ಬೆಂಗಳೂರು: ಕಾಂಗ್ರೆಸ್ ಶಾಸಕಾಂಗದ ಸಭೆ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು (Siddaramaiah Supporters) ರಣತಂತ್ರ ರೂಪಿಸಿದ್ದಾರೆ. ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಶಾಸಕ ಭೈರತಿ ಸುರೇಶ್ ಅಪಾರ್ಟ್ಮೆಂಟ್‌ನಲ್ಲಿ ರಹಸ್ಯ ಮೀಟಿಂಗ್ (Meeting) ನಡೆಸಿರುವ ಮಾಹಿತಿ ಲಭ್ಯವಾಗಿದೆ. ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಎಂ.ಬಿ ಪಾಟೀಲ್, ದಿನೇಶ್ ಗುಂಡೂರಾವ್, ಕೆಜೆ ಜಾರ್ಜ್, ಭೈರತಿ ಸುರೇಶ್, ಜಮೀರ್ ಸೇರಿ ಹಲವರು ನಾಯಕರು ಭಾಗಿಯಾಗಿದ್ದರು. ಸಿದ್ದರಾಮಯ್ಯರನ್ನೇ ಮುಖ್ಯಮಂತ್ರಿ ಮಾಡುವಂತೆ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ಮನೆಗೆ ಭದ್ರತೆ ಹೆಚ್ಚಳ
ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಭದ್ರತೆ ಹೆಚ್ಚಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲೂ ಪೊಲೀಸರ ನಿಯೋಜನೆ ಮಾಡಲಾಗಿದೆ. ಹಾಗೇ ಅವರ ಮನೆ ಮುಂದೆ ಮುಂದಿನ ಸಿಎಂ ಎಂದು ಪೋಸ್ಟರ್ ಹಾಕಲಾಗಿದೆ.
ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದತ್ತ ಶಾಸಕರ ದಂಡೇ ಬರುತ್ತಿದೆ. ಶಾಸಕ ಕೃಷ್ಣ ಭೈರೇಗೌಡ, ರಾಘವೇಂದ್ರ ಹಿಟ್ನಾಳ್ ಆಗಮಿಸಿ ಸಿದ್ದು ಜೊತೆ ಮಾತುಕತೆ ನಡೆಸಿದ್ದರು.
ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ಹೋಗೋದ್ರಲ್ಲಿ ಆಶ್ಚರ್ಯ ಏನಿದೆ. ಅವರು ಎಐಸಿಸಿ ಅಧ್ಯಕ್ಷರು. ಸಿಎಂ ಆಯ್ಕೆ ರಾಷ್ಟ್ರೀಯ ನಾಯಕರೆಲ್ಲ ಕುಳಿತು ನಿರ್ಧಾರ ಮಾಡ್ತಾರೆ ಅಂತ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ: Election Results 2023: ಇದು ಮೋದಿ ಸೋಲಲ್ಲ, ಕಾಂಗ್ರೆಸ್ ಏನು ದೇಶ ಗೆದ್ದಿಲ್ಲ; ಬೊಮ್ಮಾಯಿ
ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗ್ತಾರಾ ಎಂಬ ಪ್ರಶ್ನೆಗೆ ನಮ್ಮ ತಂದೆ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವ ಸ್ಥಾನದಲ್ಲಿ ಇದ್ದಾರೆ. ಮತ್ಯಾಕೆ ಸಿಎಂ ಸ್ಥಾನದ ಆಸೆ ಪಡಬೇಕು ಅಂತ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ