ಆದಿಚುಂಚನಗಿರಿ ಮೈಸೂರು ಶಾಖಾ ಮಠದಲ್ಲಿ ಡಿಕೆಶಿ- ಸಾ.ರಾ.ಮಹೇಶ್ ಗೌಪ್ಯ ಮಾತುಕತೆ!

ಬಂಗಾರಪ್ಪ ನನಗೆ ಒಂದು ಸೈಟ್ ಕೊಟ್ಟಿದ್ರು. ಆಗ ಅದರ ಬೆಲೆ ಒಂದು ಲಕ್ಷ ರೂಪಾಯಿ. ಈಗ ಅದರ ಬೆಲೆ 4 ಕೋಟಿ ಆಗಿದೆ. ಹಾಗಾದ್ರೆ ನಾನು ಅಫಿಡೆವಿಟ್‌ನಲ್ಲಿ ಯಾವ ಬೆಲೆ ಹಾಕಬೇಕು ಹೇಳಿ. ಹೀಗೆ ನನ್ನ ಆಸ್ತಿಯ ಮೌಲ್ಯ ಜಾಸ್ತಿ ಆಗಿದೆ ಎಂದು ಡಿಕೆಶಿ ಹೇಳಿದರು.

HR Ramesh | news18-kannada
Updated:November 8, 2019, 1:05 PM IST
ಆದಿಚುಂಚನಗಿರಿ ಮೈಸೂರು ಶಾಖಾ ಮಠದಲ್ಲಿ ಡಿಕೆಶಿ- ಸಾ.ರಾ.ಮಹೇಶ್ ಗೌಪ್ಯ ಮಾತುಕತೆ!
ಮೈಸೂರಿನ ಆದಿಚುಂಚನಗಿರಿ ಶಾಖಾ ಮಠದಲ್ಲಿ ಡಿಕೆ ಶಿವಕುಮಾರ್ ಮತ್ತು ಸಾ.ರಾ.ಮಹೇಶ್
  • Share this:
ಮೈಸೂರು: ಮೈಸೂರಿನ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್ ಅವರು ಮಠದಲ್ಲಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರೊಂದಿಗೆ ಗೌಪ್ಯ ಮಾತುಕತೆ ನಡೆಸಿದರು.

ಮಠಕ್ಕೆ ಆಗಮಿಸಿದ ಇಬ್ಬರು ನಾಯಕರು ಕೊಠಡಿಯೊಳಗೆ ಕುಳಿತು ಮಾತುಕತೆ ನಡೆಸಿದರು. ಇವರಿಬ್ಬರ ಮಾತುಕತೆ ವೇಳೆ ಶಾಖಾ ಮಠದ ಪೀಠಾಧಿಪತಿ ಶ್ರೀ ಸೋಮನಾಥ ಸ್ವಾಮೀಜಿ ಹಾಗೂ ಮಾಜಿ ಶಾಸಕ ವಾಸು ಕೊಠಡಿಯ ಹೊರಗೆ ಕುಳಿತಿದ್ದರು. ಉಭಯ ನಾಯಕರು ರಹಸ್ಯವಾಗಿ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.

ಬಳಿಕ ಮಾತನಾಡಿದ ಡಿಕೆಶಿ ನಾನು ಮತ್ತು ಸಾ.ರಾ.ಮಹೇಶ್ ಸ್ನೇಹಿತರು. ಒಟ್ಟಿಗೆ ಕೆಲಸ ಮಾಡಿದ್ದೀವಿ. ಅದಕ್ಕೆ ಅವರನ್ನು ಭೇಟಿ ಮಾಡಿದೆ. ಅವರ ಕ್ಷೇತ್ರದಲ್ಲಿ ಅನುದಾನ ಕಡಿತ ಆಗಿದೆ. ಅದನ್ನೆಲ್ಲ ಪಟ್ಟಿ ಮಾಡಿಸುತ್ತಿದ್ದೇನೆ. ಎಲ್ಲವನ್ನು ಪಟ್ಟಿ ಮಾಡಿಸಿ ಒಂದು ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಬಂಗಾರಪ್ಪ ನನಗೆ ಒಂದು ಸೈಟ್ ಕೊಟ್ಟಿದ್ರು. ಆಗ ಅದರ ಬೆಲೆ ಒಂದು ಲಕ್ಷ ರೂಪಾಯಿ. ಈಗ ಅದರ ಬೆಲೆ 4 ಕೋಟಿ ಆಗಿದೆ. ಹಾಗಾದ್ರೆ ನಾನು ಅಫಿಡೆವಿಟ್‌ನಲ್ಲಿ ಯಾವ ಬೆಲೆ ಹಾಕಬೇಕು ಹೇಳಿ. ಹೀಗೆ ನನ್ನ ಆಸ್ತಿಯ ಮೌಲ್ಯ ಜಾಸ್ತಿ ಆಗಿದೆ ಎಂದು ಡಿಕೆಶಿ ಹೇಳಿದರು.

ಇದನ್ನು ಓದಿ: ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ; ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಅನರ್ಹ ಶಾಸಕರ ವಿಚಾರದಲ್ಲಿ ಬಿಎಸ್‌ವೈ ಆಡಿಯೋ ವಿಚಾರವಾಗಿ ರಾಷ್ಟ್ರಪತಿಗೆ ಕಾಂಗ್ರೆಸ್​ನಿಂದ ದೂರು ನೀಡುವ ವಿಷಯವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ದೆಹಲಿಗೆ ಹೋಗೋಕೆ ಹೈಕಮಾಂಡ್ ನಿಂದ ಮಾಹಿತಿ ಬಂದಿದೆ. ರಾಷ್ಟ್ರಪತಿಗಳು ಸಮಯ ಕೊಟ್ಟ ತಕ್ಷಣ ಭೇಟಿ ಮಾಡುತ್ತೇವೆ. ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಹೋಗುತ್ತೇವೆ ಎಂದರು.

First published: November 8, 2019, 1:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading