2nd PUC Results: ಮೂರು ವಿಭಾಗದ ಟಾಪರ್ ಗಳ ಪಟ್ಟಿ ಇಲ್ಲಿದೆ

ಇಬ್ಬರು 600ಕ್ಕೆ 594 ಅಂಕಗಳನ್ನು ಪಡೆದಿದ್ದಾರೆ. ಹುಬ್ಬಳ್ಳಿಯ ವಿದ್ಯಾರ್ಥಿನಿ ಸನಿಕಾ, ಕಲಬುರಗಿಯ ನಿಂಗಣ್ಣ ಅಗಸರ, ಗದಗ ಶಿವರಾಜ್ ಮತ್ತು ಬಳ್ಳಾರಿ ಜಿ ಮೌನೇಶ್ 593 ಅಂಕ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

ಟಾಪರ್ ವಿದ್ಯಾರ್ಥಿಗಳು

ಟಾಪರ್ ವಿದ್ಯಾರ್ಥಿಗಳು

  • Share this:
ಇಂದು ಬೆಳಗ್ಗೆ 11.30ಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Education Minister BC Nagesh) ದ್ವಿತೀಯ ಪಿಯು ಫಲಿತಾಂಶ (2nd PUC results) ಪ್ರಕಟಿಸಿದರು. ಈ ಬಾರಿ ಶೇ.61ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ (Arts) ಮೊದಲ ಸ್ಥಾನವನ್ನ ಒಂದೇ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು (Students) ಪಡೆದುಕೊಂಡಿದ್ದಾರೆ. ಇದೇ ಕಾಲೇಜಿನ ಮತ್ತೋರ್ವ ವಿದ್ಯಾರ್ಥಿ ಮೂರನೇ ಸ್ಥಾನದಲ್ಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ವೆಬ್ ಸೈಟ್​ನಲ್ಲಿ (Website) ಫಲಿತಾಂಶ ಪ್ರಕಟವಾಗಲಿದ್ದು, ನೋಂದಣಿಗೊಂಡ ವಿದ್ಯಾರ್ಥಿಗಳ (Students) ಮೊಬೈಲ್​ಗೆ ಫಲಿತಾಂಶದ ಸಂದೇಶ ರವಾನೆಯಾಗಲಿದೆ ಎಂದು ಸಚಿವ ನಾಗೇಶ್ ತಿಳಿಸಿದ್ದಾರೆ. 5,99,794 ಮಕ್ಕಳಲ್ಲಿ 4,02,697 ಮಕ್ಕಳು ಪಾಸ್ ಆಗಿದ್ದು, ಶೇ.61ರಷ್ಟು ಫಲಿತಾಂಶ ಬಂದಿದೆ.

ಕಲಾ ವಿಭಾಗ:

ಈ ವಿಭಾಗದಲ್ಲಿ ಮತ್ತೆ ಕೊಟ್ಟೂರಿನ ಇಂದು ಕಾಲೇಜ್ ಮೊದಲ ಸ್ಥಾನದಲ್ಲಿದೆ. ಈ ಬಾರಿಯ ಇದೇ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ಇಬ್ಬರು 600ಕ್ಕೆ 594 ಅಂಕಗಳನ್ನು ಪಡೆದಿದ್ದಾರೆ. ಹುಬ್ಬಳ್ಳಿಯ ವಿದ್ಯಾರ್ಥಿನಿ ಸನಿಕಾ, ಕಲಬುರಗಿಯ ನಿಂಗಣ್ಣ ಅಗಸರ, ಗದಗ ಶಿವರಾಜ್ ಮತ್ತು ಬಳ್ಳಾರಿ ಜಿ ಮೌನೇಶ್ 593 ಅಂಕ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಹರಪನಹಳ್ಳಿಯ ಹೆಚ್ ಸಂತೋಷ್ 592 ಅಂಕ ಪಡೆದು ಮೂರನೇ ಸ್ಥಾನದಲ್ಲಿದ್ದಾನೆ.

ಇದನ್ನೂ ಓದಿ:  2nd PUC Results: ದಕ್ಷಿಣ ಕನ್ನಡ ಫಸ್ಟ್, ಚಿತ್ರದುರ್ಗ ಲಾಸ್ಟ್; ಅತಿ ಹೆಚ್ಚು ವಿಜ್ಞಾನ ವಿದ್ಯಾರ್ಥಿಗಳು ಪಾಸ್

*ಶ್ವೇತಾ ಭೀಮಾಶಂಕರ್ ಬೈರಗೊಂಡ

ಪಡೆದ ಅಂಕ 594/600

ಕಾಲೇಜ್: ಇಂದು ಪಿಯು ಕಾಲೇಜ್ ಕೊಟ್ಟರು, ಕೂಡ್ಲಗಿ, ಬಳ್ಳಾರಿ

*ಸಹನಾ ಮಡಿವಾಳರ

ಪಡೆದ ಅಂಕ 594/600

ಕಾಲೇಜ್: ಇಂದು ಪಿಯು ಕಾಲೇಜ್ ಕೊಟ್ಟರು, ಕೂಡ್ಲಗಿ, ಬಳ್ಳಾರಿ

ವಾಣಿಜ್ಯ ವಿಭಾಗ

ಈ ವಿಭಾಗದಲ್ಲಿ ನಾಲ್ಕು ವಿದ್ಯಾರ್ಥಿಗಳು 600ಕ್ಕೆ 596 ಅಂಕ ಪಡೆದು ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ಆರು ವಿದ್ಯಾರ್ಥಿಗಳು 595 ಅಂಕ ಪಡೆದು ಎರನಡೇ ಸ್ಥಾನ ಹಂಚಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಬೆಂಗಳೂರಿನವರಾದ ಮಾನವ್, ಹಿತೇಶ್, ತುಮಕೂರಿನ ಸಹನಾ, ರಾಮನಗರದ ಪವಿತ್ರಾ, ದಕ್ಷಿಣ ಕನ್ನಡದ ಸಮರ್ಥ್, ಅನಿಶಾ ಮತ್ತು ಆಚಲ್ ಪ್ರವೀಣ್ ಇದ್ದಾರೆ.

*ನೀಲು  ಸಿಂಗ್ (596/600) - ಬಿಜಿಎಸ್ ಕಾಲೇಜ್, ಬೆಂಗಳೂರು

*ಅಕಾಶ್ ದಾಸ್ (596/600) - ಸೇಂಟ್ ಕ್ಲಾರೆಟ್ ಪಿಯು ಕಾಲೇಜ್ ಬೆಂಗಳೂರು

*ನೇಹಾ (596/600) - SBGNS ಗ್ರಾಮೀಣ ಕಾಲೇಜ್, ಚಿಕ್ಕಬಳ್ಳಾಪುರ

*ಮಾನವ್ (596/600) - ಜೈನ್ ಪಿಯು ಕಾಲೇಜ್, ಜಯನಗರ, ಬೆಂಗಳೂರು

ಇದನ್ನೂ ಓದಿ:  Explained: ದ್ವಿತೀಯ ಪಿಯುಸಿ ಫಲಿತಾಂಶದ ನಂತರ ನಿಮ್ಮ ಆಯ್ಕೆ ಇದೂ ಆಗಿರಬಹುದು!

ವಿಜ್ಞಾನ ವಿಭಾಗ

ಬೆಂಗಳೂರಿನ ಜಯನಗರ ಕಾಲೇಜಿನ ಸಿಮ್ರನ್ ಮೊದಲ ಸ್ಥಾನದಲ್ಲಿದ್ರೆ, ನಾಲ್ಕು ಜನ ಎರಡನೇ ಸ್ಥಾನ ಮತ್ತು ಐವರು ಮೂರನೇ ಸ್ಥಾನದಲ್ಲಿದ್ದಾರೆ. ಸಿಮ್ರನ್ 600ಕ್ಕೆ 598 ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಇಲ್ಹಾಮ್, ಸಾಯಿಚಿರಾಗ್, ಶ್ರೀಕೃಷ್ಣ ಮತ್ತು ಭವ್ಯಾ ನಾಯಕ್ 597 ಅಂಕ ಗಳಿಸಿದ್ದಾರೆ. ಇನ್ನೂ 596 ಅಂಕ ಪಡೆದು ಓಂಕಾರ್ ಪ್ರಭು, ಮೊಹ್ಮದ್ ಖಿಜಾರ್, ಯು.ಎಸ್.ಅದ್ವೈತ ಶರ್ಮಾ, ಗೌರವ್ ಚಂದನ್, ಮೇಧಾ ಪುರಾಣಿಕ್ ಮೂರನೇ ಸ್ಥಾನದಲ್ಲಿದ್ದಾರೆ.

ಮರುಮೌಲ್ಯಮಾಪನ

ಇಂದಿನಿಂದಲೇ ಮಕ್ಕಳ ಉತ್ತರ ಪತ್ರಿಕೆ ನೋಡಲು ಅವಕಾಶ ಕಲ್ಪಿಸಲಾಗಿದೆ. ಆನ್ ಲೈನ್ ನಲ್ಲಿ  ಅಪ್ಲೈ ಮಾಡಿ ಉತ್ತರ ಪತ್ರಿಕೆ ಪಡೆದುಕೊಳ್ಳಬಹುದು. ಸ್ಕ್ಯಾನಿಂಗ್ ಪ್ರತಿಗೆ  530 ರೂಪಾಯಿ ಪಾವತಿಸಬೇಕು. ಜೂನ್ 30ರ ಉತ್ತರ ಪತ್ರಿಕೆ ಪಡೆಯಲು ಕೊನೆಯ ದಿನಾಂಕವಾಗಿದೆ. ಮರು ಮೌಲ್ಯ ಮಾಪನಕ್ಕೆ 1,670 ರೂಪಾಯಿ ನಿಗಧಿ ಮಾಡಲಾಗಿದೆ.

ದಕ್ಷಿಣ ಕನ್ನಡ ಫಸ್ಟ್

ಇನ್ನೂ ಜಿಲ್ಲಾವಾರು ಫಲಿತಾಂಶ ನೋಡೋದಾದ್ರೆ ದಕ್ಷಿಣ ಕನ್ನಡ ಅಗ್ರಸ್ಥಾನ ಶೇ.88.02 ಫಲಿತಾಂಶದೊಂದಿಗೆ ಮೊದಲ ಸ್ಥಾನದಲ್ಲಿದೆ. ಉಡುಪಿ ಶೇ. 86.38 ಫಲಿತಾಂಶದೊಂದಿಗೆ ಎರಡನೇ ಸ್ಥಾನ ಮತ್ತು ವಿಜಯಪುರ ಶೇ.77.14 ಫಲಿತಾಂಶದೊಂದಿಗೆ ಮೂರನೇ ಸ್ಥಾನದಲ್ಲಿದೆ. ಶೇ.49.31 ಫಲಿತಾಂಶದೊಂದಿಗೆ ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ. ಕಳೆದ ಬಾರಿ 61.80 ಫಲಿತಾಂಶ ಇತ್ತು ಈ ಬಾರಿ 0.8% ಈ ಬಾರಿ ಹೆಚ್ಚಳವಾಗಿದೆ.
Published by:Mahmadrafik K
First published: