• Home
  • »
  • News
  • »
  • state
  • »
  • PFI Leaders: ಪಿಎಫ್​ಐ ಮೇಲಿನ 2ನೇ ದಾಳಿಯ ಸೀಕ್ರೆಟ್ ಏನು? ರಾಜ್ಯ ಪೊಲೀಸರಿಗೆ NIA ನೀಡಿದ ಮಾಹಿತಿ ಏನು?

PFI Leaders: ಪಿಎಫ್​ಐ ಮೇಲಿನ 2ನೇ ದಾಳಿಯ ಸೀಕ್ರೆಟ್ ಏನು? ರಾಜ್ಯ ಪೊಲೀಸರಿಗೆ NIA ನೀಡಿದ ಮಾಹಿತಿ ಏನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸದ್ಯ ವಶಕ್ಕೆ ಪಡೆದಿರುವ ಕಾರ್ಯಕರ್ತರನ್ನು ತೀವ್ರ ವಿಚಾರಣೆಗೆ ಒಳಪಡಿಸಲು ಪೊಲೀಸರು ತಯಾರಿ ನಡೆಸಿದ್ದಾರೆ. ಕೆಲವೆಡೆ ತಹಶೀಲ್ದಾರ್ ಮುಂದೆ ವಶಕ್ಕೆ ಪಡೆದವರನ್ನು ಹಾಜರುಪಡಿಸಲಾಗಿದೆ.

  • Share this:

ರಾಜ್ಯದ 17 ಜಿಲ್ಲೆಗಳಲ್ಲಿ ಪಿಎಫ್ಐ ಮುಖಂಡರ (PFI Leaders) ನಿವಾಸದ ಮೇಲೆ ಎರಡನೇ ಬಾರಿ ದಾಳಿ ನಡೆಸಲಾಗಿದ್ದು, ಇತ್ತ ಮತ್ತೊಂದು ಕಡೆ  ಪಿಎಫ್​ಐ ನಾಯಕರ ಬಂಧನ ಖಂಡಿಸಿ ಕಾರ್ಯಕರ್ತರು (PFI Activist) ರಸ್ತೆಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೊಂದು ಷಡ್ಯಂತ್ರ, ರಾಜಕೀಯ ಪ್ರೇರಿತ ದಾಳಿ ಎಂದು ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಎರಡನೇ ಬಾರಿ ಪೊಲೀಸರು (Police) ದಾಳಿ ನಡೆಸಿದ್ದು ಯಾಕೆ ಎಂಬುದರ ಬಗ್ಗೆ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ. ಪಿಎಫ್ಐ ಉಗ್ರ ಪ್ರತಿಭಟನೆ, ಗಲಾಟೆಗೆ ಭಾರೀ ಸಂಚು ಮಾಡಿತ್ತು ಎಂದು ಹೇಳಲಾಗುತ್ತಿದೆ. ಈ ಸಂಘಟನೆ ದೇಶದ ಹಲವೆಡೆ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದರಂತೆ. ಈ ಹಿನ್ನೆಲೆ ಸಂಭಾವ್ಯ ಅನಾಹುತ ತಪ್ಪಿಸಲು ಇಂದು ದಾಳಿ ನಡೆಸಿದೆ ಎಂದು ಹೇಳಲಾಗ್ತಿದೆ. ಈ ಸಂಬಂಧ ರಾಜ್ಯ ಪೊಲೀಸರಿಗೆ ಎನ್​ಐಎ ಮಾಹಿತಿ ನೀಡಿತ್ತು ಎಂದು ಹೇಳಲಾಗುತ್ತಿದೆ.


ಕಳೆದ 5 ದಿನಗಳ ಹಿಂದಷ್ಟೇ NIA, ED ದೇಶಾದ್ಯಂತ ದಾಳಿ ಮಾಡಿ 106 ಮಂದಿಯನ್ನ ವಶಕ್ಕೆ ಪಡೆದಿದ್ದವು. ರಾಜ್ಯ ಪೊಲೀಸರ ಸಹಯೋಗದೊಂದಿದೆ 11 ರಾಜ್ಯಗಳಲ್ಲಿ ರೇಡ್ ಆಗಿತ್ತು. ಸೆ. 22ರಂದು ಪಿಎಫ್​ಐ, ಎಸ್​ಡಿಪಿಐ ಲೀಡರ್ಸ್ ಮೇಲೆ ದಾಳಿ ಮಾಡಿದ್ದು, ಪಿಎಫ್​ಐ ರಾಷ್ಟ್ರೀಯ ಅಧ್ಯಕ್ಷ, ಕಾರ್ಯದರ್ಶಿ ಬಂಧನವಾಗಿತ್ತು. ಇಂದು ಕರ್ನಾಟಕದಲ್ಲಿ ಪಿಎಫ್​ಐ ಜಿಲ್ಲಾಧ್ಯಕ್ಷರು, ಕಾರ್ಯಕರ್ತರು ಸೇರಿದಂತೆ 70ಕ್ಕೂ ಅಧಿಕ ಮಂದಿ ವಶಕ್ಕೆ ಪಡೆಯಲಾಗಿದೆ.


ತಹಶೀಲ್ದಾರ್ ಮುಂದೆ ಹಾಜರು


ಮಂಗಳೂರು, ಉಡುಪಿ, ಶಿವಮೊಗ್ಗ, ಕಲಬುರಗಿ, ಬಾಗಲಕೋಟೆ, ಚಿತ್ರದುರ್ಗ, ಬೆಳಗಾವಿ, ರಾಯಚೂರು, ಕೋಲಾರ, ರಾಮನಗರದಲ್ಲಿ ರೇಡ್ ಮಾಡಲಾಗಿದೆ. ಸದ್ಯ ವಶಕ್ಕೆ ಪಡೆದಿರುವ ಕಾರ್ಯಕರ್ತರನ್ನು ತೀವ್ರ ವಿಚಾರಣೆಗೆ ಒಳಪಡಿಸಲು ಪೊಲೀಸರು ತಯಾರಿ ನಡೆಸಿದ್ದಾರೆ. ಕೆಲವೆಡೆ ತಹಶೀಲ್ದಾರ್ ಮುಂದೆ ವಶಕ್ಕೆ ಪಡೆದವರನ್ನು ಹಾಜರುಪಡಿಸಲಾಗಿದೆ.


ಯಾವ ಜಿಲ್ಲೆಯಲ್ಲಿ ಎಷ್ಟು ಜನರು ವಶಕ್ಕೆ?


ಬಾಗಲಕೋಟೆ  7, ಬೀದರ್- 2, ವಿಜಯಪುರ-1, ಕಲಬುರಗಿ-2, ಚಿತ್ರದುರ್ಗ-1, ರಾಯಚೂರು-1, ಚಾಮರಾಜನಗರ-2, ಉಡುಪಿ-4, ದಕ್ಷಿಣ ಕನ್ನಡ-8, ಶಿವಮೊಗ್ಗ-5, ಕೋಲಾರ- 6, ಯಾದಗಿರಿ-2, ತುಮಕೂರು-1, ಕೊಪ್ಪಳ-2, ಮಂಡ್ಯ-5, ಬೆಳಗಾವಿ-7, ರಾಮನಗರ-9, ಮೈಸೂರಿನಲ್ಲಿ ಮೂವರು ಸೇರಿದಂತೆ 70ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆಯಲಾಗಿದೆ.


8 ರಾಜ್ಯಗಳಲ್ಲಿ PFI ಸ್ಥಳಗಳ ಮೇಲೆ ದಾಳಿ


ದೆಹಲಿಯ ಶಾಹೀನ್ ಬಾಗ್ ಸೇರಿದಂತೆ 8 ರಾಜ್ಯಗಳಲ್ಲಿ PFI ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಮೂಲಗಳ ಪ್ರಕಾರ, ಕೇಂದ್ರ ಏಜೆನ್ಸಿಗಳಿಂದ ಬಂದ ಮಾಹಿತಿಯ ಆಧಾರದ ಮೇಲೆ, ರಾಜ್ಯ ಪೊಲೀಸರು ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಅಸ್ಸಾಂ, ಕರ್ನಾಟಕ, ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ 8 ರಾಜ್ಯಗಳಲ್ಲಿ ದಾಳಿ ನಡೆಸುತ್ತಿದ್ದಾರೆ. ಮೂಲಗಳನ್ನು ನಂಬುವುದಾದರೆ, ಮುಂಜಾನೆ ದಾಳಿಯ ಸಂದರ್ಭದಲ್ಲಿ ದೇಶಾದ್ಯಂತ 170 PFI ಕಾರ್ಯಕರ್ತರನ್ನು ಬಂಧಿಸಲಾಗಿದೆ.


ಇದನ್ನೂ ಓದಿ:  Mysuru Dasara: ಸುದೀಪ್ ಬರಲಿಲ್ಲ, ಮಂಗ್ಲಿ ಹಾಡಲಿಲ್ಲ, ಸರ್ಕಾರದ ಎಡವಟ್ಟುಗಳು; ದಸರೆಯಲ್ಲೊಂದು ದುಬಾರಿ ಸೇವೆ


ರಾಯಚೂರಿನಲ್ಲಿಯೂ ದಾಳಿ


ರಾಯಚೂರಲ್ಲಿ PFI ಮಾಜಿ ಅಧ್ಯಕ್ಷ, ಕಾರ್ಯದರ್ಶಿಯ ಮಹಮದ್ ಇಸ್ಮಾಯಿಲ್ ಮತ್ತು ಹಾಲಿ ಅಧ್ಯಕ್ಷ ಆಸೀಂ ಎಂಬವರನ್ನು ಬಂಧಿಸಲಾಗಿದೆ. ಚಾಮರಾಜನಗರದಲ್ಲಿ ಜಿಲ್ಲಾಧ್ಯಕ್ಷ ಕಫೀಲ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಶೋಯಬ್‌ವುಲ್ಲಾ ಖಾನ್, ಕಲಬುರಗಿಯ ಪಿಎಫ್​ಐ ಮಾಧ್ಯಮ ವಕ್ತಾರ ಮಜಾರ್ ಹುಸೇನ್‌ನನ್ನ ವಶಕ್ಕೆ ಪಡೆಯಲಾಗಿದೆ.


ಉಡುಪಿಯಲ್ಲೂ ಸ್ಥಳೀಯ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಮಲ್ಪೆಯ ಇಲ್ಯಾಸ್ ಹೂಡೆ, ಕುಂದಾಪುರದ ಆಶಿಕ್, ಗಂಗೊಳ್ಳಿಯಲ್ಲಿ ರಜಾಬ್, ಬೈಂದೂರಿನಲ್ಲಿ ಕಲಿಲ್ ಸೈಯದ್‌ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.


ಇದನ್ನೂ ಓದಿ:  Bengaluru: 11 ನೇ ಶತಮಾನದ ದೇವಾಲಯದ ಮೂಲ ಪತ್ತೆ ಹಚ್ಚುತ್ತಿರುವ ಡಿಜಿಟೈಸ್ಡ್ ಶಾಸನಗಳು


ವಿಜಯಪುರ ಜಿಲ್ಲಾ PFI ಅಧ್ಯಕ್ಷ ಅಷ್ಪಾಖ್ ಜಮಖಂಡಿಯನ್ನು ಜಾಮಿಯಾ ಮಸೀದಿ ಬಳಿಯ ಮನೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಪಿಎಫ್ಐ ಸಂಘಟನೆ, ಹೋರಾಟ ಮತ್ತು ಹಣಕಾಸಿನ ವ್ಯವಹಾರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

Published by:Mahmadrafik K
First published: