2nd PUC Exam: ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ, ಹೊಸಾ ದಿನಾಂಕ ಪ್ರಕಟ​

ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ಬದಲಾವಣೆಯಾಗಿದೆ.  ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತೊಂದು ಪರೀಕ್ಷಾ ದಿನಾಂಕದ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮಾ.2):  ಪದವಿ ಪೂರ್ವ ಶಿಕ್ಷಣ ಇಲಾಖೆಯು 2021-22ನೇ ಸಾಲಿನ ದ್ವಿತೀಯ ಪಿಯುಸಿ (2nd PUC) ಪರೀಕ್ಷೆ ದಿನಾಂಕ ಮುಂದೂಡಲಾಗಿದೆ.  ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತೊಂದು ಪರೀಕ್ಷಾ ದಿನಾಂಕದ ತಾತ್ಕಾಲಿಕ ವೇಳಾಪಟ್ಟಿ (Temporary schedule) ಬಿಡುಗಡೆ ಮಾಡಿದೆ.  ದ್ವಿತೀಯ ಪಿಯು ಹಾಗೂ ಜೆಇಇ (JEE) ಪರೀಕ್ಷೆಯು ಒಟ್ಟಿಗೆ ಬಂದ ಕಾರಣ ಪರೀಕ್ಷೆ ದಿನಾಂಕ (Exam Date) ಮುಂದೂಡಿಕೆ ಮಾಡಲಾಗಿದೆ. ಏಪ್ರಿಲ್ 22 ರಿಂದ ಮೇ 11ರ ವರೆಗೆ ದ್ವಿತೀಯ ಪಿಯುಸಿ  ಪರೀಕ್ಷೆ ನಡೆಯಲಿದ್ದು, ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಆಕ್ಷೇಪಣೆ ಸಲ್ಲಿಸಲು ಮಾರ್ಚ್ 5ರ ವರೆಗೆ ಅವಕಾಶ ನೀಡಿರೋದಾಗಿ  ಪದವಿ ಪೂರ್ವ ಶಿಕ್ಷಣ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.  ಏಪ್ರಿಲ್ 16 ರಿಂದ ಮೇ 06 ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ನಿಗದಿ ಮಾಡಲಾಗಿತ್ತು.

ಯಾವ ದಿನದಂದು ಯಾವ ಪರೀಕ್ಷೆ

ಏ. 22 - ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಏ. 23 - ಹಿಂದಿ
ಏ. 25 - ಅರ್ಥಶಾಸ್ತ್ರ
ಏ. 26 - ಹಿಂದೂಸ್ಥಾನಿ ಸಂಗೀತ, ಮನಃಶಾಸ್ತ್ರ, ರಾಸಾಯನ ಶಾಸ್ತ್ರ
ಏ. 27 - ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಏ. 28 - ಕನ್ನಡ, ಅರೇಬಿಕ್
ಏ. 30 - ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಮೇ 2 - ಭೂಗೋಳಶಾಸ್ತ್ರ, ಜೀವಶಾಸ್ತ್ರ
ಮೇ 4 - ಇಂಗ್ಲಿಷ್
ಮೇ 5 - ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
ಮೇ 6 - ಗಣಿತಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲಗಣಿತ
ಮೇ 7 - ಐಚ್ಚಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ
ಮೇ 9 - ಇತಿಹಾಸ, ಭೌತಶಾಸ್ತ್ರ
ಮೇ 11 - ರಾಜ್ಯಶಾಸ್ತ್ರ ಸಂಖ್ಯಾಶಾಸ್ತ್ರ

ಏಪ್ರಿಲ್​  22ರಿಂದ ಪರೀಕ್ಷೆ ಆರಂಭವಾಗಲಿದ್ದು, ಮೊದಲನೇ ದಿನ ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. 2ನೇ ದಿನ ಏಪ್ರಿಲ್​ 23ಕ್ಕೆ, ಹಿಂದಿ ಹಾಗೂ ಏಪ್ರಿಲ್ 25ಕ್ಕೆ ಅರ್ಥಶಾಸ್ತ್ರ ಪರೀಕ್ಷೆ ಇರುತ್ತೆ.  ಏಪ್ರಿಲ್​ 26 ರಂದು ಹಿಂದೂಸ್ಥಾನಿ ಸಂಗೀತ, ಮನಃಶಾಸ್ತ್ರ, ರಾಸಾಯನ ಶಾಸ್ತ್ರ ವಿಷಯಕ್ಕೆ ಪರೀಕ್ಷೆ ಇರಲಿದೆ. ಏಪ್ರಿಲ್​ 27ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ವಿಷಯಗಳ ಪರೀಕ್ಷೆ ನಡೆಯಲಿದೆ. ಏಪ್ರಿಲ್​ 28ಕ್ಕೆ ಕನ್ನಡ, ಅರೇಬಿಕ್, ಏಪ್ರಿಲ್​ 30 ರಂದು ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ ಹಾಗೂ ಮೇ 2 ಕ್ಕೆ  ಭೂಗೋಳಶಾಸ್ತ್ರ, ಜೀವಶಾಸ್ತ್ರ, ಮೇ 4ರಂದು ಇಂಗ್ಲಿಷ್ ವಿಷಯಕ್ಕೆ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ: Assistant Professor Jobs: ಸಹಾಯಕ ಪ್ರಾಧ್ಯಾಪಕರ ಹುದ್ದೆ ಪರೀಕ್ಷೆಗೆ ಪ್ರವೇಶ ಪತ್ರ ಲಭ್ಯ, ಡ್ರೆಸ್ ಕೋಡ್ ಕಡ್ಡಾಯ!

ಮೇ 5 ರಂದು ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
ಮೇ 6ಕ್ಕೆ ಗಣಿತಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲಗಣಿತ ವಿಷಯ ಪರೀಕ್ಷೆ ನಡೆಯಲಿದೆ.  ಮೇ 7 - ಐಚ್ಚಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ, ಮೇ 9 - ಇತಿಹಾಸ, ಭೌತಶಾಸ್ತ್ರ ಕೊನೆಯ ದಿನವಾದ ಮೇ 11 ರಂದು ರಾಜ್ಯಶಾಸ್ತ್ರ ಸಂಖ್ಯಾಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ.

ಇದೂ ಕೂಡ ತಾತ್ಕಾಲಿಕ ವೇಳಾ ಪಟ್ಟಿ

ಏಪ್ರಿಲ್ 16 ರಿಂದ ಮೇ 06 ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ನಿಗದಿ ಮಾಡಲಾಗಿತ್ತು.  ಏಪ್ರಿಲ್ 22 ರಿಂದ ಮೇ 11ರ ವರೆಗೆ ದ್ವಿತೀಯ ಪಿಯುಸಿ  ಪರೀಕ್ಷೆ ನಡೆಯಲಿದ್ದು, ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ.  ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ವೇಳಾಪಟ್ಟಿಯನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಚೆಕ್‌ ಮಾಡಬಹುದು. ಅಥವಾ ಈ ಕೆಳಗಿನಂತೆಯೂ ಚೆಕ್‌ ಮಾಡಬಹುದು.

ಇದನ್ನೂ ಓದಿ: Explained: ಪರೀಕ್ಷೆಯಲ್ಲಿ ಒಳ್ಳೆ ಮಾರ್ಕ್ಸ್ ಗಳಿಸಲು ಈ 9 ಸಲಹೆಗಳನ್ನು ಪಾಲಿಸಿ!

ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ

2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪಠ್ಯಕ್ರಮದಲ್ಲಿ ಹಾಗೂ ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದು ಅದರ ವಿವರಗಳನ್ನು ಸಹ ಪರೀಕ್ಷೆ ವೇಳಾಪಟ್ಟಿಯೊಂದಿಗೆ ಇಲಾಖೆಯು ಪ್ರಕಟಿಸಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಲಾದ ಮೇಲಿನ ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ ಆಗಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಿದೆ.
Published by:Pavana HS
First published: