ಕೋಲಾರ: ಸಿದ್ದರಾಮಯ್ಯ (Siddaramaiah) ಕೋಲಾರ ಸ್ಪರ್ಧೆ ಫಿಕ್ಸ್ ಆಗುತ್ತಿದ್ದಂತೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕಾಂಗ್ರೆಸ್ ಪಕ್ಷದಲ್ಲೇ (Congress) ಇದ್ದ ಭಿನ್ನಮತ ಶಮನಗೊಳಿಸಲು ಮುಖಂಡರು ಸಖತ್ ಪ್ಲಾನ್ ಮಾಡಿದ್ದಾರೆ. ಇನ್ನೊಂದ್ಕಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕೋಲಾರ (Kolar) ಸ್ಪರ್ಧೆ ಸೀಕ್ರೆಟ್ ಕೂಡ ರಿವೀಲ್ ಆಗಿದೆ. ಹೌದು, ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಫಿಕ್ಸ್ ಆಗಿದೆ. ಸಿದ್ದರಾಮಯ್ಯ ಸಮಾವೇಶ (Praja Dhwani Yatra ) ನಡೆಸಿ ಕ್ಷೇತ್ರದಲ್ಲಿ ಅಧಿಕೃತ ರಣಕಹಳೆ ಊದಿದ್ದಾರೆ. ಆ ಮೂಲಕ ಕೋಲಾರದಲ್ಲಿ ಅಧಿಕೃತವಾಗಿ ಸಿದ್ದರಾಮಯ್ಯ ಅಖಾಡಕ್ಕಿಳಿದಿದ್ದಾರೆ. ಆದರೆ ಅಲ್ಲಿ ತಮ್ಮ ಪಕ್ಷದಲ್ಲೇ ಇರುವ ರಾಜಕೀಯವೇ ಸಿದ್ದರಾಮಯ್ಯ ದೊಡ್ಡ ಮಗ್ಗುಲ ಮುಳ್ಳಾಗಿದೆ. ಸಿದ್ದರಾಮಯ್ಯ ಕೋಲಾರ ಸ್ಪರ್ಧೆಗೆ ಈ ಮೊದಲು ಕುರುಬ ಸಂಘ ವಿರೋಧಿಸಿತ್ತು. ಇದೀಗ ಪಕ್ಷದ ನಾಯಕರಲ್ಲೇ ಭಿನ್ನಮತ ಉಂಟಾಗಿದೆ. ಮುನಿಯಪ್ಪ (KH Muniyappa) ಹಾಗೂ ರಮೇಶ್ ಕುಮಾರ್ (Ramesh Kumar) ಬಣದ ನಡುವೆ ಕೋಲಾರದಲ್ಲಿ ಕಚ್ಚಾಟ ನಡೀತಿದೆ.
ಮುನಿಯಪ್ಪ, ರಮೇಶ್ ಕುಮಾರ್ ಬಣಕ್ಕೆ ಜವಾಬ್ದಾರಿ ಹಂಚಿಕೆ
ಈ ನಡುವೆ ಕೋಲಾರದಲ್ಲಿ ಬಣರಾಜಕೀಯಕ್ಕೆ ಬ್ರೇಕ್ ಹಾಕೋಕೆ ಕಾಂಗ್ರೆಸ್ ಸರ್ಕಸ್ ನಡೆಸಿದೆ. ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣಕ್ಕೆ ಇದೀಗ ಜವಾಬ್ದಾರಿ ಹಂಚಿಕೆ ಮಾಡಿದೆ. ಎರಡೂ ಟೀಂನ ಸದಸ್ಯರಿಗೆ ಜಿಲ್ಲಾ ಕಾಂಗ್ರೆಸ್ನಿಂದ ವಿವಿಧ ಜವಾಬ್ದಾರಿ ಹಂಚಲಾಗಿದೆ. ರಮೇಶ್ ಕುಮಾರ್ ಟೀಂನ ಲಕ್ಷ್ಮೀನಾರಾಯಣಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ. ಹಾಗೇ ಮುನಿಯಪ್ಪ ಬಣದ ಊರುಬಾಗಿಲು ಶ್ರೀನಿವಾಸ್ಗೆ ಜಿಲ್ಲಾ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ.
ಬಿಎಸ್ವೈಗೆ ಡಿಕೆ ಶಿವಕುಮಾರ್ ತಿರುಗೇಟು
ಇನ್ನೊಂದ್ಕಡೆ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಲ್ಲ ಅಂತ ಬಿಎಸ್ವೈ ಹೇಳಿದ್ದರು. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಹೈಕಮಾಂಡ್ ಹೇಳಿದಂತೆ ಕೇಳ್ತಾರೆ. ಮೊದಲು ಯಡಿಯೂರಪ್ಪ ಅವರ ಮಗನ ಭವಿಷ್ಯ ತೀರ್ಮಾನ ಮಾಡಕೊಳ್ಳಲಿ ಅಂತ ಟಾಂಗ್ ಕೊಟ್ಟಿದ್ದಾರೆ.
ಇನ್ನು ಕೋಲಾರದಲ್ಲಿ ಸಿದ್ದರಾಮಯ್ಯರನ್ನ ಸೋಲಿಸಲು ಪ್ರಯತ್ನ ನಡೆದಿದೆ ಅಂತ ಸಿ.ಟಿ.ರವಿ ಪರೋಕ್ಷವಾಗಿ ಹೇಳಿದ್ದಾರೆ. ಮುನಿಯಪ್ಪ ಹಾಗೂ ಪರಮೇಶ್ವರ್ರನರನ ಸೋಲಿಸಲಾಯ್ತು. ಈಗ ಅವರು ಸುಮ್ನೆ ಇರ್ತಾರಾ? ಇನ್ನೊಬ್ಬರ ಕಡೆ ಹೂಡಿದ ಬಾಣ ಇವರಿಗೂ ತಿರುಗುಬಾಣ ಅಗುತ್ತೆ ಅಂತ ಸಿ.ಟಿ.ರವಿ ಹೇಳಿದ್ದಾರೆ.
ಕೋಲಾರದಲ್ಲಿ ಸಿದ್ದರಾಮಯ್ಯ ಸರ್ವೆ!
ಇವೆಲ್ಲದರ ನಡುವೆ ಸಿದ್ದರಾಮಯ್ಯ ಕೋಲಾರದಲ್ಲಿ ಸರ್ವೆಯೊಂದನ್ನ ಮಾಡಿಸಿದ್ದಾರಂತೆ. ಕ್ಷೇತ್ರ ಆಯ್ಕೆಗೂ ಮೊದಲೇ ಈ ಸಮೀಕ್ಷೆ ನಡೆಸಿದ್ದು, ಮತದಾರರು ತಮ್ಮ ಕೈಹಿಡಿಯುತ್ತಾರೆಂಬ ನಂಬಿಕೆಯಲ್ಲಿದ್ದಾರೆ. ಕೋಲಾರದಲ್ಲಿ ಸಿದ್ದರಾಮಯ್ಯ ಕೈ ಹಿಡಿಯಬಹುದಾದ ಪ್ಲಸ್ ಹಲವು ಅಂಶಗಳ ಪಟ್ಟಿ ಇಂತಿದೆ.
ಕೋಲಾರದಲ್ಲಿ ಇಂದು ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು, ನುಡಿದಂತೆ ನಡೆದ ನಮ್ಮ ಸರ್ಕಾರದ ಸಾಧನೆಗಳು ಮತ್ತು ಈಗಿನ ಬಿಜೆಪಿ ಸರ್ಕಾರದ ದ್ವೇಷ ರಾಜಕೀಯ, ಭ್ರಷ್ಟಾಚಾರ, ದುರಾಡಳಿತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದೆ. pic.twitter.com/636C7nIQwa
— Siddaramaiah (@siddaramaiah) January 23, 2023
ಸಿದ್ದರಾಮಯ್ಯಗೆ ಕೋಲಾರ ಭರವಸೆ!
ಸಿದ್ದರಾಮಯ್ಯ ಕೋಲಾರದ ಪಾಲಿನ ಆಧುನಿಕ ಭಗೀರಥ ಅಂತ ಅಲ್ಲಿನ ಕೈನಾಯಕರು ಬಿಂಬಿಸಿದ್ದಾರೆ. ಯಾಕಂದರೆ ಕೆ.ಸಿ.ವ್ಯಾಲಿ ಯೋಜನೆಯಿಂದ ಕೆರೆಗಳಿಗೆ ನೀರು ಬಂದಿದೆ. ಕೋಲಾರದ 6 ತಾಲೂಕುಗಳಿಗೆ ನೀರಿನ ಅನುಕೂಲ ಆಗಿದೆ. ಕೃಷಿಯನ್ನೇ ನಂಬಿ ಬದುಕಿದ್ದ ರೈತರಿಗೆ ಕೆ.ಸಿ.ವ್ಯಾಲಿ ನೀರು ಸಹಕಾರಿಯಾಗಿದೆ. ಇದರ ಜೊತೆಗೆ ಮಹಿಳಾ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಜಾರಿಗೊಳಿಸಿದ್ದರು. ಶೂನ್ಯ ಬಡ್ಡಿ ದರದ ಸಾಲದಿಂದ ಮಹಿಳೆಯರಿಗೆ ನೆರವು ಸಿಕ್ಕಿದೆ. ಹೀಗಾಗಿ ಮಹಿಳಾ ಮತದಾರರು ಸಿದ್ದರಾಮಯ್ಯ ಕೈ ಹಿಡೀತಾರೆ ಅನ್ನೋ ಲೆಕ್ಕಾಚಾರ ಮಾಡ್ತಿದ್ದಾರೆ.
ಒಂದ್ಕಡೆ ಸಿದ್ದರಾಮಯ್ಯ ಕೋಲಾರ ಗೆಲ್ಲುವ ಕನಸು ಕಂಡಿದ್ರೆ, ಇನ್ನೊಂದ್ಕಡೆ ಕೈ ನಾಯಕರು ಜಿಲ್ಲೆಯಲ್ಲಿ ಕೈ ನಾಯಕರಲ್ಲೇ ಇದ್ದ ಭಿನ್ನಮತಕ್ಕೆ ಮದ್ದರೆಯಲು ಮುಂದಾಗಿದ್ದಾರೆ. ಇದರಿಂದ ಸಿದ್ದರಾಮಯ್ಯ ಗೆಲುವಿನ ದಾರಿ ಇನ್ನಷ್ಟು ಸಲೀಸಾಗುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ