ಕೊರೊನಾ (Coronavirus)ಕಾರಣದಿಂದ ರದ್ದಾಗಿದ್ದ ದ್ವಿತೀಯ ಪಿಯುಸಿ(2nd PUC) ಫಲಿತಾಂಶಕ್ಕೆ ಚಾಲೆಂಜ್ ಮಾಡಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಕಳೆದ ಬಾರಿ ಎಸ್ಎಸ್ಎಲ್ಸಿ ಮತ್ತು ಪ್ರಥಮ ಪಿಯುಸಿ ಆಧಾರದ ಮೇಲೆಅಂದ ನಿಗದಿ ಮಾಡಲಾಗಿತ್ತು. ಜತೆಗೆ ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆ ಹಾಗೂ ಕೃಪಾಂಕಗಳ ಆಧಾರ ಫಲಿತಾಂಶ ನೀಡಲಾಗಿತ್ತು. ಆದರೆ ಹಲವಾರು ವಿದ್ಯಾರ್ಥಿಗಳು ಫಲಿತಾಂಶವನ್ನು ಒಪ್ಪಿರಲಿಲ್ಲ. ಪರೀಕ್ಷೆ ಬರೆದಿದ್ದರು.
ವಿಧಾನಸಭೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ , ಫಲಿತಾಂಶದ ಬಗ್ಗೆ ಮಾಹಿತಿ ನೀಡಿದ್ದಾರೆ
. ಸುದ್ದಿಗೋಷ್ಟಿಯಲ್ಲಿ ಪಿಯು ಬೋರ್ಡ್ ನಿರ್ದೇಶಕಿ ಡಾ ಆರ್ ಸ್ನೇಹಲ್ ಹಾಜರಿದ್ದಾರೆ.
ಪರೀಕ್ಷೆ ಬರೆದಿರುವ ಹೊಸಬರಲ್ಲಿ 592 ವಿದ್ಯಾರ್ಥಿಗಳಲ್ಲಿ 556 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 36 ವಿದ್ಯಾರ್ಥಿ ಫೇಲ್ ಆಗಿದ್ದರೆ, 351 ರಿಪೀರೆರ್ಸ್ ಪೈಕಿ 183 ಜನ ಪಾಸ್ ಆಗಿದ್ದು, 168 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಇನ್ನು 17470 ಖಾಸಗಿ ಅಭ್ಯರ್ಥಿ ಪೈಕಿ 4768 ಪಾಸ್ 12,702 ವಿದ್ಯಾರ್ಥಿಗಳ ಫೇಲ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
580 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ಫಸ್ಟ್ ಕ್ಲಾಸ್ ನಲ್ಲಿ 1939 ವಿದ್ಯಾರ್ಥಿಗಳು ಪಾಸ್ ಆಗಿದ್ದು, ಸೆಕೆಂಡ್ ಕ್ಲಾಸ್ ನಲ್ಲಿ 1578 ವಿದ್ಯಾರ್ಥಿಗಳು ಹಾಗೂ ಥರ್ಡ್ ಕ್ಲಾಸ್ ನಲ್ಲಿ 1410 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಇದನ್ನೂ ಓದಿ: ಇಂದು ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್ ನೋಡೋಕೆ ಹೀಗೆ ಮಾಡಿ
ಒಟ್ಟು 18,413 ಪರೀಕ್ಷಾರ್ಥಿಗಳ ಪೈಕಿ 5507 ವಿದ್ಯಾರ್ಥಿಗಳು ಪಾಸ್ ಆಗಿದ್ದು, 12906 ವಿದ್ಯಾರ್ಥಿಗಳು ಫೇಲ್ ಆಗಿದ್ದು, ಒಟ್ಟು ಶೇ.29.91 ಫಲಿತಾಂಶ ಬಂದಿದೆ. ಸೈನ್ಸ್ ವಿಭಾಗದಲ್ಲೂ 70.83% ವಿದ್ಯಾರ್ಥಿಗಳು ಪಾಸ್ ಆಗಿದ್ದರೆ, ಕಾಮರ್ಸ್ ನಲ್ಲಿ 29.98% ವಿದ್ಯಾರ್ಥಿಗಳು ಹಾಗೂ ಕಲಾ ವಿಭಾಗದಲ್ಲಿ 32.06% ಫಲಿತಾಂಶ ಬಂದಿದೆ. ಈ ಫಲಿತಾಂಶದಲ್ಲಿ ಬಾಲಕಿಯರು ಮೇಲು ಗೈ ಸಾಧಿಸಿದ್ದು, 36.72% ಬಾಲಕಿಯರು ಪಾಸ್ ಆಗಿದ್ದು, 26.02% ಬಾಲಕರು ಪಾಸ್ ಆಗಿದ್ದಾರೆ. ಇನ್ನು ಗ್ರಾಮಾಂತರ ಭಾಗದಲ್ಲಿ 32.59% ಫಲಿತಾಂಶ ಬಂದಿದ್ದು, ನಗರ ಭಾಗದಲ್ಲಿ 26.62% ಫಲಿತಾಂಶ ಲಭಿಸಿದೆ.
ದ್ವಿತೀಯ ಪಿಯುಸಿ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಸಹ ಬರೆದಿದ್ದರು ಒಟ್ಟು 18 ಸಾವಿರದ 413 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ರು. ಖಾಸಗಿ ಅಭ್ಯರ್ಥಿಗಳು 17,470 , ರಾಜ್ಯದ 187 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಚಾಲೆಂಜ್ ಮಾಡಿ ಪರೀಕ್ಷೆ ಬರೆದಿದ್ದ 592 ವಿದ್ಯಾರ್ಥಿಗಳು ಹಾಗೂ 351 ವಿದ್ಯಾರ್ಥಿಗಳು ರಿಪಿಟರ್ಸ್ ಚಾಲೆಂಜ್ ಪರೀಕ್ಷೆ ಬರೆದಿದ್ದರು. ಒಟ್ಟು 18,413 ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆದಿದ್ರು
ವಿದ್ಯಾರ್ಥಿಗಳು
http://karresults.nic.in ವೆಬ್ಸೈಟ್ನಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು. ಇದಲ್ಲದೆ ವಿದ್ಯಾರ್ಥಿಗಳಿಗೆ ಎಸ್ಎಂಎಸ್ ಮೂಲಕ ದ್ವಿತೀಯ ಪಿಯುಸಿಯ ಫಲಿತಾಂಶ ಲಭ್ಯವಾಗಲಿದೆ. ಇನ್ನು ಪೋಷಕರ ಮೊಬೈಲ್ಗೆ ಸಹ ಫಲಿತಾಂಶ ಬರಲಿದೆ ಎಂದು ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ.
ಕಳೆದ ಬಾರಿ ನೀಡಿದ್ದ ಫಲಿತಾಂಶದಲ್ಲಿ ಬಹುಪಾಲು ಮಕ್ಕಳು ಉತ್ತಮ ಅಂಕ ಪಡೆದು ಪಾಸ್ ಆಗಿದ್ದರು. ಆದರೆ ಕೆಲವರಿಗೆ ಈ ಫಲಿತಾಂಶದ ಕುರಿತು ಅಸಮಾಧಾನವಿದ್ದ ಕಾರಣ ಸರ್ಕಾರ ಅಂಥಹ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು. ಕೊರೊನಾ ಕಾರಣಕ್ಕೆ ಪರೀಕ್ಷೆ ಇಲ್ಲದೆ ಪಾಸ್ ಮಾಡಲಾಗಿತ್ತು.
ಮೊದಲ ಬಾರಿ ನೀಡಿದ ಹತ್ತನೇ ತರಗತಿಯಲ್ಲಿ ವಿಷಯವಾರು ಪಡೆದಿದ್ದ ಅಂಕಗಳ ಶೇ.45ರಷ್ಟು ಅಂಕ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಗಳಿಸರುವ ಅಂಕದಲ್ಲಿ ಶೇ.45ರಷ್ಟು ಅಂಕವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು..
ಅಲ್ಲದೇ ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಶೇ.10ರಷ್ಟು ಅಂಕ ಜೊತೆಗೆ ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳಿಗೆ ಶೇ.5ರಷ್ಟು ಅಂಕಗಳನ್ನು ಪರಿಗಣನೆಗೆ ತೆಗೆದುಕೊಂಡು ಫಲಿತಾಂಶ ನೀಡಲಾಗಿತ್ತು.
ಇದನ್ನೂ ಓದಿ: ಏರಿಕೆಯಾಗದ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ಇಂದಿನ ರೇಟ್ ಹೀಗಿದೆ
ಇನ್ನು ಕಳೆದ ಬಾರಿ 6,66,497
ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು ಹಾಗೂ 3,35,138
ವಿದ್ಯಾರ್ಥಿಗಳು, 3,31,359
ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ.
ಅದರಲ್ಲಿ 1,95,650
ವಿದ್ಯಾರ್ಥಿಗಳು ಡಿಸ್ಟಿಂಕ್ಷನ್
ನಲ್ಲಿ ತೇರ್ಗಡೆ ಆಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ