• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Lokayukta Raid: ಬಿಜೆಪಿ ಶಾಸಕ ಪುತ್ರ ಪ್ರಶಾಂತ್ ಮಾಡಾಳ್ ಮನೆಯಲ್ಲಿ ಸಿಕ್ಕ ಡೈರಿ ರಹಸ್ಯ!

Lokayukta Raid: ಬಿಜೆಪಿ ಶಾಸಕ ಪುತ್ರ ಪ್ರಶಾಂತ್ ಮಾಡಾಳ್ ಮನೆಯಲ್ಲಿ ಸಿಕ್ಕ ಡೈರಿ ರಹಸ್ಯ!

ಮಾಡಾಳ್ ನಿವಾಸದಲ್ಲಿ ಸಿಕ್ಕ ಡೈರಿ ರಹಸ್ಯ

ಮಾಡಾಳ್ ನಿವಾಸದಲ್ಲಿ ಸಿಕ್ಕ ಡೈರಿ ರಹಸ್ಯ

Dairy Secret: ಈಗಾಗಲೇ ಡೈರಿಯಲ್ಲಿ ಪೊಲೀಸ್ ಅಧಿಕಾರಿಯ ಹೆಸರು ಪತ್ತೆಯಾಗಿದ್ದು, ಆ ಬಗ್ಗೆಯೂ ತನಿಖೆಯೂ ನಡೆಸಲಾಗುತ್ತಿದೆ. ಡೈರಿಯ ಕೋಡ್​ ವರ್ಡ್​ ತಿಳಿದ್ರೆ ಮತ್ತಷ್ಟು ಜನರಿಗೆ ಲೋಕಾಯುಕ್ತ ಕಂಟಕ ಎದುರಾಗಲಿದೆ.

  • Share this:

ಬೆಂಗಳೂರು: ಬಿಜೆಪಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (MLA Madal Virupakshappa) ಪುತ್ರ ಪ್ರಶಾಂತ್ ಮಾಡಾಳ್ (Prashanth Madal) ಕಚೇರಿ ಹಾಗೂ ಮನೆ ಮೇಲೆ ಲೋಕಾಯುಕ್ತ (Lokayukta Raid) ನಡೆಸಿದ ದಾಳಿಯಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ ಶೋಧ ಅಂತ್ಯವಾಗಿದ್ದು, ಒಟ್ಟು ₹8 ಕೋಟಿ ಹಣ, ದಾಖಲೆಯನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನು ಪ್ರಶಾಂತ್ ಮನೆಯಲ್ಲಿ ಒಂದು ಡೈರಿ (Dairy) ಕೂಡ  ಪತ್ತೆಯಾಗಿದೆ. ಈ ಡೈರಿಯಲ್ಲಿ ಕೆಲ ಮಾಹಿತಿ, ಹೆಸರುಗಳು ಉಲ್ಲೇಖವಾಗಿದ್ದು, ಅಧಿಕಾರಿಗಳು ಡೈರಿ ವಶಕ್ಕೆ ಪಡೆದಿದ್ದಾರೆ.  


ಪ್ರಶಾಂತ್ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಏನಿದೆ ಗೊತ್ತಾ?


ಇನ್ನು ಪ್ರಶಾಂತ್ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಹಲವರ ಹೆಸರುಗಳು ಪತ್ತೆಯಾಗಿವೆ. ಆದರೆ ಎಲ್ಲಾ ಹೆಸರುಗಳನ್ನು ಕೋಡ್​ ವರ್ಡ್​ ರೀತಿಯಲ್ಲಿ ಬರೆದಿಡಲಾಗಿದೆ. ಇನ್ನು ಡೈರಿಯ ಜೊತೆಯಲ್ಲಿ ಚೀಟಿ ಸಹ ಪತ್ತೆಯಾಗಿದೆ. ಚೀಟಿಯಲ್ಲಿ ಕೆಲವು ದಿನಾಂಕ ನಮೂದು, ದಿನಾಂಕದ ಮುಂದೆ ಹಣ ಲೆಕ್ಕ ಬರೆಯಲಾಗಿದೆಯಂತೆ.


ಯಾವ ದಿನಾಂಕ, ಎಷ್ಟು ಹಣ ಅಂತಾ ಚೀಟಿಯಲ್ಲಿದೆ ಎನ್ನಲಾಗಿದೆ. ಲಕ್ಷ ಲಕ್ಷದಿಂದ ಹಿಡಿದು ಕೋಟಿ ರೂಪಾಯಿವರೆಗೆ ಹಣದ ವ್ಯವಹಾರ ಚೀಟಿಯಲ್ಲಿದೆಯಂತೆ. ಹಾಗಾದ್ರೆ ಅಷ್ಟೊಂದು ಹಣ ಯಾರಿಗಾದರೂ ಕೊಡಲಾಗಿತ್ತಾ? ಅಥವಾ ಯಾರಿಂದಲಾದರೂ ಪಡೆಯಲಾಗಿತ್ತಾ ಅನ್ನೋ ಅನುಮಾನ ಲೋಕಾಯುಕ್ತ ಅಧಿಕಾರಿಗಳಿಗೆ ಮೂಡಿದೆ.


ಡೈರಿಯಲ್ಲಿ ಪೊಲೀಸ್ ಅಧಿಕಾರಿ ಹೆಸರು ಉಲ್ಲೇಖ?


ಡೈರಿಯಲ್ಲಿ ಇರುವ ಕೋಡ್​ ವರ್ಡ್​ ಹೆಸರುಗಳು ಯಾರವು? ಅವರಿಗೂ ಹಾಗೂ ಪ್ರಶಾಂತ್ ಮಾಡಾಳ್ ನಡುವಿನ ವ್ಯವಹಾರ ಎಂತಹುದು ಎಂಬ ಆಯಾಮದಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.


ಈಗಾಗಲೇ ಡೈರಿಯಲ್ಲಿ ಪೊಲೀಸ್ ಅಧಿಕಾರಿಯ ಹೆಸರು ಪತ್ತೆಯಾಗಿದ್ದು, ಆ ಬಗ್ಗೆಯೂ ತನಿಖೆಯೂ ನಡೆಸಲಾಗುತ್ತಿದೆ. ಡೈರಿಯ ಕೋಡ್​ ವರ್ಡ್​ ತಿಳಿದ್ರೆ ಮತ್ತಷ್ಟು ಜನರಿಗೆ ಲೋಕಾಯುಕ್ತ ಕಂಟಕ ಎದುರಾಗಲಿದೆ.


ಐಟಿ, ಇಡಿ ಆತಂಕ


ಪ್ರಶಾಂತ್ ಮಾಡಾಳ್​ಗೆ ಲೋಕಾಯುಕ್ತ ಬಳಿಕ IT, ED ಆತಂಕ ಶುರುವಾಗಿದೆ.. ಸರ್ಕಾರಿ ಅಧಿಕಾರಿ ಮನೆಯಲ್ಲಿ ಕೋಟಿ ಕೋಟಿ  ಸಿಕ್ಕಿದೆ. ಮನೆಯಲ್ಲಿ ಸಿಕ್ಕಿರೋ 6 ಕೋಟಿಗೆ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಸಹಜವಾಗಿಯೇ ಐಟಿ, ED ಎಂಟ್ರಿಯಾಗೋ ಸಾಧ್ಯತೆಯಿದೆ.




ದಾವಣಗೆರೆ ನಿವಾಸದ ಮೇಲೆಯೂ ದಾಳಿ


ದಾವಣಗೆರೆಯ ಚನ್ನಗಿರಿಯಲ್ಲಿರೋ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೂ ದಾಳಿ ನಡೆದಿದೆ. ಲೋಕಾಯುಕ್ತ ಎಸ್​ಪಿ ಕೌಲಾಪುರೆ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು, ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿದೆ.


ಚಿನ್ನಾಭರಣ ಜೊತೆಗೆ 500, 200, 100 ಮುಖ ಬೆಲೆಯ ನೋಟುಗಳು ಪತ್ತೆಯಾಗಿದೆ. ಅಧಿಕಾರಿಗಳು ಸತತ 10 ಗಂಟೆಗಳ ಕಾಲ ಅಧಿಕಾರಿಗಳು ಮನೆಯ ಇಂಚಿಂಚು ಜಾಲಾಡಿದ್ದಾರೆ. ದಾಳಿ ವೇಳೆ 16.5 ಲಕ್ಷ ನಗದು, 2800 ಗ್ರಾಂ ಚಿನ್ನ , 20 ಕೆಜಿ ಬೆಳ್ಳಿ ಹಾಗೂ  ಅಪಾರ ಪ್ರಮಾಣದ ಆಸ್ತಿ ದಾಖಲೆ ಪತ್ತೆಯಾಗಿದೆ.


ದಾಳಿ ಮುಗಿಸಿ ಹೊರಟ ಲೋಕಾಯುಕ್ತರ ವಿರುದ್ಧ ಮಾಡಾಳ್​ ಬೆಂಬಲಿಗರ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು.


ಇದನ್ನೂ ಓದಿ: Madal Virupakshappa: ಈ ಹಣ ಕೊಂಡೊಯ್ಯಲು ಅಮಿತ್ ಶಾ ಬಂದ್ರಾ? ಕಾಂಗ್ರೆಸ್ ಪ್ರಶ್ನೆ


ನಿಷ್ಪಕ್ಷಪಾತ ತನಿಖೆ


ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ  ಬಿ.ಎಸ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿದರು.


ಕಚೇರಿಯಲ್ಲಿ ₹2.02 ಕೋಟಿ ಹಣ ಹಾಗೂ ಮನೆಯಲ್ಲಿ ₹6.10 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದೇವೆ. ಈಗ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸಾಕ್ಷ್ಯಾಧಾರ ಸಂಗ್ರಹಿಸಿ ಕೋರ್ಟ್​ಗೆ ಸಲ್ಲಿಸುತ್ತೇವೆ ಅಂತ ಹೇಳಿದ್ರು. ಈವರೆಗೆ 5 ಜನರನ್ನ ಬಂಧಿಸಿದ್ದೇವೆ. ಪ್ರಶಾಂತ್ ಮಾಡಾಳ್ ಹಾಗೂ ಅವ್ರ ಅಕೌಂಟೆಂಟ್ ಸೇರಿದಂತೆ ಲಂಚ ಕೊಡಲು ಬಂದಿದ್ದ ಮೂವರನ್ನು ಬಂಧಿಸಿದ್ದೇವೆ ಅಂತ ಹೇಳಿದರು.

Published by:Mahmadrafik K
First published: