹೋಂಸ್ಟೇಗಳು ಮೂರು ಸಾವಿರಕ್ಕೂ ಅಧಿಕ ಇವೆ. ಒಂದು ಹೊಂಸ್ಟೇಗೆ ದಿನವೊಂದಕ್ಕೆ ಕನಿಷ್ಠ 10 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಿದರೂ ದಿನವೊಂದಕ್ಕೆ ಮೂರುವರೆ ಕೋಟಿ ನಷ್ಟವಾದಂತೆ.

ಇನ್ನು ನಾಲ್ಕು ದಿನಗಳಿಗೆ ಅಂದಾಜಿಸಿದರೆ ಹೋಂಸ್ಟೇ, ರೆಸಾರ್ಟ್‍ಗಳೆಲ್ಲವೂ ಸೇರಿದರೆ ಇವುಗಳೇ ಕನಿಷ್ಠ 25 ರಿಂದ 30 ಕೋಟಿ ನಷ್ಟ ಅನುಭವಿಸಿವೆ.

ಗಾಯದ ಮೇಲೆ ಬರೆ ಎಳೆದ ನಿಷೇಧಾಜ್ಞೆ

ಮತ್ತೊಂದೆಡೆ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಕೊಡಗಿನ ಸಾಂಬಾರ ಪದಾರ್ಥಗಳು, ಕಾಫಿ, ವೈನ್ ವ್ಯಾಪಾರ ಕೂಡ ಗಣನೀಯ ಕುಸಿತ ಕಂಡಿದೆ. ಸ್ಪೈಸಸ್ ಅಂಗಡಿಗಳು ಕೂಡ ಪ್ರವಾಸಿಗರಿಲ್ಲದೇ ಖಾಲಿ ಖಾಲಿ ಹೊಡೆಯುತ್ತಿವೆ. ಕೊರೊನಾ ನಂತರ ಮಳೆಯಿಂದ ಕಂಗೆಟ್ಟು ಈಗ ತಾನೇ ಕೊಂಚ ಚೇತರಿಕೆ ಕಾಣ್ತಿದ್ದ ಕೊಡಗಿನ ಪ್ರವಾಸೋದ್ಯಮಕ್ಕೆ ನಿಷೇಧಾಜ್ಞೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರವಾಸಿಗರನ್ನೇ ನಂಬಿಕೊಂಡು ಟ್ಯಾಕ್ಸಿ, ಬಾಡಿಗೆ ಆಟೋಗಳನ್ನು ಓಡಿಸಿಕೊಂಡು ಬದುಕು ಕಟ್ಟಿಕೊಂಡಿದ್ದ ಚಾಲಕರು ನಾಲ್ಕು ದಿನಗಳಿಂದ ಹೊಟ್ಟೆಗೆ ತಣ್ಣೀರು ಬಟ್ಟೆ ಎನ್ನುವ ಸ್ಥಿತಿ ಅನುಭವಿಸಿದ್ದಾರೆ.

ನಾಲ್ಕು ದಿನಗಳಿಂದ ನೆಲಕಚ್ಚಿದ ಪ್ರವಾಸೋದ್ಯಮ

ಒಟ್ಟಿನಲ್ಲಿ ರಾಜಕೀಯದ ಹೈಡ್ರಾಮಕ್ಕೆ ನಾಲ್ಕು ದಿನಗಳಿಂದ ಕೊಡಗಿನ ಪ್ರವಾಸೋದ್ಯಮ ನೆಲಕಚ್ಚಿದೆ. 144 ಸೆಕ್ಷನ್ ತೆಗೆದರೂ ಮೊದಲಿನಂತೆ ಪ್ರವಾಸಿಗರು ಕೊಡಗಿನತ್ತ ಮುಖ ಮಾಡಲು ಇನ್ನೂ ಹಲವು ದಿನಗಳು ಬೇಕಾಗುತ್ತದೆ ಎನ್ನುವುದು ಪ್ರವಾಸೋದ್ಯಮ ನಂಬಿಕೊಂಡಿರುವವರ ಅಭಿಪ್ರಾಯ.

ಅದೇನೇ ಆಗಲಿ ಮೊಟ್ಟೆ ವಿಚಾರ ಕೊಡಗಿನ ಪ್ರವಾಸೋದ್ಯಮಕ್ಕೆ ಪೆಟ್ಟು ಕೊಟ್ಟಿರೋದಂತೂ ಸತ್ಯ. ಈ ಹಿಂದೆ ವಾರಾಂತ್ಯಗಳಲ್ಲಿ ಕನಿಷ್ಠ 50 ರಿಂದ 60 ಸಾವಿರ ವ್ಯಾಪಾರ ಮಾಡುತ್ತಿದ್ದೆವು. ಆದರೆ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಪ್ರವಾಸಿಗರಲ್ಲದೇ ವ್ಯಾಪಾರವೇ ಇಲ್ಲದಂತೆ ಆಗಿದೆ.

section 144 effect Kodagu tourism industry faces loss rsk mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Operation Elephant: ಭಾನುಮತಿ ಖೆಡ್ಡಾಕ್ಕೆ ಬಿದ್ದ ಹಾವೇರಿ ಟಸ್ಕರ್! ಮಲೆನಾಡಿಗರ ನಿದ್ದೆಗೆಡಿಸಿದ್ದ ಒಂಟಿ ಸಲಗ ಸೆರೆ

ಕೊನೆ ಕ್ಷಣದಲ್ಲಿ ಬುಕ್ಕಿಂಗ್ ರದ್ದು

ಹೀಗಾಗಿ ದಿನಕ್ಕೆ ಐದಾರು ಸಾವಿರ ವ್ಯಾಪಾರವಾದರೆ ಅದೇ ದೊಡ್ಡದು ಎನ್ನುವ ಪರಿಸ್ಥಿತಿ ಇದೆ ಎನ್ನುತ್ತಾರೆ ಸ್ಪೈಸೀಸ್ ವ್ಯಾಪಾರಿ ಪ್ರೀತು. ವಾರಾದ್ಯಂತ ಅವಧಿಯಲ್ಲಿ ಬರುವುದಕ್ಕಾಗಿ ನಮ್ಮ ಹೋಂಸ್ಟೇನ ಆರು ಕೊಠಡಿಗಳು ಭರ್ತಿಯಾಗಿದ್ದವು. ಆದರೆ 144 ಸೆಕ್ಷನ್ ಜಾರಿಯಾಗಿದ್ದರಿಂದ ಅಷ್ಟೂ ಜನರು ಕ್ಯಾನ್ಸಲ್ ಮಾಡಿಕೊಂಡರು. ಅವರ ಹಣವನ್ನು ವಾಪಸ್ ಕೊಡಬೇಕಾಯಿತು. ಇದರಿಂದ ನಷ್ಟ ಅನುಭವಿಸುವಂತೆ ಆಗಿದೆ ಎನ್ನುತ್ತಾರೆ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ  ನವೀನ್.
Published by:Mahmadrafik K
First published: